Dog Raped: 67 ವರ್ಷ ವೃದ್ಧನ "ಕಾಮ"ಕಾಂಡ!; ಪಕ್ಕದ ಮನೆ ಹೆಣ್ಣು ನಾಯಿ ಮೇಲೆ ರೇಪ್!

ಈ ಸುದ್ದಿ ಹರಡುತ್ತಿದ್ದಂತೆ, ಸುರೇಶ್ ಸುಳ್ಳು ಹೇಳಿ ಮುಖೇಶ್ ವಿರುದ್ಧವೇ ಆರೋಪಿಸಿದ್ದಾರೆ. ತನ್ನ ಇಮೇಜ್ ಹಾಳುಮಾಡಲು ಆಧಾರರಹಿತ ಆರೋಪಗಳನ್ನು ಮುಖೇಶ್ ಹೊರಿಸುತ್ತಿದ್ದಾನೆ ಎಂದು ವೃದ್ಧ ಹೇಳಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹರಿಯಾಣ(ಅ.3): ಪ್ರಪಂಚದಲ್ಲಿ ಅದೆಂಥಾ ವಿಚಿತ್ರ ಮನಸ್ಥಿತಿ ಇರೋ ಜನರಿದ್ದಾರೋ ದೇವರೇ ಬಲ್ಲ. ಯಾರೂ ಊಹಿಸಿಕೊಳ್ಳಲು ಆಗದತಂಹ ಚಿತ್ರ, ವಿಚಿತ್ರ ಮನುಷ್ಯರು ಇದ್ದಾರೆ. ಕಾಮ, ಕ್ರೋಧ, ಮದ, ಮತ್ಸರ ಎಲ್ಲವನ್ನೂ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವವನೇ ನಿಜವಾದ ಮನುಷ್ಯ. ಆದರೆ ಈ ಕಾಲದಲ್ಲಿ ಏನಾದರೂ ತಡೆಯಬಲ್ಲ ಮನುಷ್ಯ, ತನ್ನ ಕಾಮವನ್ನು ಹತೋಟಿಯಲ್ಲಿ ಇಡಲಾಗದೆ ಎಂಥಾ ನೀಚ ಕೃತ್ಯಕ್ಕೂ ಮುಂದಾಗಿಬಿಡುತ್ತಾನೆ. ಹೀಗಾಗಿಯೇ ದಿನೇ ದಿನೇ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆದರೆ ಇಲ್ಲೊಬ್ಬ ಬರಗೆಟ್ಟ ಮುದುಕ ನಾಯಿ ಮೇಲೆ ತನ್ನ ಕಾಮ ಚಟವನ್ನ(Rape on Dog) ತೀರಿಸಿಕೊಂಡಿದ್ದಾನೆ. ಪ್ರತಿದಿನ ಈ ರೀತಿಯ ಅಸಹ್ಯಕರ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಬೆಳಕಿಗೆ ಬರುವುದಿಲ್ಲ. 67 ವರ್ಷದ ಕಾಮುಕ(Old man) ಮಾತು ಬಾರದ ಮೂಕಪ್ರಾಣಿ ಮೇಲೆ ಎರಗಿ ಬಿದ್ದಿದ್ದಾನೆ. ತನ್ನ ಕಾಮ ತಿರಿಸ್ಕೊಳ್ಳಲು ತನ್ನ ಪಕ್ಕದ ಮನೆ ಸಾಕು ನಾಯಿಯನ್ನ ರೇಪ್ ಮಾಡಿದ್ದಾನೆ. ಹರಿಯಾಣ(Haryana)ದ ಗುರುಗ್ರಾಮ್ ಸೋಹ್ನಾ ಪ್ರದೇಶದಲ್ಲಿ ಈ ಅಸಹ್ಯಕರ ಘಟನೆ ನಡೆದಿದೆ.

    ಇಂತಹ ನಾಚಿಕೆಗೇಡಿನ ಕೃತ್ಯ ಎಸಗಿದ ಕಾಮುಕ ವ್ಯಾಘ್ರ ಸುರೇಶ್ ಎಂಬುವವನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ವಾಸಿಸುತ್ತಿದ್ದ, ಪಕ್ಕದ ಮನೆಯಲ್ಲಿ ಮುಖೇಶ್ ವಾಸವಿದ್ದರು. ಜತೆಗೆ ಮುದ್ದಾದ ಒಂದು ಗಂಡು ನಾಯಿ, ಒಂದು ಹೆಣ್ಣು ನಾಯಿಯನ್ನ ಸಾಕಿದ್ದರು. ಸೆಪ್ಟೆಂಬರ್ 28 ರಂದು ಸುರೇಶ್ ಹೆಣ್ಣು ನಾಯಿಯನ್ನ ಆಟವಾಡಿಸುತ್ತ ತನ್ನ ಮನೆಗೆ ಕರೆದೊಯ್ದಿದ್ದಾನೆ. ಕೆಲ ಸಮಯದ ಬಳಿಕ ನಾಯಿ ಮಾಲೀಕ ಮುಖೇಶ್ ತನ್ನ ನಾಯಿ ಕಾಣಿಸದಿದ್ದಕ್ಕೆ ಗಾಬರಿಯಾಗಿದ್ದರು. ಮನೆಯಿಂದ ಹೊರಬಂದು ನಾಯಿಯನ್ನು ಹುಡುಕಲು ಮುಂದಾಗಿದ್ದರು. ಈ ವೇಳೆ ಮತ್ತೊಂದು ನಾಯಿ ಮನೆ ಕಡೆ ತಿರುಗಿ ಬೊಗಳುತ್ತಿತ್ತು. ಇದನ್ನು ಕಂಡ ಮುಖೇಶ್, ಸುರೇಶ್ ಮನೆ ಒಳಗೆ ಹೋಗಿದ್ದ. ಸುರೇಶ್ ತನ್ನ ನಾಯಿ ಜೊತೆ ಅಸ್ವಾಭಾವಿಕ ಸಂಭೋಗ ನಡೆಸುವುದನ್ನು ಮುಖೇಶ್ ನೋಡಿದ್ದಾರೆ. ಕೂಡಲೇ ತನ್ನ ಮೊಬೈಲ್ ನಲ್ಲಿ ನೀಚ ಕೃತ್ಯವನ್ನ ಸೆರೆಹಿಡಿದಿದ್ದಾರೆ.

    ಇದನ್ನೂ ಓದಿ:Crime News: ಎಣ್ಣೆ ಏಟಲ್ಲಿ ದೋಸ್ತಿಗಳ ನಡುವೆ ಕಿರಿಕ್; ಒಂದು ಪೆಗ್ ಕಡಿಮೆ ಹಾಕಿದ್ದಕ್ಕೆ ಕೊಂದೇಬಿಟ್ಟ..!

    ಇನ್ನೂ ಈ ಸುದ್ದಿ ಹರಡುತ್ತಿದ್ದಂತೆ, ಸುರೇಶ್ ಸುಳ್ಳು ಹೇಳಿ ಮುಖೇಶ್ ವಿರುದ್ಧವೇ ಆರೋಪಿಸಿದ್ದಾರೆ. ತನ್ನ ಇಮೇಜ್ ಹಾಳುಮಾಡಲು ಆಧಾರರಹಿತ ಆರೋಪಗಳನ್ನು ಮುಖೇಶ್ ಹೊರಿಸುತ್ತಿದ್ದಾನೆ ಎಂದು ವೃದ್ಧ ಹೇಳಿದ್ದಾನೆ. ಆದರೆ ಸುರೇಶ್ ಕೃತ್ಯದ ವಿಡಿಯೋ ಮಾಡಿರುವ ಮುಖೇಶ್, "ನನ್ನ ಬಳಿ ವಿಡಿಯೋ ಇದೆ, ಇಲ್ಲವಾದರೆ ಯಾರೂ ನನ್ನನ್ನು ನಂಬುತ್ತಿರಲಿಲ್ಲ. ಒಬ್ಬ ವೃದ್ಧ ಹೇಗೆ ಇಂತಹ ಕೃತ್ಯ ಎಸಗುತ್ತಾನೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಮುಖೇಶ್ ತಿಳಿಸಿದ್ದಾರೆ.

    ಒಂದು ದಿನದ ಬಳಿಕ , ಮುಖೇಶ್ ಈ ವಿಷಯಕ್ಕೆ ಸಂಬಂಧಿಸಿದಂತೆ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಯ ವಿರುದ್ಧ ವೀಡಿಯೊ ಸಾಕ್ಷ್ಯವನ್ನು ಸಹ ಸಲ್ಲಿಸಿದ್ದಾರೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ 377 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸುರೇಶ್ ನನ್ನ ಬಂಧಿಸಿ ಜೈಲಗಟ್ಟಿದ್ದಾರೆ. ಯಾರೇ ಆಗಿರಲಿ ಈ ಮಟ್ಟಕ್ಕೆ ಇಳಿಯಬಾರದು. ಈ ರೀತಿಯ ಕೃತ್ಯಗಳನ್ನ ಮಾಡುವ ಬದಲು ಜೀವ ಬಿಡುವುದೇ ಒಳಿತು ಅಂತ ಸಾಮಾಜಿಕ ತಾಣಗಳಲ್ಲಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಆತ ಜೈಲು ಶಿಕ್ಷೆ ಮುಗಿಸಿ ಹೊರಬಂದು ಇಂತದ್ದೇ ಕೃತ್ಯಗಳಲ್ಲಿ ಭಾಗಿಯಾಗುತ್ತಾನೆ. ಹಾಗಾಗಿ ಆತನನ್ನ ಹೊರಗೆ ಬಿಡಬೇಡಿ ಎಂದು ಕಿಡಿ ಕಾರಿದ್ದಾರೆ.

    • ವರದಿ - ವಾಸುದೇವ್.ಎಂ
       

    Published by:Latha CG
    First published: