ಶಾಸಕನಿಗೆ ಕೈಕೊಟ್ಟ ಮಧುಮಗಳು; ಮದುವೆ ಮುರಿದು ಪರಾರಿಯಾಗಿದ್ದೇಕೆ?

news18
Updated:September 5, 2018, 11:59 AM IST
ಶಾಸಕನಿಗೆ ಕೈಕೊಟ್ಟ ಮಧುಮಗಳು; ಮದುವೆ ಮುರಿದು ಪರಾರಿಯಾಗಿದ್ದೇಕೆ?
news18
Updated: September 5, 2018, 11:59 AM IST
-ನ್ಯೂಸ್​ 18 ಕನ್ನಡ

ಚೆನ್ನೈ,(ಸೆ.05): ಶಾಸಕನನ್ನು ವರಿಸಬೇಕಿದ್ದ ಮಧುಮಗಳು ಮದುವೆಗೆ ಇನ್ನು 9 ದಿನ ಬಾಕಿ ಇರುವಾಗಲೇ ನಾಪತ್ತೆಯಾಗಿರುವ ಘಟನೆ ಚೆನ್ನೈನ ಗೋಬಿಚೆಟ್ಟಿಪಾಳ್ಯಂನಲ್ಲಿ ನಡೆದಿದೆ.

ತಮಿಳುನಾಡು ಆಡಳಿತಾರೂಢ ಪಕ್ಷದ ಎಐಎಡಿಎಂಕೆ ಶಾಸಕ ಎಸ್​.ಈಶ್ವರನ್ ಮಧುಮಗಳಾದ ಆರ್. ಸಂಧ್ಯಾ ಎಂಬ ಯುವತಿಯನ್ನು ಸೆ.21 ರಂದು ವರಿಸಬೇಕಿತ್ತು. ಬನ್ನಾರಿ ಅಮ್ಮಾನ್​ ದೇವಸ್ಥಾನದಲ್ಲಿ ನಿಗದಿಯಾಗಿದ್ದ ಈ ಮದುವೆಗೆ ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಹಾಗೂ ಡಿಸಿಎಂ ಪನ್ನೀರ್​ ಸೆಲ್ವಂ ಸೇರಿದಂತೆ ಇನ್ನಿತರ ಪ್ರಮುಖರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಮಧುಮಗಳು ಸಂಧ್ಯಾ ಮದುವೆಗೆ ಮುನ್ನವೇ ಪರಾರಿಯಾಗಿದ್ದಾಳೆ. ಹೀಗಾಗಿ ಮದುವೆಯನ್ನು ರದ್ದು ಮಾಡಲಾಗಿದೆ.

ಶನಿವಾರ ಬೆಳಿಗ್ಗೆ ಅಕ್ಕನ ಮನೆಗೆ ಹೋಗಿ ಬರುವುದಾಗಿ ಹೇಳಿದ ಸಂಧ್ಯಾ ಮತ್ತೆ ವಾಪಸ್ಸಾಗಲಿಲ್ಲ. ಅಕ್ಕ ಸತ್ಯಮಂಗಳಂ ಮನೆಗೂ ಹೋಗಲಿಲ್ಲ ಎನ್ನಲಾಗಿದೆ. ಸಂಧ್ಯಾಗೆ ಹೀಗಾಗಲೇ ಒಬ್ಬ ಪ್ರಿಯಕರನಿದ್ದು, ಆತನ ಜೊತೆ ಪರಾರಿಯಾಗಿರಬಹುದೆಂದು ಆಕೆಯ ಪೋಷಕರು ತಿಳಿಸಿದ್ದಾರೆ.  ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ