• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Divorce Case: 4 ವರ್ಷ ಡಿವೋರ್ಸ್‌ ಪಡೆಯಲು, 8 ವರ್ಷ ಪ್ರಕರಣ ರದ್ದುಗೊಳಿಸಲು; ಗುಜರಾತ್‌ ದಂಪತಿಯ ಅಪರೂಪದ ಪ್ರಕರಣ!

Divorce Case: 4 ವರ್ಷ ಡಿವೋರ್ಸ್‌ ಪಡೆಯಲು, 8 ವರ್ಷ ಪ್ರಕರಣ ರದ್ದುಗೊಳಿಸಲು; ಗುಜರಾತ್‌ ದಂಪತಿಯ ಅಪರೂಪದ ಪ್ರಕರಣ!

ನ್ಯಾಯಾಲಯ

ನ್ಯಾಯಾಲಯ

ಗುಜರಾತ್‌ ಮೂಲದ ವೈದ್ಯೆ ಮತ್ತು ಪ್ರೊಫೆಸರ್ ದಂಪತಿ 2006ರಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ದಂಪತಿಯ ಪ್ರೀತಿಯ ದ್ಯೋತಕವಾಗಿ 2009ರಲ್ಲಿ ಪುತ್ರನಿಗೆ ಜನನ ನೀಡಿದ್ದರು. ಕಾಲ ಕ್ರಮೇಣ ಮನೆಯ ಜವಾಬ್ದಾರಿ, ಮಗನ ನಿರ್ವಹಣೆ, ಕೆಲಸದ ಒತ್ತಡ ಹೀಗೆ ಮುಂತಾದ ಕಾರಣಗಳಿಂದಾಗಿ ದಂಪತಿಯ ಮಧ್ಯೆ ಬಿರುಕು ಉಂಟಾಗಲು ಶುರುವಾಗಿದೆ.

ಮುಂದೆ ಓದಿ ...
  • Share this:

ಅಹಮದಾಬಾದ್: ವಿವಾಹ ಅನ್ನೋದು (Marriage) ಹೊಂದಾಣಿಕೆ ಇದ್ದಂತೆ. ತುಂಬಾ ಸರಳ ಭಾಷೆಯಲ್ಲಿ ಹೇಳೋದಾದರೆ ಉಪ್ಪು ಖಾರ ಹುಳಿ ಎಲ್ಲದರ ಸಮಾನ ಮಿಶ್ರಣ. ಯಾವುದೊಂದು ಹೆಚ್ಚಾದರೂ ಅದರ ರುಚಿ ಕೆಡುತ್ತೆ. ಹಾಗೆನೇ ದಾಂಪತ್ಯದಲ್ಲಿ ಪರಸ್ಪರ ಗೌರವ, ಕೊಡು ಕೊಳ್ಳುವಿಕೆ, ಭಾವನೆಗಳ ಅರ್ಥೈಸುವಿಕೆ, ಸಮಯದ ಮೀಸಲು ಹೀಗೆ ಎಲ್ಲವೂ ಮುಖ್ಯವಾಗುತ್ತೆ. ಇವುಗಳಲ್ಲಿ ಒಂದರಲ್ಲಿ ಕೊರತೆ ಉಂಟಾದರೂ ಪರಸ್ಪರ ಭಿನ್ನಮತ (Family Clashes) ಉಂಟಾಗುವ ಸಾಧ್ಯತೆ ಇರುತ್ತೆ. ಇದು ಅನೇಕ ಸಲ ಕೊನೆಗೆ ಬಂದು ನಿಲ್ಲೋದು ವಿಚ್ಛೇದನದ (Divorce) ಹಂತಕ್ಕೆ.


ಇಲ್ಲೊಂದು ಪ್ರಕರಣದಲ್ಲಿ ಇಂತಹದೇ ಘಟನೆ ನಡೆದಿದೆ. ಪ್ರೊಫೆಸರ್‌ ಮತ್ತು ವೈದ್ಯೆಯ ದಾಂಪತ್ಯದಲ್ಲಿ ಬಿರುಕು ಉಂಟಾದ ಕಾರಣ ಅವರು ವಿಚ್ಚೇದನಕ್ಕೆ ಅರ್ಜಿ ಹಾಕಿ, ನ್ಯಾಯಾಲಯದ ತೀರ್ಪು ಬರೋ ವೇಳೆ ಮತ್ತೆ ಒಂದಾದ ಅಪರೂಪದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ವಿಪರ್ಯಾಸ ಅಂದ್ರೆ ಡಿವೋರ್ಸ್‌ಗೆ ಅರ್ಜಿ ಹಾಕಿ ನಾಲ್ಕು ವರ್ಷದ ನಂತರ ಪ್ರಕರಣದ ತೀರ್ಪು ಬಂದರೆ, ಆ ದಂಪತಿ ಪುನಃ ಜೊತೆಯಾಗಿ ಬಾಳಲು ನಿರ್ಧರಿಸಿದ ಕಾರಣ ವಿಚ್ಛೇದನವನ್ನು ರದ್ದುಗೊಳಿಸಲು ಬರೋಬ್ಬರಿ ಎಂಟು ವರ್ಷ ಹಿಡಿದಿದೆ.


ಇದನ್ನೂ ಓದಿ: Karnataka HC: ಉಳ್ಳವರು ಇಲ್ಲದವರ ಹಕ್ಕುಗಳನ್ನು ದಮನ ಮಾಡುವಂತಿಲ್ಲ; ಗ್ರಾಮ ಪಂಚಾಯ್ತಿಗೆ ಹೈಕೋರ್ಟ್‌ನಿಂದ ₹1 ಲಕ್ಷ ದಂಡ


ವಿಚ್ಛೇದನಕ್ಕೆ ನಿರ್ಧಾರ ಯಾಕೆ?


ಹೌದು.. ಗುಜರಾತ್‌ ಮೂಲದ ವೈದ್ಯೆ ಮತ್ತು ಪ್ರೊಫೆಸರ್ ದಂಪತಿ 2006ರಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ದಂಪತಿಯ ಪ್ರೀತಿಯ ದ್ಯೋತಕವಾಗಿ 2009ರಲ್ಲಿ ಪುತ್ರನಿಗೆ ಜನನ ನೀಡಿದ್ದರು. ಕಾಲ ಕ್ರಮೇಣ ಮನೆಯ ಜವಾಬ್ದಾರಿ, ಮಗನ ನಿರ್ವಹಣೆ, ಕೆಲಸದ ಒತ್ತಡ ಹೀಗೆ ಮುಂತಾದ ಕಾರಣಗಳಿಂದಾಗಿ ದಂಪತಿಯ ಮಧ್ಯೆ ಬಿರುಕು ಉಂಟಾಗಲು ಶುರುವಾಗಿದೆ. ಇದನ್ನು ಸರಿ ಮಾಡಲು ಸಾಧ್ಯವೇ ಇಲ್ಲ, ದೂರ ಇರೋದೆ ಉತ್ತಮ ಎಂದು ನಿರ್ಧರಿಸಿದ ದಂಪತಿ 2011ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವೈದ್ಯೆ ಪತ್ನಿ ತನ್ನ ಪ್ರೊಫೆಸರ್‌ ಪತಿಯ ವಿರುದ್ಧ ಮೊಕದ್ದಮೆಯನ್ನು ಹೂಡಿದರು. ನಂತರ ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಗಾಂಧಿನಗರದ ಕೌಟುಂಬಿಕ ನ್ಯಾಯಾಲಯ 2015ರಲ್ಲಿ ವಿಚ್ಛೇದನ ನೀಡಿದೆ.


ಪುನಃ ಜತೆಯಾಗಿ ಬಾಳಲು ನಿರ್ಧಾರ


ನ್ಯಾಯಾಲಯ ವಿಚ್ಛೇದನದ ತೀರ್ಪುನ ನೀಡುವ ಹೊತ್ತಿಗೆ ಪರಸ್ಪರ ದಂಪತಿಯ ಮನಸ್ಸು ಬದಲಾಗಿದ್ದು, ಪುನಃ ಜತೆಯಾಗಿ ಬಾಳಲು ನಿರ್ಧರಿಸಿದ್ದಾರೆ. ಹೀಗಾಗಿ ರಾಜಿ ಮಾಡಿಕೊಂಡ ದಂಪತಿ ತಮ್ಮ ಮಗನ ಜೊತೆಗೆ ಪುನಃ ಒಟ್ಟಿಗೆ ಬಾಳಲು ಪ್ರಾರಂಭಿಸಿದರು. ಈ ಹಿನ್ನೆಲೆ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ ವೈದ್ಯೆ ತಮ್ಮ ವಿಚ್ಛೇದನವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಅತ್ತ ವಿಚ್ಚೇದನ ರದ್ದುಗೊಳಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ ದಿನವೇ ಹೈಕೋರ್ಟ್ ವಿಚ್ಛೇದನ ತೀರ್ಪಿಗೆ ತಡೆ ನೀಡಿತ್ತು.


ವಿಚ್ಛೇದನ ತೀರ್ಪನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಮೇಲ್ಮನವಿ ತೀರ್ಪು ಎಂಟು ವರ್ಷಗಳ ನಂತರ ಹೊರಬಿದ್ದಿದ್ದು, ಕಳೆದ ವಾರ ಗುಜರಾತ್‌ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆದಿತ್ತು. ಈ ವೇಳೆ ತಮ್ಮ ಮಗನ ಜೊತೆಗೆ ಬಂದ ದಂಪತಿ, ನಾವು ಈಗ ಪರಸ್ಪರ ಜೊತೆಯಾಗಿ ಒಂದೇ ಮನೆಯಲ್ಲಿ ಬಾಳುತ್ತಿದ್ದೇವೆ. ನಮ್ಮ ನಡುವಿನ ಎಲ್ಲಾ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದೇವೆ ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Sanjay Raut: ಉದ್ಧವ್ ಠಾಕ್ರೆ ಕೋರ್ಟ್‌ಗೆ ಹೋಗೋ ದಿನವನ್ನು ದೆಹಲಿ ಸ್ಕ್ರಿಪ್ಟ್‌ ರೈಟರ್ಸ್‌ ನಿರ್ಧರಿಸುತ್ತಾರೆ: ಸಂಜಯ್ ರಾವತ್ ಕಿಡಿ


ಕೋರ್ಟ್‌ಗೆ ಮನವಿ ಮಾಡಿದ ದಂಪತಿ


ಅಲ್ಲದೇ, ನಮಗೆ ಮರು ಮದುವೆಯಾಗುವ ಆಯ್ಕೆ ಇದ್ದರೂ ಕೂಡ ನಾವು ಕುಟುಂಬ ನ್ಯಾಯಾಲಯದ ತೀರ್ಪು ದಾಖಲೆಗಳಲ್ಲಿ ಇರುವುದನ್ನು ಬಯಸುವುದಿಲ್ಲ. ಹೀಗಾಗಿ ಒಮ್ಮೆ ನ್ಯಾಯಾಲಯ ನಮ್ಮ ವಿಚ್ಛೇದನವನ್ನು ರದ್ದುಗೊಳಿಸಿದರೆ ನಾವು ಕೆಳ ನ್ಯಾಯಾಲಯಗಳಲ್ಲಿ ಕೇಸನ್ನು ಹಿಂಪಡೆಯುವುದಾಗಿ ಎಂದು ಹೈಕೋರ್ಟ್‌ಗೆ ಮನವಿ ಮಾಡಿದರು. ಆಗ ನ್ಯಾಯಾಲಯವು 10 ದಿನಗಳಲ್ಲಿ ಕೆಲ ನ್ಯಾಯಾಲಯಗಳಲ್ಲಿ ಇರುವ ಎಲ್ಲಾ ಆರೋಪಗಳ ಕೇಸನ್ನು ಹಿಂತೆಗೆದುಕೊಳ್ಳುವಂತೆ ದಂಪತಿಗೆ ಸೂಚನೆ ನೀಡಿತು. ಇದಕ್ಕೆ ಸಂತಸದಿಂದ ಒಪ್ಪಿದ ದಂಪತಿ ನ್ಯಾಯಾಲಯದ ಸೂಚನೆಯಂತೆ ಮುನ್ನಡೆಯಲು ನಿರ್ಧಾರ ಮಾಡಿದೆ.


ಒಟ್ನಲ್ಲಿ ಈ ಪ್ರಕರಣದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷದ ನಂತರ ತೀರ್ಪು ಬರೋವಾಗ ದಂಪತಿಯ ಮನಸ್ಸು ಜತೆಯಾಗಿ ಬಾಳಲು ನಿರ್ಧರಿಸಿತ್ತು. ಇತ್ತ ವಿಚ್ಛೇದನವನ್ನು ರದ್ದುಗೊಳಿಸಲು ಸಲ್ಲಿಸಿದ ಮನವಿಯ ತೀರ್ಪು ಬರಲು ಎಂಟು ವರ್ಷ ತಗುಲಿದೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು