Tongue Cut: ತನ್ನ ನಾಲಿಗೆಯನ್ನೇ ಕತ್ತರಿಸಿ ದೇವಿ ಮುಂದಿಟ್ಟ ಭಕ್ತ! ಅಂಧಭಕ್ತಿಯ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ಅಂಧಭಕ್ತಿಯಿದ್ದರೆ (blind devotion) ಆಗಬಾರದ್ದು ಆಗಿ, ಭಕ್ತನೇ (Devotee) ಸಂಕಷ್ಟ ಪಡಬೇಕಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಘಟನೆಯೊಂದು ನಡೆದಿದೆ. ದೇವಿ ದೇವಸ್ಥಾನವೊಂದರಲ್ಲಿ (Temple) ಭಕ್ತರೊಬ್ಬರು ತಮ್ಮ ನಾಲಿಗೆಯನ್ನು (Tongue) ಕತ್ತರಿಸಿ ಪ್ರಧಾನ ದೇವರಿಗೆ ಅರ್ಪಿಸಿದ್ದಾರೆ!

ಕಾಳಿ ದೇವಿ ಸಾಂದರ್ಭಿಕ ಚಿತ್ರ

ಕಾಳಿ ದೇವಿ ಸಾಂದರ್ಭಿಕ ಚಿತ್ರ

  • Share this:
ಉತ್ತರ ಪ್ರದೇಶ: ನಂಬಿಕೆ (faith) ಇರಬೇಕು ನಿಜ, ಆದರೆ ಮೂಢನಂಬಿಕೆ (superstition) ಇರಬಾರದು ಅಂತಾರೆ. ದೇವರ (God) ಮೇಲೆ ಶ್ರದ್ಧಾ ಭಕ್ತಿಗಳಿದ್ದರೆ ಒಳ್ಳೆಯದು. ಆದರೆ ಅದಕ್ಕಿಂತ ಹೆಚ್ಚಾಗಿ ಅಂಧಭಕ್ತಿಯಿದ್ದರೆ (blind devotion) ಆಗಬಾರದ್ದು ಆಗಿ, ಭಕ್ತನೇ (Devotee) ಸಂಕಷ್ಟ ಪಡಬೇಕಾಗುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ (Good Example) ಎನ್ನುವಂತೆ ಉತ್ತರ ಪ್ರದೇಶದಲ್ಲಿ (Uttar Pradesh) ಭಯಾನಕ ಘಟನೆಯೊಂದು ನಡೆದಿದೆ. ಇಲ್ಲಿನ ಕೌಶಂಬಿ (Kaushambi) ಜಿಲ್ಲೆಯ ದೇವಸ್ಥಾನವೊಂದರಲ್ಲಿ (Temple) ಭಕ್ತರೊಬ್ಬರು ತಮ್ಮ ನಾಲಿಗೆಯನ್ನು (Tongue) ಕತ್ತರಿಸಿ ಪ್ರಧಾನ ದೇವರಿಗೆ ಅರ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಇಂಥದ್ದೊಂದು ಆಘಾತಕಾರಿ ಘಟನೆ ಮಾ ಶೀಟ್ಲ ದೇವಸ್ಥಾನದ (Maa Sheetla temple) ಆವರಣದಲ್ಲಿ ನಡೆದಿದೆ.

 ತನ್ನ ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ ಭಕ್ತ

ದೇವಿಗೆ ನಾಲಿಗೆ ಅರ್ಪಿಸಿದ ಭಕ್ತನನ್ನು 38 ವರ್ಷದ ಸಂಪತ್‌ ಎಂದು ಗುರುತಿಸಲಾಗಿದೆ. ಕೌಶಾಂಬಿ ನಿವಾಸಿಯಾಗಿರುವ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸಂಪತ್‌ ಮತ್ತು ಆತನ ಪತ್ನಿ ಬನ್ನೊ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಗಂಗಾ ನದಿಯಲ್ಲಿ ಸ್ನಾನ ಮುಗಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದ್ದರು. ಬಳಿಕ ಸಂಪತ್‌ ಬ್ಲೇಡ್‌ನಿಂದ ನಾಲಿಗೆ ಕತ್ತರಿಸಿ ಕೊಂಡಿದ್ದಾನೆ. ಬಳಿಕ ಅದನ್ನು ದೇಗುಲದ ದ್ವಾರದ ಚೌಕಟ್ಟಿನ ಮೇಲಿಟ್ಟು ದೇವಿಗೆ ಅರ್ಪಣೆ ಮಾಡಿದ್ದಾನೆ ಎಂದು ಖರ್ಹಾ ಧಾಮ್‌ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಅಭಿಲಾಷ್‌ ತಿವಾರಿ ತಿಳಿಸಿದ್ದಾರೆ.

ತನ್ನ ನಾಲಿಗೆಯನ್ನೇ ಕತ್ತರಿಸಿ ದೇವಿ ಮುಂದಿಟ್ಟ ಭಕ್ತ! ಅಂಧಭಕ್ತಿಯ ಕಥೆ ಕೇಳಿದ್ರೆ ಶಾಕ್ ಆಗ್ತೀರಿ
ನಾಲಿಗೆ ಕತ್ತರಿಸಿಕೊಂಡು ಅಸ್ವಸ್ಥಗೊಂಡ ಭಕ್ತ


ಗಂಡನ ಕೃತ್ಯದ ಬಗ್ಗೆ ತಿಳಿಯದ ಪತ್ನಿ

‘ನನ್ನ ಪತಿ ಶುಕ್ರವಾರ ರಾತ್ರಿ ದೇವಸ್ಥಾನಕ್ಕೆ ಹೋಗುವ ಅಭಿಲಾಷೆ ವ್ಯಕ್ತಪಡಿಸಿದ್ದರು’ ಎಂದು ಸಂಪತ್ ಪತ್ನಿ ಬನ್ನೊ ದೇವಿ ಹೇಳಿದ್ದಾರೆ. ಶುಕ್ರವಾರ ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಭೇಟಿಗೆ ಮುನ್ನ ಈ ಘಟನೆಯ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಬನ್ನೋ ದೇವಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಇನ್ನು ಘಟನೆ ಬಗ್ಗೆ ತಿಳಿದು ದೇಗುಲಕ್ಕೆ ಬಂದಿದ್ದ ಭಕ್ತರು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: Ganesh Laddu: ಗಣೇಶನ ಲಡ್ಡುಗೆ ಬರೋಬ್ಬರಿ 24 ಲಕ್ಷ 60 ಸಾವಿರ ರೂಪಾಯಿ! ಇದನ್ನು ಖರೀದಿಸಿದ್ರೆ ಅದೃಷ್ಟವಂತೆ

ಇಂತಹ ಘಟನೆಗಳು ಇದೇ ಮೊದಲೇನಲ್ಲ

ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಅಥವಾ ಮೂಢ ನಂಬಿಕೆಗೆ ಒಳಗಾದ ಸಂದರ್ಭದಲ್ಲಿ ತಮ್ಮ ಅಂಗಾಂಗಗಳನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿರುವ ಘಟೆನಗಳು ಈ ಹಿಂದೆಯೂ ಸಾಕಷ್ಟು ನಡೆದಿದೆ. ಇದಕ್ಕೆ ಕಾರಣ ಸ್ಪಷ್ಟವಾಗಿಲ್ಲವಾದರೂ, ದೇವರಿಗೆ ಅಥವಾ ತಮ್ಮ ನೆಚ್ಚಿನ ನಾಯಕ, ರಾಜಕಾರಣಿಗೆ ನೈವೇದ್ಯವಾಗಿ ಭಕ್ತರು ತಮ್ಮ ನಾಲಿಗೆಯನ್ನು ಕತ್ತರಿಸುವ ಘಟನೆ ಇದೇ ಮೊದಲಲ್ಲ.

ತಮಿಳುನಾಡು ಸಿಎಂ ಸ್ಟಾಲಿನ್‌ಗಾಗಿ ನಾಲಿಗೆ ಕತ್ತರಿಸಿಕೊಂಡಿದ್ದ ಮಹಿಳೆ

ಕಳೆದ ವರ್ಷ ತಮಿಳುನಾಡಿನಲ್ಲಿ 'ಎಂಕೆ ಸ್ಟಾಲಿನ್ ಮುಖ್ಯಮಂತ್ರಿಯಾದರೆ' ತ್ಯಾಗ ಮಾಡುವುದಾಗಿ ಮಹಿಳೆಯೊಬ್ಬರು ತಮ್ಮ ನಾಲಿಗೆಯ ತುದಿಯನ್ನು ಕತ್ತರಿಸಿಕೊಂಡಿದ್ದರು. ದೇವಸ್ಥಾನದ ಮೆಟ್ಟಿಲುಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಕೆಯ ಬಾಯಿಯಿಂದ ರಕ್ತ ಬರುತ್ತಿತ್ತು.

ಇದನ್ನೂ ಓದಿ: Bharat Jodo: ಯೇಸು ಮಾತ್ರ ನಿಜವಾದ ದೇವರು: ವಿವಾದಿತ ಪಾದ್ರಿಯನ್ನು ಭೇಟಿಯಾದ ರಾಹುಲ್ ಗಾಂಧಿ: ಬಿಜೆಪಿ, ಕೈ ಸಮರ!

ಕೊರೋನಾ ಹೋಗಲಾಡಿಸಲು ನರಬಲಿ ನಡೆಸಿದ್ದ ಪಾದ್ರಿ

ಒಡಿಶಾ ರಾಜ್ಯದ ಹಳ್ಳಿಯೊಂದರಲ್ಲಿ 2020ರಲ್ಲಿ ಚರ್ಚ್‌ನ ಪಾದ್ರಿಯೊಬ್ಬರು ಕರೋನಾ ವೈರಸ್ ಏಕಾಏಕಿ ಹೋಗಲಾಡಿಸಲು ನರಬಲಿ ಕೊಟ್ಟಿದ್ದರು. ಅವರ ಕನಸಿನಲ್ಲಿ ದೇವರು ಬಂದು ಈ ಬಗ್ಗೆ ಆದೇಶ ನೀಡಿದ್ದನಂತೆ. ಕನಸಿನಲ್ಲಿ ಆದೇಶ ಪಡೆದಿದ್ದೇನೆ ಎಂದಿದ್ದ ಪಾದ್ರಿ, ನಂತರ ಧಾರ್ಮಿಕ ಕ್ರಿಯೆಗಳನ್ನು ಮಾಡಲು ಚರ್ಚ್ ಒಳಗೆ ಬಂದಿದ್ದ ಸ್ಥಳೀಯ ವ್ಯಕ್ತಿಯ ತಲೆಯನ್ನು ಕತ್ತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Published by:Annappa Achari
First published: