• Home
 • »
 • News
 • »
 • national-international
 • »
 • Thailand: ಡ್ರಗ್ಸ್​ ಟೆಸ್ಟ್​ ವೇಳೆ ಸಿಕ್ಕಿ ಬಿದ್ದ ಬೌದ್ಧ ಸನ್ಯಾಸಿಗಳು, ದೇಗುಲವೀಗ ಖಾಲಿ ಖಾಲಿ!

Thailand: ಡ್ರಗ್ಸ್​ ಟೆಸ್ಟ್​ ವೇಳೆ ಸಿಕ್ಕಿ ಬಿದ್ದ ಬೌದ್ಧ ಸನ್ಯಾಸಿಗಳು, ದೇಗುಲವೀಗ ಖಾಲಿ ಖಾಲಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಥಾಯ್ಲೆಂಡ್‌ನ ಸ್ಯಾಮ್‌ಫಾನ್‌ನಲ್ಲಿರುವ ಬೌದ್ಧ ದೇವಾಲಯದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಎಲ್ಲಾ ಪುರೋಹಿತರು, ಭಿಕ್ಷುಗಳು ಡ್ರಗ್ಸ್‌ ಸೇರಿ ಮಾದಕ ವಸ್ತುಗಳನ್ನು ಸೇವಿಸಿದರ ಬಗ್ಗೆ ತಿಳಿದು ಬಂದಿದೆ. ನಂತರ ನಡೆಸಲಾದ ಮಾದಕ ವಸ್ತು ಪರೀಕ್ಷೆಯಲ್ಲಿ ಫಲಿತಾಂಶ ಧನಾತ್ಮಕವಾಗಿ ಬಂದಿದೆ.

ಮುಂದೆ ಓದಿ ...
 • Share this:

  ಥಾಯ್ಲೆಂಡ್‌ನ ಸ್ಯಾಮ್‌ಫಾನ್‌ನಲ್ಲಿರುವ ಬೌದ್ಧ ದೇವಾಲಯದಲ್ಲಿ ಬೌದ್ಧ ಭಿಕ್ಷುಗಳು ನಶೆಯಲ್ಲಿ ತೇಲುತ್ತಿರುವುದು ದಾಳಿ ವೇಳೆ ಬಟಾಬಯಲಾಗಿದೆ. ಬೌದ್ಧ ದೇವಸ್ಥಾನ ಒಂದರ ಮೇಲೆ ದಾಳಿ ನಡೆಸಿದಾಗ ಈ ವಿಷಯ ಹೊರಬಿದ್ದಿದ್ದು, ಮಾದಕ ವಸ್ತು ಪರೀಕ್ಷೆಯಲ್ಲಿ ಅಲ್ಲಿನ ಸನ್ಯಾಸಿಗಳು ವಿಫಲರಾಗಿದ್ದಾರೆ. ಈ ಎಲ್ಲಾ ವಿದ್ಯಮಾನಗಳು ನೇರವಾಗಿ ಬೌದ್ಧ ದೇವಾಲಯಗಳ ಮೇಲೆ ಪರಿಣಾಮ ಬೀರಿದ್ದು, ದೇವಾಲಯ ಜನರಿಲ್ಲದೇ ಬೀಕೋ ಎನ್ನುತ್ತಿದೆ. ಸಿಕ್ಕಿಬಿದ್ದ ನಾಲ್ವರನ್ನೂ ಮಾದಕ ವಸ್ತು ಪುನರ್ವಸತಿ (Drug Rehabilitation) ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಹೀಗಾಗಿ ಬೌದ್ಧ ಸನ್ಯಾಸಿಗಳಿಲ್ಲದೆ, ಭಕ್ತರೂ ಇಲ್ಲದೆ ದೇಗುಲ ಖಾಲಿ ಖಾಲಿಯಾಗಿದೆ.


  ಮತ್ತೊಂದೆಡೆ ಸನ್ಯಾಸಿಗಳಿಲ್ಲದೆ ದೇವಾಲಯದಲ್ಲಿ ಆರಾಧನೆ ಅಸಾಧ್ಯ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದ ಹಿನ್ನೆಲೆ ಬೇರೆ ಸನ್ಯಾಸಿಗಳನ್ನು ವಿಹಾರಕ್ಕೆ ಕಳುಹಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಎಲ್ಲ ಭಿಕ್ಷುಗಳು ಡ್ರಗ್ ಟೆಸ್ಟ್ ನಲ್ಲಿ ಮಾದಕ ದ್ರವ್ಯ ತೆಗೆದುಕೊಂಡಿರುವುದು ಸಾಬೀತಾಗಿರುವುದರಿಂದ ಅವರನ್ನು ಸನ್ಯಾಸತ್ವದಿಂದ ಅನರ್ಹಗೊಳಿಸಿಲಾಗಿದೆ ಎಂದು ಸ್ಥಳಿಯ ಆಡಳಿತ ತಿಳಿಸಿದೆ.


  ಇದನ್ನೂ ಓದಿ: Navaratri Special: ಈ ದೇಗುಲದ ವಿಗ್ರಹ, ಗೋಡೆ, ನೆಲವೆಲ್ಲ 8 ಕೋಟಿ ರೂಪಾಯಿ ನೋಟ್‌ನಿಂದ ಅಲಂಕಾರ!


  ನಡೆದಿದ್ದೇನು?


  ಥಾಯ್ಲೆಂಡ್‌ನ ಸ್ಯಾಮ್‌ಫಾನ್‌ನಲ್ಲಿರುವ ಬೌದ್ಧ ದೇವಾಲಯದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಎಲ್ಲಾ ಪುರೋಹಿತರು, ಭಿಕ್ಷುಗಳು ಡ್ರಗ್ಸ್‌ ಸೇರಿ ಮಾದಕ ವಸ್ತುಗಳನ್ನು ಸೇವಿಸಿದರ ಬಗ್ಗೆ ತಿಳಿದು ಬಂದಿದೆ. ನಂತರ ನಡೆಸಲಾದ ಮಾದಕ ವಸ್ತು ಪರೀಕ್ಷೆಯಲ್ಲಿ ಫಲಿತಾಂಶ ಧನಾತ್ಮಕವಾಗಿ ಬಂದಿದೆ. ಹೌದು ಸಿಕ್ಕಿಬಿದ್ದ ಆರೋಪಿಗಳಿಗೆ ಮೆಥಾಂಫೆಟಮೈನ್ ಡ್ರಗ್ಸ್‌ ಸಂಬಂಧಪಟ್ಟಂತೆ ಪರೀಕ್ಷೆ ನಡೆಸಲಾಯಿತು. ಈ ವೇಳೆ ಎಲ್ಲರ ಫಲಿತಾಂಶ ಧನಾತ್ಮಕವಾಗಿದ್ದು, ಎಲ್ಲರೂ ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದೆ.
  ಮುಖ್ಯ ಅರ್ಚಕರಿಂದಲೂ ಡ್ರಗ್ಸ್ ಸೇವನೆ​ 


  ಈ ಬಗ್ಗೆ ಸ್ಥಳೀಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, ಮುಖ್ಯ ಅರ್ಚಕ ಸೇರಿದಂತೆ ಎಲ್ಲರೂ ಡ್ರಗ್ಸ್  ಸೇವಿಸಿರುವುದು ಬೆಳಕಿಗೆ ಬಂದಿದೆ. ದಾಳಿಯ ವೇಳೆ ಪುರೋಹಿತರಲ್ಲಿ ಮೆಥಾಂಫೆಟಮೈನ್ ಎಂಬ ಡ್ರಗ್ ಇರುವುದು ಕಂಡು ಬಂದಿದೆ. ಅವರೆಲ್ಲರೂ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದಿದ್ದಾರೆ.


  ಘಟನೆ ಬಗ್ಗೆ ಮಾತನಾಡಿದ ಜಿಲ್ಲಾ ಅಧಿಕಾರಿ ಬೂನ್‌ಲರ್ಟ್ ಥಿಂಟಪ್ಥೈ, ಫೆಟ್ಚಾಬುನ್ ಪ್ರಾಂತ್ಯದ ಬಂಗ್ ಸ್ಯಾಮ್ ಫಾನ್ ಜಿಲ್ಲೆಯ ದೇವಾಲಯವೊಂದರಲ್ಲಿ ಮಠಾಧೀಶರು ಸೇರಿದಂತೆ ನಾಲ್ವರು ಸನ್ಯಾಸಿಗಳು ಮಾದಕ ಸೇವನೆ ಪರೀಕ್ಷೆಯಲ್ಲಿ ಪಾಸಿಟಿವ್‌ ಫಲಿತಾಂಶ ಪಡೆದುಕೊಂಡಿದ್ದಾರೆ. ಹೀಗಾಗಿ ಮಾದಕವಸ್ತು ಪುನರ್ವಸತಿಗೆ ಒಳಗಾಗಲು ಸನ್ಯಾಸಿಗಳನ್ನು ಆರೋಗ್ಯ ಚಿಕಿತ್ಸಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.


  ಬೇರೆ ಕಡೆಯಿಂದ ಪುರೋಹಿತರನ್ನು ಕರೆಸಲು ಪ್ಲ್ಯಾನ್


  "ದೇವಾಲಯವು ಈಗ ಸನ್ಯಾಸಿಗಳಿಂದ ಖಾಲಿಯಾಗಿದೆ ಮತ್ತು ಹತ್ತಿರದ ಗ್ರಾಮಸ್ಥರು ಯಾವುದೇ ಪೂಜಾಕಾರ್ಯ ಅಥವಾ ಪುಣ್ಯ ಕೈಗೊಳ್ಳಲುಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ" ಎಂದು ಅವರು ಹೇಳಿದರು. ಪುಣ್ಯ-ಮಾಡುವುದು ಅಂದರೆ ಭಕ್ತರು ಸನ್ಯಾಸಿಗಳಿಗೆ ಆಹಾರವನ್ನು ಒಳ್ಳೆಯ ಕಾರ್ಯವಾಗಿ ದಾನ ಮಾಡುವುದನ್ನು ಒಳಗೊಂಡಿರುತ್ತದೆ. ಇದು ಒಳ್ಳೆಯದನ್ನು ನೀಡುವ ಮೂಲಕ ರಕ್ಷಣಾತ್ಮಕ ಶಕ್ತಿ ಗಳಿಸುವುದಕ್ಕೆ ಸಮನಾಗಿರುತ್ತದೆ ಎಂಬುದು ಅವರ ನಂಬಿಕೆ.


  ಗ್ರಾಮಸ್ಥರು ತಮ್ಮ ಧಾರ್ಮಿಕ ಕಟ್ಟುಪಾಡುಗಳನ್ನು ಪಾಲಿಸಲು ಅನುವು ಮಾಡಿಕೊಡಲು ಬೇರೆ ಕಡೆಯಿಂದ ಹೆಚ್ಚಿನ ಸನ್ಯಾಸಿಗಳನ್ನು ದೇವಾಲಯಕ್ಕೆ ಕಳುಹಿಸಲಾಗುವುದು ಎಂದು ಬೂನ್‌ಲರ್ಟ್ ಹೇಳಿದರು.


  ಥೈಲ್ಯಾಂಡ್‌ನಲ್ಲಿ ಹೆಚ್ಚಿದ ಮೆಥಾಂಫೆಟಮೈನ್ ಡ್ರಗ್ ಬಳಕೆ


  ವಿಶ್ವಸಂಸ್ಥೆಯ ಡ್ರಗ್ಸ್ ಮತ್ತು ಕ್ರೈಮ್ ಕಚೇರಿಯ ಪ್ರಕಾರ, ಮ್ಯಾನ್ಮಾರ್‌ನ ಶಾನ್ ರಾಜ್ಯದಿಂದ ಲಾವೋಸ್ ಮೂಲಕ ಮೆಥಾಂಫೆಟಮೈನ್ ಡ್ರಗ್ಸ್‌ ಥೈಲ್ಯಾಂಡ್ ಗೆ ಸಾಗಿಸಲಾಗುತ್ತದೆ. ಮೆಥಾಂಫೆಟಮೈನ್ ಎಂಬ ಡ್ರಗ್ ಅನ್ನು ಥೈಲ್ಯಾಂಡ್‌ನಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ.


  ಇದನ್ನೂ ಓದಿ: 5G Network: 5ಜಿ ಎಂದರೆ 5 ಪ್ರಮುಖ ಗುರಿ! ಇದು ದೇಶದ ಅಭಿವೃದ್ಧಿ ಪಥ ಎಂದ ಮುಕೇಶ್ ಅಂಬಾನಿ


  ಮ್ಯಾನ್ಮಾರ್‌ ಮೆಥಾಂಫೆಟಮೈನ್‌ನ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ಲಾವೋಸ್ ಮೂಲಕ ಥಾಯ್ಲೆಂಡ್‌ಗೆ ಡ್ರಗ್ಸ್ ಹೆಚ್ಚು ಮಟ್ಟದಲ್ಲಿ ಸಾಗಾಟ ಮಾಡಲಾಗುತ್ತದೆ.


  ಅಲ್ಲದೆ, ಬೀದಿ - ಬೀದಿಗಳಲ್ಲಿ ಸಹ ಈ ಮಾತ್ರೆಗಳನ್ನು 20 ಬಹ್ತ್ (ಸುಮಾರು $0.50) ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದೂ ಹೇಳಲಾಗಿದೆ. ಆಗ್ನೇಯ ಏಷ್ಯಾದಾದ್ಯಂತ ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ದಾಖಲೆ ಮಟ್ಟದ ರೋಗಗ್ರಸ್ತವಾಗುವಿಕೆಗಳನ್ನು ವರದಿ ಮಾಡಿದ್ದಾರೆ.

  Published by:Precilla Olivia Dias
  First published: