• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • ಅಮೆರಿಕ-ಇರಾನ್ ಸೇನಾ ಬಲಾಬಲವೇನು?; ಚುನಾವಣಾ ಸಂದರ್ಭಗಳಲ್ಲೇ ಯುದ್ಧ ನಡೆಯುವುದೇಕೆ? ಇಲ್ಲಿದೆ ಡೀಟೈಲ್ಸ್

ಅಮೆರಿಕ-ಇರಾನ್ ಸೇನಾ ಬಲಾಬಲವೇನು?; ಚುನಾವಣಾ ಸಂದರ್ಭಗಳಲ್ಲೇ ಯುದ್ಧ ನಡೆಯುವುದೇಕೆ? ಇಲ್ಲಿದೆ ಡೀಟೈಲ್ಸ್

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಇನ್ನೂ ಅಮೆರಿಕ ಮಾತ್ರವಲ್ಲ ವಿಶ್ವದ ಪ್ರ,ಮುಖ ರಾಷ್ಟ್ರಗಳಾದ ರಷ್ಯಾ, ಚೀನಾ, ಭಾರತ, ಪಾಕಿಸ್ತಾನ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಸರಿಯಾಗಿ ಚುನಾವಣಾ ಸಂದರ್ಭದಲ್ಲೇ ಯುದ್ಧ ಅಥವಾ ಸೈನಿಕ ಕಾರ್ಯಾಚರಣೆ ಆರಂಭವಾಗುವುದು ಏಕೆ? ಎಂಬುದು ಮಾತ್ರ ಈವರೆಗೆ ವಿಶ್ವದ ರಾಜಕಾರಣವನ್ನು ಉತ್ತರವಿಲ್ಲದ ಪ್ರಶ್ನೆಯಂತೆ ಕಾಡುತ್ತಿದೆ. 

ಮುಂದೆ ಓದಿ ...
 • Share this:
top videos

  ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಹತ್ಯೆಯೊಂದಿಗೆ ಅಮೆರಿಕ ಮತ್ತು ಇರಾನ್ ಮಧ್ಯೆ ಹುಟ್ಟಿಕೊಂಡಿದ್ದ ಅಂತಾರಾಷ್ಟ್ರೀಯ ಬಿಕ್ಕಟ್ಟೊಂದು ಕೊನೆಗೂ ನಿರೀಕ್ಷೆಯಂತೆ ಯುದ್ಧ ಕಣ ಪ್ರವೇಶಿಸಿಸುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇರಾನ್ ಅಧ್ಯಕ್ಷ ಹಯತುಲ್ಲಾ ಕೋಮೇನಿ ತಾನು ನೀಡಿದ ಎಚ್ಚರಿಕೆಯಂತೆಯೇ ಸೊಲೈಮನಿ ಹತ್ಯೆಗೆ ಪ್ರತೀಕಾರವಾಗಿ ಮಂಗಳವಾರ ಇರಾಕ್ ನಲ್ಲಿರುವ ಅಮೆರಿಕಾದ 02 ವಾಯುನೆಲೆಗಳ  ಮೇಲೆ 12 ಡ್ರೋನ್ ದಾಳಿ ನಡೆಸುವ ಮೂಲಕ ಅಮೆರಿಕಕ್ಕೆ ಕಟುವಾದ ಎಚ್ಚರಿಕೆ ನೀಡಿದ್ದಾರೆ. 

  ಅಮೆರಿಕ ವಾಯು ನೆಲೆಗಳ ಮೇಲೆ ಇರಾನ್ ನಡೆಸಿರುವ ಡ್ರೋನ್​ ದಾಳಿಯಲ್ಲಿ ಅಮೆರಿಕದ ಎಷ್ಟು ಜನ ಸೈನಿಕರು ಮೃತಪಟ್ಟಿದ್ದಾರೆ ಎಂಬ ಕುರಿತು ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ಸಾಕಷ್ಟು ಜನ ಸಾವನ್ನಪ್ಪಿರುವ ಸಾಧ್ಯತೆಯಂತೂ ಇದೆ ಎನ್ನಲಾಗುತ್ತಿದೆ.

  ಅಮೆರಿಕ ಹಾಗೂ ಇರಾನ್ ದೇಶಗಳ ನಡುವೆ ಕಳೆದ ಒಂದು ವಾರದಿಂದ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಖಾಸಿಂ ಸೊಲೈಮನಿ ಹತ್ಯೆಯನ್ನು ಉಗ್ರವಾಗಿ ಖಂಡಿಸಿದ್ದ ಇರಾನ್ ಅಧ್ಯಕ್ಷ ಖೋಮೇನಿ ಅಮೆರಿಕದ ದಾಳಿಗೆ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದರು.

  ಇದಕ್ಕೆ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, " ಅಮೆರಿಕದ ಸೇನೆ ಈಗಾಗಲೇ ಇರಾನ್ ದೇಶದ 52 ಸ್ಥಳಗಳನ್ನು ಗುರುತಿಸಿದೆ. ಈ ಎಲ್ಲಾ ಸ್ಥಳಗಳೂ ಇರಾನ್ ದೇಶದ ಸಾಂಸ್ಕೃತಿಕ ಶ್ರೀಮಂತ ನಗರಗಳಾಗಿದ್ದು, ಅಕಸ್ಮಾತ್​ ಖೋಮೇನಿ ಸರ್ಕಾರ ಅಮೆರಿಕದ ಮೇಲೆ ದಾಳಿ ನಡೆಸಿದರೆ ನಾವು ಈ ಎಲ್ಲಾ ಸ್ಥಳಗಳ ಮೇಲೆ ನಾವು ಪ್ರತಿದಾಳಿ ಮಾಡುವುದಾಗಿಯೂ, ಇಡೀ ಇರಾನ್​ ದೇಶವನ್ನು ನೆಲಸಮ ಮಾಡಲು ಅಧಿಕೃತವಾಗಿ ಯುದ್ಧ ಘೋಷಣೆ ಮಾಡುವುದಾಗಿಯೂ" ಬಹಿರಂಗವಾಗಿ ಬೆದರಿಕೆ ಒಡ್ಡಿದ್ದರು.  ಡೊನಾಲ್ಡ್​ ಟ್ರಂಪ್ ಹೀಗೆ ನೇರಾ ನೇರ ಬೆದರಿಕೆ ಒಡ್ಡಿರುವ ನಡುವೆಯೂ ಇರಾಕ್​ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ಸೇನೆ ದಾಳಿ ನಡೆಸಿರುವುದು ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇರಾನ್​ನಿಂದ ಪೆಟ್ಟು ತಿಂದ ಅಮೆರಿಕ ಸುಮ್ಮನೆ ಕೈಕಟ್ಟಿ ಕೂರುವ ದೇಶವಲ್ಲ ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗಲಿದೆ? ಅಮೆರಿಕ-ಇರಾನ್ ನಡುವಿನ ಬಿಕ್ಕಟ್ಟು ಯಾವ ಹಂತಕ್ಕೆ ತಲುಪಲಿದೆ? ಅಮೆರಿಕ ಯುದ್ಧ ಘೋಷಿಸಿದರೆ ಯಾವ್ಯಾವ ದೇಶಗಳು ಯಾರಿಗೆ ಬೆಂಬಲ ಸೂಚಿಸಲಿವೆ? ಇದು ಮೂರನೇ ಮಹಾಯುದ್ಧಕ್ಕೆ ವೇದಿಕೆ ಕಲ್ಪಿಸುತ್ತಾ? ಎಂಬ ಸಾಕಷ್ಟು ಪ್ರಶ್ನೆಗಳು ಇದೀಗ ಮೂಡುತ್ತಿವೆ.


  ಆದರೆ, ಈ ಎಲ್ಲಾ ಪ್ರಶ್ನೆಗಳ ನಡುವೆ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ ಎಂದರೆ ವಿಶ್ವದ ದೊಡ್ಡಣ್ಣ ಅಮೆರಿಕ ದೇಶಕ್ಕೆ ಸವಾಲೆಸೆಯಲು ಮುಂದಾಗಿರುವ ಇರಾನ್ ನಿಜಕ್ಕೂ ಸೈನಿಕವಾಗಿ ಬಲಿಷ್ಟ ದೇಶವಾ? ಈ ದೇಶದ ಸೇನಾ ಬಲ ಎಷ್ಟು? ಇರಾನ್ ಬಳಿ ಅಣು ಆಯುಧ ಇದೆಯಾ? ಅಕಸ್ಮಾತ್ ಯುದ್ಧ ನಡೆದರೆ ಅಮೆರಿಕ ಎದುರು ಅಚಲವಾಗಿ ನಿಂತು ಕಾದಾಡುವ ತಾಕತ್ತೂ ಈ ದೇಶಕ್ಕೆ ಇದೆಯಾ? ಅಸಲಿಗೆ ಈ ದೇಶದ ಸೇನಾ ಬಲಾಬಲ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

  ಅಮೆರಿಕ ಮತ್ತು ಇರಾನ್  ಸೇನೆಯ ಬಲಾಬಲದ ಮಾಹಿತಿ..! 

  ವಿಶ್ವದ ದೊಡ್ಡಣ್ಣ ಎಂಬ ಹೆಸರಿಗೆ ತಕ್ಕಂತೆ ಅಮೆರಿಕ ದೇಶದ ಸೇನಾ ಬಲ ಇಡೀ ವಿಶ್ವದಲ್ಲೇ ಅತ್ಯಂತ ಬಲಿಷ್ಟ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದುರುವ ವಿಚಾರ. ಇನ್ನೂ ತೈಲ ಆದಾಯವನ್ನೇ ನಂಬಿ ಆರ್ಥಿಕತೆ ಕಟ್ಟಿಕೊಂಡಿರುವ ಇರಾನ್ ಸಹ ಬಲಿಷ್ಟವಾದ ಸೇನಾಪಡೆಯನ್ನು ಹೊಂದಿದೆಯಾದರೂ ಅಮೆರಿಕಾಕ್ಕೆ ಹೋಲಿಕೆ ಮಾಡುವುದು ಕಷ್ಟ. ಹಾಗಾದರೆ ಈ ಎರಡೂ ದೇಶಗಳ ಸೇನೆಯ ಬಲಾಬಲ ಏನು? ಇಲ್ಲಿದೆ ಮಾಹಿತಿ.

  ಅಮೆರಿಕ ಭೂಸೇನೆ    -   ಇರಾನ್​ ಭೂಸೇನೆ             

  12,81,900 ಸಕ್ರೀಯ ಸೈನಿಕರ ಸಂಖ್ಯೆ 5,50,000

  8,11,000 ಮೀಸಲು ಸೈನಿಕರ ಸಂಖ್ಯೆ3,50,000

  41,760 ಟ್ಯಾಂಕರ್ ಮತ್ತು ಯುದ್ಧ ವಾಹನಗಳು 1,625

  3,269 ಫಿರಂಗಿಗಳು 4,096

  950 ಸ್ವಯಂ ಚಾಲಿತ ಫಿರಂಗಿಗಳು 570

  1,197 ರಾಕೆಟ್ ಲಾಂಚರ್​ಗಳು 1,438

   

  ಅಮೆರಿಕಾ ವಾಯು ಸೇನೆ- ಇರಾನ್ ವಾಯುಸೇನೆ

  12, 304 ಯುದ್ಧ ವಿಮಾನಗಳು  850

  457 ಫೈಟರ್​ ಜೆಟ್​ ವಿಮಾನಗಳು 130

  2,192 ಉಬಯ ಸೇವಾ ಯುದ್ಧ ವಿಮಾನಗಳು 73

  587 ದಾಳಿ ವಿಮಾನಗಳು 52

  4,889 ಹೆಲಿಕಾಫ್ಟರ್​ಗಳು 324

  12 ಖಂಡಾಂತರ ಕ್ಷಿಪಣಿ  07

   

  ಅಮೆರಿಕಾ ನೌಕಾ ಬಲ - ಇರಾನ್ ನೌಕಾ ಬಲ 

  437 ಯುದ್ಧ ಹಡಗುಗಳು 406

  20 ಯುದ್ಧ ವಿಮಾನ ನೌಕೆ 00

  85 ವಿಧ್ವಸಂಕ ಯುದ್ಧ ನೌಕೆ  00

  71 ಸಬ್​ಮೆರಿನ್​ಗಳು 40

   

  ಇದಲ್ಲದೆ ಅಮೆರಿಕ ದೇಶ ತಮ್ಮ ಸೇನೆಗಾಗಿ ಪ್ರತಿವರ್ಷ 610 ಬಿಲಿಯನ್ ಅಮೆರಿಕನ್ ಡಾಲರ್​ ಹಣ ಖರ್ಚು ಮಾಡಿದರೆ, ಇರಾನ್ ಖರ್ಚು ಮಾಡುವ ಹಣ ಕೇವಲ 14 ಬಿಲಿಯನ್ ಅಮೆರಿಕನ್ ಡಾಲರ್​. ಇದಲ್ಲದೆ ಒಮ್ಮೆ ಯುದ್ಧ ಆರಂಭವಾದರೆ ಸತತ 140 ದಿನಕ್ಕೂ ಹೆಚ್ಚು ಕಾಲ ಯುದ್ಧ ಮಾಡುವಷ್ಟು ಯುದ್ಧ ಸಾಮಗ್ರಿಗಳು ಅಮೆರಿಕದ ಬಳಿ ಇದೆ. ಆದರೆ, ಇರಾನ್ ದೇಶದ ಬಳಿ ಇರುವ ಆಯುಧಗಳು ಕೇವಲ 60ನೇ ದಿನಕ್ಕೆ ಖಾಲಿಯಾಗುತ್ತದೆ.

  ಮೇಲಿನ ಎಲ್ಲಾ ಅಂಕಿ ಅಂಶಗಳನ್ನು ಹೇಗೆ ಹೋಲಿಕೆ ಮಾಡಿದರೂ ಸೈನಿಕ ಕಾರ್ಯಾಚರಣೆಯ ಎಲ್ಲಾ ವಿಭಾಗಗಳಲ್ಲೂ ಅಮೆರಿಕ ಇರಾನ್ ದೇಶಕ್ಕಿಂತ ಅತ್ಯಂತ ಬಲಿಷ್ಟವಾಗಿರುವುದು ವೇದ್ಯವಾಗುತ್ತದೆ. ಇದಲ್ಲದೆ ಎರಡನೇ ಮಹಾಯುದ್ಧದ ನಂತರ ಅಮೆರಿಕ ನಡೆಸಿರುವ ಅಣು ಆಯುಧ ಪರೀಕ್ಷೆಯನ್ನು ಇಡೀ ವಿಶ್ವದಲ್ಲಿ ಯಾವುದೇ ರಾಷ್ಟ್ರವೂ ನಡೆಸಿರಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

  ಜಪಾನ್ ದೇಶದ ಹಿರೋಶಿಮಾ ನಾಗಸಾಕಿ ನಗರವನ್ನು ತನ್ನ ಮೊದಲ ಅಣುಬಾಂಬ್ ಪ್ರಯೋಗ ತಾಣವಾಗಿ ಬಳಸಿದ್ದ ಅಮೆರಿಕ ಕನಿಷ್ಟ 2 ಲಕ್ಷ ಜನರ ಸಾವಿಗೆ ಕಾರಣವಾಗಿತ್ತು. ಈ ನಂತರವೂ ಅಮೆರಿಕ ಸುಮಾರು 1054 ಬಾರಿ ಅಣು ಪರೀಕ್ಷೆ ನಡೆಸಿದೆ. ಅಂದಾಜಿನ ಪ್ರಕಾರ 1980ಕ್ಕೂ ಮುಂಚೆಯೇ ಅಮೆರಿಕ ಸೇನೆ ಕನಿಷ್ಟ 70,000 ಅಣುಬಾಂಬ್ ಸಿಡಿತಲೆಗಳನ್ನು ಶೇಖರಿಸಿಟ್ಟುಕೊಂಡಿದೆ ಎನ್ನುತ್ತಿವೆ ಅಂತಾರಾಷ್ಟ್ರೀಯ ವರದಿಗಳು.

   

  ಆದರೆ, ಇರಾನ್ ದೇಶದ ಬಳಿ ಈ ಪ್ರಮಾಣದ ಅಣು ಸಿಡಿತಲೆಗಳು ಇರಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಹೀಗಾಗಿ ಯಾವ ಸಂದರ್ಭದಲ್ಲಿ ಯುದ್ಧ ಸಂಭವಿಸಿದರೂ ಮಧ್ಯಪ್ರಾಚ್ಯ ಏಷ್ಯಾದ ಪುಟ್ಟ ರಾಷ್ಟ್ರ ಇರಾನ್ ನನ್ನು ಸದೆಬಡಿಯುವುದು ಅಮೆರಿಕಾ ಎಂಬ ವಿಶ್ವದ ದೊಡ್ಡಣ್ಣನಿಗೆ ದೊಡ್ಡ ಮಾತಲ್ಲ. ಆದರೆ, ಅಕಸ್ಮಾತ್​ ಯುದ್ಧ ಸಂಭವಿಸಿ ಈ ಯುದ್ಧದಲ್ಲಿ ಯಾರೇ ಗೆದ್ದರೂ, ಯಾರೇ ಸೋತರೂ ಎರಡೂ ದೇಶಗಳ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುವುದು ಮಾತ್ರ ದಿಟ.

  ಇದನ್ನೂ ಓದಿ : ವಾಗ್ದಂಡನೆಯಿಂದ ಪಾರಾಗಲು ಕ್ಲಿಂಟನ್ ದಾರಿ ಹಿಡಿದರಾ ಟ್ರಂಪ್?; ಅಮೆರಿಕಾ-ಇರಾನ್ ಯುದ್ಧದೊಂದಿಗೆ ಮರುಕಳಿಸಲಿದೆಯಾ ಇತಿಹಾಸ?

  ಅಲ್ಲದೆ, ಈ ಎರಡು ರಾಷ್ಟ್ರಗಳ ನಡುವಿನ ಯುದ್ಧದ ಪರಿಣಾಮವನ್ನು ಕೇವಲ ಈ ದೇಶಗಳು ಮಾತ್ರ ಅನುಭವಿಸುವುದಿಲ್ಲ. ಬದಲಾಗಿ ಇದರ ಪರಿಣಾಮ ಭಾರತದಂತಹ ತೃತೀಯ ರಾಷ್ಟ್ರಗಳ ಮೇಲೂ ಬೀರಲಿದೆ. ಈ ಯುದ್ಧದಲ್ಲಿ ಭಾರತ ಭಾಗವಹಿಸದಿದ್ದರೂ ಪರೋಕ್ಷವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಶೇರು ಮಾರುಕಟ್ಟೆ ನೆಲಕ್ಕಪ್ಪಳಿಸಲಿದೆ,  ತೈಲ ಮತ್ತು ಚಿನ್ನದ ಬೆಲೆ ಗಗನಕ್ಕೇರಲಿದೆ. ಎಲ್ಲಾ ರಾಷ್ಟ್ರಗಳು ಇದರ ನಷ್ಟ ಅನುಭವಿಸಲೇಬೇಕು.

  ಇಡೀ ವಿಶ್ವ ಇಂದು ಆರ್ಥಿಕ ಹಿಂಜರಿತಕ್ಕೆ ಸಿಲುಕಿರುವ ಕಾರಣ ಯಾವ ರಾಷ್ಟ್ರಕ್ಕೂ ಇಂದು ಯುದ್ಧ ಬೇಡವಾಗಿದೆ. ಆದರೆ, ಯುದ್ಧದ ವ್ಯಾಪಾರಿ ಅಮೆರಿಕದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಅಲ್ಲಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ತುರ್ತಾಗಿ ಒಂದು ಯುದ್ಧದ ಅಗತ್ಯತೆ ಇದೆ. ಹೀಗಾಗಿ ಅಮೆರಿಕ ಪಾಲಿಗೆ ಇರಾನ್ ಮತ್ತು ಇರಾಕ್ ಆಟದ ಮೈದಾನದಂತಾಗಿರುವುದು ವಿಪರ್ಯಾಸ.

  ಇನ್ನೂ ಅಮೆರಿಕ ಮಾತ್ರವಲ್ಲ ವಿಶ್ವದ ಪ್ರ,ಮುಖ ರಾಷ್ಟ್ರಗಳಾದ ರಷ್ಯಾ, ಚೀನಾ, ಭಾರತ, ಪಾಕಿಸ್ತಾನ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಸರಿಯಾಗಿ ಚುನಾವಣಾ ಸಂದರ್ಭದಲ್ಲೇ ವಿರೋಧಿ ರಾಷ್ಟ್ರಗಳ ವಿರುದ್ಧ ಯುದ್ಧ ಅಥವಾ ಸೈನಿಕ ಕಾರ್ಯಾಚರಣೆಗಳು ನಡೆಯುವುದೇಕೆ? ಎಂಬುದು ಮಾತ್ರ ಈವರೆಗೆ ವಿಶ್ವದ ರಾಜಕಾರಣವನ್ನು ಉತ್ತರವಿಲ್ಲದ ಪ್ರಶ್ನೆಯಂತೆ ಕಾಡುತ್ತಿದೆ.

  ಇದನ್ನೂ ಓದಿ : ಅಮೆರಿಕದಿಂದ ಕೊಲ್ಲಲ್ಪಟ್ಟ ಖಾಸಿಂ ಸೊಲೈಮನಿ ಯಾರು? ಈತನ ಹಿನ್ನೆಲೆ ಇತಿಹಾಸವೇನು? ಮಹಾಯುದ್ಧಕ್ಕೆ ನಾಂದಿ ಹಾಡುತ್ತಾ ಈ ಸಾವು? ಇಲ್ಲಿದೆ ಡೀಟೈಲ್ಸ್

   

  First published: