CYBER CRIME: 3 ವರ್ಷಗಳಲ್ಲಿ 93 ಸಾವಿರ ಸೈಬರ್ ಅಪರಾಧ ಪ್ರಕರಣ; ಲೋಕಸಭೆಗೆ ಮಾಹಿತಿ ನೀಡಿದ ಸರ್ಕಾರ

ದೇಶದಲ್ಲಿ 46 ಸೈಬರ್ ಭಯೋತ್ಪಾದನೆಯ ಪ್ರಕರಣಗಳು ವರದಿಯಾಗಿವೆ ಮತ್ತು ಸೈಬರ್ ಭಯೋತ್ಪಾದನೆಗೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 66 ಎಫ್ ಅಡಿಯಲ್ಲಿ ಎಫ್ಐಆರ್​ಗಳನ್ನು ದಾಖಲಿಸಲಾಗಿದೆ

ಹ್ಯಾಕರ್ ಸಾಂದರ್ಭಿಕ ಚಿತ್ರ

ಹ್ಯಾಕರ್ ಸಾಂದರ್ಭಿಕ ಚಿತ್ರ

 • Share this:
  2017 ರಿಂದ 2019 ರ ನಡುವೆ ದೇಶದಲ್ಲಿ ಸುಮಾರು  93,000 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ ಎಂದು ಲೋಕಸಭೆಗೆ ಮಂಗಳವಾರ ನಡೆದ ಮುಂಗಾರು ಅಧಿವೇಶನದ ವೇಳೆ ತಿಳಿಸಲಾಯಿತು. ಇದೇ ಅವಧಿಯಲ್ಲಿ ದೇಶದಲ್ಲಿ 46 ಸೈಬರ್ ಭಯೋತ್ಪಾದನೆಯ ಪ್ರಕರಣಗಳು ವರದಿಯಾಗಿವೆ ಮತ್ತು ಸೈಬರ್ ಭಯೋತ್ಪಾದನೆಗೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 66 ಎಫ್ ಅಡಿಯಲ್ಲಿ ಎಫ್ಐಆರ್​ಗಳನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದರು.

  ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಪ್ರಕಟಿಸಿದ ಮಾಹಿತಿಯ ಪ್ರಕಾರ, 2017, 2018 ಮತ್ತು 2019 ರಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳು ಕ್ರಮವಾಗಿ 21796, 27248 ಮತ್ತು 44546 ಎಂದು ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 70 ಬಿ ಯ ನಿಯಮಗಳ ಪ್ರಕಾರ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್​ಟಿ-ಇನ್) ಸೈಬರ್ ಭದ್ರತಾ ಘಟನೆಗಳಿಗೆ ಪ್ರತಿಕ್ರಿಯಿಸುವ ರಾಷ್ಟ್ರೀಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು.

  ಸಿಇಆರ್‌ಟಿ-ಇನ್ ಭಾರೀ ಸೈಬರ್​ ಅಪರಾಧಗಳ ಬಗ್ಗೆ ನಿಗಾವಹಿಸುತ್ತದೆ ಹಾಗೂ ಅಂತಹ  ಸನ್ನಿವೇಶ ಉಂಟಾದರೆ ತನ್ನ ಅತ್ಯಾಧುನಿಕ ವ್ಯವಸ್ಥೆಗಳಿಂದ ಒಳ ಬರುತ್ತಿರುವ  ಮಾಲ್‌ವೇರ್ ಸೋಂಕಿನ ಬಗ್ಗೆ ಗುಪ್ತಚರ ಮೂಲಗಳನ್ನು ಎಚ್ಚರಿಸುತ್ತದೆ. ಸಿಇಆರ್​ಟಿ ಜಾಲ ಅತ್ಯಂತ ಬಲಿಷ್ಟವಾಗಿದ್ದು ದೇಶದ ಎಲ್ಲರ ಭದ್ರತೆಯ ಬಗ್ಗೆ ಸಾಕಷ್ಟು ಎಚ್ಚರವಹಿಸುತ್ತದೆ. ಯಾವುದೇ ಮಾಲ್​ವೇರ್ ಒಳನುಗ್ಗಿ​ ಹಾನಿ ಮಾಡುವ ಘಟನೆಯು CERT-In ನ ಗಮನಕ್ಕೆ ಬಂದಾಗಲೆಲ್ಲಾ, ತಕ್ಷಣ ಪರಿಹಾರ ಕ್ರಮಗಳಿಗಾಗಿ ಸಂಬಂಧಪಟ್ಟ ಘಟಕಗಳಿಗೆ ಮತ್ತು ವಲಯ ಮಟ್ಟದ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಗಳಿಗೆ (CERT) ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.

  ಸೈಬರ್ ಅಪರಾಧಗಳು ಯಾವುವು?

  ಕಂಪ್ಯೂಟರ್ ಸಿಸ್ಟಂ ಅಥವಾ ನೆಟ್​ವರ್ಕ್​​ಗಳಿಗೆ ಅನಧಿಕೃತ ಪ್ರವೇಶ/ಹ್ಯಾಕಿಂಗ್, ಡಿಜಿಟಲ್​ ರೂಪದಲ್ಲಿರುವ ಮಾಹಿತಿಯ ಕಳ್ಳತನ, ಈಮೇಲ್ ಬಾಂಬಿಂಗ್, ಸಲಾಮಿ ದಾಳಿ, ಸೇವೆಯ ನಿರಾಕರಣೆ, ವೈರಸ್ ಅಥವಾ ವರ್ಮ್ ದಾಳಿ, ಲಾಜಿಕ್ ಬಂಬ್ ಮತ್ತು ಇಂಟರ್ನೆಟ್ ಸಮಯ ಕಳ್ಳತನ ಹೀಗೆ ಹಲವಾರು ರೀತಿಯಲ್ಲಿ ನಮ್ಮ ಮಾಹಿತಿ ಕದ್ದು ಬಳಸಿಕೊಳ್ಳಲಾಗುತ್ತದೆ.

  ಇದನ್ನೂ ಓದಿ: 8 ಜನ ಹಿರಿಯ ಶಾಸಕರಿಗೆ ಕೊಕ್​ ​; ನಾಳೆ 26 ನೂತನ ಸಚಿವರ ಪ್ರಮಾಣ ವಚನ: ಬೆಂಗಳೂರಿನತ್ತ ಸಿಎಂ!

  ಸೈಬರ್ ಅಪರಾಧವನ್ನು ಹೇಗೆ ವರದಿ ಮಾಡುವುದು?

  ಹೆಸರು, ಈ ಮೇಲೆ ವಿಳಾಸ ಮತ್ತು ಸಂಪರ್ಕಿಸಬೇಕಾದ ವಿವರಗಳೊಂದಿಗೆ ಸೈಬರ್ ಅಪರಾಧ ತನಿಖಾ ಕೋಶದ ಮುಖ್ಯಸ್ಥರಿಗೆ ದೂರು ಸಲ್ಲಿಸಬೇಕಾಗುತ್ತದೆ. ಹಾಗೂ ಯಾವ ರೀತಿಯಲ್ಲಿ ಸೈಬರ್​ ವಂಚನೆಗೆ ಒಳಗಾಗಿದ್ದೇವೆ ಎಂಬುದನ್ನು ಸಹ ಇದೇ ಸಂದರ್ಭದಲ್ಲಿ ವಿವರಗಳ ಸಮೇತ ಸ್ಥಳೀಯ ಪೋಲೀಸ್ ಠಾಣೆಯನ್ನು ಸಂಪರ್ಕಿಸಬಹುದು. ಅಲ್ಲದೇ ಈಗ ಸೈಬರ್​ ಅಪರಾಧ ವಿಭಾಗ ಎಂದೇ ತನಿಖಾ ದಳವನ್ನು ಮಾಡಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: