ಪ್ರೀತಿ (Love) ಎಂಬುದು ಅತ್ಯಂತ ಮಹತ್ವವಾದ (Significant) ಅಂಶವಾಗಿದೆ. ಅದು ಯಾರ ಮೇಲೆ ಬೇಕಾದರೂ ಉಂಟಾಗಬಹುದು. ಯಾವ ಕ್ಷಣದಲ್ಲಾದರೂ ಪ್ರೀತಿ ಆರಂಭವಾಗಬಹುದು (Begin). ಒಬ್ಬರ ಮೇಲೆ ಪ್ರೀತಿ ಹುಟ್ಟಲು ಇಂತಿಷ್ಟೇ (That's it) ಹೊತ್ತು ಸಮಯ ಆಗಬೇಕು ಎಂದೇನಿಲ್ಲ. ಅದೇ ರೀತಿ ಒಮ್ಮೊಮ್ಮೆ ಈ ಪ್ರೀತಿ ಅನುರಾಗ ಒಬ್ಬರ ಮೇಲೆ ವ್ಯಕ್ತವಾಗದೆಯೇ ಹಾಗೆಯೇ ಉಳಿಯುತ್ತದೆ. ಏಕೆಂದರೆ ಪರಸ್ಪರ (Each other)ಅನುರಾಗ ಪ್ರೀತಿ ಆರಂಭಗೊಳ್ಳಲು ಆ ಭಾವನೆ ಇಬ್ಬರೂ ವ್ಯಕ್ತಿಗಳ ನಡುವೆ ಇರಬೇಕಾಗುತ್ತದೆ.
ಫ್ರೆಂಡ್ ಜೋನ್ ಮಾಡಿದ್ದಕ್ಕಾಗಿ ಪರಿಹಾರ
ಇದೀಗ ಇಂತಹುದೇ ಒಂದು ಪ್ರಕರಣ ಸಿಂಗಾಪುರದಲ್ಲಿ ವರದಿಯಾಗಿದ್ದು, ತನ್ನ ಪ್ರೀತಿಯನ್ನು ಒಪ್ಪಿಕೊಂಡಿಲ್ಲ ಹಾಗೂ ಸ್ನೇಹಿತನಾಗಿ ಕಂಡಿರುವುದಾಗಿ ಕೌಶಿಗನ್ ಎಂಬ ವ್ಯಕ್ತಿ ಮೊಕದ್ದಮೆ ಹೂಡಿದ್ದು ಪರಿಹಾರವಾಗಿ 24 ಕೋಟಿ ಆಗ್ರಹಿಸಿದ್ದಾನೆ.
ಸಿಂಗಾಪುರದ ಕೆ ಕೌಶಿಗನ್ (K. Kawshigan) ಎಂಬ ವ್ಯಕ್ತಿ ನೋರಾ ತಾನ್ ಎಂಬಾಕೆಯ ಮೇಲೆ ಮೊಕದ್ದಮೆ ಹೂಡಿದ್ದು, ತನ್ನ ಪ್ರೀತಿಯ ಭಾವನೆಗಳಿಗೆ ಸ್ಪಂದಿಸಲಿಲ್ಲ ಹಾಗೂ ತನ್ನನ್ನು ಬರೀ ಸ್ನೇಹಿತನಾಗಿ ಕಂಡಿದ್ದಾರೆ ಎಂಬ ಆಪಾದನೆ ಮಾಡಿ ಭಾವನಾತ್ಮಕ ಆಘಾತ ಎಂಬ ಹೆಸರಿನಿಂದ $3 ಮಿಲಿಯನ್ (ರೂ. 24 ಕೋಟಿ) ಪರಿಹಾರವನ್ನು ನೀಡಬೇಕು ಎಂದು ಕೋರಿದ್ದಾನೆ ಎಂದು ವರದಿಯಾಗಿದೆ.
ಕೌನ್ಸಲಿಂಗ್‌ಗೆ ಒತ್ತಾಯ
ಇವರಿಬ್ಬರೂ 2016 ರಲ್ಲಿ ಮೊದಲು ಭೇಟಿಯಾದರು ಹಾಗೂ ನಂತರ ಸ್ನೇಹಿತರಾದರು. ಈ ನಡುವೆ ನೋರಾನ ಮೇಲೆ ಅನುರಕ್ತನಾದ ಕೌಶಿಗನ್ ಆಕೆಯ ಬಳಿ ತನ್ನ ಪ್ರೀತಿ ಹೇಳಿಕೊಳ್ಳಬೇಕೆಂದು ಬಯಸಿದ್ದನು.
ಆದರೆ ನೋರಾಳಿಗೆ ಆತ ಉತ್ತಮ ಸ್ನೇಹಿತನಾಗಿದ್ದನು ಮತ್ತು ಸ್ನೇಹವಲ್ಲದೆ ಆಕೆ ಕೌಶಿಗನ್ ಅನ್ನು ಪ್ರೀತಿಯ ಭಾವನೆಯಲ್ಲಿ ಎಂದಿಗೂ ನೋಡಿರಲಿಲ್ಲ ಎಂಬುದು ತಿಳಿದುಬಂದಿದೆ.
ನೋರಾ ತಾನ್‌ಗೆ ತನ್ನ ಮೇಲೆ ಪ್ರೀತಿ ಉಂಟಾಗಿಲ್ಲ ಎಂಬುದು ಕೌಶಿಗನ್ ವೇದನೆಯಾಗಿತ್ತು, ಹೀಗಾಗಿ ತನಗೆ ಭಾವನಾತ್ಮಕ ಆಘಾತವುಂಟಾಗಿದೆ ಎಂಬುದು ಕೌಶಿಗನ್ ಹೇಳಿಕೆಯಾಗಿದೆ.
ಆದರೆ ನೋರಾ ಕೌಶಿಗನ್‌ನೊಂದಿಗೆ ಕೌನ್ಸಲಿಂಗ್‌ಗೆ ಒಳಗಾಗಲು ಒಪ್ಪಿಕೊಂಡ ನಂತರ ಆತ ಕಾನೂನು ಕ್ರಮ ಕೈಗೊಳ್ಳುವ ತಮ್ಮ ನಿರ್ಧಾರವನ್ನು ಮುಂದೂಡಿದ್ದರು ಎಂಬುದು ತಿಳಿದುಬಂದಿದೆ.
ವೈಯಕ್ತಿಕ ಹಾಗೂ ವೃತ್ತಿಪರ ಬದುಕಿಗೆ ಹಾನಿ
ಕೌನ್ಸಲಿಂಗ್ ಸಮಯದಲ್ಲಿ ತಾನ್ ತಮಗೆ ನಿಜವಾದ ಅಸ್ವಸ್ಥತೆಯ ಅನುಭವ ಉಂಟಾಗುತ್ತಿದೆ ಎಂದು ಕೌಶಿಗನ್ ಬಳಿ ಹೇಳಿಕೊಂಡಿದ್ದರೂ ಆತ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ ಎಂಬುದು ತಿಳಿದುಬಂದಿದೆ.
ತಾನ್ ತಮ್ಮ ಬೇಡಿಕೆಗಳಿಗೆ ಸಮ್ಮತಿಸಬೇಕು ಇಲ್ಲದಿದ್ದರೆ ಆಕೆಯ ವೈಯಕ್ತಿಕ ಹಾಗೂ ವೃತ್ತಿಪರ ಬದುಕಿಗೆ ಹಾನಿಯುಂಟು ಮಾಡುವುದಾಗಿ ಆತ ಬೆದರಿಸಿದ್ದನು ಎಂಬುದು ತಿಳಿದುಬಂದಿದೆ.
ತಾನ್‌ಗೆ ಕೌನ್ಸಲಿಂಗ್‌ನ ಶಿಕ್ಷೆ ಸುಮಾರು ಒಂದೂವರೆ ವರ್ಷಗಳ ಕಾಲ ನಡೆದಿದ್ದು, ತಾನ್ ಇದರಿಂದ ತನಗೆ ಕಿರಿಕಿರಿಯಾಗುತ್ತಿದೆ ಎಂಬುದಾಗಿ ನೇರವಾಗಿ ಹೇಳಿದ್ದರೂ ಕೌಶಿಗನ್ ತನ್ನ ಪ್ರೀತಿಯನ್ನು ನೋರಾ ತಾನ್ ಅಂಗೀಕರಿಸಬೇಕೆಂಬ ಬಯಕೆಯಲ್ಲಿದ್ದನು.
ಆದರೆ ಕೌನ್ಸಲಿಂಗ್ ನಡೆದ ಬಳಿಕವೂ ತಾನ್‌ಗೆ ಆತನಲ್ಲಿ ಅನುರಾಗ ಮೂಡಲಿಲ್ಲ ಹಾಗೂ ವಿವಾಹವಾಗಲು ತಾನು ಬಯಸುವುದಿಲ್ಲ ಎಂಬುದಾಗಿ ನೋರಾ ನೇರವಾಗಿಯೇ ತಿಳಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: Facebook Love: ಪ್ರೇಮಿಗಾಗಿ ನದಿಯಲ್ಲಿ ಈಜಿಕೊಂಡು ಬಂದ ಪ್ರಿಯತಮೆ! ಇದು ಬಾಂಗ್ಲಾ-ಭಾರತದ ಫೇಸ್‌ಬುಕ್ ಲವ್ ಸ್ಟೋರಿ
ದೂರು ದಾಖಲಿಸಿದ ಕೌಶಿಗನ್
ಕೌಶಿಗನ್ನಿನ ಉಪಟಳ ಅತಿಯಾದಾಗ ಆಕೆ ಆತನ ಸಂಪರ್ಕವನ್ನೇ ಕಡಿತಗೊಳಿಸಬೇಕಾಯಿತು. ಈ ಸಮಯದಲ್ಲಿ ಇನ್ನಷ್ಟು ಕುಪಿತಗೊಂಡ ಕೌಶಿಗನ್ ಆಕೆಯ ವಿರುದ್ಧ 3 ಮಿಲಿಯನ್ ನಷ್ಟಪರಿಹಾರವಾಗಿ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದು ತಾನ್ ತನ್ನ ವ್ಯಕ್ತಿತ್ವಕ್ಕೆ ಹಾನಿಯುಂಟು ಮಾಡಿದ್ದಾರೆ ಎಂದು ದೋಷಾರೋಪಣೆ ಮಾಡಿದ್ದು ಇದರಿಂದ ಕೌಶಿಗನ್ ಆಘಾತ ಹಾಗೂ ಖಿನ್ನತೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.
ಸಂಬಂಧವನ್ನು ಸುಧಾರಿಸುವ ಒಪ್ಪಂದ ಉಲ್ಲಂಘಿಸಿದ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ $22,000 ಕ್ಲೇಮ್ ಮಾಡಿದೆ ಎಂದು ಸುದ್ದಿಮಾಧ್ಯಮ ವರದಿ ಮಾಡಿದೆ. $3 ಮಿಲಿಯನ್ ಹೈಕೋರ್ಟ್ ಕ್ಲೈಮ್ ಅನ್ನು ಫೆಬ್ರವರಿ 9 ರಂದು ಪೂರ್ವ-ವಿಚಾರಣೆಯ ವಿಚಾರಣೆಗೆ ನಿಗದಿಪಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ