Tumor: ಮಹಿಳೆಯ ಹೊಟ್ಟೆಯಲ್ಲಿತ್ತು 4 ಕೆಜಿ ಫುಟ್‌ಬಾಲ್ ಗಾತ್ರದ ಗೆಡ್ಡೆ! ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

32 ವರ್ಷದ ನೇಪಾಳಿ ಮಹಿಳೆಯೊಬ್ಬಳಿಗೆ ಆಗಾಗ್ಗೆ ತನ್ನ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿತ್ತು. ಈ ನೋವನ್ನು ನಿಭಾಯಿಸಲು ಸಾಧ್ಯವಾಗದಿದ್ದಾಗ, ತನ್ನ ಹೊಟ್ಟೆಯೊಳಗೆ ಗಡ್ಡೆಯೊಂದು ಬೆಳೆಯುತ್ತಿದೆ ಅಂತ ಆಕೆಗೆ ಸಣ್ಣ ಸುಳಿವು ಸಹ ಇರಲಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲವೊಮ್ಮೆ ಈ ಗೆಡ್ಡೆಗಳು (Tumor) ನಮ್ಮ ದೇಹದಲ್ಲಿ ಅದರಲ್ಲೂ ಈ ಹೊಟ್ಟೆಯಲ್ಲಿ ನಮಗೆ ಅರಿವಿಲ್ಲದಂತೆಯೇ ಬೆಳೆದುಕೊಂಡಿರುತ್ತವೆ ಮತ್ತು ಅದರಿಂದ ನಮಗೆ ವಿಪರೀತ ಹೊಟ್ಟೆ ನೋವಾಗುವುದು (Pain) ಆಗುತ್ತಾ ಇರುತ್ತದೆ. ಇಲ್ಲಿಯೂ ಸಹ ಒಂದು ಘಟನೆಯಲ್ಲಿ ಮಹಿಳೆಯ ಹೊಟ್ಟೆಯಿಂದ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಕೆಜಿ ಭಾರ ಇರುವ ಫುಟ್‌ಬಾಲ್ ಗಾತ್ರದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಹೊರ ತೆಗೆದ್ದಿದ್ದಾರೆ ನೋಡಿ. 32 ವರ್ಷದ ನೇಪಾಳಿ ಮಹಿಳೆಯೊಬ್ಬಳಿಗೆ (Nepali Women) ಆಗಾಗ್ಗೆ ತನ್ನ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿತ್ತು. ಈ ನೋವನ್ನು ನಿಭಾಯಿಸಲು ಸಾಧ್ಯವಾಗದಿದ್ದಾಗ, ತನ್ನ ಹೊಟ್ಟೆಯೊಳಗೆ (Stomach) ಗಡ್ಡೆಯೊಂದು ಬೆಳೆಯುತ್ತಿದೆ ಅಂತ ಆಕೆಗೆ ಸಣ್ಣ ಸುಳಿವು ಸಹ ಇರಲಿಲ್ಲ.

ಕೆಲವು ದಿನಗಳ ನಂತರ ಗಡ್ಡೆ ಬೆಳೆಯುತ್ತಿದೆ ಅಂತ ಗೊತ್ತಾದಾಗ ಕಠ್ಮಂಡುವಿನ ಯಾವುದೇ ಆಸ್ಪತ್ರೆಯು ಅದನ್ನು ಹೊರತೆಗೆಯಲು ಧೈರ್ಯ ಮಾಡಲಿಲ್ಲ.

ಫುಟ್ಬಾಲ್ ಗಾತ್ರದ ಗೆಡ್ಡೆ
ನಂತರ ಅವಳು ದೆಹಲಿಗೆ ಬಂದಾಗ, ಹೆಚ್ಚಿನ ಆಸ್ಪತ್ರೆಗಳು ಸಹ ಜಾಗರೂಕವಾಗಿದ್ದವು. ಆದ್ದರಿಂದ ಸಿಕೆ ಬಿರ್ಲಾ ಆಸ್ಪತ್ರೆಯ ವೈದ್ಯರು ಈ ಶಸ್ತ್ರ ಚಿಕಿತ್ಸೆ ಮಾಡಲು ಒಪ್ಪಿದಾಗ, ಅವಳಿಗೆ ಸ್ವಲ್ಪ ಸಮಾಧಾನವಾಯಿತು. ಆದರೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರೇ ಸ್ವತಃ ಒಂದು ದೊಡ್ಡ ಆಶ್ಚರ್ಯಕ್ಕೆ ಒಳಗಾದರು. ಅವಳ ಹೊಟ್ಟೆಯಲ್ಲಿದ್ದ ಗೆಡ್ಡೆ ಸಾಮಾನ್ಯವಾದುದು ಆಗಿರಲಿಲ್ಲ, ಅದು ಫುಟ್ಬಾಲ್ ನ ಗಾತ್ರವನ್ನು ಹೊಂದಿತ್ತು, ಅದನ್ನು ಅವರು ಈಗ ಅಪರೂಪದ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತೆಗೆದು ಹಾಕಿದ್ದಾರೆ.

ಮೆಸೆಂಟೆರಿಕ್ ಗೆಡ್ಡೆಗಳು ಎಂದರೇನು?
ಸುಧಾರಿತ ಶಸ್ತ್ರಚಿಕಿತ್ಸಾ ವಿಜ್ಞಾನ ಮತ್ತು ಆಂಕಾಲಜಿ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕ ಡಾ.ಅಮಿತ್ ಜಾವೇದ್ ಅವರ ಪ್ರಕಾರ, ಗೆಡ್ಡೆಯು ಮೆಸೆಂಟೆರಿಕ್ ಆಗಿತ್ತು ಮತ್ತು ಎರಡು ತಿಂಗಳ ಹಿಂದೆ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಲಾಯಿತು ಮತ್ತು ರೋಗಿಯು ಈಗ ಮತ್ತೆ ಸಾಮಾನ್ಯ ಜೀವನವನ್ನು ಪುನರಾರಂಭಿಸಿದ್ದಾರೆ. ಮೆಸೆಂಟೆರಿಕ್ ಗೆಡ್ಡೆಗಳು ತುಂಬಾನೇ ಅಪರೂಪವಾಗಿರುತ್ತವೆ. "ಪೆರಿಟೋನಿಯಂ, ದುಗ್ಧರಸ ಅಂಗಾಂಶ, ಕೊಬ್ಬು ಮತ್ತು ಸಂಪರ್ಕ ಅಂಗಾಂಶಗಳಂತಹ ಯಾವುದೇ ಮೆಸೆಂಟೆರಿಕ್ ಘಟಕಗಳಿಂದ ದ್ರವ್ಯರಾಶಿಗಳು ಉದ್ಭವಿಸಬಹುದು" ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: Viral Video: ವೀಲ್ ಚೇರ್​ನಲ್ಲಿದ್ದ ಹುಡುಗನಿಗೆ ರೈಲು ಹತ್ತಲು ಸಹಾಯ ಮಾಡಿದ ಭದ್ರತಾ ಸಿಬ್ಬಂದಿ! ಹೃದಯಸ್ಪರ್ಶಿ ವಿಡಿಯೋ ವೈರಲ್

ಮುಂದುವರಿಯುತ್ತ ವೈದ್ಯರು, "ಸೆಲ್ಯುಲಾರ್ ಪ್ರಸರಣವು ಸಾಂಕ್ರಾಮಿಕ ಅಥವಾ ಉರಿಯೂತದ ಪ್ರಕ್ರಿಯೆಗಳಿಂದ ಸಹ ಉದ್ಭವಿಸಬಹುದು. ಅವುಗಳನ್ನು ಘನ ಅಥವಾ ಸಿಸ್ಟಿಕ್, ಹಾನಿಕಾರಕ ಅಥವಾ ಹಾನಿಕಾರಕವಲ್ಲದ ಎಂದು ವರ್ಗೀಕರಿಸಬಹುದು. ಮೆಸೆಂಟೆರಿಕ್ ಗೆಡ್ಡೆಗಳನ್ನು ಸಾಮಾನ್ಯವಾಗಿ ಪ್ರಾಸಂಗಿಕವಾಗಿ ಅಥವಾ ನಿರ್ದಿಷ್ಟವಲ್ಲದ ರೋಗಲಕ್ಷಣಗಳ ತನಿಖೆಯ ಸಮಯದಲ್ಲಿ ಕಂಡು ಹಿಡಿಯಲಾಗುತ್ತದೆ. ಗಾಯದ ಸ್ವಭಾವವನ್ನು ಅವಲಂಬಿಸಿ ಚಿಕಿತ್ಸಕ ನಿರ್ವಹಣಾ ಆಯ್ಕೆಗಳು ವ್ಯಾಪಕವಾಗಿ ಬದಲಾಗುತ್ತವೆ" ಎಂದು ಹೇಳುತ್ತಾರೆ.

ಈ ಬಗ್ಗೆ ರೋಗಿಯು ಏನು ಹೇಳಿದ್ದಾರೆ 
"ನನ್ನ ಸ್ಥಿತಿಯ ಬಗ್ಗೆ ತಿಳಿದಾಗ ನಾನು ಸಾಕಷ್ಟು ಚಿಂತಿತಳಾಗಿದ್ದೆ, ಕಠ್ಮಂಡುವಿನ ಮತ್ತು ದೆಹಲಿಯ ಹಲವಾರು ಆಸ್ಪತ್ರೆಗಳು ಗೆಡ್ಡೆಯ ಗಾತ್ರದ ಕಾರಣದಿಂದಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಒಪ್ಪಲಿಲ್ಲ. ತ್ವರಿತ ಚೇತರಿಕೆಯ ಬಗ್ಗೆ ನಾನು ತುಂಬಾ ಚಿಂತಿತಳಾಗಿದ್ದೆ ಮತ್ತು ಡಾ. ಜಾವೇದ್ ಅವರು ಗೆಡ್ಡೆಯನ್ನು ಕನಿಷ್ಠ ಗಾಯಗಳು ಮತ್ತು ನೋವಿನೊಂದಿಗೆ ತೆಗೆದು ಹಾಕಬಹುದು ಎಂದು ನನಗೆ ಭರವಸೆ ನೀಡಿದರು, ಇದು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಗ್ಗೆ ನನಗೆ ಆತ್ಮವಿಶ್ವಾಸವನ್ನು ನೀಡಿತು. ಶಸ್ತ್ರ ಚಿಕಿತ್ಸೆ ಆದ ನಂತರ ಚೇತರಿಸಿಕೊಳ್ಳಲು ನನಗೆ ನಾಲ್ಕು ದಿನಗಳು ಬೇಕಾಯಿತು ಮತ್ತು ಒಂದು ವಾರದ ನಂತರ ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು" ಎಂದು ರೋಗಿ ಹೇಳಿದರು.

ಹೊಟ್ಟೆಯಿಂದ ಗೆಡ್ಡೆ ತೆಗೆಯುವುದು ವೈದ್ಯರಿಗೆ ದೊಡ್ಡ ಸವಾಲೇ ಆಗಿತ್ತಂತೆ !
ವೈದ್ಯರು ಪರೀಕ್ಷೆಗಳನ್ನು ನಡೆಸಿದಾಗ ಮತ್ತು ಅವಳ ಸ್ಥಿತಿಯನ್ನು ಮೌಲ್ಯಮಾಪನ ಮಾಡಿದಾಗ, ಅವಳು 40 ಸೆಂಟಿ ಮೀಟರ್ ಉದ್ದದ 4 ಕೆಜಿ ಭಾರದ ಗೆಡ್ಡೆಯಿಂದ ಬಳಲುತ್ತಿದ್ದಳು. ಕರುಳನ್ನು ಸುರಕ್ಷಿತವಾಗಿ ಸಂರಕ್ಷಿಸುವಾಗ ಹೊಟ್ಟೆಯಿಂದ ಗೆಡ್ಡೆಯನ್ನು ತೆಗೆದು ಹಾಕುವುದು ಡಾ. ಜಾವೇದ್ ಮತ್ತು ಅವರ ತಂಡಕ್ಕೆ ದೊಡ್ಡ ಸವಾಲಾಗಿತ್ತು. ಈ ಶಸ್ತ್ರಚಿಕಿತ್ಸೆಯನ್ನು ಕೀಹೋಲ್ ಲ್ಯಾಪ್ರೋಸ್ಕೋಪಿ ತಂತ್ರದ ಮೂಲಕ ನಡೆಸಲಾಯಿತು ಮತ್ತು 4 ಕೆಜಿ ಗೆಡ್ಡೆಯನ್ನು ಶಿಶುಗಳ ಹೆರಿಗೆಗಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಾಮಾನ್ಯವಾಗಿ ಮಾಡಲಾದ ಪ್ಯಾನೆನ್ಸ್ಟಿಯಲ್ ಛೇದನದ ಮೂಲಕ ಹೊರತೆಗೆಯಲಾಯಿತು ಎಂದು ಡಾ.ಜಾವೇದ್ ಹೇಳಿದರು.

ಇದನ್ನೂ ಓದಿ: Delhi Kidney Racket: 3 ಈಡಿಯಟ್ಸ್ ಸಿನಿಮಾದಿಂದ ಪ್ರೇರಣೆ ಪಡೆದು ಕಿಡ್ನಿ ಕಸಿ ಕಳ್ಳಸಾಗಾಣಿಕೆ!

"ಇದು ತುಂಬಾ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯಾಗಿತ್ತು, ಏಕೆಂದರೆ ಗಡ್ಡೆಯ ದೊಡ್ಡ ಗಾತ್ರವು ಕಿಬ್ಬೊಟ್ಟೆಯ ಕುಹರವನ್ನು ಆಕ್ರಮಿಸಿತ್ತು, ಇದು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಮಾಡಲು ನಮಗೆ ಬಹಳ ಕಡಿಮೆ ಸ್ಥಳಾವಕಾಶವನ್ನು ನೀಡಿತು. ಇದಲ್ಲದೆ, ಗಡ್ಡೆಯು ತುಂಬಾ ದೊಡ್ಡದಾಗಿತ್ತು ಮತ್ತು ಭಾರವಾಗಿತ್ತು, ಇದರಿಂದಾಗಿ ಛೇದನವನ್ನು ಲ್ಯಾಪ್ರೋಸ್ಕೋಪಿಕ್ ಮಾಡಲು ಕಷ್ಟವಾಯಿತು" ಎಂದು ಡಾ. ಅಮಿತ್ ಹೇಳಿದ್ದಾರೆ.
Published by:Ashwini Prabhu
First published: