ಕೆಲಸದಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ಆಗಿರುವ ನಾಟಕವಾಡಿದ ಯುವಕನ ಬಂಧನ..!

ಪೊಲೀಸರಿಗೆ 19 ವರ್ಷದ ಯುವಕ ನನ್ನನ್ನು ಇಬ್ಬರು ವ್ಯಕ್ತಿಗಳು ಅಪಹರಣ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿ ನಗರದ ವಾಟರ್ ಟ್ಯಾಂಕ್ನಿಂದ ಅಪಹರಣ ಮಾಡಲಾಗಿದೆ. ನನ್ನ ತಂದೆ ನಗರದಾದ್ಯಂತ ಹಣವನ್ನು ಹೊಂದಿದ್ದಾರೆ ಎಂದು ಅಪಹರಣಕಾರರು ತನ್ನನ್ನು ಕಿಡ್ನ್ಯಾಪ್ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದನು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಸಣ್ಣ ವಿಚಾರಕ್ಕೆ ದೊಡ್ಡ ಸುಳ್ಳು ಹೇಳಿ ತದನಂತರ ದೊಡ್ಡ ಶಿಕ್ಷೆಯನ್ನು ಅನುಭವಿಸುವವರನ್ನು ನೋಡಿರುತ್ತೇವೆ. ಇಲ್ಲೊಬ್ಬ ಮಹಾಶಯ ಕೆಲಸದಿಂದ ತಪ್ಪಿಸಿಕೊಳ್ಳಲು ರಜೆ ಕೇಳುವ ಬದಲಾಗಿ ನನ್ನನ್ನು ಅಪಹರಣ ಮಾಡಿದ್ದಾರೆ ಎಂದು ನಾಟಕವಾಡಿ ಇದೀಗ ಜೈಲುಪಾಲು ಆಗಿದ್ದಾನೆ. ಜೊತೆಗೆ ಉದ್ಯೋಗ ನೀಡಿದ ಕಂಪನಿಯೂ ಕೂಡ ಈತನನ್ನು ಕೆಲಸದಿಂದ ತೆಗೆದುಹಾಕಿದ ಪ್ರಸಂಗ ನಡೆದಿದೆ. ಅಮೆರಿಕದ ಅರಿಜೋನಾ ನಗರದಲ್ಲಿರುವ ಕೂಲಿಡ್ಜ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವಕ ರಜೆ ಪಡೆಯಲು ತನ್ನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ನಾಟಕ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

  ಡೈಲಿ ಮೇಲ್ ಮೂಲಗಳ ಪ್ರಕಾರ, ದಿ ಟೈರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವಕ ಬ್ರಾಂಡನ್ ಸೌಲ್ಸ್ ಎಂಬಾತನೇ ಅಪರಹಣದ ನಾಟಕವಾಡಿ ಪೊಲೀಸರ ಅತಿಥಿಯಾಗಿದ್ದಾನೆ.

  ಯುವಕ ನಾಟಕ ಆಡಿದ್ದು ಹೇಗೆ?

  ಪೊಲೀಸರು ಹೊರಡಿಸಿದ ಮಾಧ್ಯಮ ಪ್ರಕಟಣೆಯಲ್ಲಿ ಈ ಘಟನೆಯು ಫೆ.10ರಂದು ನಡೆದಿದೆ. ಯುವಕನನ್ನು ಮುಖವಾಡ ಧರಿಸಿದ ಇಬ್ಬರು ವ್ಯಕ್ತಿಗಳು ಅಪಹರಿಸಿ, ಅವನ ತಲೆಗೆ ಹೊಡೆದು ವಾಹನದಲ್ಲಿ ಹಾಕಿಕೊಂಡು ಹೋಗಿ ಕಿಡ್ನ್ಯಾಪ್ ಮಾಡಿರುವಂತೆ ವಿಡಿಯೋ ಮಾಡಲಾಗಿತ್ತು.. ಈ ಮಾಹಿತಿ ಮತ್ತು ಲಭ್ಯವಿರುವ ವಿಡಿಯೋವನ್ನು ಆಧರಿಸಿ ಪೊಲೀಸ್ ಅಧಿಕಾರಿಗಳು ಯುವಕನನ್ನು ಕಾಪಾಡಲು ಹೆಚ್ಚಿನ ತನಿಖೆ ನಡೆಸಿದಾಗ ಬಾಲಕ ಕಿಡ್ನ್ಯಾಪ್ ಬಗ್ಗೆ ನಾಟಕ ಆಡಿರುವುದು ತಿಳಿದುಬಂದಿದೆ. ಯಾವುದೇ ಅಪಹರಣ ಹಾಗೂ ಹಲ್ಲೆ ಸಂಭವಿಸಿಲ್ಲ. ಸುಳ್ಳು ಅಪಹರಣ ನಾಟಕ ಆಡಿದ ಯುವಕನನ್ನು ಫೆಬ್ರವರಿ 17ರಂದು ಪೊಲೀಸರು ಬಂಧಿಸಿದ್ದಾರೆ.

  ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಲೆಕ್ಕಾಚಾರ ತಲೆಕೆಳಗು; ಜೆಡಿಎಸ್​ಗೆ ಒಲಿದ ಮೇಯರ್ ಪಟ್ಟ

  ಯುವಕ ಪೊಲೀಸರಿಗೆ ಕಿಡ್ನ್ಯಾಪ್ ಬಗ್ಗೆ ಹೇಳಿದ್ದೇನು?

  ಪೊಲೀಸರಿಗೆ 19 ವರ್ಷದ ಯುವಕ ನನ್ನನ್ನು ಇಬ್ಬರು ವ್ಯಕ್ತಿಗಳು ಅಪಹರಣ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿ ನಗರದ ವಾಟರ್ ಟ್ಯಾಂಕ್ನಿಂದ ಅಪಹರಣ ಮಾಡಲಾಗಿದೆ. ನನ್ನ ತಂದೆ ನಗರದಾದ್ಯಂತ ಹಣವನ್ನು ಹೊಂದಿದ್ದಾರೆ ಎಂದು ಅಪಹರಣಕಾರರು ತನ್ನನ್ನು ಕಿಡ್ನ್ಯಾಪ್ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದನು.

  ಕೂಲಿಡ್ಜ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಿಡ್ನ್ಯಾಪ್ ವಿಡಿಯೋದಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಿದ ಬಗ್ಗೆ ಸ್ಥಳದಲ್ಲಿ ಯಾವುದೇ ಪುರಾವೆ ಸಿಗದಾಗ ಈ ಪ್ರಕರಣದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು. ಫೆ.17ರಂದು ವಶಕ್ಕೆ ಪಡೆದ ಬಾಲಕನನ್ನು ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರಿಗೆ ಯುವಕ ತಾನು ಮಾಡುತ್ತಿರುವ ಕೆಲಸದಿಂದ ಹೊರಬರಲು ಈ ರೀತಿ ಮಾಡಿರುವುದಾಗಿ ಯುವಕ ಬಾಯಿಬಿಟ್ಟಿದ್ದಾನೆ.

  ಅಷ್ಟೇ ಅಲ್ಲದೇ ತನ್ನ ಬಾಯಿಯಲ್ಲಿ ಯುವಕ ಬಟ್ಟೆ ಇಟ್ಟುಕೊಂಡು ಬಳಿಕ ತನ್ನ ಸೊಂಟದ ಬೆಲ್ಟ್ ಅನ್ನು ಕೈಗಳಿಗೆ ಕಟ್ಟಿಕೊಂಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ
  Published by:Latha CG
  First published: