Danger School Bus: ಶಾಲಾ ಬಸ್‌ ಒಳಗೆ ಸಿಲುಕಿ ಬಾಲಕಿ ಸಾವು! ಹುಟ್ಟುಹಬ್ಬದ ದಿನವೇ ಉಸಿರು ಚೆಲ್ಲಿದ ಕಂದಮ್ಮ

4 ವರ್ಷದ ಬಾಲಕಿಯೋರ್ವಳು ಬರೋಬ್ಬರಿ 4 ಗಂಟೆಗಳ ಕಾಲ ಶಾಲಾ ಬಸ್ ಒಳಗೆ ಸಿಲುಕಿ, ಬಿಸಿ ಶಾಖದಿಂದ ಒದ್ದಾಡಿದ್ದಾಳೆ. ಕೊನೆಗೆ ಉಸಿರಾಡಲಾಗದೇ ಶಾಲಾ ಬಸ್‌ ಒಳಗೇ ಸಾವನ್ನಪ್ಪಿದ್ದಾಳೆ. ವಿಪರ್ಯಾಸ ಅಂದ್ರೆ ಆ ದಿನ ಆ ಕಂದಮ್ಮನ ಹುಟ್ಟಿದ ಹಬ್ಬ ಆಗಿದ್ದು, ಬರ್ತ್ ಡೇ ದಿನವೇ ಆಕೆಯ ಬಾಳಿನ ಕೊನೆ ದಿನವಾಗಿದೆ.

ಕತಾರ್‌ನಲ್ಲಿ ಮೃತಪಟ್ಟ ಭಾರತೀಯ ಮೂಲದ ಬಾಲಕಿ

ಕತಾರ್‌ನಲ್ಲಿ ಮೃತಪಟ್ಟ ಭಾರತೀಯ ಮೂಲದ ಬಾಲಕಿ

  • Share this:
ಕತಾರ್: ಶಾಲೆಗೆ (School) ಹೋದರೆ ಮಕ್ಕಳು ಸುರಕ್ಷಿತವಾಗಿರುತ್ತಾರೆ (Children Safe) ಅಂತ ಪೋಷಕರು (Parents) ಅಂದುಕೊಳ್ಳುತ್ತಾರೆ. ಮನೆಯಿಂದ ಹೊರಟು ಶಾಲೆಗೆ ಹೋದ ಮೇಲೆ ಮಕ್ಕಳು ಅಲ್ಲಿ ಸೇಫ್ ಆಗಿ ಇರುತ್ತಾರೆ ಅಂತ ಎಲ್ಲಾ ತಂದೆ ತಾಯಿಯರೂ (Father Mother) ಅಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಶಾಲಾ ವಾಹನಗಳೇ (School Vehicles) ಮಕ್ಕಳ ಪಾಲಿಗೆ ಯಮನಂತೆ ಆಗಿ ಬಿಡುತ್ತವೆ. ಇದಕ್ಕೆ ಉದಾಹರಣೆ ಎನ್ನುವಂತೆ ಕತಾರ್‌ನಲ್ಲಿ (Qatar) ಭಯಾನಕ ಘಟನೆಯೊಂದು ನಡೆದಿದೆ. ಕತಾರ್‌ನಲ್ಲಿ ನೆಲೆಸಿದ್ದ ಭಾರತೀಯ ಮೂಲದ ದಂಪತಿಯ 4 ವರ್ಷದ ಪುಟ್ಟ ಮಗಳು ಶಾಲಾ ಬಸ್‌ನಲ್ಲಿ (School Bus) ಉಸಿರು ಕಟ್ಟಿ (breathless) ಸಾವನ್ನಪ್ಪಿದ್ದಾಳೆ. ಬರೋಬ್ಬರಿ 4 ಗಂಟೆಗಳ ಕಾಲ ಬಾಲಕಿ ಬಸ್ ಒಳಗೆ ಸಿಲುಕಿ, ಬಿಸಿ ಶಾಖದಿಂದ (hot heat) ಒದ್ದಾಡಿದ್ದಾಳೆ. ಕೊನೆಗೆ ಉಸಿರಾಡಲಾಗದೇ ಶಾಲಾ ಬಸ್‌ ಒಳಗೇ ಸಾವನ್ನಪ್ಪಿದ್ದಾಳೆ. ವಿಪರ್ಯಾಸ ಅಂದ್ರೆ ಆ ದಿನ ಆ ಕಂದಮ್ಮನ ಹುಟ್ಟಿದ ಹಬ್ಬ (Birth Day) ಆಗಿದ್ದು, ಬರ್ತ್ ಡೇ ದಿನವೇ ಆಕೆಯ ಬಾಳಿನ ಕೊನೆ ದಿನವಾಗಿದೆ.

 ಹುಟ್ಟುಹಬ್ಬದಂದೇ ಸಾವನ್ನಪ್ಪಿದ ಬಾಲಕಿ

ಕೇರಳ ಮೂಲದ ಅಭಿಲಾಷ್ ಜಾಕೋಬ್ ಮತ್ತು ಸೌಮ್ಯಾ ದಂಪತಿಯ ಎರಡನೇ ಮಗಳು ಮಿನ್ಸಾ ಮರಿಯಮ್ ಜಾಕೋಬ್ ಎಂಬ ಪುಟ್ಟ ಬಾಲಕಿಯೇ ಮೃತ ದುರ್ದೈವಿ. ನಾಲ್ಕು ವರ್ಷದ ಮಿನ್ಸಾ ಮರಿಯಮ್ ಜಾಕೋಬ್ ತನ್ನ ಹುಟ್ಟುಹಬ್ಬದಂದು ಸೆಪ್ಟೆಂಬರ್ 11 ರ ಭಾನುವಾರದಂದು ಕತಾರ್‌ನಲ್ಲಿ ತನ್ನ ಶಾಲಾ ಬಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಿನ್ಸಾ ವಕ್ರಾದಲ್ಲಿ ಶಿಶುವಿಹಾರದಲ್ಲಿ ಓದುತ್ತಿದ್ದಳು. ಅದೇ ಶಾಲೆಯ ಬಸ್‌ನಲ್ಲಿಯೇ ಬಂಧಿಯಾಗಿ ಬಾಲಕಿ ಮೃತಪಟ್ಟಿದ್ದಾಳೆ.

ಸಾವನ್ನಪ್ಪಿದ ಬಾಲಕಿ


ಸ್ಕೂಲ್ ಬಸ್‌ನಲ್ಲಿ ನಿದ್ದೆ ಮಾಡುತ್ತಿದ್ದ ಬಾಲಕಿ

ಮಿನ್ಸಾ ಮರಿಯಮ್ ಜಾಕೋಬ್ ಭಾನುವಾರ ಬೆಳಿಗ್ಗೆ ತನ್ನ ಶಾಲಾ ಬಸ್‌ನಲ್ಲಿ ಶಾಲೆಗೆ ಹೋಗಿದ್ದಳು. ಹಿಂದೆ ಕುಳಿತಿದ್ದ ಆಕೆ ದಾರಿ ಮಧ್ಯೆಯೇ ನಿದ್ದೆ ಮಾಡಿದ್ದಾಳೆ. ಆದರೆ ಆಕೆ ನಿದ್ದೆ ಮಾಡಿದ್ದನ್ನು ಶಾಲಾ ಬಸ್ ಸಿಬ್ಬಂದಿ ಯಾರೂ ಗಮನಿಸಲಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಯಲ್ಲಿ ಇಳಿಸಿದ ಸಿಬ್ಬಂದಿ ಶಾಲಾ ವಾಹನವನ್ನು ಬಿಟ್ಟು ಹೋಗಿದ್ದಾರೆ.

ಇದನ್ನೂ ಓದಿ: Mobile Blast: ಮೊಬೈಲ್ ಚಾರ್ಜ್ ಹಾಕುವಾಗ ಹುಷಾರ್, ಬ್ಯಾಟರಿ ಸ್ಫೋಟಗೊಂಡು ಸಾವನ್ನಪ್ಪಿತು ಕಂದಮ್ಮ!

ಮಧ್ಯಾಹ್ನ ವಾಪಸ್ ಬರುವಾಗ ಪತ್ತೆಯಾದ ಮಗು

ಮಧ್ಯಾಹ್ನ ತರಗತಿಗಳು ಮುಗಿದ ನಂತರ ಚಾಲಕ ಮತ್ತು ಕಂಡಕ್ಟರ್ ಮಕ್ಕಳನ್ನು ಅವರ ಮನೆಗೆ ಬಿಡಲು ಹಿಂತಿರುಗಿದಾಗ, ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. ಕೂಡಲೇ ಆಕೆಯನ್ನು ವಕ್ರಾ ಆಸ್ಪತ್ರೆಗೆ ಕರೆದೊಯ್ದರೂ ಆಕೆಯನ್ನು ಉಳಿಸಲಾಗಲಿಲ್ಲ.

ಪೋಷಕರಿಗೆ ಸಾಂತ್ವನ


4 ಗಂಟೆಗಳ ಕಾಲ ಉಸಿರಾಡಲಾಗದೇ ಒದ್ದಾಟ

ಶಾಲೆಯಲ್ಲಿ ಬಸ್ ಇಳಿಸುತ್ತಿದ್ದಂತೆ ಬಾಲಕ ಹಾಗೂ ನಿರ್ವಾಹಕ ಶಾಲಾ ಬಸ್‌ನ ಕಿಟಕಿ, ಬಾಗಿಲುಗಳನ್ನು ಕ್ಲೋಸ್ ಮಾಡಿದ್ದಾರೆ. ಈ ವೇಳೆ ಬಾಲಕಿಗೆ ಉಸಿರಾಡಲು ಸಾಧ್ಯವಾಗಿಲ್ಲ. ಕತಾರ್‌ನಾದ್ಯಂತ ಗರಿಷ್ಠ ತಾಪಮಾನವು 36 ° C ಮತ್ತು 43 ° C ನಡುವೆ ಇತ್ತು ಎಂದು ಕತಾರ್ ಟ್ರಿಬ್ಯೂನ್ ವರದಿ ಮಾಡಿದೆ. ಇಂತಹ ವಾತಾವರಣದಲ್ಲಿ ಬಿಸಿಯಲ್ಲಿ ಬಾಲಕಿ 4 ಗಂಟೆಗಳ ಕಾಲ ಉಸಿರಾಡಲಾಗದೇ ಒದ್ದಾಡಿದ್ದಾಳೆ ಎನ್ನಲಾಗಿದೆ.ಮೃತದೇಹ ಕೇರಳಕ್ಕೆ ತರಲು ಕ್ರಮ

ಇನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಚಂಗನಾಶ್ಸೆರಿ ಮೂಲದ ಮಿನ್ಸಾ ಅವರ ಪೋಷಕರಾದ ಅಭಿಲಾಷ್ ಚಾಕೊ ಮತ್ತು ಸೌಮ್ಯ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಬಾಲಕಿಯ ಮೃತದೇಹವನ್ನು ಕೇರಳಕ್ಕೆ ತರಲು ದೋಹಾದಲ್ಲಿರುವ ಅನಿವಾಸಿಗಳ ಸಂಘಗಳು ಕ್ರಮ ಕೈಗೊಂಡಿವೆ.

ಇದನ್ನೂ ಓದಿ: Ear Cut: ಶಾಸಕರ ತಾಯಿಯ ಕಿವಿ ಕತ್ತರಿಸಿದ ದುಷ್ಕರ್ಮಿಗಳು! ಮನೆ ಮುಂದೆ ನಿಂತಿದ್ದವರ ಚಿನ್ನ ಕಸಿದು ಎಸ್ಕೇಪ್

ಬಾಲಕಿ ಸಾವಿಗೆ ವ್ಯಕ್ತವಾದ ಸಂತಾಪ

ಘಟನೆಯ ಕುರಿತು ತನಿಖೆಯನ್ನು ಪ್ರಕಟಿಸಿದ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವಾಲಯವು ಬಾಲಕಿಯ ಸಾವಿಗೆ ಸಂತಾಪ ಸೂಚಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ನ್ಯೂನತೆಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಿದೆ.
Published by:Annappa Achari
First published: