ಮನೆಗೆ ನುಗ್ಗಿ 8 ದಿನದ ಹಸುಗೂಸನ್ನು ಎಳೆದೊಯ್ದ ಕೋತಿ; ಅಸುನೀಗಿದ ಮಗು..!

ತಂಜಾವೂರಿನ ಅರಮನೆ ಬಳಿಯ ಮೇಳ ಅಲಂಗಂ (ವೆಸ್ಟ್ ರಾಂಪಾರ್ಟ್) ನಲ್ಲಿರುವ ಮನೆಗೆ ಕೋತಿಗಳು ಲಗ್ಗೆ ಇಟ್ಟಿವೆ. ಈ ಪೈಕಿ ಒಂದು ಕೋತಿ ಮನೆಯ ಮೇಲ್ಚಾವಣಿಯಲ್ಲಿರುವ ಹೆಂಚುಗಳನ್ನು ತೆಗೆದು ಒಳ ಪ್ರವೇಶಿಸಿದೆ. ಈ ವೇಳೆ ಮಗುವಿನ ತಾಯಿ ವಾಶ್ ರೂಂನಲ್ಲಿದ್ದರಂತೆ. ಮನೆಗೆ ಎಂಟ್ರಿ ಕೊಟ್ಟ ಕೋತಿ ಚಾಪೆಯ ಮೇಲೆ ಮಲಗಿಸಿದ್ದ ಶಿಶುಗಳನ್ನು ಹೊತ್ತೊಯ್ದಿವೆ. ಅಳುವ ಶಬ್ದ ಕೇಳುತ್ತಿದ್ದಂತೆಯೇ ಮಗುವಿನ ತಾಯಿ ಭುವನೇಶ್ವರಿ ಬರುವಷ್ಟರಲ್ಲಿ ಮಗುವನ್ನು ಎತ್ತಿಕೊಂಡು ಮಂಗ ಹಾರಿ ಹೋಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತಮಿಳುನಾಡು(ಫೆ.15): ಮಂಗಗಳು ಮಾಡುವ ಅವಾಂತರಗಳು ಒಂದೊಂದಲ್ಲ. ಕಪಿಗಳ ಕಪಿಚೇಷ್ಟೆಗೆ ಇತಿಮಿತಿ ಅನ್ನೋದೇ ಇಲ್ಲದಂತಾಗಿದೆ. ಕೋತಿಗಳ ಉಪಟಳಕ್ಕೆ ಕೆಲವು ಕಡೆ ಜನರು ರೋಸಿ ಹೋಗಿದ್ದಾರೆ. ಇಷ್ಟು ದಿನ ಮನೆಗೆ ನುಗ್ಗಿ ಬರೀ ಆಹಾರ ಕದಿಯುತ್ತಿದ್ದ ಮಂಗಗಳು ತಮಿಳುನಾಡಿನಲ್ಲಿ ದೊಡ್ಡ ಅವಾಂತರವನ್ನೇ ಮಾಡಿವೆ. ಹೌದು, ಮೇಲ್ಚಾವಣಿ ತೆರೆದು ಮನೆಯೊಳಕ್ಕೆ ನುಗ್ಗಿದ ಮಂಗಗಳು 8 ದಿನಗಳ ಶಿಶುವನ್ನು ಎತ್ತಿಕೊಂಡು ಹೋಗಿರುವ ಭಯಾನಕ ಘಟನೆ ತಂಜಾವೂರಿನಲ್ಲಿ ನಡೆದಿದೆ. ಮನೆಯೊಳಗೆ ನುಗ್ಗಿದ ಮಂಗಗಳು 2 ನವಜಾತ ಶಿಶುಗಳನ್ನು ಹೊತ್ತೊಯ್ದಿದೆ. ಘಟನೆಯಲ್ಲಿ ಒಂದು ಮಗು ಮೃತಪಟ್ಟಿದ್ದು, ಇನ್ನೊಂದು ಮಗುವನ್ನು ರಕ್ಷಿಸಲಾಗಿದೆ.

  ತಂಜಾವೂರಿನ ಅರಮನೆ ಬಳಿಯ ಮೇಳ ಅಲಂಗಂ (ವೆಸ್ಟ್ ರಾಂಪಾರ್ಟ್) ನಲ್ಲಿರುವ ಮನೆಗೆ ಕೋತಿಗಳು ಲಗ್ಗೆ ಇಟ್ಟಿವೆ. ಈ ಪೈಕಿ ಒಂದು ಕೋತಿ ಮನೆಯ ಮೇಲ್ಚಾವಣಿಯಲ್ಲಿರುವ ಹೆಂಚುಗಳನ್ನು ತೆಗೆದು ಒಳ ಪ್ರವೇಶಿಸಿದೆ. ಈ ವೇಳೆ ಮಗುವಿನ ತಾಯಿ ವಾಶ್ ರೂಂನಲ್ಲಿದ್ದರಂತೆ. ಮನೆಗೆ ಎಂಟ್ರಿ ಕೊಟ್ಟ ಕೋತಿ ಚಾಪೆಯ ಮೇಲೆ ಮಲಗಿಸಿದ್ದ ಶಿಶುಗಳನ್ನು ಹೊತ್ತೊಯ್ದಿವೆ. ಅಳುವ ಶಬ್ದ ಕೇಳುತ್ತಿದ್ದಂತೆಯೇ ಮಗುವಿನ ತಾಯಿ ಭುವನೇಶ್ವರಿ ಬರುವಷ್ಟರಲ್ಲಿ ಮಗುವನ್ನು ಎತ್ತಿಕೊಂಡು ಮಂಗ ಹಾರಿ ಹೋಗಿದೆ. ಇದರಿಂದ ಭಯಭೀತರಾದ ಭುವನೇಶ್ವರಿಯವರು ಜೋರಾಗಿ ಕಿರುಚಿ, ಸಹಾಯಕ್ಕಾಗಿ ಅಂಗಲಾಚಿದ್ದಾರೆ.

  Rape Case: ರೈಲಿನ ಶೌಚಾಲಯದಲ್ಲಿ ಗೆಳತಿ ಮೇಲೆ ಅತ್ಯಾಚಾರ ಎಸಗಿದ ಯುವಕ

  ಮನೆಯ ಮೇಲ್ಚಾವಣಿಯ ಮೇಲೆ ಕುಳಿತಿದ್ದ ಕೋತಿ ಒಂದು ಮಗು ಹಿಡಿದುಕೊಂಡಿತ್ತಂತೆ. ಸ್ಥಳೀಯರು ಕೋತಿಯನ್ನು ಬೆನ್ನಟ್ಟಿ ಜೋರಾಗಿ ಕಿರುಚಿದಾಗ ಅದು ಆ ಮಗುವನ್ನು ಅಲ್ಲಿಯೇ ಕೈಬಿಟ್ಟು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೋಗಿದೆ. ಕೂಡಲೇ ಆ ಮಗುವನ್ನು ರಕ್ಷಿಸಿದ ಸ್ಥಳೀಯರು ಇನ್ನೊಂದು ಮಗುವಿನ ರಕ್ಷಣೆಗಾಗಿ ಹುಡುಕಾಡಿದ್ದಾರೆ. ಮನೆಯ ಸುತ್ತಲಿನ ಕಂದಕದ ಮೇಲೆ ಪರಿಶೀಲಿಸುತ್ತಿದ್ದ ವೇಳೆ 2ನೇ ಮಗು ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅದನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ, ಆದರೆ ಅಷ್ಟರಲ್ಲೇ ಆ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿದೆ.

  ಕಳೆದ ವಾರವಷ್ಟೇ ಭುವನೇಶ್ವರಿ ಅವರು ಅವಳಿ ಮಕ್ಕಳಿಗೆ ಜನ್ಮನೀಡಿದ್ದರು. ಅವರ ಪತಿ ರಾಜಾ ಕೆಲಸಕ್ಕೆ ಹೋಗಿದ್ದರಂತೆ. ಈ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ನಿತ್ಯ ವರದಿಯಾಗುತ್ತಿದೆ. ಇಷ್ಟು ದಿನ ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ಕದ್ದೊಯ್ದಿದ್ದ ಮಂಗಗಳು ಇದೀಗ ಮಗುವನ್ನು ಹೊತ್ತೊಯ್ದಿರುವುದು ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಮಂಗಗಳ ಉಪಟಳ ಹೆಚ್ಚಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

  ಸದ್ಯ ಮಗುವಿನ ಮೃತದೇಹವನ್ನು ಶವಪರೀಕ್ಷೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ತಂಜಾವೂರು ಅರಣ್ಯ ರೇಂಜರ್ ಜಿ.ಜ್ಯೋತಿಕುಮಾರ್, ಈ ಘಟನೆಯನ್ನು ‘ಅಪರೂಪದಲ್ಲೇ ಅಪರೂಪ’ ಎಂದು ಹೇಳಿದ್ದಾರೆ. ಯಾವುದೇ ಪ್ರಾಣಿಗಳು ಮನೆಯ ಹೆಂಚುಗಳನ್ನು ತೆಗೆದುಹಾಕಿ, ಅದೇ ರಂಧ್ರದ ಮೂಲಕ ಹೊರಬರುವುದು ಬಹಳ ಕಷ್ಟಕರ ಎಂದಿದ್ದಾರೆ. ಮೃತಪಟ್ಟಿರುವ ಮಗುವನ್ನು ಪರಿಶೀಲಿಸಲಾಗುತ್ತಿದ್ದು, ಅದರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿಕೆ ನೀಡಿದ್ದಾರೆ.
  Published by:Latha CG
  First published: