Viral News: ಮುಕ್ಕಾಲು ಲೀಟರ್ ನೀರಿಗೆ 45 ಲಕ್ಷ ರೂಪಾಯಿ, ಈ ನೀರಿನಲ್ಲಿ ಅಂಥಾದ್ದೇನಿದೆ?

Most expensive Water in the World: ಪ್ರಪಂಚದ ಅತ್ಯಂತ ದುಬಾರಿ ನೀರಿನ ಬೆಲೆ ಎಷ್ಟೊಂದು ಜಾಸ್ತಿ ಇದೆ ಎಂದರೆ, ಆ ರೇಟಿಗೆ ನೀವು ಬೆಂಗಳೂರು ನಗರದ ಸುತ್ತಮುತ್ತ ಒಂದು ಸೈಟ್​ ಖರೀದಿಸಬಹುದು. ಅಥವಾ ಆ ದುಡ್ಡನ್ನು ಬ್ಯಾಂಕ್​ನಲ್ಲಿ ಎಫ್​ಡಿ ಮಾಡಿಸಿ, ಬರುವ ಹಣದಲ್ಲಿ ಆರಾಮಾಗಿ ಜೀವನ ನಡೆಸಿಕೊಂಡು ಹೋಗಬಹುದು. ಅಷ್ಟಕ್ಕೂ ಆ ಬಾಟಲ್​ ಹೆಸರೇನು? ನೋಡುವುದಕ್ಕೆ ಹೇಗಿರುತ್ತೆ? ಒಳಗಡೆ ಇರುವ ನೀರು ಯಾವ ಬಣ್ಣದ್ದು? ಇದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ.

ದುಬಾರಿ ನೀರಿನ ಬಾಟಲ್

ದುಬಾರಿ ನೀರಿನ ಬಾಟಲ್

  • Share this:
    Costly Water: ಮನುಷ್ಯನ ದೇಹಕ್ಕೆ ನೀರು(Water) ಬೇಕೆ ಬೇಕು. ನಮ್ಮ ದೇಹದ ಶೇಕಡಾ 75ರಷ್ಟು ಅಂಗಾಂಗಗಳು ನೀರಿನಿಂದ ಕೆಲಸ ಮಾಡುತ್ತೆವೆ. ಇದಕ್ಕಾಗಿಯೇ ವೈದ್ಯರು (Doctor) ಕೂಡ ಹೆಚ್ಚು ನೀರು ಕುಡಿಯುವಂತೆ ಸಲಹೆ ಮಾಡುತ್ತಾರೆ. ಆದರೆ ಆ ನೀರಿನ ಬೆಲೆ ಲಕ್ಷಗಟ್ಟಲೆ ಅಂದರೆ ಯಾರಾದರೂ ನೀರು ಕುಡಿಯುವ ಸಾಹಸಕ್ಕೆ ಮುಂದಾಗುತ್ತಾರಾ? ಹೌದು, ಬಿಯರ್(Beer)​ ಅಥವಾ ಹಳೆಯ ವಿಸ್ಕಿ(Whisky) ಬಾಟಲಿಯ ಬೆಲೆ ಲಕ್ಷಾಂತರ ಅಥವಾ ಕೋಟಿ ರೂಪಾಯಿ ಇದೆ ಎಂದು ಎಲ್ಲರಿಗೂ ತಿಳಿದಿದೆ. ಅಷ್ಟು ಹಣ ಕೊಟ್ಟು ಮದ್ಯಪಾನ(Alcohol) ಮಾಡಬೇಕು ಎಂದು ಹೇಳಿದವರು ಇದ್ದಾರೆ. ಇತ್ತ ಹೇಗಾದರೂ ಮಾಡಿ ಒಂದು ಬಾರಿಯಾದರೂ ಅದನ್ನು ಖರೀದಿಸಿ ಕುಡಿಯಬೇಕು ಎಂದು ಅಂದು ಕೊಂಡವರು ಇದ್ದಾರೆ. ನೂರು ರೂಪಾಯಿಂದ ಕೋಟಿ ರೂಪಾಯಿವರೆಗೂ ಮದ್ಯಪಾನಗಳು ವೈರಟಿ, ವೈರಟಿಯಾಗಿ ಸಿಗುತ್ತವೆ. ಆದರೆ ನಾವು ಈಗ ಹೇಳುವುದನ್ನ ನೋಡಿ, ನಿಮಗೆ ಶಾಕ್​ ಆಗಬಹುದು. ವಿಚಿತ್ರ ಅನ್ನಿಸಬಹುದು. ನಿಜಕ್ಕೂ ಇದು ಸಾಧ್ಯಾನಾ ಎಂದು ಅನ್ನಿಸುತ್ತೆ. ಒಂದು ನೀರಿನ ಬಾಟಲಿಯ ಬೆಲೆ 45 ಲಕ್ಷ ರೂಪಾಯಿ ಅಂದರೆ ನಿಮಗೆ ನಂಬಲು ಸಾಧ್ಯವೇ?

    ಸ್ವಲ್ಪ ವಿಚಿತ್ರ ಅನಿಸಿದರು ಸತ್ಯ!

    ಕೇಳಲು ಸ್ವಲ್ಪ ವಿಚಿತ್ರ ಎನಿಸಿದರು ಇದು ನಿಜ. ಪ್ರಪಂಚದ ಅತ್ಯಂತ ದುಬಾರಿ ನೀರಿನ (World's Costliest Water) ಬಾಟಲಿಯ ಬೆಲೆ ಎಷ್ಟೊಂದು ಜಾಸ್ತಿ ಇದೆ ಎಂದರೆ, ಆ ಬೆಲೆಯಲ್ಲಿ ನೀವು ಬೆಂಗಳೂರು ನಗರದ ಸುತ್ತಮುತ್ತ ಸೈಟ್​ ಖರೀದಿಸಬಹುದು. ಅಥವಾ ಆ ದುಡ್ಡನ್ನು ಬ್ಯಾಂಕ್​ನಲ್ಲಿ ಎಫ್​ಡಿ ಮಾಡಿಸಿ, ಬರುವ ಹಣದಲ್ಲಿ ಆರಾಮಾಗಿ ಜೀವನ ನಡೆಸಿಕೊಂಡು ಹೋಗಬಹುದು. ಅಷ್ಟಕ್ಕೂ ಆ ಬಾಟಲ್​ ಹೆಸರೇನು? ನೋಡುವುದಕ್ಕೆ ಹೇಗಿರುತ್ತೆ? ಒಳಗಡೆ ಇರುವ ನೀರು ಯಾವ ಬಣ್ಣದ್ದು? ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುತ್ತವೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

    ಇದನ್ನೂ ಓದಿ: Hiccups : ಬಿಕ್ಕಳಿಕೆ ಸಮಸ್ಯೆಯಿಂದ ಸಾಕಾಗಿದೆಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    750 ಮಿಲಿ ನೀರಿನ ಬಾಟಲ್​ ಬೆಲೆ 45 ಲಕ್ಷ ರೂ

    ಹೌದು, ವಿಶ್ವದ ಈ ಅತ್ಯಂತ ದುಬಾರಿ ನೀರಿನ ಹೆಸರು ಆಕ್ವಾ ಡಿ ಕ್ರಿಸ್ಟೆಲ್ಲೊ ಟ್ರಿಬ್ಯುಟೊ ಮೊಡಿಗ್ಲಿಯಾನಿ (Acqua di Cristallo Tributo a Modigliani) ಇದೆನಪ್ಪಾ ಇಷ್ಟು ಉದ್ದ ಇದೆ ಹೆಸರು ಅಂದುಕೊಳ್ಳುತ್ತಿದ್ದಿರಾ? ಇದರ ಬೆಲೆಯೂ ಅಷ್ಟೇ ದೊಡ್ಡದು. ಈ ನೀರಿನ ಬಾಟಲಿಯ ಬೆಲೆ ಬರೋಬ್ಬರಿ 45 ಲಕ್ಷ ರೂಪಾಯಿಗಳು. ಇಷ್ಟು ಹಣ ಕೊಟ್ಟರೂ ನಿಮಗೆ 1 ಲೀಟರ್​​ ನೀರು ಸಿಗುವುದಿಲ್ಲ. ಕೇವಲ 750 ಮಿಲಿ ನೀರಿನ ಬಾಟಲಿ ಮಾತ್ರ ಸಿಗುತ್ತದೆ. ಆಕ್ವಾ ಡಿ ಕ್ರಿಸ್ಟೆಲ್ಲೊ ಟ್ರಿಬ್ಯುಟೊ ಮೊಡಿಗ್ಲಿಯಾನಿ ನೀರಿನ ಬಾಟಲಿಯ ಬೆಲೆ $ 60,000 ಅಂದರೆ ರೂ. 45 ಲಕ್ಷಕ್ಕಿಂತ ಹೆಚ್ಚು. ಈ ನೀರು ಫ್ರಾನ್ಸ್​ ಹಾಗೂ ಫಿಜಿಯ ನೈಸರ್ಗಿಕ ಬುಗ್ಗೆಯಿಂದ ಬರುತ್ತೆ. ಹೀಗಾಗಿ ಇದು ವಿಶ್ವದ ದುಬಾರಿ ನೀರು ಎಂದು ಕರೆಯಲಾಗುತ್ತೆ.

    ಇದನ್ನೂ ಓದಿ: Drinking More Water: ಎಚ್ಚರ.. ಅತಿಯಾಗಿ ನೀರು ಕುಡಿಯುವುದರಿಂದ ಯಾವೆಲ್ಲಾ ಸಮಸ್ಯೆಗಳು ಕಾಡುತ್ತವೆ ಗೊತ್ತೇ?

    ಈ ನೀರಿನ ಬಾಟಲಿ ಯಾಕಿಷ್ಟು ದುಬಾರಿ?

    45 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಈ ನೀರಿನ ಬಾಟಲಿ ಇಷ್ಟೊಂದು ಕಾಸ್ಟ್ಲಿ ಯಾಕೆ ಎಂಬುದರ ಹಿಂದೆ ಹಲವು ಕಾರಣಗಳಿವೆ. 24 ಕ್ಯಾರೆಟ್​ ಚಿನ್ನದಿಂದ ಈ ವಿಶೇಷ ನೀರಿನ ಬಾಟಲಿಯನ್ನ ತಯಾರಿಸಲಾಗಿದೆ.ಇನ್ನೂ ಈ ಬಾಟಲಿಯನ್ನು ವಿಶ್ವದ ಅತ್ಯಂತ ಪ್ರಸಿದ್ಧ ಬಾಟಲ್ ಡಿಸೈನರ್ ಫೆರ್ನಾಂಡೊ ಅಲ್ಟಮಿರಾನೊ (Fernando Altamirano) ವಿನ್ಯಾಸಗೊಳಿಸಿದ್ದಾರೆ. ಬಾಟಲಿಯ ಹೊರತಾಗಿ, ಈ ನೀರಿನ ರುಚಿ ಕೂಡ ವಿಭಿನ್ನವಾಗಿದೆ. ಸಾಮಾನ್ಯ ನೀರಿಗಿಂತ ಹಲವು ಪಟ್ಟು ಹೆಚ್ಚು ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತೆ.

    (ವರದಿ - ವಾಸುದೇವ್​. ಎಂ)
    Published by:Soumya KN
    First published: