• Home
  • »
  • News
  • »
  • national-international
  • »
  • Shocking News: ಮಗಳ ಮೇಲೆಯೇ ಅತ್ಯಾಚಾರ ನಡೆಸಿದ ತಂದೆ! ಅಜ್ಜ, ಚಿಕ್ಕಪ್ಪನಿಂದಲೂ ಮಾನಗೇಡಿ ಕೃತ್ಯ!

Shocking News: ಮಗಳ ಮೇಲೆಯೇ ಅತ್ಯಾಚಾರ ನಡೆಸಿದ ತಂದೆ! ಅಜ್ಜ, ಚಿಕ್ಕಪ್ಪನಿಂದಲೂ ಮಾನಗೇಡಿ ಕೃತ್ಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2016 ಮತ್ತು 2018 ರ ನಡುವೆ ಉತ್ತರ ಪ್ರದೇಶದ ತನ್ನ ತವರು ಮನೆಯಲ್ಲಿದ್ದಾಗ, ತನ್ನ ಚಿಕ್ಕಪ್ಪನಿಂದ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಮತ್ತು ಅಜ್ಜ ಕಿರುಕುಳ ನೀಡಿದ್ದಾನೆ ಎಂದು ಹುಡುಗಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

  • Share this:

ಪುಣೆ, ಮಹಾರಾಷ್ಟ್ರ: ಅಪ್ಪ (Father) ಅಂದರೆ ಆಕಾಶ (Sky) ಅಂತಾರೆ. ಅಮ್ಮ (Mother) ಪ್ರೀತಿಯಿಂದ ಮಕ್ಕಳನ್ನು (Children) ಪಾಲನೆ ಪೋಷಣೆ ಮಾಡಿದ್ರೆ, ತಂದೆ ಈ ಮಕ್ಕಳು, ಹೆಂಡತಿ ಸೇರಿದಂತೆ ಇಡೀ ಫ್ಯಾಮಿಲಿಯನ್ನು(Family) ರಕ್ಷಣೆ ಮಾಡುತ್ತಾನೆ. ಮಕ್ಕಳು ಏನಾದರೂ ಕಷ್ಟ ಬಂದರೆ ತಂದೆ ತಾಯಿ ಬಳಿಯೇ ಹೇಳಿಕೊಳ್ಳುತ್ತಾರೆ. ಆದರೆ ಇಲ್ಲಿ ಅಪ್ಪನೇ ಅಪ್ರಾಪ್ತ ಮಗಳ ಪಾಲಿಗೆ ವಿಲನ್ (Vilan) ಆಗಿದ್ದ. ಮಗಳೂ ಎನ್ನುವುದನ್ನೂ ನೋಡದೇ ಆ ಪಾಪಿ ಅಪ್ರಾಪ್ತೆಯ ಮೇಲೆಯೇ ಅತ್ಯಾಚಾರ ಮಾಡ್ತಾ ಇದ್ದ. ಅಷ್ಟೇ ಅಲ್ಲದೇ ಆ ಅಪ್ರಾಪ್ತೆಯ ಅಜ್ಜ ಕೊನೆಗೆ ಚಿಕ್ಕಪ್ಪ ಕೂಡ ಆಕೆ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾರಂತೆ!


ಅಪ್ರಾಪ್ತೆ ಮೇಲೆ ಅಪ್ಪ, ಅಜ್ಜ, ಚಿಕ್ಕಪ್ಪನಿಂದ ಅತ್ಯಾಚಾರ


ಇಂಥದ್ದೊಂದು ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಕಾಲೇಜ್ ಓದುತ್ತಿರುವ 16 ವರ್ಷದ ಅಪ್ರಾಪ್ತೆ ತನ್ನ ತಂದೆ, ಅಜ್ಜ ಹಾಗೂ ಚಿಕ್ಕಪ್ಪ ತನ್ನ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾರೆ ಅಂತ ಆರೋಪಿಸಿದ್ದಾಳೆ. ತಾನು ಪ್ರಸ್ತುತ ಓದುತ್ತಿರುವ ಪುಣೆಯಲ್ಲಿರುವ ತನ್ನ ಕಾಲೇಜಿನಲ್ಲಿ ಲೈಂಗಿಕ ಕಿರುಕುಳದ ಕುರಿತು ವಿಶಾಖಾ ಸಮಿತಿಯ ಸದಸ್ಯರ ಮುಂದೆ ಬಾಲಕಿ ಇತ್ತೀಚೆಗೆ ತನಗಾದ ಕಷ್ಟವನ್ನು ವಿವರಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.


ಪೊಲೀಸರಿಂದ ಆರೋಪಿ ತಂದೆ ಬಂಧನ


2016 ರಿಂದ 2018 ರವರೆಗೆ ಹಲವಾರು ಸಂದರ್ಭಗಳಲ್ಲಿ ತನ್ನ ತಂದೆ, ಚಿಕ್ಕಪ್ಪ ಮತ್ತು ಅಜ್ಜನಿಂದ ಅತ್ಯಾಚಾರವೆಸಗಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಮೂಲದ 17 ವರ್ಷದ ಬಾಲಕಿ ಆರೋಪಿಸಿದ್ದಾಳೆ. ಈಕೆ ನೀಡಿದ ದೂರಿನ ಆಧಾರದ ಮೇಲೆ ಪುಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕಿಯ ದೂರಿನ ಆಧಾರದ ಮೇಲೆ ಆಕೆಯ 49 ವರ್ಷದ ತಂದೆಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Chennai Thief: ಶ್ರೀಮಂತರ ಮನೆಗೆ ಕನ್ನ, ಕದ್ದ ವಸ್ತು ಬಡವರಿಗೆ ದಾನ! ಕೊನೆಗೂ ಬಲೆಗೆ ಬಿದ್ದ 'ಒಳ್ಳೆ ಕಳ್ಳ'!


2016ರಿಂದ 2018ರವರೆಗೆ ನಿರಂತರ ಅತ್ಯಾಚಾರ


2016 ಮತ್ತು 2018 ರ ನಡುವೆ ಉತ್ತರ ಪ್ರದೇಶದ ತನ್ನ ತವರು ಮನೆಯಲ್ಲಿದ್ದಾಗ, ತನ್ನ ಚಿಕ್ಕಪ್ಪನಿಂದ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಮತ್ತು ಅಜ್ಜ ಕಿರುಕುಳ ನೀಡಿದ್ದಾನೆ ಎಂದು ಹುಡುಗಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪ ಮಾಡಿದ ಮಗಳ ಮೇಲೆಯೇ ತಂದೆಯಿಂದ ರೇಪ್


ಏಪ್ರಿಲ್ 2018 ರಲ್ಲಿ, ಪುಣೆಗೆ ಹಿಂದಿರುಗಿದ ನಂತರ, ಹುಡುಗಿ ತನ್ನ ತಂದೆಗೆ ಉತ್ತರ ಪ್ರದೇಶದಲ್ಲಿ ತನ್ನೊಂದಿಗೆ ನಡೆದ ಘಟನೆಗಳ ಬಗ್ಗೆ ವಿವರವಾದ ಪತ್ರವನ್ನು ಬರೆದಳು. ಆದರೆ ತಂದೆ ಈ ಪತ್ರಕ್ಕೆ ಸ್ಪಂದನೆಯನ್ನೇ ನೀಡಲಿಲ್ಲ. ವಯಸ್ಸಾದ ತಾತ ಹಾಗೂ ಚಿಕ್ಕಪ್ಪನನ್ನು ವಿಚಾರಿಸುವ ಬದಲು ಆತ ಮಗಳಿಗೇ ಹಿಂಸಿಸ ತೊಡಗಿದೆ. ಆಕೆಯ ತಾಯಿ ನವೆಂಬರ್ 5, 2022 ರವರೆಗೆ ಮನೆಯಲ್ಲಿ ಇಲ್ಲದಿದ್ದಾಗ ಹಲವಾರು ಸಂದರ್ಭಗಳಲ್ಲಿ ತಂದೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಕಾಲೇಜ್‌ನಲ್ಲಿ ಹೇಳಿಕೊಂಡ ಸಂತ್ರಸ್ತೆ


ತಾನು ಪ್ರಸ್ತುತ ಓದುತ್ತಿರುವ ಪುಣೆಯಲ್ಲಿರುವ ತನ್ನ ಕಾಲೇಜಿನಲ್ಲಿ ಲೈಂಗಿಕ ಕಿರುಕುಳದ ಕುರಿತು ವಿಶಾಖಾ ಸಮಿತಿಯ ಸದಸ್ಯರ ಮುಂದೆ ಬಾಲಕಿ ಇತ್ತೀಚೆಗೆ ತನಗಾದ ನರಳಾಟವನ್ನು ವಿವರಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.


ಇದನ್ನೂ ಓದಿ: Convict of Rajiv Gandhi: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಿರಪರಾಧಿ ಎಂದು ಸಮರ್ಥಿಸಿಕೊಂಡ ನಳಿನಿ


ಬಾಲಕಿ ಮಾಡಿದ ಆರೋಪದ ಅನ್ವಯ ತನಿಖೆ


ಈ ಸಂಬಂಧ ಬುಧವಾರ ಪುಣೆ ನಗರದ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Published by:Annappa Achari
First published: