ಭೀಕರ ಜಲಪ್ರವಾಹಕ್ಕೆ ಒಂದು ವರ್ಷದಲ್ಲಿ 993 ಮಂದಿ ಬಲಿ

Ganesh Nachikethu
Updated:August 27, 2018, 9:54 AM IST
ಭೀಕರ ಜಲಪ್ರವಾಹಕ್ಕೆ ಒಂದು ವರ್ಷದಲ್ಲಿ 993 ಮಂದಿ ಬಲಿ
Ganesh Nachikethu
Updated: August 27, 2018, 9:54 AM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.27): ದೇಶದ ಹಲವು ರಾಜ್ಯಗಳಲ್ಲಿ ಈಗ ಎಲ್ಲಿ ನೋಡಿದರೂ ನೀರು. ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ವರ್ಷ ಸುರಿದ ಮಳೆ ಭೀಕರ ಪ್ರವಾಹ ಸೃಷ್ಟಿಸಿ, ನೂರಾರು ಮಂದಿಯನ್ನು ಬಲಿ ಪಡೆದಿದ್ದು, ಸಾವಿರಾರು ಕೋಟಿ ರೂ.ಮೌಲ್ಯದ ಆಸ್ತಿ ಹಾನಿಗೀಡಾಗಿದೆ.

ಪ್ರಾಕೃತಿಕ ವಿಕೋಪಕ್ಕೆ ಬಹುತೇಕ ದೇಶದ ಹಲವು ರಾಜ್ಯಗಳು ತತ್ತರಿಸಿ ಹೋಗಿವೆ. ಈ ಒಂದು ವರ್ಷದಲ್ಲಿ ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಅಸ್ಸಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಸುರಿದ ಭೀಕರ ಮಳೆಗೆ 993 ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ.

ಪ್ರವಾಹದಿಂದ ಸುಮಾರು 70 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿರಾಗಿದ್ದಾರೆ. 17 ಲಕ್ಷ ಮಂದಿ ಪರಿಹಾರ ಕೇಂದ್ರದಲ್ಲಿದ್ದಾರೆ. ಸದ್ಯ ಒಟ್ಟು 993 ಜನ ಪ್ರವಾಹಕ್ಕೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಯಾಗುವ ಸಾಧ್ಯತೆಗಳಿವೆ ಎಂದು ಗೃಹ ಸಚಿವಾಲಯದ ಅಧಿಕಾರಿ ಮೂಲಗಳು ತಿಳಿಸಿವೆ.

ಕೇರಳದಲ್ಲಿ 600 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶ 204, ಪಶ್ಚಿಮ ಬಂಗಾಳ 195, ಕರ್ನಾಟಕ 161, ಮತ್ತು ಅಸ್ಸಾಂನಲ್ಲಿ 46 ಜನ ಬಲಿಯಾಗಿದ್ದಾರೆ. ಅಲ್ಲದೇ ಕೇರಳದಲ್ಲಿ 54 ಲಕ್ಷ ಜನ ಸಂಕಷ್ಟದಲ್ಲಿದ್ದು, 14.52 ಲಕ್ಷದಷ್ಟು ಜನ ಪರಿಹಾರ ಕೇಂದ್ರದಲ್ಲಿದ್ದಾರೆ.

ಅಸ್ಸಾಂನಲ್ಲಿ ಪ್ರವಾಹ ಪೀಡಿತಕ್ಕೆ 11.46 ಲಕ್ಷ ಜನ ನಲುಗಿದ್ದು, ಸದ್ಯ 2.45 ಸಂತ್ರಸ್ತರು ಕ್ಯಾಂಪ್​ನಲ್ಲಿ ಆಶ್ರಯ ಪಡೆದಿದ್ದಾರೆ. 2005 ರಿಂದ ಇತ್ತೀಚೆಗೆ ಸಿಕ್ಕಿರುವ ದತ್ತಾಂಶಗಳ ಪ್ರಕಾರ ವರ್ಷಕ್ಕೆ ಪ್ರವಾಹದಿಂದಾಗಿ 1600 ಕ್ಕೂ ಹೆಚ್ಚು ಬಲಿಯಾಗುತ್ತಿದ್ದಾರೆ ಎನ್ನಲಾಗಿದೆ.
Loading...

ಈ ಹಿಂದೆ 2017 ರಲ್ಲಿಯೂ ಜಲಪ್ರವಾಹಕ್ಕೆ 1200 ಜನ ಕೊಚ್ಚಿಹೋದರು. ಬಿಹಾರ್​ ಮೂಲದ 504, ಪಶ್ಚಿಮ ಬಂಗಾಲದ 261, ಅಸ್ಸಾಂ 160, ಮಹಾರಾಷ್ಟ್ರ 124, ಉತ್ತರ ಪ್ರದೇಶ 121 ಜನ ನಿಧನರಾಗಿದ್ದರು. ಅಲ್ಲದೇ 3.4 ಕೋಟಿ ಜನ ಸಂಕಷ್ಟಕ್ಕೆ ಸಿಲುಕಿ, 22.81 ಲಕ್ಷ ಸಂತ್ರಸ್ತರನ್ನು ಪರಿಹಾರ ಕೇಂದ್ರ ಶಿಬಿರಗಳಲ್ಲಿ ಇಡಲಾಗಿತ್ತು.

ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆ ಪರಿಹಾರ ಕಾರ್ಯಾಚರಣೆಗೆ ರಾಜ್ಯ ಮತ್ತು ಕೇಂದ್ರದ ಸಂಯೋಜಿತ ವಿವಿಧ ತಂಡಗಳು, ವಿಪತ್ತು ನಿರ್ವಹಣಾ ಘಟಕಗಳು ಶ್ರಮಿಸಿವೆ. ಸೇನೆಯ ಘಟಕಗಳು ಕೂಡ ಎಲ್ಲಾ ರಾಜ್ಯಗಳಲ್ಲೂ ನಿಯೋಜನೆಗೊಂಡಿವೆ. ಪ್ರವಾಹ ಪೀಡಿತ ಉತ್ತರ ಪ್ರದೇಶದ ಕೆಲ ಭಾಗಗಳಿಗೂ ಕೇಂದ್ರ ಸೇನೆಯನ್ನು ಕಳುಹಿಸಿಕೊಟ್ಟಿದೆ.

ಮುಳುಗಡೆಯಾದ ಪ್ರದೇಶಗಳ ಜನರಿಗೆ ಆಹಾರ, ನೀರಿನ ಪ್ಯಾಕೆಟ್, ಔಷಧಗಳನ್ನು ಹೆಲಿಕಾಪ್ಟರ್ ಮೂಲಕ ತಲುಪಿಸಲಾಗಿದೆ. ಅಧಿಕಾರಿಗಳು ಖುದ್ದಾಗಿ ಪರಿಸ್ಥಿತಿ ಅವಲೋಕಿಸಿ, ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗುವಂತೆ ಸೂಚಿಸಲಾಗಿತ್ತು.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...