ಕೋಲ್ಕತ್ತಾ: ಇದು ಕಾಲ್ಪನಿಕ ಕಥೆಯಲ್ಲ, ನಿಜವಾದ ಕಥೆ. ವಯಸ್ಸಾದ ಮಹಿಳೆಯೊಬ್ಬರು ಊಟ (Food) ಸೇವಿಸದೇ ಕೇವಲ ಚಹಾ (Tea) ಮತ್ತು ಹಾರ್ಲಿಕ್ಸ್ (Horlicks) ಸೇವಿಸುತ್ತಾ ಬದುಕುತ್ತಿದ್ದಾರೆ. ಹೌದು, ಹೂಗ್ಲಿಯ ಗೋಘಾಟ್ (Goghat) ಜಿಲ್ಲೆಯ ಶ್ಯಾಂಬಜಾರ್ ಪಂಚಾಯಿತಿಯ ಬೆಲ್ದಿಹಾ ಗ್ರಾಮದ ವೃದ್ಧೆಯೊಬ್ಬರು (Old Women) ಆಹಾರ ಸೇವಿಸದೆಯೇ ಆರೋಗ್ಯಕರವಾಗಿ ಸಹಜ ಜೀವನ ನಡೆಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆಹಾರ ಸೇವಿಸದೇ ಆರೋಗ್ಯವಂತರಾಗಿ ಸಹಜ ಜೀವನ ನಡೆಸುತ್ತಿದ್ದಾರೆ. ವೃದ್ಧೆಯ ಹೆಸರು ಅನಿಮಾ ಚಕ್ರವರ್ತಿ ಆಗಿದ್ದು, ಆಕೆಗೆ ಸುಮಾರು 76 ವರ್ಷ. ಸುಮಾರು 50 ರಿಂದ 60 ವರ್ಷಗಳಿಂದ ಊಟ ಮಾಡದೇ ಸಹಜ ಜೀವನ ನಡೆಸುತ್ತಿದ್ದಾರೆ. ಆದರೇ ಇದೀಗ ವೃದ್ಧೆ ಹಾರ್ಲಿಕ್ಸ್ ಟೀ ಸೇವಿಸುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮನೆ ಪರಿಸ್ಥಿತಿ ಸರಿಯಾಗಿಲ್ಲದ ವೇಳೆ ಊಟ ಬಿಟ್ಟ ವೃದ್ಧೆ
ಆಗ ನಮ್ಮ ಮನೆಯ ಪರಿಸ್ಥಿತಿ ಚೆನ್ನಾಗಿರಲಿಲ್ಲ, ಹಾಗಾಗಿ ನಮ್ಮ ತಾಯಿ ಮನೆಯ ಕೆಲಸಕ್ಕೆ ಹೋಗುತ್ತಿದ್ದರು ಅಲ್ಲಿಂದ ತಂದ ಸಾಲದಲ್ಲಿ ತಂದ ಅಕ್ಕಿಯನ್ನೆಲ್ಲಾ, ನಮ್ಮ ಮನೆಯವರೆಲ್ಲರಿಗೂ ಕೊಡುತ್ತಿದ್ದರು. ಇದರಿಂದ ಅಮ್ಮ ಊಟ ಮಾಡದೇ ಇರುತ್ತಿದ್ದರು. ಹೀಗಾಗಿಯೇ ಅನಿಮಾ ಚಕ್ರವರ್ತಿ ಮನೆಯಲ್ಲಿ ತಯಾರಿಸಿದ ಅಕ್ಕಿ ರೊಟ್ಟಿಯನ್ನು ತಿನ್ನದೇ ದ್ರವರೂಪದ ಆಹಾರ ಸೇವಿಸಿ ಬದುಕುತ್ತಿದ್ದಾರೆ ಎಂದು ಅನಿಮಾ ಚಕ್ರವರ್ತಿ ಅವರ ಪುತ್ರ ಹೇಳಿದ್ದಾರೆ.
ಅನಿಮಾ ಚಕ್ರವರ್ತಿ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಸ್ಥಳೀಯರು
ಅಲ್ಲದೇ ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿಯೊಬ್ಬರು, ಅನಿಮಾ ಚಕ್ರವರ್ತಿ ಅವರು ಆಹಾರ ಸೇವಿಸದೆ ಆರೋಗ್ಯವಂತರಾಗಿ ಸಹಜ ಜೀವನ ನಡೆಸುತ್ತಿರುವುದನ್ನು ನಾವು ಕೂಡ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೇವಲ ಚಹಾ, ಹಾರ್ಲಿಕ್ಸ್ ಕುಡಿದು ಜೀವನ ನಡೆಸುತ್ತಿರುವ ವೃದ್ಧೆ
ನನಗೆ ಬುದ್ಧಿ ಬಂದಾಗಿನಿಂದಲೂ ವೃದ್ಧೆ ಊಟ ಮಾಡದೇ ಬದುಕುತ್ತಿರುವುದನ್ನು ನೋಡುತ್ತಿದ್ದೇನೆ. ಘನ ಆಹಾರ ಸೇವಿಸದೇ, ಕೇವಲ ಚಹಾ, ಹಾರ್ಲಿಕ್ಸ್, ಹೀಗೆ ದ್ರವ ರೂಪದ ಆಹಾರಗಳನ್ನು ತಿಂದು ಬದುಕುತ್ತಿದ್ದಾರೆ. ಅವರು ಈ ರೀತಿ ಬದುಕುತ್ತಿರುವುದು ನಮಗೂ ಹೆಮ್ಮೆ ಮತ್ತು ನಮ್ಮ ಹಳ್ಳಿಗೂ ಹೆಮ್ಮೆ. ಇದನ್ನು ನೋಡುತ್ತಿದ್ದರೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ಒಬ್ಬ ವ್ಯಕ್ತಿ ಒಂದು ದಿನವೂ ತಿನ್ನದೇ ಬದುಕಲು ಸಾಧ್ಯವಿಲ್ಲ. ಆದರೆ ಈ ವೃದ್ಧೆ ಆರಾಮವಾಗಿ ಆಹಾರ ಸೇವಿಸದೇ ಬದುಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಕಲ್ಲು ತಿಂದು ಜೀವಿಸುತ್ತಿದ್ದ ವ್ಯಕ್ತಿ ಫೋಟೋ ವೈರಲ್
ಇದೇ ರೀತಿ ಮಹಾರಾಷ್ಟ್ರದಲ್ಲಿ ವ್ಯಕ್ತಿಯೋರ್ವ 32 ವರ್ಷಗಳಿಂದ ಕಲ್ಲು ತಿಂದು ಜೀವಿಸುತ್ತಿದ್ದಾನೆ. ಮಹಾರಾಷ್ಟ್ರದ ಸತ್ರಾ ಜಿಲ್ಲೆಯ ಅಡಾರ್ಕಿ ಖುರ್ದಾ ಗ್ರಾಮದ ನಿವಾಸಿ 78 ವರ್ಷದ ರಾಮ್ದಾಸ್ ಬೊಡ್ಕ್ ಆಹಾರದ ಬದಲಿಗೆ ಪ್ರತಿ ದಿನ 250 ಗ್ರಾಂ ಕಲ್ಲನ್ನು ಆಹಾರವಾಗಿ ತಿಂದು ಜೀವನ ನಡೆಸುತ್ತಿದ್ದಾನೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಾಮ್ದಾಸ್
ಹಲವು ವರ್ಷಗಳ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಾಮ್ದಾಸ್ ಸಾಕಷ್ಟು ಬಾರಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗದಿದ್ದಾಗ ಹಳ್ಳಿಯ ಹಿರಿಯ ಮಹಿಳೆಯೊಬ್ಬರು ಕಲ್ಲು ತಿನ್ನುವಂತೆ ಸಲಹೆ ನೀಡಿದ್ದರು. ಮಹಿಳೆ ಹೇಳಿದ್ದನ್ನು ಆಲಿಸಿ ರಾಮ್ದಾಸ್ ಕಲ್ಲು ಸೇವಿಸಲು ಆರಂಭಿಸಿದ್ದನು.
ಇದನ್ನೂ ಓದಿ: Robbery: ಜ್ಯುವೆಲ್ಲರಿ ಶಾಪ್ನಿಂದ 10 ಲಕ್ಷ ಬೆಲೆಯ ಚಿನ್ನದ ನೆಕ್ಲೆಸ್ ಕದ್ದ ವೃದ್ಧೆ! ಖತರ್ನಾಕ್ ಅಜ್ಜಿಯ ಕೈಚಳಕ ನೀವೇ ನೋಡಿ
ವೈರಲ್ ಆಗಿತ್ತು ರಾಮ್ದಾಸ್ ಕಲ್ಲು ತಿನ್ನೋ ಫೋಟೋ
ಹಲವು ದಿನಗಳ ಹಿಂದೆ ರಾಮ್ದಾಸ್ ಕಲ್ಲು ತಿನ್ನುವ ಫೋಟೋ ವೈರಲ್ ಕೂಡ ಆಗಿತ್ತು. ಅಲ್ಲದೆ ಈತನ ಮನೆಯವರು ಕಲ್ಲು ಸೇವಿಸುವುದನ್ನು ನಿರಾಕರಿಸಿದ್ದರಿಂದ ಅವರಿಗೆ ತಿಳಿಯದಂತೆ ಕಲ್ಲುಗಳನ್ನು ತಿನ್ನುತ್ತಿದ್ದನು. ರಾಮ್ದಾಸ್ ಕಲ್ಲು ಸೇವಿಸುವ ಅಭ್ಯಾಸವನ್ನು ವೈದ್ಯರು ಮಾನಸಿಕ ರೋಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ