Wedding Cancel: ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದಕ್ಕೆ, "ಮದುವೆ ಬೇಡ, ಹೋಗು" ಎಂದ ಮದುಮಗಳು, ಮದುವೆ ಕ್ಯಾನ್ಸಲ್ !

Wedding Cancel: ಹುಡುಗನ ಮನೆಯವರು ನಂತರ ಪೋಲೀಸರನ್ನು ಕರೆದು ಇತ್ಯರ್ಥ ಮಾಡಿಕೊಡಿ ಎಂದು ಕೋರಿಕೊಂಡರು. ಆದರೆ ಹುಡುಗಿ ಮಾತ್ರ ಮದುವೆಗೆ ಸುತಾರಾಂ ಒಪ್ಪಲಿಲ್ಲ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಉತ್ತರ ಪ್ರದೇಶ: ಕೊರೊನಾ ಕಾಲದಲ್ಲಿ ಮದುವೆ ಮಾಡೋದೇ ಒಂದು ದೊಡ್ಡ ಸಾಹಸ. ಅಂಥಾದ್ರಲ್ಲಿ ನಡೆಯುತ್ತಿರುವ ಮದುವೆಯನ್ನು ಬೇಕಾಬಿಟ್ಟಿ ನಡವಳಿಕೆಗಳಿಂದ ಕೈಯ್ಯಾರೆ ಹಾಳು ಮಾಡಿಕೊಂಡರೆ ಹೇಗಿರುತ್ತೆ ಹೇಳಿ? ಇಂಥಾ ಪ್ರಕರಣ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಯುಪಿಯ ಪ್ರತಾಪಗಡ ಜಿಲ್ಲೆಯಲ್ಲಿ 22 ವರ್ಷದ ಮದುಮಗಳು ಮದುಮಗ ಮತ್ತು ದಿಬ್ಬಣದವರು ಆಡಿದ್ದು ನೋಡಿ ಮದುವೆಯೇ ಬೇಡ ಎಂದು ನಿರ್ಧರಿಸಿ ಹೊರನಡೆದಿದ್ದಾಳೆ. ನಂತರ ತಾವು ಕೊಟ್ಟಿದ್ದ ವರದಕ್ಷಿಣೆ ವಸ್ತುವನ್ನೆಲ್ಲಾ ಹಿಂದಿರುಗಿಸಿ ಎಂದು ಗಂಡಿನ ಕಡೆಯವರನ್ನು ಹೆಣ್ಣಿನ ಕಡೆಯವರು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.

ಉತ್ತರ ಪ್ರದೇಶದ ಪ್ರತಾಪಗಢದ ಟಿಕ್ರಿ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ಮದುವೆ ಮನೆಗೆ ಬರುವಾಗ್ಲೇ ಹುಡುಗ, ಆತನ ಗೆಳೆಯರು, ಸಂಬಂಧಿಕರು ಎಲ್ಲಾ ಫುಲ್ ಟೈಟ್ ಆಗೇ ಬಂದಿದ್ದರಂತೆ. ಆಗಲೇ ಹುಡುಗಿಗೆ, ಆಕೆಯ ಮನೆಯವರಿಗೆ ಬಹಳ ಇರುಸು ಮುರುಸಾಗಿದೆ. ಆದರೂ ಹೋಗಲಿ ಎಂದು ಸುಮ್ಮನಾಗಿದ್ದಾರೆ. ಮೊದಲೇ ಲಾಕ್​ಡೌನ್ ನಲ್ಲಿ ನಡೆಯುತ್ತಿರುವ ಮದುವೆ, ಸರಾಗವಾಗಿ ಮುಗಿಯಲಿ ಎಂದುಕೊಂಡಿದ್ದಾರೆ.  ದಿಬ್ಬಣ ಬಂದು ಮದುವೆ ಶಾಸ್ತ್ರಗಳು ಆರಂಭವಾದಾಗಲೂ ಹುಡುಗ ಕುಡಿದ ಅಮಲಿನಲ್ಲೇ ಇದ್ದನಂತೆ.

ಇದನ್ನೂ ಓದಿ: Corona Virus: HIV ಸೋಂಕಿತೆಯ ದೇಹದೊಳಗೆ 30 ಬಾರಿ ರೂಪಾಂತರಗೊಂಡ ಕೊರೊನಾ ವೈರಸ್ !

ಇನ್ನೇನು ವಧೂವರರು ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಳ್ಬೇಕು, ಆಗ ವರ ವಧುವಿಗೆ ಡ್ಯಾನ್ಸ್ ಮಾಡು ಎಂದು ಬಲವಂತ ಮಾಡಿದ್ದಾನೆ. ಹುಡುಗಿ ಎಷ್ಟೇ ಬೇಡವೆಂದರೂ ಕೇಳಿಲ್ಲ. ಇದರಿಂದ ವಧುವಿಗೆ ವಿಪರೀತ ಅವಮಾನವಾದಂತಾಗಿದೆ. ಇದು ಇನ್ನು ಸಾಕು ಎಂದು ನಿರ್ಧರಿಸಿದ ಹುಡುಗಿ ಮದುವೆ ಮಂಟಪದಿಂದ ಹೊರ ನಡೆದಿದ್ದಾಳೆ. ಆಕೆಯ ಮನೆಯವರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ, ಆದರೆ ಯಾವುದೂ ಪ್ರಯೋಜವಾಗಿಲ್ಲ. ಹುಡುಗಿ ತಾನು ಈ ಮದುವೆಯಾಗುವುದಿಲ್ಲ ಎಂದು ಘೋಷಿಸಿದ್ದಾಳೆ.

ನಂತರ ವಧುವಿನ ಮನೆಯವರು ತಾವು ಕೊಟ್ಟ ವರದಕ್ಷಿಣೆ ಮತ್ತು ಉಡುಗೊರೆಗಳನ್ನು ಮರಳಿ ನೀಡುವಂತೆ ವರನ ಮನೆಯವರಿಗೆ ಹೇಳಿದ್ದಾರೆ. ಅದಕ್ಕೆ ಅವರು ಒಪ್ಪದಿದ್ದಾಗ ಕೋಣೆಯೊಳಗೆ ಕೂಡಿ ಹಾಕಿ ಬೀಗ ಜಡಿದಿದ್ದಾರೆ. ನಂತರ ವರನ ಕಡೆಯವರೇ ಪೋಲೀಸರನ್ನು ಕರೆಸಿ ಮಧ್ಯಸ್ಥಿಕೆ ಮಾಡಿ ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದಾರೆ. ಪೋಲೀಸರು ಬಂದು ಮಾತನಾಡಿದ್ರೂ ಹುಡುಗಿ ಸುತಾರಾಂ ಒಪ್ಪಲಿಲ್ಲ.

ಮಂಧಾತ ಸ್ಟೇಶನ್ ಆಫೀಸರ್ ಶ್ರವಣ್ ಕುಮಾರ್ ಹೇಳುವ ಪ್ರಕಾರ ಟಿಕ್ರಿ ಹಳ್ಳಿಯ ರೈತನೊಬ್ಬ ತನ್ನ ಮಗಳ ಮದುವೆಯನ್ನು ಕುಟಿಲಿಯಾ ಅಹಿನಾ ಹಳ್ಳಿಯ ರವೀಂದ್ರ ಪಟೇಲ್ ಜೊತೆ ನಿಶ್ಚಯಿಸಿದ್ದ.  ಆತ ಮದುವೆಗೆ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಕಾಯುತ್ತಿದ್ದಾಗ ಮದುಮಗ ಮತ್ತು ದಿಬ್ಬಣದವರು ಕಂಠಪೂರ್ತಿ ಕುಡಿದುಕೊಂಡೇ ಬಂದರು.  ಮೊದಲು ಇದೆಲ್ಲಾ ಇರುಸುಮುರಿಸು ಎನಿಸಿದರೂ ಹುಡುಗಿಯ ಮನೆಯವರು ಸಹಿಸಿಕೊಂಡು ಸುಮ್ಮನಿದ್ದರು. ಆದರೆ ನಂತರ ಹಾರ ಹಾಕುವಾಗ ಹುಡುಗಿಗೆ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದಾಗ ಆಕೆ ಬೇಸರಗೊಂಡು ಹೊರ ನಡೆದಿದ್ದಾಳೆ.  ಇದೆಲ್ಲಾ ರಗಳೆ ಮುಗಿದ ನಂತರ ಹುಡುಗನ ಮನೆಯವರು ಒಪ್ಪಿಕೊಂಡು ಎಲ್ಲಾ ಉಡುಗೊರೆ ಮರಳಿಸಿದ್ದಾರೆ ಎನ್ನಲಾಗಿದೆ. ಪೋಲೀಸರು ಮಧ್ಯಸ್ಥಿಕೆ ವಹಿಸಿದರೂ ಹುಡುಗಿ ತನ್ನ ನಿರ್ಧಾರದಲ್ಲಿ ಗಟ್ಟಿಯಾಗಿ ಇದ್ದಿದ್ದು ಎಲ್ಲರ ಮೆಚ್ಚುಗೆ ಪಡೆದಿದೆ.

Published by:Soumya KN
First published: