Gujarat: ಇಲ್ಲಿ ಶಾಲಾ ಮಕ್ಕಳಿಗೆ ಏರ್ಪಡಿಸಲಾಗುತ್ತದೆ ಜೀವಂತ ಮೊಸಳೆ ಏಣಿ ಆಟ; ಏನಿದರ ವಿಶೇಷತೆ?

ಮಕ್ಕಳಿಗೆ ಮೊಸಳೆ ಹಾಗೂ ಏಣಿಗಳ ಆಟದೊಂದಿಗೆ ಮೊಸಳೆಯ ನಡಿಗೆ (ಮಗ್ಗರ್ ನಿ ಚಾಲ್) ಎಂಬ ವಿಶೇಷ ವಿನೋದಮಯ ಆಟವನ್ನು ಹಳ್ಳಿಗರು ಆಯೋಜಿಸುತ್ತಾರೆ ಎಂದರೆ ನೀವು ನಂಬಲೇಬೇಕು. ಚರೋಟ್‌ನ ಸುತ್ತಮುತ್ತಲಿನ ಹಳ್ಳಿಗಳ ಸರೋವರದಲ್ಲಿ ಸುಮಾರು 150 ಮೊಸಳೆಗಳು ವಾಸವಿದ್ದು ಇವುಗಳು ಹಳ್ಳಿಗಳಿಗೂ ಬರುತ್ತವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ತಮ್ಮ ವಯಸ್ಸಿನವರೇ ಆದ ಹೆಚ್ಚಿನ ಮಕ್ಕಳಂತೆ (Children) ಗುಜರಾತ್‌ನ (Gujarat) ಚರೋಟರ್‌ನಲ್ಲಿರುವ ಮಕ್ಕಳು ಕೂಡ ಹಾವು ಏಣಿ ಆಟವಾಡುತ್ತಾ ಬೆಳೆದವರು. ಇದರಲ್ಲೇನು ವಿಶೇಷ ಅಂತೀರಾ? ಇದೇ ಮಕ್ಕಳಿಗೆ ಮೊಸಳೆ ಹಾಗೂ ಏಣಿಗಳ ಆಟದೊಂದಿಗೆ ಮೊಸಳೆಯ (Crocodile) ನಡಿಗೆ (ಮಗ್ಗರ್ ನಿ ಚಾಲ್) ಎಂಬ ವಿಶೇಷ ವಿನೋದಮಯ ಆಟವನ್ನು ಹಳ್ಳಿಗರು ಆಯೋಜಿಸುತ್ತಾರೆ ಎಂದರೆ ನೀವು ನಂಬಲೇಬೇಕು. ಚರೋಟ್‌ನ (Charotar) ಸುತ್ತಮುತ್ತಲಿನ ಹಳ್ಳಿಗಳ ಸರೋವರದಲ್ಲಿ ಸುಮಾರು 150 ಮೊಸಳೆಗಳು ವಾಸವಿದ್ದು ಇವುಗಳು ಹಳ್ಳಿಗಳಿಗೂ ಬರುತ್ತವೆ. ಆದರೆ ಈ ಮೊಸಳೆಗಳು ಯಾರಿಗೂ ಸಂಚಕಾರವನ್ನುಂಟು ಮಾಡಿಲ್ಲ ಎಂಬುದು ಅಲ್ಲಿನ ಹಳ್ಳಿಗರ ಹೇಳಿಕೆಯಾಗಿದೆ.

ಮೊಸಳೆಗಳೊಂದಿಗೆ ಸ್ನೇಹಪರವಾಗಿ ಮಕ್ಕಳು ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಹೇಳುವ ಸಲುವಾಗಿ ಈ ಆಟಗಳನ್ನು ಆಯೋಜಿಸಲಾಗುತ್ತದೆ ಎಂಬುದು ಹಳ್ಳಿಯ ಸರ್‌ಪಂಚ್‌ನ ಮಾತಾಗಿದೆ. ಚರೋಟರ್ ಮಾತ್ರವಲ್ಲದೆ ಸಮೀಪದ ಹಳ್ಳಿಗಳಿಗಳಲ್ಲೂ ಮೊಸಳೆಗಳಿವೆ ಮತ್ತು ಅಲ್ಲಿನ ಹಳ್ಳಿಗಳಿಗೂ ಮೊಸಳೆಗಳು ಭೇಟಿ ನೀಡುತ್ತವೆ ಎಂಬುದು ವಾಸ್ತವಿಕ ಸಂಗತಿಯಾಗಿದೆ.

ಜೀವಂತ ಮೊಸಳೆಗಳ ಆವಾಸ ಸ್ಥಾನ
ಗುಜರಾತ್‌ನ ಆನಂದ್ ಹಾಗೂ ಖೇಡಾ ಜಿಲ್ಲೆಗಳಲ್ಲಿ ಇಂತಹುದ್ದೇ ಆಟಗಳನ್ನು ಹಾಗೂ ಸ್ಪರ್ಧೆಗಳನ್ನು ‘ಮಕ್ಕಳ ಮೊಸಳೆ ಹಬ್ಬ’ ದ ಹೆಸರಿನಲ್ಲಿ ಏರ್ಪಡಿಸಲಾಗುತ್ತದೆ. ಇಲ್ಲಿನ ಜಿಲ್ಲೆಗಳು ತಮ್ಮ ತೇವ ಪ್ರದೇಶಗಳಿಂದಾಗಿ ಕನಿಷ್ಟ 175 ಮೊಸಳೆಗಳ ಆವಾಸ ಸ್ಥಾನಗಳಾಗಿವೆ.

ಮಕ್ಕಳಿಗೆ ಸಾಮರಸ್ಯದ ಪಾಠ
ವಾಲಂಟರಿ ನೇಚರ್ ಕನ್ಸರ್ವೆನ್ಸಿ (VNC) ಹಾಗೂ ಆನಂದ್ ಸೋಜಿತ್ರಾ ತಾಲೂಕಿನಲ್ಲಿರುವ ಪೆಟ್ಲಿ ಗ್ರಾಮ ಪಂಚಾಯತ್ ಈ ಚಟುವಟಿಕೆಯನ್ನು ಮಕ್ಕಳಿಗಾಗಿ ಆಯೋಜಿಸಿದ್ದು, ಭಯಾನಕ ಕ್ರೂರ ಪ್ರಾಣಿಗಳೊಂದಿಗೆ ಮಕ್ಕಳು ಸಾಮರಸ್ಯದಿಂದ ಹೇಗೆ ಇರಬೇಕು ಎಂಬ ಉದ್ದೇಶದೊಂದಿಗೆ ಇದನ್ನು ಆಯೋಜಿಸಿದ್ದರು. ಈ ಆಟವು ಒಂದು ಥೀಮ್ ಅನ್ನು ಹೊಂದಿದ್ದು, ಮಾರು ಗಮ್, ಮಾರು ಮಗರ್ ಅಂದರೆ ನನ್ನ ಹಳ್ಳಿ ನನ್ನ ಮೊಸಳೆಗಳು ಎಂದಾಗಿದೆ.

ಇದನ್ನೂ ಓದಿ:  Survivor Of Amazon Tribe: ಹೆಸರೇ ಇಲ್ಲದ, ಹೊರಜಗತ್ತಿನ ಸಂಪರ್ಕ ಇರದ ವ್ಯಕ್ತಿ ನಿಧನ

ಮೊಸಳೆಗಳ ಆಟಕ್ಕೆ 250 ಮಕ್ಕಳ ಆಹ್ವಾನ
ಪೆಟ್ಲಿ, ಡೆಮೋಲ್, ಲಾವಲ್, ದೇವಾ, ಅಲಿಂದ್ರ, ವಾಸೊ, ಮಲತಾಜ್ ಹಾಗೂ ಹೆರ್ನಾಜ್‌ ಹಳ್ಳಿಗಳ 14 ಸರಕಾರಿ ಶಾಲೆಗಳಿಂದ ಆರು ಹಾಗೂ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ 250 ಮಕ್ಕಳನ್ನು ಈ ಆಟಕ್ಕೆ ಆಹ್ವಾನಿಸಿದ್ದೆವು ಈ ಎಲ್ಲಾ ಹಳ್ಳಿಗಳು ಆರೋಗ್ಯಕರ ಮೊಸಳೆಗಳನ್ನು ಹೊಂದಿವೆ ಎಂಬುದಾಗಿ VNC ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿರುಧ್ ವಾಸುದೇವ್ ಹೇಳಿದ್ದಾರೆ.

ಮಗರ್ ನಿ ಚಾಲ್ ಆಟದ ವಿಶೇಷತೆ ಏನು?
ಮೊಸಳೆಯ ನಡಿಗೆ ಅಥವಾ ಮಗರ್ ನಿ ಚಾಲ್ ಇದೊಂದು ಸ್ಪರ್ಧೆಯಾಗಿದ್ದು ಇಲ್ಲಿ ಮಕ್ಕಳು ಮೊಸಳೆಯ ನಡಿಗೆಯನ್ನು ಅನುಸರಿಸಬೇಕು. ಇದು ನೀರು ಹಾಗೂ ಭೂಮಿಯಲ್ಲಿ ಮೊಸಳೆಗಳ ಚಲನೆಯನ್ನು ವಿವರಿಸುವ ಸರಳವಾದ ವಿಧಾನವಾಗಿದೆ ಎಂದು ವಾಸುದೇವ್ ಹೇಳುತ್ತಾರೆ.

ನಮ್ಮ ಸರೋವರಲ್ಲಿ ಮೊಸಳೆಗಳು ಸುಮಾರು ಎರಡು ದಶಕಗಳಿಂದ ಅಸ್ತಿತ್ವದಲ್ಲಿವೆ. ಆದರೆ ಜನರಿಗೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡಿಲ್ಲ. ಕೆಲವು ವರ್ಷಗಳ ಹಿಂದೆ, ನಮ್ಮ ಹಳ್ಳಿಯ ದೈಹಿಕ ನ್ಯೂನತೆಯುಳ್ಳ ಒಬ್ಬ ಹುಡುಗ ಸರೋವರದಲ್ಲಿ ಮುಳುಗಿದ್ದ ಆದರೆ ಆತನಿಗೆ ಮೊಸಳೆಗಳು ಯಾವುದೇ ಹಾನಿಯನ್ನುಂಟು ಮಾಡಿರಲಿಲ್ಲ ಎಂಬುದಾಗಿ ಪಂಚಾಯತ್‌ನ ಸರ್‌ಪಂಚ್ ಭೂಮಿ ತ್ರಿವೇದಿ ಹೇಳುತ್ತಾರೆ.

ಮಳೆಗಾಲದ ಸಮಯದಲ್ಲಿ ಮೊಸಳೆಗಳು ಸರೋವರದಿಂದ ಹೊರಗೆ ಬರುತ್ತವೆ ಹಾಗೂ 5200 ಜನರಿರುವ ಹಳ್ಳಿಯತ್ತ ಬರುತ್ತವೆ. ಅವುಗಳೊಂದಿಗೆ ಸಾಮರಸ್ಯದಿಂದ ಬದುಕುವ ತರಬೇತಿಯನ್ನು ನಮ್ಮ ಯುವಕರಿಗೆ ನೀಡಿದ್ದೇವೆ. ಸರೀಸೃಪಗಳನ್ನು ರಕ್ಷಿಸಿ ಅವುಗಳನ್ನು ಅವುಗಳ ನೈಸರ್ಗಿಕ ತಾವಳದಲ್ಲಿ ಯುವಕರು ಬಿಡುತ್ತಾರೆ ಎಂಬುದು ಸರ್‌ಪಂಚ್ ಮಾತಾಗಿದೆ.

ಸಂತಾನಾಭಿವೃದ್ಧಿ ಸಮಯದಲ್ಲಿ ಆಕ್ರಮಣಕಾರಿಯಾಗಿರುವ ಮೊಸಳೆಗಳು
ವಿಶೇಷವಾಗಿ ಮೊಸಳೆಗಳು ತಮ್ಮ ಸಂತಾನಾಭಿವೃದ್ಧಿ ಋತುವಿನಲ್ಲಿ ಆಕ್ರಮಣಕಾರಿಯಾಗಿರುವುದರಿಂದ ಮೊಸಳೆಗಳ ಮೊಟ್ಟೆಗಳ ಸಮೀಪಕ್ಕೆ ಹೋಗದಂತೆ ಅವುಗಳನ್ನು ಸ್ಪರ್ಶಿಸದಂತೆ ಮಕ್ಕಳಿಗೆ ಇದರ ಬಗ್ಗೆ ತಿಳಿಸಿಕೊಡುವ ಮಗ್ಗರ್ ನ ಇಂಡ ಎಂಬ ಇನ್ನೊಂದು ವಿನೋದಮಯ ಆಟವನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ: Government Schools: ಗುಜರಿಗಿಂತ ಕೆಟ್ಟದಾಗಿವೆ ದೇಶದ ಸರ್ಕಾರಿ ಶಾಲೆಗಳು; ಪ್ರಧಾನಿಗೆ ಪತ್ರ ಬರೆದ ಕೇಜ್ರಿವಾಲ್‌

ಹಾವು ಏಣಿ ಆಟದಂತೆಯೇ ಸುಧಾರಿತ ಮೊಸಳೆ ಏಣಿಗಳ ಆಟದಲ್ಲಿ ಮಕ್ಕಳು ಸುರಕ್ಷತಾ ಸಲಹೆಗಳನ್ನು ಅನುಸರಿಸಿದರೆ ಅಂಕಗಳನ್ನು ಗಳಿಸುತ್ತಾರೆ ಹಾಗೂ ತಪ್ಪು ಮಾಡಿದಲ್ಲಿ ಏಣಿಗಳನ್ನು ಜಾರಿಸುತ್ತಾರೆ. ಮಕ್ಕಳು ಸುಂದರವಾದ ಮಣ್ಣಿನ ಮೊಸಳೆಗಳ ಆಕೃತಿಗಳನ್ನು ತಯಾರಿಸುತ್ತಾರೆ.
Published by:Ashwini Prabhu
First published: