ಕರುಣಾನಿಧಿಯ ಅದೃಷ್ಟವನ್ನೇ ಬದಲಿಸಿತ್ತು ಆ ಒಂದು ಸಿನಿಮಾ..!


Updated:August 9, 2018, 7:13 PM IST
ಕರುಣಾನಿಧಿಯ ಅದೃಷ್ಟವನ್ನೇ ಬದಲಿಸಿತ್ತು ಆ ಒಂದು ಸಿನಿಮಾ..!

Updated: August 9, 2018, 7:13 PM IST
ಪ್ರೆಸಿಲ್ಲಾ ಒಲಿವಿಯಾ ಡಾಯಸ್, ನ್ಯೂಸ್​ 18 ಕನ್ನಡ

ಚೆನ್ನೈ(ಆ.09): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಮಂಗಳವಾರದಂದು ತಮ್ಮ 94 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.ಹೀಗಿರುವಾಗ ಬಹುತೇಕ ಮಂದಿ ಅವರನ್ನು ಓರ್ವ ರಾಜಕಾರಣಿಯಾಗಿ ಗುರುತಿಸುತ್ತಾರೆ. ಆದರೆ ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಇವರೊಬ್ಬ ಪ್ರಖ್ಯಾತ ವ್ಯಕ್ತಿ ಎಂಬ ವಿಚಾರ ಬಹಳಷ್ಟು ಮಂದಿಗೆ ತಿಳಿದಿಲ್ಲ. ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲು ಅವರು ತಮಿಳು ಸಿನಿಮಾ ಕ್ಷೇತ್ರದಲ್ಲಿ ಸ್ಕ್ರಿಪ್ಟ್​ ರೈಟರ್​ ಆಗಿ ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ಸಮಾಜ ಸುಧಾರಣೆಯನ್ನೇ ಕೆಂದ್ರವಾಗಿರಿಸಿ ಅವರು ಹಲವಾರು ಕಥೆಗಳನ್ನು ಬರೆದಿದ್ದರು.

20 ವರ್ಷದವರಿದ್ದಾಗ ಅವರು ಸ್ಕ್ರಿಪ್ಟ್ ರೈಟರ್​ ಆಗಿ ಕರುಣಾನಿಧಿಯವರು ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ರಾಜಕುಮಾರಿ ಅವರ ಮೊದಲ ಸಿನಿಮಾವಾಗಿತ್ತು, ಈ ಚೊಚ್ಚಲ ಸಿನಿಮಾದಿಂದಲೆ ಅವರು ಪ್ರಖ್ಯಾತರಾದರು. ಅವರು 75 ಕ್ಕೂ ಹೆಚ್ಚು ಸಿನಿಮಾಗಳಿಗೆ ಕಥೆ ಬರೆದು ಸಿನಿಮಾ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇವುಗಳಲ್ಲಿ ರಾಜಕುಮಾರಿ, ಅಭಿಮನ್ಯು, ಮಂದಿರೀ ಕುಮಾರಿ, ಮರುದ್​ ನಾಟ್ಟ್​ ಇಳವರಸಿ, ಮನಾಮಗನ್​ ಹಾಗೂ ದೇವಕಿ ಇಳಿದೆಲ್ಲ ಸಿನಿಮಾಗಳಿಗಿಂತ ಬಹಳಷ್ಟು ಪಾಪ್ಯುಲರ್​ ಆದವು.

ಅವರ ಸಿನಿಮಾಗಳು ಕೇವಲ ಸೂಪರ್​ಹಿಟ್​ ಆಗಿದ್ದಲ್ಲ, ಬದಲಾಗಿ ವಿವಾದಗಳಿಂದ ಚರ್ಚೆಗೀಡಾದವು. ಅವರ ಪರಾಶಕ್ತಿ ಸಿನಿಮಾವು ವಿವಾದ ಸೃಷ್ಟಿಸಿತು. ಈ ಸಿನಿಮಾ ಮೂಲಕವೇ ಅವರು ತಮ್ಮ ರಾಜಕೀಯ ಬದುಕಿಗೆ ಅಡಿಪಾಯ ಹಾಕಿದ್ದರೆಂಬುವುದು ಹಲವರ ಅಭಿಪ್ರಾಯವಾಗಿದೆ. ಇದೇ ಸಿನಿಮಾ ಮೂಲಕ ಅವರ ವಿಚಾರಧಾರೆಯೂ ಜಗತ್ತಿನೆದುರು ಬಹಿರಂಗಗೊಂಡಿತು. ಹೀಗಾಗಿ ಈ ಸಿನಿಮಾಗೆ ಬಹಳಷ್ಟು ವಿರೋಧ ವ್ಯಕ್ತವಾಯಿತು ಹಾಗೂ ನಿಷೇಧಿಸಲಾಯಿತು. ಆದರೆ 1952ರಲ್ಲಿ ಇದನ್ನು ಬಿಡುಗಡೆಗೊಳಿಸಲಾಯಿತು. ಈ ಸಿನಿಮಾವು ಕರುಣಾನಿಧಿಯವರ ಜೀವನದಲ್ಲಿ ಬಹುದೊಡ್ಡ ತಿರುವೆಂದು ಸಾಬೀತಾಯಿತು.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...