Shocking Video: ಪ್ರೇಮಿ ಜೊತೆ ತಂಗಿ ಜಾಲಿ ರೈಡ್! ಕೋಪಗೊಂಡ ಅಣ್ಣ ಮಾಡಿದ್ದೇನು ಅಂತ ಈ ಭಯಾನಕ ವಿಡಿಯೋ ನೋಡಿ
ಯುವತಿಯೊಬ್ಬಳು ಆಕೆಯ ಪ್ರೇಮಿಯೊಂದಿಗೆ ಬೈಕ್ನಲ್ಲಿ ಹೋಗುತ್ತಿರುತ್ತಾಳೆ. ಅದನ್ನು ಗಮನಿಸಿದ ಅಣ್ಣ, ತನ್ನ ವಾಹನದಲ್ಲಿ ಅವರನ್ನು ಫಾಲೋ ಮಾಡಿ, ಡಿಕ್ಕಿ ಹೊಡೆಸಿ, ಕೊಲ್ಲಲು ಯತ್ನಿಸಿದ್ದಾನೆ. ಈ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಧ್ಯಪ್ರದೇಶ: ಪ್ರೀತಿಸೋದು (Love) ಸುಲಭ, ಆದರೆ ಪ್ರೀತಿಸಿದವರನ್ನು ಗೆಲ್ಲೋದು, ಅವರನ್ನು ಮದುವೆಯಾಗೋದು (Marriage) ಸುಲಭವಲ್ಲ. ಯಾಕೆಂದ್ರೆ ಪ್ರೇಮಿಗಳಿಗೆ (Lovers) ಜಗತ್ತಿನ ತುಂಬಾ ಶತ್ರುಗಳಿರುತ್ತಾರೆ. ಅದರಲ್ಲೂ ಬಹುತೇಕ ಪ್ರೇಮಿಗಳ ಪಾಲಿಗೆ ಅವರ ಹೆತ್ತವರು (Parents), ಒಡಹುಟ್ಟಿದವರೇ ಶತ್ರುಗಳಾಗಿ (Enemy) ಬಿಡುತ್ತಾರೆ. ತನ್ನ ಮಗಳು (Daughter) ಪ್ರೀತಿಯಲ್ಲಿ ಬೀಳದಿರಲಿ ಅಂತ ಅಪ್ಪ (Father), ಅಮ್ಮ (Mother) ಕಣ್ಣಲ್ಲಿ ಕಣ್ಣಿಟ್ಟು ಕಾದರೆ, ನನ್ನ ತಂಗಿ (Sister) ಅದ್ಯಾರನ್ನೋ ಪ್ರೀತಿಸದೇ ಇರಲಿ ಅಂತ ಅಣ್ಣ, ತಮ್ಮಂದಿರು (Brothers) ಕಾವಲು ಕಾಯುತ್ತಾರೆ. ಇಲ್ಲಿ ಆಗಿದ್ದೂ ಅದೇ, ತಂಗಿಯೊಬ್ಬಳು ತನ್ನ ಅಣ್ಣನ ಕಣ್ತಪ್ಪಿಸಿ ಪ್ರೇಮಿ ಜೊತೆ ಬೈಕ್ನಲ್ಲಿ (Bike) ಹೋಗಿದ್ದಾಳೆ. ಇದನ್ನು ಕಂಡ ಅಣ್ಣ, ಕೋಪದ ಕೈಗೆ ಬುದ್ದಿ ಕೊಟ್ಟು ಅನಾಹುತವನ್ನೇ ಮಾಡಿಬಿಟ್ಟಿದ್ದಾನೆ. ಈ ಭಯಾನಕ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಈ ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ (Social Media) ಈಗ ವೈರಲ್ (Viral) ಆಗಿದೆ.
ಮಧ್ಯಪ್ರದೇಶದಲ್ಲಿ ನಡೆಯಿತು ಭಯಾನಕ ಘಟನೆ
ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ನ ಅಯೋಧ್ಯಾ ನಗರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳು ಆಕೆಯ ಪ್ರೇಮಿಯೊಂದಿಗೆ ಬೈಕ್ನಲ್ಲಿ ಹೋಗುತ್ತಿರುತ್ತಾಳೆ. ಅದನ್ನು ಗಮನಿಸಿದ ಅಣ್ಣ, ತನ್ನ ವಾಹನದಲ್ಲಿ ಅವರನ್ನು ಫಾಲೋ ಮಾಡಿ, ಡಿಕ್ಕಿ ಹೊಡೆಸಿ, ಕೊಲ್ಲಲು ಯತ್ನಿಸಿದ್ದಾನೆ.
ಹಿಂಬಾಲಿಸಿಕೊಂಡು ಬಂದ ಸಹೋದರ
ತನ್ನ ಸಹೋದರಿ ತನ್ನ ಪ್ರಿಯಕರನೊಂದಿಗೆ ಬೈಕ್ನಲ್ಲಿ ಹೋಗುತ್ತಿರುವುದನ್ನು ಆಕೆಯ ಅಣ್ಣ ಗಮನಿಸಿದ್ದಾನೆ. ಅವರನ್ನು ರಸ್ತೆಯಲ್ಲಿ ನಿಲ್ಲಿಸಲು ಯತ್ನಿಸಿದರು. ಆದರೆ, ಬೈಕ್ ನ ವೇಗ ಹೆಚ್ಚಿಸಿ ಪರಾರಿಯಾಗಲು ಪ್ರೇಮಿಗಳು ಯತ್ನಿಸಿದ್ದಾರೆ. ಆಗ ಆಕೆಯ ಸಹೋದರ ಮಿನಿ ಟ್ರಕ್ನೊಂದಿಗೆ ಬೈಕ್ ಹಿಂಬಾಲಿಸಿಕೊಂಡು ಬಂದು ಅತಿವೇಗದಲ್ಲಿ ಡಿಕ್ಕಿ ಹೊಡೆದಿದ್ದಾನೆ.
ಪ್ರೇಮಿಗಳಿದ್ದ ಬೈಕ್ಗೆ ಮಿನಿ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಿಂದ ಪ್ರೇಮಿಗಳು ಬಿದ್ದಿದ್ದಾರೆ. ಬಳಿಕ ಸುಮಾರು 10 ಮೀಟರ್ವರೆಗೆ ಮಿನಿ ಟ್ರಕ್ ಬೈಕ್ ಅನ್ನು ಎಳೆದುಕೊಂಡು ಹೋಗಿದೆ. ಈ ವೇಳೆ ಯುವತಿಯನ್ನು ಬಿಟ್ಟು ಪ್ರೇಮಿ ತಾನು ಒಬ್ಬನೇ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ.
ನಡು ರಸ್ತೆ ಮೇಲೆಯೇ ಹೊಡೆದಾಟ
ಈ ವೇಳೆ ಯುವತಿಯ ಸಹೋದರ ಆತನನ್ನು ಹಿಡಿದು ಥಳಿಸಿದ್ದಾನೆ. ಘಟನಾ ಸ್ಥಳದಲ್ಲಿ ಯುವತಿಯ ಸಹೋದರ ಮತ್ತು ಪ್ರಿಯಕರನ ನಡುವೆ ದೊಡ್ಡ ಮಟ್ಟದ ಜಗಳವೇ ನಡೆದಿದೆ. ಅಷ್ಟೇ ಅಲ್ಲದೇ ತನ್ನ ಸಹೋದರಿಗೂ ನಡು ರಸ್ತೆಯಲ್ಲೇ ಆತ ಹಿಗ್ಗಾಮುಗ್ಗ ಥಳಿಸಿದ್ದಾನೆ. ಘಟನೆಯಲ್ಲಿ ಯುವತಿ ಹಾಗೂ ಆಕೆಯ ಪ್ರೇಮಿ ಇಬ್ಬರೂ ಗಾಯಗೊಂಡಿದ್ದಾರೆ. ಕೊನೆಗೆ ಸಾರ್ವಜನಿಕರೆಲ್ಲ ಸೇರುತ್ತಿದ್ದಂತೆ ಯುವತಿಯ ಸಹೋದರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
#WATCH | Bhopal: A couple in their twenties from different communities were injured after the girl’s cousin allegedly chased, hit their scooter and assaulted them while they were trying to elope in Ayodhya Nagar on Monday afternoon. pic.twitter.com/hFgg3kOfVC
ಘಟನೆಯಲ್ಲಿ ಆಕೆಯ ಪ್ರಿಯಕರ ಗಾಯಗೊಂಡಿದ್ದಾನೆ. ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಬಳಿಕ ಆತ ಪೊಲೀಸ್ ಠಾಣೆಗೆ ತೆರಳಿ ಯುವತಿಯ ಸಹೋದರನ ವಿರುದ್ಧ ದೂರು ನೀಡಿದ್ದಾನೆ. ಇದೀಗ ಯುವತಿ ಸಹೋದರ ಹಾಗೂ ಆತನ ಸಹಚರನ ವಿರುದ್ಧ ಆತನ ಪಾಲುದಾರನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.