Fake Swamiji: 16ರ ಬಾಲಕಿ ಮದುವೆಯಾದ 62ರ ನಕಲಿ ಸ್ವಾಮೀಜಿ! ಮಾಟಮಂತ್ರದ ಹೆಸರಲ್ಲಿ ನೀಚಕೃತ್ಯ

62 ವರ್ಷದ ನಕಲಿ ಸ್ವಾಮೀಜಿಯೊಬ್ಬ 16 ವರ್ಷದ ಬಾಲಕಿಯನ್ನು ವಂಚಿಸಿ, ವಿವಾಹವಾಗಿದ್ದಾನೆ. ಬಾಲಕಿಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಈತ ಆಕೆಯ ಅನಾರೋಗ್ಯ ಸರಿಪಡಿಸುವ ನಾಟಕ ಮಾಡಿದ್ದಾನೆ. ಕೊನೆಗೆ ಅವರ ಅಪ್ರಾಪ್ತ ಮಗಳನ್ನೇ ಮದುವೆಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಂಧ್ರ ಪ್ರದೇಶ: ಈಗ ಎಲ್ಲೆಡೆ ನಕಲಿ ಸ್ವಾಮಿಗಳದ್ದೇ (Fake Swamiji) ಕಾರುಬಾರು ಶುರುವಾಗಿದೆ. ತಾವು ದೇವರ (God) ಅವತಾರ ಎಂದು ಬಿಂಬಿಸುವ ಕೆಲ ನಕಲಿ ಸ್ವಾಮೀಜಿಗಳು, ಮಾಡಬಾರದ್ದು ಮಾಡಿ, ಮಾನ ಕಳೆದುಕೊಳ್ಳುತ್ತಿದ್ದಾರೆ. ಆಂಧ್ರಪ್ರದೇಶದ (Andhra Pradesh) ಅನಂತಪುರ (Ananthpur) ಜಿಲ್ಲೆಯಲ್ಲಿ ನಕಲಿ ಸ್ವಾಮೀಜಿಯೊಬ್ಬ ದೆವ್ವ-ಭೂತ ಬಿಡಿಸುವ ನೆಪದಲ್ಲಿ ಬಡ ಕುಟುಂಬವನ್ನು (Foor Family) ನಂಬಿಸಿದ್ದಾನೆ. ಕೊನೆಗೆ ಮಾಟ ಮಂತ್ರ (Black Magic) ಮಾಡಿ ಎಲ್ಲ ಸರಿಮಾಡಿದ್ದೇನೆ ಅಂತ ನಂಬಿಸಿ, ಆ ಕುಟುಂಬದ 16 ವರ್ಷದ ಅಪ್ರಾಪ್ತೆಯನ್ನು (Girl) ಈ 62 ವರ್ಷದ ವೃದ್ಧ ವಿವಾಹವಾಗಿದ್ದಾನೆ. ಕಪಟಿ ಸ್ವಾಮಿಯ ಕೃತ್ಯದ ಬಗ್ಗೆ ತಿಳಿದು ಸಾರ್ವಜನಿಕರೆಲ್ಲ ಬೆಚ್ಚಿ ಬಿದ್ದಿದ್ದಾರೆ.

ಅನಾರೋಗ್ಯ ಗುಣಪಡಿಸುವ ನಾಟಕವಾಡಿದ ನಕಲಿ ಸ್ವಾಮಿ

ಈ ಘಟನೆ ಶ್ರೀ ಸತ್ಯಸಾಯಿ ಪುಟ್ಟಪರ್ತಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ 62 ವರ್ಷದ ನಕಲಿ ಸ್ವಾಮೀಜಿಯೊಬ್ಬ 16 ವರ್ಷದ ಬಾಲಕಿಯನ್ನು ವಂಚಿಸಿ, ವಿವಾಹವಾಗಿದ್ದಾನೆ. ಬಾಲಕಿಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಈತ ಆಕೆಯ ಅನಾರೋಗ್ಯ ಸರಿಪಡಿಸುವ ನಾಟಕ ಮಾಡಿದ್ದಾನೆ. ಕೊನೆಗೆ ಅವರ ಅಪ್ರಾಪ್ತ ಮಗಳನ್ನೇ ಮದುವೆಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

16ರ ಬಾಲೆ ಮದುವೆಯಾದ 62ರ ಸ್ವಾಮೀಜಿ

ಶ್ರೀ ಸತ್ಯಸಾಯಿ ಜಿಲ್ಲೆಯ ಬುಕ್ಕಪಟ್ಟಣ ಮಂಡಲದ ಕೃಷ್ಣಾಪುರಂ ಗ್ರಾಮದಲ್ಲಿ ವೈಸಿಪಿ ಗ್ರಾಮ ಸಮಿತಿ ಅಧ್ಯಕ್ಷ ಜಯಕೃಷ್ಣ ಅಲಿಯಾಸ್ ಜಡಲ ಸ್ವಾಮಿ ಎಂಬ 62 ವರ್ಷದ ವೃದ್ಧನೊಬ್ಬ 16 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾನೆ. ಯಳ್ಳನೂರು ಮಂಡಲದ ಪಾತಪಾಲೆಂನ ಜಯಕೃಷ್ಣ ಅವರು ಕೆಲ ಕಾಲದ ಹಿಂದೆ ಕೃಷ್ಣಾಪುರ ಗ್ರಾಮಕ್ಕೆ ವಲಸೆ ಬಂದು ಇಲ್ಲಿ ಜಾಡಲ ಸ್ವಾಮಿಯಾಗಿ ಕ್ಷುದ್ರ ಪೂಜೆ ನೆರವೇರಿಸಿ ಪ್ರಸಿದ್ಧರಾಗಿದ್ದರು. ಪ್ರಸ್ತುತ, ಅವರು ವೈಎಸ್‌ಆರ್‌ಸಿಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿಯೂ ಮುಂದುವರಿದಿದ್ದಾರೆ.

ಇದನ್ನೂ ಓದಿ: Beef: ಮುಸ್ಲಿಂ ಹುಡುಗಿ ಮದ್ವೆಯಾದ ಹಿಂದೂ ಯುವಕ ಆತ್ಮಹತ್ಯೆ! ಗೋಮಾಂಸ ತಿನ್ನಿಸಿದ್ದಕ್ಕೆ ನೊಂದು ಸೂಸೈಡ್

ಅನಾರೋಗ್ಯ ಸರಿಪಡಿಸುವ ನೆಪದಲ್ಲಿ ಮದುವೆ

ರಾಪ್ತಾಡು ಮಂಡಲದ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಆರೋಗ್ಯ ಸರಿಯಿಲ್ಲ ಎಂದು ಜಡಲ ಸ್ವಾಮಿ ಬಳಿ ಕರೆತಂದರು. ಈ ವೇಳೆ ಜಡಲ ಸ್ವಾಮಿಯ ಕಣ್ಣು ಅವರ ಮಗಳ ಮೇಲೆ ಬಿತ್ತು. ಆಕೆಗೆ ದೆವ್ವ ಹಿಡಿದಿದೆಯೆಂದು ನಿಗೂಢ ಪೂಜೆಗಳನ್ನು ಮಾಡಿ ತನ್ನ ಪೂಜೆಯಿಂದಲೇ ಆಕೆಯ ಕಾಯಿಲೆ ವಾಸಿಯಾಗಿದೆ ಎಂದು ನಂಬಿದ್ದರು. ಮೂರು ತಿಂಗಳ ಹಿಂದೆ ಗುತ್ತು ಚಪ್ಪಡ ಅಲ್ಲದ ರಪಟು ಮಂಡಲದ ದೇವಸ್ಥಾನದಲ್ಲಿ ಹುಡುಗಿಯನ್ನು ಮದುವೆಯಾಗಿದ್ದಾನಂತೆ.

ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ನಕಲಿ ಸ್ವಾಮಿ ಎಸ್ಕೇಪ್

ಈ ವಿಷಯ ಬಾಲಕಿಯ ಅಕ್ಕ-ಪಕ್ಕದವರಿಗೆ ತಿಳಿದು ಐಸಿಡಿಎಸ್ ಪಿಡಿ ಶ್ರೀದೇವಿ ಅವರಿಗೆ ಕರೆ ಮಾಡಿ ದೂರು ನೀಡಿದ್ದರು. ಅದರೊಂದಿಗೆ ಐಸಿಡಿಎಸ್ ಸಿಡಿಪಿಒ ಧನಲಕ್ಷ್ಮಿ ಹಾಗೂ ರಾಪ್ತಾಡು ಎಸ್‌ಎಸ್‌ಐ ರಾಘವರೆಡ್ಡಿ ಗ್ರಾಮಕ್ಕೆ ತೆರಳಿ ತನಿಖೆ ಆರಂಭಿಸಿದರು. ಅಧಿಕಾರಿಗಳು ಫೀಲ್ಡಿಗಿಳಿದಿರುವ ವಿಷಯ ತಿಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಮುಖ ಆರೋಪಿ ಜಡಿಲ ಸ್ವಾಮಿ ಎಸ್ಕೇಪ್ ಆಗಿದ್ದಾನೆ ಅಂತ ತಿಳಿದು ಬಂದಿದೆ.

ಇದನ್ನೂ ಓದಿ: Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!

ಮದುವೆಯಾದ ಮಗಳಿದ್ದರೂ ಅಪ್ರಾಪ್ತೆ ಮೇಲೆ ಕಣ್ಣು!

ಜಡಲಸ್ವಾಮಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರಂತೆ. ಇನ್ನು ಈ ಪೈಕಿ ಓರ್ವ ಮಗಳಿಗೂ ಕೂಡ ಮದುವೆಯಾಗಿದೆಯಂತೆ. ಇನ್ನು ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಐಸಿಡಿಎಸ್ ಅಧಿಕಾರಿಗಳು ಬಾಲಕಿಯನ್ನು ಅನಂತಪುರದ ಉಜ್ವಲಾ ಹೋಮ್‌ಗೆ ಸ್ಥಳಾಂತರಿಸಿದ್ದಾರೆ. ಸದ್ಯ ಆರೋಪಿ ವೈಸಿಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಮುಂದುವರಿದಿದ್ದಾನೆ.
Published by:Annappa Achari
First published: