ಹೈದರಾಬಾದ್: ಆಟವಾಡುತ್ತಿದ್ದಾಗ ಕಾಲು ಜಾರಿ 120 ಅಡಿ ಬೋರ್ವೆಲ್ಗೆ ಬಿದ್ದಿದ್ದ 3 ವರ್ಷದ ಬಾಲಕ ಸಾಯಿ ವರ್ಧನ್ನನ್ನು ಉಳಿಸಿಕೊಳ್ಳುವ ಪ್ರಯತ್ನ ಸಫಲವಾಗಲಿಲ್ಲ. ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ.
ರೈತ ಗೋವರ್ಧನ್ ಎಂಬುವವರು ಕೃಷಿ ಚಟುವಟಿಕೆಗಾಗಿ ಬುಧವಾರ ಬೋರ್ವೆಲ್ ಅನ್ನು 120 ಅಡಿ ಅಗೆಸಿದ್ದರು. ಆದರೆ, ನೀರು ಲಭ್ಯವಾಗಿರಲಿಲ್ಲ. ಇದೇ ಬೋರ್ವೆಲ್ನಲ್ಲಿ ಇಂದು ಸಂಜೆ ಸ್ವತಃ ಅವರ ಮೂರು ವರ್ಷದ ಮಗನೇ ಬಿದ್ದು ಮೃತಪಟ್ಟಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಲಾಕ್ಡೌನ್ ರಜೆ ಇದ್ದ ಕಾರಣ ಮಗು ಸಾಯಿ ವರ್ಧನ್ ಕೆಲವು ದಿನಗಳ ಹಿಂದೆ ತನ್ನ ಅಜ್ಜಿಯ ಮನೆಗೆ ಬಂದಿದ್ದಾನೆ. ಆದರೆ, ದುರದೃಷ್ಟವಶಾತ್ ಇಂದು ಬೋರ್ವೆಲ್ ಬಳಿ ಆಡುತ್ತಿದ್ದಾಗ ಆಯತಪ್ಪಿ ಬೋರ್ವೆಲ್ ಒಳಗೆ ಬಿದ್ದಿದ್ದಾನೆ.
ಈ ಕುರಿತು ನ್ಯೂಸ್ 18 ಜೊತೆಗೆ ಮಾತನಾಡಿರುವ ಮಗು ಸಾಯಿ ವರ್ಧನ್ ತಾಯಿ ನವನಿತಾ "ನಾವು ಇಂದು ಬೆಳಿಗ್ಗೆ ಬೋರ್ವೆಲ್ ಅನ್ನು ಅಗೆಯಲು ಮೈದಾನಕ್ಕೆ ಬಂದಿದ್ದೆವು. ಮೊದಲ ಬಾರಿಗೆ ಬೋರ್ವೆಲ್ನಲ್ಲಿ ನೀರು ಸಿಗದಿದ್ದಾಗ ನಿರಾಶರಾಗಿದ್ದೆವು. ಹೀಗಾಗಿ ಯಾವುದೇ ಭದ್ರತಾ ಎಚ್ಚರಿಕೆಗಳನ್ನು ತೆಗೆದುಕೊಳ್ಳದೆ ಅದನ್ನು ಹಾಗೆ ಬಿಟ್ಟಿದ್ದೇವೆ.
ಅಲ್ಲದೆ ಎರಡನೇ ಬೋರ್ವೆಲ್ ಸಹ ಕೊರೆಸಲು ಮುಂದಾಗಿದ್ದೆವು. ಆದರೆ, ನನ್ನ ಮಗು ಅದೇ ಬೋರ್ವೆಲ್ನಲ್ಲಿ ಇಂದು ಆಟವಾಡುವಾಗ ಕಾಲು ಜಾರಿ ಬೀಳುತ್ತಾನೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ" ಎಂದು ತಿಳಿಸಿದ್ದರು. ತಮ್ಮ ಮಗುವನ್ನು ಉಳಿಸಿಕೊಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
ಮಗುವನ್ನು ರಕ್ಷಿಸಲು ನಿನ್ನೆ ರಾತ್ರಿಯಿಡೀ ನಿರಂತರ ಕಾರ್ಯಾರಣೆ ನಡೆಯಿತು. ಬೆಳಗ್ಗೆ 4ಗಂಟೆಗೆ ಮಗುವನ್ನು ಮೇಲಕ್ಕೆ ತರಲಾಯಿತು. ಆದರೆ, ದುರದೃಷ್ಟಕ್ಕೆ ಅಷ್ಟರಲ್ಲಾಗಲೇ ಮಗು ಕೊನೆಯುಸಿರೆಳೆದಾಗಿತ್ತು.
ಇದನ್ನೂ ಓದಿ : HAL Tejas: ಎರಡನೇ ಸ್ಕ್ವಾಡ್ರನ್ ಅಭಿವೃದ್ಧಿಪಡಿಸಿದ ಭಾರತೀಯ ಸೇನೆ; ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಮಹತ್ವದ ಅಂಶಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ