ಲಾಸ್ ಏಂಜಲೀಸ್: ಪ್ರತಿಯೊಬ್ಬರಿಗೂ ತಾವು ನೋಡುಗರ ಕಣ್ಣಿಗೆ ಸುಂದರವಾಗಿ ಕಾಣಬೇಕು ಅನ್ನೋ ಹಂಬಲ ಇರುತ್ತದೆ. ಅದಕ್ಕಾಗಿ ಸೌಂದರ್ಯವರ್ಧಕಗಳು ಸೇರಿದ ನಾನಾ ಬಗೆಯ ವಸ್ತುಗಳನ್ನು ಬಳಸಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುತ್ತಾರೆ. ಸೌಂದರ್ಯದ ವಿಷಯಕ್ಕೆ ಬಂದರೆ ಸ್ತ್ರೀಯರು ತುಸು ಹೆಚ್ಚೇ ಸೂಕ್ಷ್ಮಗ್ರಹಿಗಳಾಗಿರುತ್ತಾರೆ, ಹೀಗಾಗಿ ಸೌಂದರ್ಯವರ್ಧಕ ಚಿಕಿತ್ಸೆಗಳ ಮೊರೆ ಹೋಗುವವರ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.
ಆದರೆ ದೇಹಕ್ಕಾಗುವ ನಕರಾತ್ಮಕ ಪರಿಣಾಮಗಳ ಬಗ್ಗೆಯೂ ನಾವು ಎಚ್ಚರದಿಂದಿರಬೇಕು. ಅನೇಕ ಬಾರಿ ತಾವೇನೋ ಮಾಡಲು ಹೋಗಿ ಇನ್ನೇನೋ ಆಗಿ ಕುರೂಪಿಯಾಗಿ ಕಂಡವರೂ ಇದ್ದಾರೆ. ಮುಖ, ತುಟಿ, ಕಣ್ಣು, ಕೂದಲು ಸೇರಿದಂತೆ ನಾನಾ ಬಗೆಯ ಸೌಂದರ್ಯವರ್ಧಕಗಳನ್ನು ಬಳಸಿ ಕೈಸುಟ್ಟುಕೊಂಡಿರೋದು ಮಾತ್ರವಲ್ಲದೇ, ತಮ್ಮ ಬ್ಯೂಟಿಯನ್ನು ಕಳೆದುಕೊಂಡವೂ ಅನೇಕ ಮಂದಿ ಇದ್ದಾರೆ. ಇದಕ್ಕೆ ಉದಾಹರಣೆಯಂಬಂತೆ ಮತ್ತೊಂದು ಘಟನೆ ನಡೆದಿದೆ.
ಇದನ್ನೂ ಓದಿ: Lips Astrology: ತುಟಿ ಆಕಾರದಿಂದಲೂ ತಿಳಿಯಬಹುದು ವ್ಯಕ್ತಿಗಳ ಗುಣ, ಹೇಗೆ ಅಂತೀರಾ? ಇಲ್ಲಿದೆ ನೋಡಿ
ಯುವತಿ ಮಾಡ್ಕೊಂಡ ಯಡವಟ್ಟು!
ಲಾಸ್ ಏಂಜಲೀಸ್‌ನ 27 ವರ್ಷದ ಯುವತಿಯೊಬ್ಬರು ಟಿಕ್‌ಟಾಕ್‌ನಲ್ಲಿ ತನ್ನದೇ ಸಾವಿರಾರು ಫಾಲೋವರ್ಸ್‌ಗಳನ್ನು ಹೊಂದಿ ಜನಪ್ರಿಯಗೊಂಡಿದ್ದರು. ಸೋಶೀಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದರೆ ಸಹಜವಾಗಿಯೇ ಇನ್ನಿತರ ಕಂಪನಿಗಳು ತಮ್ಮ ಸಂಸ್ಥೆಯ ವಸ್ತುಗಳನ್ನು ಪ್ರಮೋಟ್ ಮಾಡುವಂತೆ ಟಿಕ್‌ಟಾಕರ್‌ಗಳನ್ನು ಪ್ರಚೋದಿಸುತ್ತವೆ. ಅನೇಕ ಇಂತಹ ಜಾಹೀರಾತನ್ನು ಒಪ್ಪಿಕೊಂಡರೆ ಇನ್ನೂ ಕೆಲವರು ಒಪ್ಪಿಕೊಳ್ಳೋದಿಲ್ಲ. ಆದರೆ ಈ ಯುವತಿ ಉಚಿತ ಕಾಸ್ಮೆಟಿಕ್ ಒಂದು ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನು ವೀಕ್ಷಕರಿಗೆ ತೋರಿಸಲು ಹೋಗಿ ತುಟಿಯೇ ದಪ್ಪಗಾಗಿ ಕೊರಗುತ್ತಿದ್ದಾಳೆ.
ಹೌದು.. ಜೆಸ್ಸಿಕಾ ಬುರ್ಕೋ (27) ಅನ್ನೋ ಅಮೆರಿಕಾದ ಯುವತಿ ಈ ಬಗ್ಗೆ ತನ್ನ ಟಿಕ್‌ಟಾಕ್ ಅಕೌಂಟ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ತುಟಿ ಊದಿಕೊಂಡು ವಿರೂಪಗೊಂಡಿರುವ ಬಗ್ಗೆ ಹೇಳಿದ್ದಾಳೆ. ‘ನಿನ್ನೆ ನಾನು ಲಿಪ್ಸ್ ಪ್ಲಾಸ್ಟಿಕ್ ಸರ್ಜರಿ ಮಾಡಲು ಹೋಗಿದ್ದೆ. ಆದರೆ ಇದ್ಯಾಕೋ ಆಗಬಾರದ್ದು ಆಗಿದೆ’ ಎಂದು ಬರೆದುಕೊಂಡಿದ್ದಾಳೆ. ಈ ಹಿಂದೆ 5 ಬಾರಿ ಇಂಜೆಕ್ಷನ್ ಮೂಲಕ ತುಟಿ ಟ್ರೀಟ್‌ಮೆಂಟ್ ಮಾಡಿಸಿಕೊಂಡಿದ್ದ ಜೆಸ್ಸಿಕಾಗೆ ಆಗ ಏನೂ ಆಗಿರಲಿಲ್ಲ. ಆದರೆ ಈ ಭಾರಿ ತುಟಿ ಕೆಂಪುಬಣ್ಣಕ್ಕೆ ತಿರುಗಿ ಊದುಕೊಂಡಿದೆ.
ಇದನ್ನೂ ಓದಿ: Beauty Tips: ಬೇಸಿಗೆಯಲ್ಲಿ ಒಣ ತುಟಿಗಳ ಆರೈಕೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್!
ಹಿಂದೆಂದೂ ನಂಗೆ ಹೀಗಾಗಿರಲಿಲ್ಲ
ಕಾಸ್ಮೆಟಿಕ್ ಇಂಜೆಕ್ಟಬಲ್ಸ್ ಕ್ಲಿನಿಕ್‌ನಲ್ಲಿ ಉಚಿತ ಕಾಸ್ಮೆಟಿಕ್ ವರ್ಕ್ ಮೂಲಕ ಲಿಪ್ಸ್ ಟ್ರೀಟ್‌ಮೆಂಟ್ ಮಾಡಿದ್ದು, ಇದು ಆಕೆಗೆ ತಿರುಗುಬಾಣವಾಗಿದೆ. ವೈದ್ಯರು ಆಕೆಗೆ ಉಚಿತವಾಗಿ ಲಿಪ್ಸ್ ಫಿಲ್ ಮಾಡೋದಾಗಿ ಹೇಳಿದ್ದರು. ಇದನ್ನು ಖುಷಿಯಿಂದಲೇ ಒಪ್ಪಿಕೊಂಡ ಆಕೆ ಇದೀಗ ನಿತ್ಯವೂ ದುಃಖ ಪಡುವಂತಾಗಿದೆ. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಜೆಸ್ಸಿಕಾ, ‘ನಾನು ಅನೇಕ ಬಾರಿ ಲಿಪ್ಸ್ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದೆ. ಆದರೆ ಈ ಬಾರಿ ಏನು ತಪ್ಪಾಗಿದೆ ಅನ್ನೋದೇ ನನಗೆ ತಿಳಿಯುತ್ತಿಲ್ಲ. ವೈದ್ಯರು ಆರಂಭಿಕ ಎಲ್ಲಾ ಟ್ರೀಟ್ಮೆಂಟ್ ಮುಗಿಸಿ ಕೊನೆಗೆ ತುಟಿಗೆ ಇಂಜೆಕ್ಷನ್ ಚುಚ್ಚಿದರು. ನಾನು ಕನ್ನಡಿಯಲ್ಲಿ ನೋಡಿದಾಗ ತುಟಿ ಊದಿಕೊಂಡಿತ್ತು. ಒಂದು ವರ್ಷದಿಂದ ಲಿಪ್ಸ್ ಸರ್ಜರಿ ಮಾಡಿಸದ ಕಾರಣ ಹೀಗಾಗಿರಬಹುದು ಎಂದು ಭಾವಿಸಿದೆ. ಆದರೆ ನಾನು ಕ್ಲಿನಿಕ್‌ನಿಂದ ಹೊರಟು ಮನೆಗ ಬಂದ ಮೇಲೂ ಊದಿಕೊಂಡಿದ್ದ ಪರಿಣಾಮ ನನಗೆ ಆತಂಕವಾಯಿತು ಎಂದು ಹೇಳಿಕೊಂಡಿದ್ದಾರೆ.
ಮರುದಿನ ವಾಪಸ್ ಕ್ಲಿನಿಕ್‌ಗೆ ಹೋಗಿದ್ದ ಜೆಸ್ಸಿಕಾ ಲಿಪ್ಸ್ ಫಿಲ್ಲರ್ ಕರಗಿಸಲು ವೈದ್ಯರ ಬಳಿ ಸೂಚಿಸಿದ್ದಾರೆ. ಈಗ ತುಟಿ ಊದುಕೊಂಡಿರೋದು ಸ್ವಲ್ಪ ಸುಧಾರಿಸುತ್ತಿದೆ ಎಂದು ತಿಳಿದು ಬಂದಿದೆ. ಈ ಘಟನೆ ನಡೆದ ಅನೇಕರು ಎಚ್ಚೆತ್ತುಕೊಂಡಿದ್ದು, ಉಚಿತ ತುಟಿ ಚಿಕಿತ್ಸೆಗೆ ಹೋಗುವ ಮೊದಲು ಅದರ ಬಗ್ಗೆ ಪೂರ್ತಿ ತಿಳಿದುಕೊಳ್ಳಬೇಕು. ಕೆಲವೊಮ್ಮೆ ಅಪಾಯವಾಗುವ ಸಾಧ್ಯತೆಗಳು ಇರುತ್ತವೆ ಎಂದೆಲ್ಲ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ