Boy Escape: 14ರ ಹುಡುಗನೊಂದಿಗೆ ನಾಲ್ಕು ಮಕ್ಕಳ ತಾಯಿಗೆ ಪ್ಯಾರ್, ಮಗನ ವಯಸ್ಸಿನವನೊಂದಿಗೆ ಓಡಿ ಹೋದ ಆಂಟಿ!

ಇದೊಂಥರಾ ವಿಚಿತ್ರ ಪ್ರಕರಣ. ಇಲ್ಲಿ 32 ವರ್ಷದ ಮಹಿಳೆಯೊಬ್ಬಳು ತನ್ನ ಎದುರು ಮನೆಯ 14 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಇದೀಗ ಇಬ್ಬರ ಮೊಬೈಲೂ ಸ್ವಿಚ್ಡ್ ಆಫ್ ಆಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೈದರಾಬಾದ್: ಪ್ರೀತಿಗೆ (Love) ಕಣ್ಣಿಲ್ಲ ಅಂತಾರೆ. ಪ್ರೀತಿಗೆ ಧರ್ಮ ಇಲ್ಲ, ಜಾತಿ ಮತವಿಲ್ಲ ಅಂತಾರೆ ಪ್ರೇಮಿಗಳು (Lovers). ಪ್ರೀತಿಗೆ ಲಿಂಗ (Gender) ತಾರತಮ್ಯವೂ ಇಲ್ಲ ಅಂತಾರೆ ಈಗಿನ ಆಧುನಿಕ ಲವರ್ಸ್ (Modern Lovers). ಇದೀಗ ಇಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಪ್ರೀತಿಗೆ ವಯಸ್ಸಿನ ಅಂತರವೂ ಇಲ್ಲ ಅಂತ ಮಹಿಳೆ ಸಾಬೀತು ಮಾಡಿದ್ದಾರೆ. ತನ್ನ ಮಗನ ವಯಸ್ಸಿನ ಅಪ್ರಾಪ್ತ ಬಾಲಕನೊಂದಿಗೆ (Boy) ಪ್ರೀತಿ ಪ್ರೇಮ ಅಂತ ಶುರು ಮಾಡಿಕೊಂಡಿದ್ದಾಳೆ. ಅಷ್ಟಕ್ಕೂ ಆ ಹುಡುಗನ ವಯಸ್ಸು ಕೇವಲ 14, ಆ ಮಹಿಳೆ ವಯಸ್ಸು 32! ಇದೀಗ ಇಬ್ಬರೂ ಎಸ್ಕೇಪ್ (Escape) ಆಗಿದ್ದು, ಮಹಿಳೆ ಬಾಲಕನನ್ನು (Boy) ಕಿಡ್ನಾಪ್ (Kidnap) ಮಾಡಿದ್ದಾಳೆ ಅಂತ ಹುಡುಗನ ಮನೆಯವರು ದೂರು (Complaint) ನೀಡಿದ್ದಾರೆ.  

14ರ ಹುಡುಗನ ಜೊತೆ 32 ವರ್ಷದ ಮಹಿಳೆ ಪರಾರಿ

ಇದೊಂಥರಾ ವಿಚಿತ್ರ ಪ್ರಕರಣ. ಇಲ್ಲಿ 32 ವರ್ಷದ ಮಹಿಳೆಯೊಬ್ಬಳು ತನ್ನ ಎದುರು ಮನೆಯ 14 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಆಂಧ್ರಪ್ರದೇಶ ರಾಜ್ಯದ ಗುಡುವಾಡ ಪಟ್ಟಣದ ಗುಡ್‌ಮೆನ್‌ ಪೇಟಾ ಎನ್ನುವ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಆಂಟಿ ಜೊತೆ ಸಂಬಂಧ ಹೊಂದಿದ್ದ 8ನೇ ತರಗತಿ ಹುಡುಗ

ಮಹಿಳೆಯನ್ನು 32 ವರ್ಷದ ಸ್ವಪ್ನಾ ಎಂದು ಗುರುತಿಸಲಾಗಿದೆ. ಈಕೆಗೆ ಮದುವೆಯಾಗಿ ನಾಲ್ವರು ಮಕ್ಕಳಿದ್ದಾರೆ ಎನ್ನಲಾಗಿದೆ. ಈ ಹುಡುಗ 8ನೇ ತರಗತಿ ಓದುತ್ತಿದ್ದು, ಮಹಿಳೆಯ ಎದುರು ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಈ ಹುಡುಗ ಮತ್ತು ಮಹಿಳೆ ಪ್ರೀತಿ, ಪ್ರೇಮ ಅಂತ ಅನೈತಿಕ ಸಂಬಂಧದಲ್ಲಿ ತೊಡಗಿದ್ದರು ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ: Suicide: 6 ವರ್ಷ ಹಿಂದೆ ತಂದೆ ಸೂಸೈಡ್, ಈಗ ತಾಯಿ ಮಗಳು ಆತ್ಮಹತ್ಯೆ! ಪರೀಕ್ಷೆ ಫೇಲ್ ಆಗಿದ್ದಕ್ಕೆ ದುಡುಕಿನ ನಿರ್ಧಾರ

ಮೊದಲು ಹುಡುಗ ನಾಪತ್ತೆ, ಬಳಿಕ ಮಹಿಳೆ ಎಸ್ಕೇಪ್

ಕೆಲ ದಿನಗಳ ಹಿಂದೆ ಬಾಲಕ ಮನೆಯಿಂದ ಹೊರಹೋಗಿದ್ದವ ಮನೆಗೆ ಬಂದಿರಲಿಲ್ಲ ಎನ್ನಲಾಗಿದೆ. ಮೊದಲು ಹುಡುಗ ಸ್ನೇಹಿತರ ಮನೆಗೆ ಹೋಗಿರಬಹುದು ಅಂತ ಮನೆಯವರು ಅಂದುಕೊಂಡಿದ್ದರು. ಆದರೆ ಆತನ ಮೊಬೈಲ್ ಸ್ವಿಚ್ಛ್ ಆಫ್ ಬರುತ್ತಿತ್ತು. ಅಲ್ಲದೇ ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ ಹೀಗಾಗಿ ಮನೆಯವರು ಗಾಬರಿಯಾಗಿದ್ದಾರೆ.

ಹೆಂಡತಿ ಕಾಣುತ್ತಿಲ್ಲ ಅಂತ ಗಂಡ ದೂರು

ಇದಾದ ಸ್ವಲ್ಪ ಸಮಯಕ್ಕೆ ಎದುರು ಮನೆಯ ಆಂಟಿಯೂ ಮನೆಯಿಂದ ನಾಪತ್ತೆಯಾಗಿದ್ದಾಳೆ. ಈಕೆಯ ಪತಿ ಪತ್ನಿ ನಾಪತ್ತೆ ಬಗ್ಗೆ ದೂರು ನೀಡಿದ್ರು. ಇತ್ತ ಹುಡುಗನೂ ನಾಪತ್ತೆಯಾಗಿರೋದ್ರಿಂದ ಎರಡೂ ಮನೆಯವರಿಗೆ ಅನುಮಾನ ಬಂದಿದೆ. ಆಗ ಇಬ್ಬರೂ ಜೊತೆಯಾಗೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಅಪಹರಣ ಪ್ರಕರಣ ದಾಖಲು

ಇನ್ನು ಮಹಿಳೆ ವಿರುದ್ಧ ಹುಡುಗನ ಕುಟುಂಬಸ್ಥರು ದೂರು ನೀಡಿದ್ದಾರೆ. ಬಾಲಕ ಅಪ್ರಾಪ್ತನಾಗಿರುವುದರಿಂದ ಮಹಿಳೆ ಮೇಲೆ ಪೊಲೀಸರು ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ. ನಾವು ಬಾಲಕ ಹಾಗೂ ಮಹಿಳೆ ಇರುವ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಮತ್ತು ಹುಡುಗ ಮತ್ತು ಮಹಿಳೆಯನ್ನು ಹುಡುಕಲು ವಿಶೇಷ ತಂಡಗಳನ್ನು ರಚಿಸಿದ್ದೇವೆ" ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Mother's Death: ಮಗುವಿಗೆ ಹಾಲುಣಿಸುತ್ತಿದ್ದಾಗಲೇ ತಾಯಿ ಸಾವು! ಕ್ರೂರಿ ವಿಧಿಯೇ ನಿನಗೆ ಕರುಣೆ ಇಲ್ಲವೇ?

ಹುಡುಗನ ಹುಡುಕಿಕೊಟ್ಟರೆ ಬಹುಮಾನ

ಹುಡುಗ ಮತ್ತು ಮಹಿಳೆ ನಡುವೆ ಬೇರೆ ರೀತಿಯ ಸಂಬಂಧ ಇದೆಯೇ, ಹಣಕ್ಕಾಗಿ ಬಾಲಕನನ್ನು ಅಪಹರಿಸಲಾಗಿದೆಯೇ ಅಥವಾ ಬೇರೆ ಕಾರಣಕ್ಕಾಗಿ ಅಪಹರಣ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕನನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ.
Published by:Annappa Achari
First published: