• Home
  • »
  • News
  • »
  • national-international
  • »
  • Honeytrap: 'ಹನಿ' ಹಿಂದೆ ಹೋಗಿ ಮಾನದ ಜೊತೆ ಹಣ ಕಳೆದುಕೊಂಡ ವೃದ್ಧ! ಹೆಂಡತಿಯನ್ನೇ ಬಿಟ್ಟು 'ಟ್ರ್ಯಾಪ್' ಮಾಡಿದ ಗಂಡ!

Honeytrap: 'ಹನಿ' ಹಿಂದೆ ಹೋಗಿ ಮಾನದ ಜೊತೆ ಹಣ ಕಳೆದುಕೊಂಡ ವೃದ್ಧ! ಹೆಂಡತಿಯನ್ನೇ ಬಿಟ್ಟು 'ಟ್ರ್ಯಾಪ್' ಮಾಡಿದ ಗಂಡ!

ಹನಿಟ್ರ್ಯಾಪ್ ಆರೋಪ ಹೊತ್ತಿರುವ ದಂಪತಿ

ಹನಿಟ್ರ್ಯಾಪ್ ಆರೋಪ ಹೊತ್ತಿರುವ ದಂಪತಿ

ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದರು. ಲಕ್ಷಾಂತರ ಜನರು, ಅಭಿಮಾನಿಗಳು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಆ ದಂಪತಿಯನ್ನು ಫಾಲೋ ಮಾಡ್ತಿದ್ರು. ಅವರೂ ಕೂಡ ತರಹೇವಾರಿ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು, ಫಾಲೋವರ್ಸ್ ಅನ್ನು ರಂಜಿಸುತ್ತಿದ್ರು. ಆದ್ರೆ ಈ ದಂಪತಿ ಇದೀಗ ಅರೆಸ್ಟ್ ಆಗಿದ್ದಾರೆ. ಕಾರಣ ಹನಿಟ್ರ್ಯಾಪ್ ದಂಧೆ!

ಮುಂದೆ ಓದಿ ...
  • News18 Kannada
  • Last Updated :
  • Kerala, India
  • Share this:

ಮಲಪ್ಪುರಂ, ಕೇರಳ: ಆ ದಂಪತಿ (couple) ಕೇರಳದ (Kerala) ಮಲಪ್ಪುರಂ (Malappuram) ಮೂಲದವರು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಫೇಮಸ್ ಆಗಿದ್ದರು. ಲಕ್ಷಾಂತರ ಜನರು, ಅಭಿಮಾನಿಗಳು (Fans) ಇನ್ಸ್‌ಸ್ಟಾಗ್ರಾಮ್‌ನಲ್ಲಿ (Instagram) ಆ ದಂಪತಿಯನ್ನು ಫಾಲೋ ಮಾಡ್ತಿದ್ರು. ಅವರೂ ಕೂಡ ತರಹೇವಾರಿ ವಿಡಿಯೋಗಳ (Video) ಮೂಲಕ ಅಭಿಮಾನಿಗಳನ್ನು, ಫಾಲೋವರ್ಸ್ (Followers) ಅನ್ನು ರಂಜಿಸುತ್ತಿದ್ರು. ಆದ್ರೆ ಈ ದಂಪತಿ ಇದೀಗ ಅರೆಸ್ಟ್ (Arrest) ಆಗಿದ್ದಾರೆ. ಕಾರಣ ಹನಿಟ್ರ್ಯಾಪ್ ದಂಧೆ (honeytrap business)! ಹೌದು, ಕೇರಳದ ಮಲಪ್ಪುರಂನ ವ್ಲಾಗರ್ (vlogger) ರಶೀದಾ (ಹಾಗೂ ಆಕೆಯ ಪತಿ ನಿಶಾದ್ (Rasheeda and her husband Nishad) ಎನ್ನುವವರನ್ನು ಹನಿಟ್ರ್ಯಾಪ್ ಆರೋಪದ ಮೇಲೆ ಬಂಧಿಸಲಾಗಿದೆ. 68 ವರ್ಷದ ವೃದ್ಧನನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ, ಆತನಿಗೆ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಆರೋಪ ಈ ವ್ಲಾಗರ್ ದಂಪತಿ ಮೇಲಿದೆ.


ಹನಿಟ್ರ್ಯಾಪ್ ಮಾಡುತ್ತಿದ್ದ ವ್ಲಾಗರ್ ದಂಪತಿ


68 ವರ್ಷದ ವ್ಯಕ್ತಿಯನ್ನು ಹನಿ ಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ವ್ಲಾಗರ್ ಹಾಗೂ ಆಕೆಯ ಪತಿಯನ್ನು ಬಂಧಿಸಲಾಗಿದೆ. ಕೇರಳದ ಕುನ್ನಂಕುಲಂನ ವ್ಲಾಗರ್, 30 ವರ್ಷದ ರಶೀದಾ (28) ಮತ್ತು ಆಕೆಯ ಪತಿ ನಿಶಾದ್ ಎಂಬುವರನ್ನು ಕಲ್ಪಕಂಚೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.



ವ್ಲಾಗರ್ ಮೂಲಕ ಫೇಮಸ್ ಆದ ದಂಪತಿ


ಮಲಪ್ಪುರಂನ ತಾನೂರ್ ಮೂಲದ 30 ವರ್ಷದ ರಶೀದಾ ಮತ್ತು ಆಕೆಯ ಪತಿ ಕುನ್ನಂಕುಲಂ ಮೂಲದ 36 ನಿಶಾದ್ ಇಬ್ಬರೂ ವ್ಲಾಗರ್ ಆಗಿ ಫೇಮಸ್ ಆಗಿದ್ದರು. ಹಲವಾರು ಫಾಲೋವರ್ಸ್‌ ಅನ್ನು ಹೊಂದಿದ್ದರು. ಇದೀಗ ಇಬ್ಬರನ್ನೂ ತ್ರಿಶೂರ್‌ನ ಬಾಡಿಗೆ ಮನೆಯಿಂದ ಕಲ್ಪಕಂಚೇರಿ ಪೊಲೀಸರು ಬಂಧಿಸಿದ್ದಾರೆ.


ಕೇರಳ ದಂಪತಿ


ಇದನ್ನೂ ಓದಿ: Men Will Be Men: ಹಾಡು ಹೇಳಿಯೇ 19ರ ಹುಡುಗಿಯ ಮನಗೆದ್ದ 70ರ ಅಜ್ಜ! ಮನೆಯವರ ವಿರೋಧದ ನಡುವೆ ಪ್ರೇಮವಿವಾಹ!


ಸೋಶಿಯಲ್ ಮೀಡಿಯಾ ಮೂಲಕ ವೃದ್ಧ ಉದ್ಯಮಿ ಪರಿಚಯ


ರಶೀದಾ ಮತ್ತು ನಿಶಾದ್ ಯೂಟ್ಯೂಬ್ ವ್ಲಾಗರ್‌ಗಳು. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಇಬ್ಬರೂ ಸಕ್ರಿಯರಾಗಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ರಶೀದಾ ಅವರು ಕಲ್ಪಕಂಚೇರಿ ಮೂಲದ 68 ವರ್ಷದ ವೃದ್ಧ ಉದ್ಯಮಿಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ನಂತರ ಇಬ್ಬರೂ ಫೇಸ್ ಬುಕ್ ನಲ್ಲಿ ಫ್ರೆಂಡ್ಸ್ ಆಗಿದ್ದಾರೆ. ನಂತರ ಚಾಟಿಂಗ್ ಆರಂಭಿಸಿದ್ದರು.


ವ್ಲಾಗರ್ ಮೂಲಕ ಫೇಮಸ್ ಆಗಿದ್ದ ದಂಪತಿ


ಉದ್ಯಮಿಯನ್ನು ಫ್ಲಾಟ್‌ಗೆ ಕರೆಸಿಕೊಂಡಿದ್ದ ದಂಪತಿ


ರಶೀದಾ ತನ್ನನ್ನು ಟ್ರಾವೆಲ್ ವ್ಲಾಗರ್ ಎಂದು ಪರಿಚಯಿಸಿಕೊಳ್ಳುವ ಮೂಲಕ ಉದ್ಯಮಿಯೊಂದಿಗೆ ಸ್ನೇಹ ಬೆಳೆಸಿದ್ದಳು. ಗೆಳೆತನ ಬೆಳೆಯುತ್ತಿದ್ದಂತೆ ಆಲುವಾದಲ್ಲಿನ ಫ್ಲಾಟ್‌ಗೆ ಅವರನ್ನೂ ಆಹ್ವಾನಿಸಲಾಯಿತು. ಪತಿಗೆ ಗೊತ್ತಿದ್ದರೂ ಯಾವುದೇ ತೊಂದರೆ ಇಲ್ಲ. ಇದಕ್ಕೆಲ್ಲ ಪತಿ ಒಪ್ಪುತ್ತಾರೆ ಎಂದು ಮಹಿಳೆ ಹೇಳಿದ್ದಳು. ಅದರಂತೆ ಉದ್ಯಮಿ ಆಲುವಾದಲ್ಲಿನ ಫ್ಲಾಟ್‌ಗೆ ಬಂದಿದ್ದರು.


ವಿಡಿಯೋ ಚಿತ್ರೀಕರಿಸಿ 23 ಲಕ್ಷಕ್ಕೆ ಬೇಡಿಕೆ


ಫ್ಲಾಟ್‌ಗೆ ಬರುತ್ತಿದ್ದಂತೆ ಉದ್ಯಮಿಯನ್ನು ಬೆತ್ತಲೆಯಾಗುವಂತೆ ಮಾಡಿದ್ದಾರೆ. ಬಳಿಕ ಆತನ ವಿಡಿಯೋ ಚಿತ್ರೀಕರಿಸಿ ದಂಪತಿ ಬೆದರಿಕೆ ಹಾಕಿದ್ದಾರಂತೆ. ಅಲ್ಲದೇ 23 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.


ಇದನ್ನೂ ಓದಿ: Hindu-Muslim Love Story: ಹಿಂದೂ ಹುಡುಗನ ಪ್ರೀತಿಸಿ, ಮದ್ವೆಯಾದ ಮುಸ್ಲಿಂ ಯುವತಿ! ಸನಾತನ ಧರ್ಮ ಸ್ವೀಕರಿಸಿದವಳಿಗೆ ಸಂತರ ಆಶೀರ್ವಾದ


ಹಣಕ್ಕಾಗಿ ಉದ್ಯಮಿಗೆ ಕಿರುಕುಳ


ಬಳಿಕ ಅವಳು ತನ್ನ ಪತಿಗೆ ವ್ಯವಹಾರವನ್ನು ಪ್ರಾರಂಭಿಸಲು ಹಣವನ್ನು ಕೇಳಲು ಪ್ರಾರಂಭಿಸಿದಳು. ಬಳಿಕ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ದೋಚಿದ್ದಳು. ವದ್ದೆ ಹಣ ಕಳೆದುಕೊಳ್ಳುತ್ತಿರುವ ವಿಷಯ ತಿಳಿದ ಮನೆಯವರು ವಿಚಾರಿಸಿದ್ದಾರೆ. ಇದರಿಂದ ಹನಿ ಟ್ರ್ಯಾಪ್ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ವಂಚಕ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

Published by:Annappa Achari
First published: