ಕೆಲವೊಂದು ಪ್ರಾಣಿಗಳನ್ನು (Animal) ಬೇಟೆಯಾಡಬಾರದು, ಅವುಗಳ ಮಾಂಸವನ್ನು(Meat) ಸಾಗಿಸಬಾರದು, ಆಕ್ರಮವಾಗಿ ಯಾರಾದರೂ ಅವುಗಳನ್ನು ಮಾರಾಟ ಮಾಡಿದರೆ ಅವುಗಳನ್ನು ಖರೀದಿಸುವುದು ಸಹ ಒಂದು ಅಕ್ರಮ (Illegal) ಕೆಲಸ ಅಂತ ಕಾನೂನಿನ ಪ್ರಕಾರ ಹೇಳಲಾಗುತ್ತದೆ. ಕೆಲವೊಮ್ಮೆ ಜನರಿಗೆ ಇದೆಲ್ಲದರ ಬಗ್ಗೆ ಗೊತ್ತಿದ್ದರೂ ಸಹ ಬೇಕು ಅಂತಾನೆ ಈ ಕೆಲಸಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ಇಂತಹ ಕೆಲಸಗಳ ವೀಡಿಯೋಗಳನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಹ ಹಂಚಿಕೊಳ್ಳುತ್ತಾರೆ. ಹೀಗೆ ಅಕ್ರಮ ಕೆಲಸವನ್ನು ಮಾಡಿ, ನಂತರ ಅದನ್ನು ವೀಡಿಯೋ ಮಾಡಿದ್ದಕ್ಕೆ ಇಲ್ಲೊಬ್ಬ ಮಹಾಶಯರಿಗೆ ಬಿದ್ದಿದೆ ನೋಡಿ ಭಾರಿ ದಂಡ. ಹೌದು ಈ ಘಟನೆ ನಡೆದಿದ್ದು ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ(China) ಅಂತ ಹೇಳಬಹುದು.
ವೈಟ್ ಶಾರ್ಕ್ ತಿಂದದ್ದಕ್ಕೆ ಬಿತ್ತು ಭಾರಿ ದಂಡ
ಚೀನಾದಲ್ಲಿರುವ ಫುಡ್ ಬ್ಲಾಗರ್ ಒಬ್ಬರು ವೈಟ್ ಶಾರ್ಕ್ (white Shark) ಅನ್ನು ಅಕ್ರಮವಾಗಿ ಖರೀದಿಸಿದ್ದಲ್ಲದೆ, ಅದನ್ನು ಅಡುಗೆ ಮಾಡುವ ಮತ್ತು ತಿನ್ನುವ ವೀಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ. ಶಾರ್ಕ್ಅನ್ನು ಅಕ್ರಮವಾಗಿ ಖರೀದಿಸಿ ತಿಂದಿದ್ದಕ್ಕೆ ಅವರಿಗೆ 18,500 ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿಯ ಭಾರಿ ದಂಡವನ್ನು ವಿಧಿಸಲಾಗಿದೆ.
ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆದ ವಿಡಿಯೋ
ಸಾಮಾಜಿಕ ಜಾಲಾತಾಣದಲ್ಲಿ ಟಿಜಿ ಎಂಬ ಹೆಸರಿನ ಪಾಕಶಾಲೆಯ ಬ್ಲಾಗರ್ ಜಿನ್ ಮೌಮೌ ಎಂಬುವವನೇ ಶಾರ್ಕ್ ನಿಂದ ಖಾದ್ಯ ತಯಾರಿಸಿ ತಿಂದಿರುವುದಾಗಿ ಅಧಿಕಾರಿಗಳು ಗುರುತಿಸಿದ್ದಾರೆ. 2022ರ ಏಪ್ರಿಲ್ನಲ್ಲಿ ಜಿನ್ ಮೌಮೌ ಗ್ರೇಟ್ ವೈಟ್ ಶಾರ್ಕ್ ಖರೀದಿಸಿದ್ದಳು ಮತ್ತು ಕಳೆದ ವರ್ಷ ಜುಲೈನಲ್ಲಿ ಬೇಯಿಸಿ ತಿನ್ನುವ ವೀಡಿಯೋವನ್ನು ಬಿಡುಗಡೆ ಮಾಡಿದ್ದಾಗಿ ನನ್ಚಾಂಗ್ ನ ಅಧಿಕಾರಿಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.
ಕಾಡು ಪ್ರಾಣಿ ಸಂರಕ್ಷಣಾ ಕಾನೂನನ್ನು ಉಲ್ಲಂಘನೆ
ಡೌಯಿನ್ (ಚೀನಾದ ಟಿಕ್-ಟಾಕ್ ಅಪ್ಲಿಕೇಶನ್) ನಲ್ಲಿ ಪೋಸ್ಟ್ ಮಾಡಲಾದ ವೀಡಿಯೋವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಕಾಡು ಪ್ರಾಣಿ ಸಂರಕ್ಷಣಾ ಕಾನೂನನ್ನು ಉಲ್ಲಂಘಿಸಿದೆ. ಜನವರಿ 28 ರಂದು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ವೈಟ್ ಶಾರ್ಕ್ ಅನ್ನು ಅಕ್ರಮವಾಗಿ ಹೊಂದಿರುವುದು 5 ರಿಂದ 10 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಬಹುದು ಎಂದು ಹೇಳಲಾಗಿದೆ.
ವೀಡಿಯೋದಲ್ಲಿ ಬ್ಲಾಗರ್ ಸುಮಾರು ಆರು ಅಡಿ ಉದ್ದದ ಶಾರ್ಕ್ನೊಂದಿಗೆ ಅಂಗಡಿಯ ಮುಂದೆ ಪೋಸ್ ನೀಡಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಪ್ರಾಣಿಯ ತಲೆಯನ್ನು ಫ್ರೈ ಮಾಡಿರುವುದು ಮತ್ತು ದೇಹವನ್ನು ಅರ್ಧಕ್ಕೆ ಕತ್ತರಿಸಿ, ಮಸಾಲೆ ಹಾಕಿ ಅದನ್ನು ಗ್ರಿಲ್ ಮಾಡಲಾಗಿದೆ.
" ಇದು ಕೆಟ್ಟದಾಗಿ ಕಾಣಿಸಬಹುದು, ಆದರೆ ಅದರ ಮಾಂಸವು ನಿಜವಾಗಿಯೂ ತುಂಬಾ ಕೋಮಲವಾಗಿದೆ" ಎಂದು ಟಿಜಿ ವೀಡಿಯೋದಲ್ಲಿ ಹೇಳುತ್ತಾರೆ, ಆದರೆ ಮಾಂಸದಿಂದ ದೊಡ್ಡ ತುಂಡುಗಳನ್ನು ತಮ್ಮ ತಿನ್ನುವುದನ್ನು ಕಾಣಬಹುದು.
7,700 ಯುವಾನ್ ಕೊಟ್ಟು ಶಾರ್ಕ್ ಖರೀದಿ
ಅಲಿಬಾಬಾದ ಟಾವೊಬಾವೊ ಆನ್ಲೈನ್ ಶಾಪಿಂಗ್ ವೆಬ್ಸೈಟ್ ನಿಂದ ಬ್ಲಾಗರ್ ಶಾರ್ಕ್ ಅನ್ನು 7,700 ಯುವಾನ್ ಕೊಟ್ಟು ಎಂದರೆ ಭಾರತೀಯ ಬೆಲೆಯಲ್ಲಿ 93,295 ರೂಪಾಯಿಗೆ ಖರೀದಿಸಿದ್ದಾರೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಖರೀದಿಸಿದ ಶಾರ್ಕ್ ಅನ್ನು ಅಂಗಾಂಶದ ತುಣುಕುಗಳ ಮೇಲೆ ಡಿಎನ್ಎ ಪರೀಕ್ಷೆಯ ಮೂಲಕ ದೊಡ್ಡ ವೈಟ್ ಶಾರ್ಕ್ ಎಂದು ಗುರುತಿಸಲಾಯಿತು. ಸಿಬಿಎಸ್ ನ್ಯೂಸ್ ಪ್ರಕಾರ, ಮೀನುಗಾರ ಮತ್ತು ಅವಳಿಗೆ ಶಾರ್ಕ್ ಮಾರಾಟ ಮಾಡಿದ ವ್ಯಾಪಾರಿಯನ್ನು ಬಂಧಿಸಲಾಗಿದೆ.
ವಿಶ್ವ ವನ್ಯಜೀವಿ ನಿಧಿ ಗ್ರೇಟ್ ವೈಟ್ ಶಾರ್ಕ್ ಅನ್ನು ಅಳಿವಿನಿನಂಚಿನಲ್ಲಿರುವ ಜಾತಿ ಎಂದು ಪಟ್ಟಿ ಮಾಡಿದೆ. ಫೆಬ್ರವರಿ 2020 ರಲ್ಲಿ ಚೀನಾ ಕಾಡು ಪ್ರಾಣಿಗಳ ಖರೀದಿ, ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ