Poison: ಇಷ್ಟು ಪುಟ್ಟ ಕಾರಣಕ್ಕೆ ಮಗಳ ಸಹಪಾಠಿಗೇ ವಿಷವುಣಿಸಿದ ತಾಯಿ, ನರಳಾಡಿ ಸತ್ತ ಬಾಲಕ!

ಮಕ್ಕಳ ಮಕ್ಕಳ ಮಧ್ಯೆ ಈ ಪರೀಕ್ಷೆಗಳಲ್ಲಿ ಅಂಕಗಳು ಗಳಿಸುವ ಪೈಪೋಟಿ ಆರೋಗ್ಯಕರವಾಗಿರುವುದು ಒಳ್ಳೆಯದು. ಆದರೆ ಕೆಲವೊಬ್ಬರು ಅದನ್ನೇ ತುಂಬಾ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇಲ್ಲಿ ನೋಡಿ ಹೀಗೆ ಶಾಲೆಯಲ್ಲಿನ ರ‍್ಯಾಂಕ್‌ ಸಲುವಾಗಿ ಎಂತಹ ಘನಘೋರ ಅಪರಾಧವನ್ನು ಈ ತಾಯಿ ಎಸಗಿದ್ದಾಳೆ ಅಂತ.

ಸಗಯಾರಾಣಿ ಮತ್ತು ಬಾಲಾ ಮಣಿಗಂಧನ್

ಸಗಯಾರಾಣಿ ಮತ್ತು ಬಾಲಾ ಮಣಿಗಂಧನ್

  • Share this:
ಎಲ್ಲರಿಗೂ ನಾವು ಶಾಲೆಯಲ್ಲಿ (School), ಕಾಲೇಜಿನಲ್ಲಿ (College) ಎಲ್ಲರಿಗಿಂತಲೂ ಮುಂದೆ ಇರಬೇಕು ಅಂತ ಅನ್ನಿಸುವುದು ಸಹಜ. ಆದರೆ ಎಲ್ಲರಿಗೂ ಸಮಾನವಾದ ಬುದ್ದಿವಂತಿಕೆ (Intelligence), ವಿಷಯದ ಗ್ರಹಿಕೆ ಸಾಮರ್ಥ್ಯ ಇರುವುದಿಲ್ಲ ಎಂಬುದನ್ನು ಪೋಷಕರು (Parents) ಮಕ್ಕಳಿಗೆ ಅರ್ಥ ಮಾಡಿಸಬೇಕು. ಎಂದರೆ ನಮ್ಮ ಬುದ್ದಿವಂತಿಕೆ ಇಷ್ಟೇ ಅಂತ ಮೊದಲೇ ಸೋಲನ್ನು ಒಪ್ಪಿಕೊಳ್ಳುವುದಲ್ಲ. ಪ್ರಮಾಣಿಕ ಪ್ರಯತ್ನ ನಮ್ಮದಾಗಿರಬೇಕು ಮತ್ತು ಫಲಿತಾಂಶದ (Result) ಬಗ್ಗೆ ನಾವು ಅಷ್ಟಾಗಿ ತಲೆ ಕೆಡಿಸಿಕೊಳ್ಳಬಾರದು. ಶಾಲೆಯಲ್ಲಿ ಅಥವಾ ಬದುಕಿನಲ್ಲಿ ನಮ್ಮ ಜೀವನವನ್ನು ಬೇರೆಯವರೊಂದಿಗೆ ಹೋಲಿಕೆ (comparison) ಮಾಡಿಕೊಂಡು ನೋಡಲು ಹೋಗಬಾರದು. ಶಾಲೆಯಲ್ಲಿ ಶುರುವಾಗುವ ಚಿಕ್ಕ ಚಿಕ್ಕ ವಿಷಯಗಳಲ್ಲಿರುವ ಪೈಪೋಟಿಗಳು ಸದಾ ಆರೋಗ್ಯಕರವಾಗಿರುವುದು ಒಳ್ಳೆಯದು.

ಮಕ್ಕಳ ಮಕ್ಕಳ ಮಧ್ಯೆ ಈ ಪರೀಕ್ಷೆಗಳಲ್ಲಿ ಅಂಕಗಳು ಗಳಿಸುವ ಪೈಪೋಟಿ ಆರೋಗ್ಯಕರವಾಗಿರುವುದು ಒಳ್ಳೆಯದು. ಆದರೆ ಕೆಲವೊಬ್ಬರು ಅದನ್ನೇ ತುಂಬಾ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇಲ್ಲಿ ನೋಡಿ ಹೀಗೆ ಶಾಲೆಯಲ್ಲಿನ ರ‍್ಯಾಂಕ್‌ ಸಲುವಾಗಿ ಎಂತಹ ಘನಘೋರ ಅಪರಾಧವನ್ನು ಈ ತಾಯಿ ಎಸಗಿದ್ದಾಳೆ ಅಂತ.

ಬಾಲಕನ ಸಹಪಾಠಿಯ ತಾಯಿಯಿಂದ ವಿಷಪ್ರಾಶನ
13 ವರ್ಷದ ಬಾಲಕನೊಬ್ಬ ತನ್ನ ಸಹಪಾಠಿಯ ತಾಯಿಯಿಂದ ವಿಷಪ್ರಾಶನಕ್ಕೊಳಗಾದ ಆಘಾತಕಾರಿ ಘಟನೆ ಪುದುಚೇರಿಯ ಕಾರೈಕಲ್ ನಲ್ಲಿ ನಡೆದಿದೆ. ಬಾಲಕ ಬಾಲಾ ಮಣಿಗಂಧನ್ ತೀವ್ರವಾಗಿ ವಾಂತಿ ಮಾಡಿಕೊಂಡ ನಂತರ ಅವನನ್ನು ಸ್ಥಳೀಯ ಆಸ್ಪತ್ರೆಗೆ ಅವನ ಪೋಷಕರು ದಾಖಲಿಸಿದ್ದರು. ಆದರೆ ಸೆಪ್ಟೆಂಬರ್ 3ನೇ ತಾರೀಖು ಎಂದರೆ ಶನಿವಾರದಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಬಾಲಕನ ಪೋಷಕರು ಕಾರೈಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಪೊಲೀಸರು ಅವನ ಸಹಪಾಠಿಯ ತಾಯಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಏನಿದು ಪ್ರಕರಣ?

ಬಾಲಾ ಕಾರೈಕಲ್ ನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದನು. ಅವನು ರಾಜೇಂದ್ರನ್ ಮತ್ತು ಮಾಲತಿ ಅವರ ಎರಡನೇ ಮಗ, ಅವರಿಗೆ ಒಬ್ಬ ಮಗಳು ಮತ್ತು ಇನ್ನೊಬ್ಬ ಮಗನಿದ್ದಾನೆ. ಶಾಲೆಯ ವಾರ್ಷಿಕ ದಿನವು ಹತ್ತಿರ ಬರುತ್ತಿತ್ತು ಮತ್ತು ಬಾಲಾ ಅವರು ಶಾಲೆಯಲ್ಲಿ ಪೂರ್ವಾಭ್ಯಾಸ ಮಾಡುತ್ತಿದ್ದ ಪ್ರದರ್ಶನಗಳಲ್ಲಿ ಒಂದರ ಭಾಗವಾಗಿದ್ದರು. ಪೂರ್ವಾಭ್ಯಾಸದ ಸಮಯದಲ್ಲಿ, ಶಾಲೆಯಲ್ಲಿರುವ ವಾಚ್‌ಮನ್ ನೀಡಿದ ತಂಪು ಪಾನೀಯವನ್ನು ಅವನು ಕುಡಿದಿದ್ದು, ಅದನ್ನು ಅವನ ಪೋಷಕರು ಸಂಬಂಧಿಕರ ಮೂಲಕ ನೀಡಿಎಉವುದಾಗಿ ಹೇಳಿದ್ದಾನೆ. 13 ವರ್ಷದ ಬಾಲಕ ಬ್ಯಾಗ್ ನಿಂದ ಪಾನೀಯವನ್ನು ಸೇವಿಸಿ ರಿಹರ್ಸಲ್ ಮುಗಿದ ನಂತರ ಮನೆಗೆ ಹೋಗಿದ್ದ.

ಇದನ್ನೂ ಓದಿ:  Baby Elephant: ಕಾಡಿನಿಂದ ನಾಡಿಗೆ ಬಂದು ಮಕ್ಕಳ ಜೊತೆ ಆಟವಾಡಿದ ಮರಿ ಆನೆ! ಎಷ್ಟು ಮುದ್ದಾಗಿದೆ ನೋಡಿ

ಮನೆಗೆ ತಲುಪಿದ ನಂತರ, ಬಾಲಾ ತನ್ನ ತಾಯಿಯನ್ನು ಶಾಲೆಯಲ್ಲಿ ವಾಚ್‌ಮನ್ ಗೆ ತಂಪು ಪಾನೀಯಗಳನ್ನು ನೀಡಿದವರು ಯಾರು ಎಂದು ಕೇಳಿದರು. ಬಳಿಕ ಅವನು ವಾಂತಿ ಮಾಡಲು ಪ್ರಾರಂಭಿಸಿದ್ದಾನೆ. ಕೂಡಲೇ ಅವನ ಪೋಷಕರು ಅವನನ್ನು ಕಾರೈಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ರಾಜೇಂದ್ರನ್ ಮತ್ತು ಮಾಲತಿ ಅವರು ರಿಹರ್ಸಲ್ ಸಮಯದಲ್ಲಿ ಏನಾಯಿತು ಎಂದು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರು ಮತ್ತು ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಯಿತು.

ಅವನ ಸಹಪಾಠಿಯ ತಾಯಿ ಸಗಾಯರಾಣಿ ವಿಕ್ಟೋರಿಯಾ, ತಂಪು ಪಾನೀಯಗಳಿರುವ ಬಿಳಿ ಚೀಲವನ್ನು ವಾಚ್‌ಮನ್ ಗೆ ನೀಡಿದ್ದರು ಎಂದು ಸಿಸಿಟಿವಿ ವಿಡಿಯೋ ತುಣುಕುಗಳು ಬಹಿರಂಗಪಡಿಸಿವೆ. ಅವಳು ವಾಚ್‌ಮನ್ ನನ್ನು ಬಾಲಾಗೆ ಪಾನಿಯವನ್ನು ನೀಡುವಂತೆ ಕೇಳಿದಳು, ಅವಳು ಅವನ ಸಂಬಂಧಿ ಎಂದು ಹೇಳಿದಳು.

ಸರಿಯಾದ ಚಿಕಿತ್ಸೆ ನೀಡದ ಕಾರಣ ಬಾಲಕ ಸಾವು
ಸಗಯಾರಾಣಿ ಅವರ ಮಗಳು ಮತ್ತು ಬಾಲಾ ಅವರ ನಡುವೆ ಪೈಪೋಟಿ ಇದೆ ಮತ್ತು ಇಬ್ಬರ ನಡುವೆ ಸಂಘರ್ಷವಿದೆ ಎಂದು ಬಾಲಾ ಅವರ ಪೋಷಕರು ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದರು. ಸಗಯಾರಾಣಿ ತನ್ನ ಮಗಳು ತರಗತಿಯಲ್ಲಿ ಪ್ರಥಮ ರ‍್ಯಾಂಕ್‌ ಪಡೆಯಲು ಬಾಲಾಗೆ ತಂಪು ಪಾನೀಯದಲ್ಲಿ ವಿಷ ಹಾಕಿ ನೀಡಿದ್ದಾಳೆ ಎಂದು ಅವನ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: Sister Suicide: ಗೌರಿ ತರೋ ವಿಚಾರಕ್ಕೆ ಗಲಾಟೆ, ತಂಗಿ ಜೊತೆ ಜಗಳ ಮನನೊಂದು ಅಕ್ಕ ಸೂಸೈಡ್!

ಈ ಘಟನೆಯು ಕಾರೈಕಲ್ ನ ಕೆಲವು ಭಾಗಗಳಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಿದೆ, ಏಕೆಂದರೆ ಬಾಲಾ ಅವರ ಸಂಬಂಧಿಕರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಸರಿಯಾದ ಚಿಕಿತ್ಸೆ ನೀಡದ ಕಾರಣ ಬಾಲಕ ಸಾವನ್ನಪ್ಪಿದ್ದಾನೆ ಎಂದು ಸಹ ಆರೋಪಿಸಿದ್ದಾರೆ.
Published by:Ashwini Prabhu
First published: