• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Madhya Pradesh: ಸಮಯಕ್ಕೆ ಸಿಗದ ಆ್ಯಂಬುಲೆನ್ಸ್​, ತಳ್ಳುವ ಗಾಡಿಯಲ್ಲಿ ತಂದೆಯನ್ನು ಆಸ್ಪತ್ರೆಗೆ ಸಾಗಿಸಿದ 6 ವರ್ಷದ ಬಾಲಕ

Madhya Pradesh: ಸಮಯಕ್ಕೆ ಸಿಗದ ಆ್ಯಂಬುಲೆನ್ಸ್​, ತಳ್ಳುವ ಗಾಡಿಯಲ್ಲಿ ತಂದೆಯನ್ನು ಆಸ್ಪತ್ರೆಗೆ ಸಾಗಿಸಿದ 6 ವರ್ಷದ ಬಾಲಕ

ವೈರಲ್ ವಿಡಿಯೋ

ವೈರಲ್ ವಿಡಿಯೋ

ಆರು ವರ್ಷದ ಬಾಲಕನೊಬ್ಬ ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳುವ ಮರದ ಗಾಡಿಯಲ್ಲಿ (Pushcart) ಮಲಗಿಸಿ ಆಸ್ಪತ್ರೆಗೆ ಸಾಗಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್​ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋ ಪ್ರಕಾರ, ಮಧ್ಯಪ್ರದೇಶದಲ್ಲಿ ಬಾಲಕನೊಬ್ಬ ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳುವ ಗಾಡಿಯಲ್ಲಿ ಮಲಗಿಸಿ ಗಾಡಿಯನ್ನು ತಳ್ಳುತ್ತಿರುವುದನ್ನು ಕಾಣಬಹುದು.

ಮುಂದೆ ಓದಿ ...
  • Share this:

ಭೋಪಾಲ್: ರೋಗಿಗಳನ್ನು ಆಸ್ಪತ್ರೆಗೆ (Hospital) ಸಾಗಿಸಲು ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ (Ambulance) ಸೌಲಭ್ಯ ದೊರೆಯದ ಕಾರಣದಿಂದ ಹೊತ್ತುಕೊಂಡೋ ಅಥವಾ ಬೈಕ್​ನಲ್ಲಿ ಸಾಗಿಸಿದ ಅನೇಕ ಹೃದಯ ವಿದ್ರಾವಕ ಘಟನೆ ನಮ್ಮ ಮಧ್ಯೆ ನಡೆದಿವೆ. ಇದೀಗ ಮಧ್ಯಪ್ರದೇಶದಲ್ಲಿ (Madhya Pradesh) ಇಂತಹದ್ದೇ ಒಂದು ಘಟನೆ ನಡೆದಿದ್ದು, ದೇಶದಲ್ಲಿ ಆರೋಗ್ಯ ಸೌಲಭ್ಯಗಳ  ಅಸಮರ್ಪಕತೆಯನ್ನು ಎತ್ತಿ ತೋರಿಸಿದೆ. ಆರು ವರ್ಷದ ಬಾಲಕನೊಬ್ಬ ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳುವ ಮರದ ಗಾಡಿಯಲ್ಲಿ (Pushcart) ಮಲಗಿಸಿ ಆಸ್ಪತ್ರೆಗೆ ಸಾಗಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್​ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋ ಪ್ರಕಾರ, ಬಾಲಕನೊಬ್ಬ ತಂದೆಯನ್ನು ತಳ್ಳುವ ಗಾಡಿಯಲ್ಲಿ ಮಲಗಿಸಿ ಗಾಡಿಯನ್ನು ತಳ್ಳುತ್ತಿರುವುದನ್ನು ಕಾಣಬಹುದು. ಮತ್ತೊಂದು ಬದಿಯಲ್ಲಿ ಆತನ ತಾಯಿ ಕೂಡ ತಳ್ಳುತ್ತಿದ್ದಾರೆ, ಮಧ್ಯಪ್ರದೇಶದ ಸಿಂಗ್ರಾಲಿ ಜಿಲ್ಲೆಯಲ್ಲಿ ನಡೆದಿದೆ.


ಆ್ಯಂಬುಲೆನ್ಸ್​ಗಾಗಿ 20 ನಿಮಿಷಕ್ಕೂ ಹೆಚ್ಚು ಸಮಯ ಕಾದಿದ್ದ ಕುಟುಂಬ


ತಳ್ಳುವ ಗಾಡಿಯಲ್ಲಿ ತಂದೆಯನ್ನು ಆಸ್ಪತ್ರೆಗೆ ಸಾಗಿಸುವ ಮುನ್ನ ಆ ತಾಯಿ ಮತ್ತು ಮಗ ಆ್ಯಂಬುಲೆನ್ಸ್​ಗಾಗಿ ಸುಮಾರು 20 ನಿಮಿಷಗಳಿಗೂ ಹೆಚ್ಚು ಸಮಯ ಕಾದಿದ್ದಾರೆ. ಆದರೆ ವಾಹನ ಸರಿಯಾದ ಸಮಯಕ್ಕೆ ಬಾರದ ಕಾರಣ ಬಾಲಕ ತನ್ನ ತಂದೆಯನ್ನು ಮರದ ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಕರೆತಂದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಈ ಘಟನೆ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Turkey Earthquake: ಇದು ನಿಜಕ್ಕೂ ಪವಾಡ, 128 ಗಂಟೆ ಭೂಕಂಪದ ಅವಶೇಷಗಳಡಿ ಸಿಲುಕಿದರೂ ಜೀವ ಉಳಿಸಿ ಕೊಂಡಿದೆ ಈ 2 ತಿಂಗಳ ಮಗು!


ಆ್ಯಂಬುಲೆನ್ಸ್ ಅಲಭ್ಯತೆ ಬಗ್ಗೆ ಕಾರಣ ತಿಳಿಸುವಂತೆ ಆದೇಶ


ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಿಂಗ್ರೌಲಿಯ ಅಪರ ಜಿಲ್ಲಾಧಿಕಾರಿ ಡಿ.ಪಿ. ಬರ್ಮನ್ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ್ದು, " ಆ್ಯಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ರೋಗಿಯನ್ನು ಆತನ ಮಗ ಮತ್ತು ಪತ್ನಿ ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂಬ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ಆ ಸಮಯದಲ್ಲಿ ಆ್ಯಂಬ್ಯುಲೆನ್ಸ್ ಅಲಭ್ಯತೆಗೆ ಕಾರಣವೇನು ಎಂಬುದನ್ನು ತಿಳಿಸುವಂತೆ ಆಸ್ಪರ್ತೆಯ ಮುಖ್ಯ ವೈದ್ಯಾಧಿಕಾರಿಗೆ ಸೂಚಿಸಿದ್ದೇವೆ " ಎಂದು ಹೇಳಿದ್ದಾರೆ.




ಮಗು ಶವ ಹೊತ್ತೊಯ್ದ ತಂದೆ


ಭೋಪಾಲ್​ನಲ್ಲಿ ಈ ಹಿಂದೆ ಕೂಡ ಇಂತಹದ್ದೇ ಒಂದು ಮನಕಲಕುವ ಘಟನೆ ನಡೆದಿತ್ತು. ಮಗುವೊಂದು ಸರ್ಕಾರಿ ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರೆಳೆದಿತ್ತು. ಆದರೆ ಮಗುವಿನ ಶವ ಮನೆಗೆ ಸಾಗಿಸುವುದಕ್ಕೆ ಆ್ಯಂಬುಲೆನ್ಸ್‌ ಕೊಡದೇ ಆಸ್ಪತ್ರೆ ಸಿಬ್ಬಂದಿ ಸತಾಯಿಸಿದ್ದಾರೆ. ಕೊನೆಗೆ ಆ ವ್ಯಕ್ತಿಯೇ ಹೆಗಲ ಮೇಲೆ ಶವ ಹೊತ್ತು ಸಾಗಿದ್ದಾರೆ. ಈ ಮನಕಲಕುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.


ಅಪಘಾತದಲ್ಲಿ ಮೃತಪಟ್ಟ ಪುಟ್ಟ ಬಾಲಕಿ


ಮಧ್ಯ ಪ್ರದೇಶದಲ್ಲಿ ಅಪಘಾತದಲ್ಲಿ 4 ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಳು. ಆದರೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಆಕೆ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಆಕೆಯ ದೇಹವನ್ನು ಛತ್ತರ್‌ಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಅಲ್ಲಿಂದ ಆಕೆಯ ಮೃತದೇಹವನ್ನು ಹಳ್ಳಿಗೆ ಕೊಂಡೊಯ್ಯಬೇಕಾಗಿತ್ತು. ಆದರೆ ಪುನಃ ಬಾಲಕಿಯ ಮೃತ ದೇಹ ಮನೆಗೆ ಸಾಗಿಸಲು ಸರ್ಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ನೀಡದ ಕಾರಣ, ಆಕೆಯ ತಂದೆ ಹೊತ್ತುಕೊಂಡೇ ಸಾಗಿದ್ದಾರೆ.


ಶವ ಸಾಗಿಸಲು ಸರ್ಕಾರಿ ವಾಹನವೂ ಸಿಗದೆ ಖಾಸಗಿ ವಾಹನವೂ ಸಿಗದೆ ಆ ವ್ಯಕ್ತಿ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬಂದು ತನ್ನ ಗ್ರಾಮಕ್ಕೆ ಬಸ್ ಹತ್ತಿದ್ದಾರೆ. ಆತನ ಬಳಿ ಬಸ್ ಟಿಕೆಟ್‌ಗೆ ಬೇಕಾದಷ್ಟು ಹಣವೂ ಇರಲಿಲ್ಲ. ಇನ್ನೊಬ್ಬ ಪ್ರಯಾಣಿಕರು ಟಿಕೆಟ್ ಹಣ ನೀಡಿ ಅವರಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

Published by:Rajesha M B
First published: