• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Bank Account Fraud: ನಿವೃತ್ತ ಪ್ರೊಫೆಸರ್ ಖಾತೆಯಿಂದ 47 ಲಕ್ಷ ಲಪಟಾಯಿಸಿದ 17 ರ ಯುವಕ! ಆತನ ಉಪಾಯಕ್ಕೆ ಬೆಚ್ಚಿಬಿದ್ದ ಪೊಲೀಸರು!

Bank Account Fraud: ನಿವೃತ್ತ ಪ್ರೊಫೆಸರ್ ಖಾತೆಯಿಂದ 47 ಲಕ್ಷ ಲಪಟಾಯಿಸಿದ 17 ರ ಯುವಕ! ಆತನ ಉಪಾಯಕ್ಕೆ ಬೆಚ್ಚಿಬಿದ್ದ ಪೊಲೀಸರು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಅಮಾಯಕರ ಹಾಗೂ ಹಿರಿಯರ ಖಾತೆಗಳಿಂದ ಹಣ ಲಪಟಾಯಿಸಿ ಮೋಜು ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹದೇ ಘಟನೆಯೊಂದು ಅಹಮದಾಬಾದ್ ಜಿಲ್ಲೆಯ ದಂಡುಕ ಹಳ್ಳಿಯಲ್ಲಿ ನಡೆದಿದ್ದು 17 ರ ಹರೆಯದ ಯುವಕನೊಬ್ಬ ಹಿರಿಯ ನಾಗರಿಕರ ಬ್ಯಾಂಕ್ ಖಾತೆಯಿಂದ ರೂ 47 ಲಕ್ಷ ಲಪಟಾಯಿಸಿದ್ದಾನೆ.

ಮುಂದೆ ಓದಿ ...
  • Share this:

ಇತ್ತೀಚಿನ ದಿನಗಳಲ್ಲಿ ಅಮಾಯಕರ ಹಾಗೂ ಹಿರಿಯರ ಖಾತೆಗಳಿಂದ (Bank Account) ಹಣ ಲಪಟಾಯಿಸಿ ಮೋಜು ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹದೇ ಘಟನೆಯೊಂದು ಅಹಮದಾಬಾದ್ ಜಿಲ್ಲೆಯ ದಂಡುಕ ಹಳ್ಳಿಯಲ್ಲಿ ನಡೆದಿದ್ದು 17 ರ ಹರೆಯದ ಯುವಕನೊಬ್ಬ (Young Man) ಹಿರಿಯ ನಾಗರಿಕರ ಬ್ಯಾಂಕ್ ಖಾತೆಯಿಂದ ರೂ 47 ಲಕ್ಷ ಲಪಟಾಯಿಸಿ (Grabbed) 10 ತಿಂಗಳ ಕಾಲ ಬಿಂದಾಸ್ ಜೀವನ ನಡೆಸಿದ್ದಾನೆ.


ಹತ್ತು ತಿಂಗಳಲ್ಲಿ ಮಿಲಿಯಾಧಿಪತಿಯಾದ ಯುವಕ


ಅಹಮದಾಬಾದ್‌ನ ದಂಡುಕದ ಹಳ್ಳಿಯವನಾದ 17 ರ ಯುವಕ ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಬಡಪಾಯಿಯಾಗಿದ್ದ ಹಾಗೂ ಜೇಬಲ್ಲಿ ಒಂದು ರೂಪಾಯಿ ಹಣವಿಲ್ಲದೆ ತಿರುಗಾಡುತ್ತಿದ್ದ.


ಆದರೆ ಕಳೆದ ಹತ್ತು ತಿಂಗಳಲ್ಲಿ ಯುವಕನಿಗೆ ಲಾಟರಿ ಹೊಡೆಯಿತೋ ಎಂಬಂತೆ ಆತ ಮೆರದಾಡತೊಡಗಿದ. ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ತಂಗುವುದು, ಗೋವಾದಲ್ಲಿ ರಜಾದಿನಗಳನ್ನು ಕಳೆಯುವುದು, ಐಷಾರಾಮಿ ಕಾರು ಖರೀದಿ ಅಂತೆಯೇ ಐಷಾರಾಮಿ ಬೈಕ್‌ಗಳಲ್ಲಿ ಸವಾರಿ ಹೀಗೆ ಆತ ಬರೇ ಹತ್ತು ತಿಂಗಳಲ್ಲಿ ಮಿಲಿಯಾಧಿಪತಿಯಾದ.


ಇದನ್ನೂ ಓದಿ: ಅಪ್ರಾಪ್ತ ಹುಡುಗಿಯ ಮದುವೆ ಮಾಡಿಸಿದ್ದಕ್ಕೆ ಅಮ್ಮನ ಮೇಲೆ ಕೇಸ್, ವರನಿಗೂ ಜೈಲೂಟ!


ಸಂಶಯದ ಬೆನ್ನು ಹತ್ತಿದ ಪೊಲೀಸರು


ಕೈಯಲ್ಲಿ ಬಿಡಿಗಾಸು ಇಲ್ಲದ ಯುವಕ ಒಮ್ಮಿಂದೊಮ್ಮೆಲೆ ಮಿಲಿಯಾಧಿಪತಿಯಾಗಿದ್ದನ್ನು ನೋಡಿ ಸಂಶಯ ಹೊಂದಿದ ಪೊಲೀಸರು ಆತನಿಗೆ ಗೊತ್ತಿಲ್ಲದಂತೆ ಹಿಂಬಾಲಿಸಿದರು. ಈ ಯುವಕ ಹಿರಿಯ ನಾಗರಿಕರ ಬ್ಯಾಂಕ್ ಖಾತೆಗೆ ಕನ್ನ ಹಾಕಿ ರೂ 47 ಲಕ್ಷ ಲಪಟಾಯಿಸಿದ್ದು ನಂತರ ಬೆಳಕಿಗೆ ಬಂದಿತು.


ಯುವಕ ರೂ 47 ಲಕ್ಷ ಹಣವನ್ನು ಹಿರಿಯರ ಬ್ಯಾಂಕ್ ಖಾತೆಯಿಂದ ಲಪಟಾಯಿಸಿದ್ದ


ಹಿರಿಯ ನಾಗರಿಕರ ಖಾತೆಯಿಂದ ಹಣ ಲೂಟಿ ಮಾಡಿದ ಯುವಕನ ಸಂಚಿಗೆ ಸ್ವತಃ ಪೊಲೀಸರೇ ಅಚ್ಚರಿಯಾಗಿದ್ದಾರೆ. ಕಳೆದ ಹತ್ತು ತಿಂಗಳಿನಿಂದ ಆತ ಕೋಟ್ಯಾಧಿಪತಿಯ ಜೀವನ ನಡೆಸುತ್ತಿದ್ದ.


ಕಾರು ಖರೀದಿಸಿ ಗೋವಾಕ್ಕೆ ಟ್ರಿಪ್ ಹೋಗಿದ್ದ ಅಂತೆಯೇ ರೂ 8 ಲಕ್ಷ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದ್ದ. ಯುವಕನಾಗಿದ್ದರೂ ಆತ ಖಾತೆಯಿಂದ ಹಣ ಲಪಟಾಯಿಸಲು ಮಾಡಿದ ಸಂಚು ಮಾತ್ರ ನಮ್ಮನ್ನೇ ಅಚ್ಚರಿಗೊಳಿಸಿತ್ತು ಎಂದು ಸೈಬರ್ ಕ್ರೈಮ್ ಪೊಲೀಸರು ತಿಳಿಸಿದ್ದಾರೆ.


ಆತನ ಜೀವನಶೈಲಿ ಸಂಶಯವುಂಟು ಮಾಡಿತ್ತು


ಆತನ ಜೀವನಶೈಲಿಯಲ್ಲಿ ಉಂಟಾಗಿದ್ದ ಬದಲಾವಣೆಗಳನ್ನು ನೋಡಿ ಆತನ ಅಕ್ಕಪಕ್ಕದ ಮನೆಯವರು ಸ್ವತಃ ಸೋಜಿಗಗೊಂಡಿದ್ದರು ಹಾಗೂ ಇಷ್ಟೊಂದು ಹಣ ಆತನಿಗೆ ಬಂದಿದ್ದಾದರೂ ಹೇಗೆ ಎಂದು ಆತನನ್ನೇ ಕೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಸಾಂಕೇತಿಕ ಚಿತ್ರ


ಈ ಹುಡುಗನ ತಂದೆ ಒಮ್ಮೊಮ್ಮೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಹಾಗೂ ಇವರೆಲ್ಲಾ ಜೋಪಡಿಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್ ವರದಿ ತಿಳಿಸಿದೆ.


ಸ್ನೇಹಿತರ ಬೆಂಬಲದಿಂದ ಬ್ಯಾಂಕ್ ಖಾತೆಗೆ ಕನ್ನ


ಆತನ ಜೀವನದಲ್ಲಾದ ಬದಲಾವಣೆಯನ್ನು ಸ್ವತಃ ಆತನ ಮನೆಯವರೇ ಗಮನಿಸಿದ್ದು ಯಾರೂ ಆತನನ್ನು ಪ್ರಶ್ನಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಯುವಕ ತನ್ನಿಬ್ಬರು ಗೆಳೆಯರಾದ ಚಿರಾಗ್ ಚಾವ್ಡಾ ಹಾಗೂ ವಿಜಯ್​ ಮಕ್ವಾನಾ ಅವರ ಸಹಾಯವನ್ನು ಪಡೆದುಕೊಂಡು ಹಿರಿಯರ ಬ್ಯಾಂಕ್ ಖಾತೆಯನ್ನು ಲೂಟಿ ಮಾಡುವ ಯೋಜನೆಯನ್ನು ಕೈಗೊಂಡರು ಎಂದು ತಿಳಿಸಿದ್ದಾರೆ.


ಸಾಂಕೇತಿಕ ಚಿತ್ರ


ಇದೀಗ ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದು ಯುವಕನನ್ನು ಜುವನೈಲ್ ಹೋಮ್‌ಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಈ ಇಬ್ಬರು ಗೆಳೆಯರು ಬ್ಯಾಂಕ್ ಖಾತೆಯನ್ನು ತೆರೆಯಲು ಯುವಕನಿಗೆ ನೆರವಾಗಿದ್ದು ಈ ಮೂಲಕ ವೃದ್ಧರ ಹಣವನ್ನು ಲಪಟಾಯಿಸಿದ್ದಾರೆ ಎಂದು ಸೈಬರ್ ಕ್ರೈಮ್‌ನ ಎಸಿಪಿ ಹಾರ್ದಿಕ್ ಮಕಾಡಿಯಾ ತಿಳಿಸಿದ್ದಾರೆ.


ನಿವೃತ್ತ ಪ್ರೊಫೆಸರ್ ಬ್ಯಾಂಕ್ ಖಾತೆಗೆ ಬಲೆ ಬೀಸಿದ್ದ ಯುವಕ ಹಾಗೂ ಆತನ ಗೆಳೆಯರು


ಕಳೆದ ಹತ್ತು ತಿಂಗಳಿನಿಂದ ವಡೋದರದ ನಿವೃತ್ತ ಪ್ರೊಫೆಸರ್ ನರೋತ್ತಮ್ ಪಟೇಲ್ ಅವರ ಖಾತೆಯಿಂದ ರೂ 47 ಲಕ್ಷ ಹಣವನ್ನು ಯುವಕ ಲಪಟಾಯಿಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.




ಪಟೇಲ್ 2018 ರಲ್ಲಿ ಯುಎಸ್‌ಗೆ ತೆರಳಿದ ನಂತರ ಅವರ ಬ್ಯಾಂಕ್ ಖಾತೆಗೆ ಸಂಪರ್ಕ ಹೊಂದಿದ್ದ ಮೊಬೈಲ್ ಸಂಖ್ಯೆ ಡಿಸ್‌ಕನೆಕ್ಟ್ ಆಗಿತ್ತು ಈ ನಂಬರ್ ಪಡೆದುಕೊಂಡಿದ್ದ ಯುವಕನಿಗೆ ಪಟೇಲ್ ಬ್ಯಾಂಕ್ ಖಾತೆಯೊಂದಿಗೆ ಸಂಖ್ಯೆ ಇನ್ನೂ ಲಿಂಕ್ ಆಗಿದೆ ಎಂಬುದು ಅರಿವಿಗೆ ಬಂದಿತ್ತು.


65 ಟ್ರಾನ್ಸಾಕ್ಶನ್ ನಡೆಸಿ ಹಣ ಲೂಟಿ

top videos


    ನಿವೃತ್ತ ಪ್ರೊಫೆಸರ್ ಖಾತೆಯಿಂದ ಹಣ ಲಪಟಾಯಿಸುವ ತಂತ್ರ ಹೆಣೆದಿದ್ದ ಯುವಕ ಚಾಲಾಕಿತನದಿಂದ ಪಟೇಲ್ ಅವರ ಬ್ಯಾಂಕ್ ಪಾಸ್‌ಬುಕ್ ಫೋಟೋವನ್ನು ಪಡೆದುಕೊಂಡಿದ್ದ ಅಂತೆಯೇ ಬೇರೆ ಬೇರೆ ಮೊತ್ತಗಳ 65 ಟ್ರಾನ್ಸಾಕ್ಶನ್‌ಗಳನ್ನು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    First published: