Road Accident: ಚೈನಾ ಜಪಾನ್ ಗಿಂತಲೂ ನೆರೆಯ ತೆಲಂಗಾಣದಲ್ಲಿ ರಸ್ತೆ ಅಪಘಾತ ಜಾಸ್ತಿ, ನಮ್ಮ ರಾಜ್ಯದಲ್ಲಿ ಎಷ್ಟು?

Telangana: ತೆಲಂಗಾಣದ ಅಪಘಾತದ ಸಾವಿನ ಪ್ರಮಾಣವು ಶೇಕಡಾ 31.5 ರಷ್ಟಿದೆ, ಇದು ರಾಷ್ಟ್ರೀಯ ಸರಾಸರಿ 27.7 ಶೇಕಡಾಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ತೆಲಂಗಾಣದಲ್ಲಿ ವರದಿಯಾದ ಒಟ್ಟು ಅಪಘಾತ ಸಾವುಗಳ ಸಂಖ್ಯೆ 11,822, ಅದರಲ್ಲಿ 9,868 ಪುರುಷರು ಮತ್ತು 1,954 ಮಹಿಳೆಯರು ಅಪಘಾತಕ್ಕೆ ಹೀಡಾಗಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ ಪ್ರತಿ ಪ್ರದೇಶಗಳಲ್ಲೂ ಅಪಘಾತಗಳು (Accidents) ಸಂಭವಿಸುವುದು ಸರ್ವೇಸಾಮಾನ್ಯವಾಗಿದೆ.. ಚಾಲಕನ ನಿರ್ಲಕ್ಷತನ, ಮದ್ಯಪಾನ ಮಾಡಿ ವಾಹನ ಓಡಿಸುವುದು(Drink and Drive), ಅಥವಾ ಇನ್ನೊಬ್ಬರ ವಾಹನ ಓವರ್ ಟೇಕ್ ಮಾಡಲು ಹೋಗಿ ಸಂಚಾರಿ ನಿಯಮಗಳ ಉಲ್ಲಂಘನೆ (Break Traffic Rules) ಮಾಡುವುದು ಸೇರಿ ಹತ್ತು ಹಲವು ಕಾರಣಗಳಿಂದ ಪ್ರತಿನಿತ್ಯ ಅಪಘಾತ ಸಂಭವಿಸುತ್ತಲೇ ಇರುತ್ತದೆ.. ವಿಶ್ವದಲ್ಲಿ ಬಹುತೇಕ ಅಪಘಾತ ಸಂಭವಿಸಲು ಕಾರಣ ವೇಗದ ಚಾಲನೆ (Overspeeding).. ಈ ವೇಗದ ವಾಹನ ಚಾಲನೆಯಿಂದ ಶೇಕಡ 91 ರಷ್ಟು ಅಪಘಾತ ಪ್ರಕರಣಗಳು ಸಂಭವಿಸಿ ಅನೇಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.. ಅದರಲ್ಲೂ ಭಾರತದಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುವ ರಾಜ್ಯಗಳ ಪೈಕಿ ಕರ್ನಾಟಕದ ಪಕ್ಕದ ರಾಜ್ಯ ತೆಲಂಗಾಣ ಕೂಡ ಸೇರಿದೆ.

    ಭಾರತದಲ್ಲಿ ತೆಲಂಗಾಣದಲ್ಲಿ ಹೆಚ್ಚು ಅಪಘಾತ ಪ್ರಕರಣ ದಾಖಲು

    ದೇಶಾದ್ಯಂತ ಪ್ರತಿವರ್ಷ ಐದು ಲಕ್ಷ ರಸ್ತೆ ಅಪಘಾತ ನಡೆಯುತ್ತಿದ್ದು, 1.5 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ . 2021ರಲ್ಲಿ ತೆಲಂಗಾಣದಾದ್ಯಂತ 11,822 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.ಶಮ್ಶಬಾದ್​ನ ಹೋಟೆಲ್​ನಲ್ಲಿ ನಡೆದ ರಸ್ತೆ ಅಪಘಾತಗಳು ಮತ್ತು ಸುರಕ್ಷತಾ ಮಾನದಂಡಗಳ ಪರಿಶೀಲನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುಪ್ರಿಂಕೋರ್ಟ್​ ಮಾಜಿ ನ್ಯಾಯಮೂರ್ತಿ ಹಾಗೂ ರಸ್ತ ಸುರಕ್ಷತಾ ಸಮಿತಿಯ ಮುಖ್ಯಸ್ಥರಾದ ಅಭಯ್​ ಮನೋಹರ್​ ಸಪ್ರೆ ಅಪಘಾತದ ಪ್ರಕರಣದಲ್ಲಿ ತೆಲಂಗಾಣ ಚೀನಾ, ಜಪಾನ್​ ಮತ್ತು ಜರ್ಮನಿಯನ್ನು ಮೀರಿಸಿದೆ ಎಂದು ಮಾಹಿತಿ ನೀಡಿದ್ದಾರೆ..

    ಇದನ್ನೂ ಓದಿ: ಕ್ರಿಸ್​ಮಸ್​ ಪರೇಡ್​ ಮಾಡ್ತಿದ್ದವರ ಮೇಲೆ ಹರಿದ SUV ಕಾರು: ಭಯಾನಕ ವಿಡಿಯೋ ಇಲ್ಲಿದೆ!

    ಇನ್ನು 91ರಷ್ಟು ಅಪಘಾತಗಳು ವೇಗದ ಚಾಲನೆಯಿಂದಲೇ ಸಂಭವಿಸುತ್ತಿವೆ. ಹೀಗಾಗಿ ವಾಹನ ಸವಾರರು ಶೇ. 100ರಷ್ಟು ಹೆಲ್ಮೆಟ್​ ಮತ್ತು ಸೀಟ್​ ಬೆಲ್ಟನ್ನು ಧರಿಸಬೇಕು. ಅಲ್ಲದೆ, ಸರ್ಕಾರ ಅಪಘಾತದ ಕೇಂದ್ರಗಳನ್ನು ಪತ್ತೆ ಹಚ್ಚಿ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಬೇಕು. ಅಪಘಾತಗಳನ್ನು ತಡೆಯಲು ಉತ್ತಮ ಮಾನದಂಡಗಳನ್ನು ರಚಿಸಬೇಕಿದೆ ಎಂದು ಮನೋಹರ್​ ಸಪ್ರೆ ಒತ್ತಾಯಿಸಿದ್ದಾರೆ.

    ತೆಲಂಗಾಣದಲ್ಲಿ ಅಪಘಾತದ ಸಾವಿನ ಪ್ರಮಾಣವು ಶೇಕಡಾ 31.5 ರಷ್ಟಿದೆ, ಇದು ರಾಷ್ಟ್ರೀಯ ಸರಾಸರಿ 27.7 ಶೇಕಡಾಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ತೆಲಂಗಾಣದಲ್ಲಿ ವರದಿಯಾದ ಒಟ್ಟು ಅಪಘಾತ ಸಾವುಗಳ ಸಂಖ್ಯೆ 11,822, ಅದರಲ್ಲಿ 9,868 ಪುರುಷರು ಮತ್ತು 1,954 ಮಹಿಳೆಯರು. ಒಟ್ಟಾರೆಯಾಗಿ, ರಾಜ್ಯದಲ್ಲಿ 19,505 ಟ್ರಾಫಿಕ್ ಅಪಘಾತಗಳು ವರದಿಯಾಗಿವೆ, ಇದು 7,219 ಜನರ ಸಾವಿಗೆ ಕಾರಣವಾಗಿದೆ ಮತ್ತು 18,661 ಜನರು ಗಾಯಗೊಂಡಿದ್ದಾರೆ. 2020 ರಲ್ಲಿ 6,882 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಮತ್ತು 337 ಜನರು ರೈಲ್ವೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.

    ತೆಲಂಗಾಣದ ಅಪಘಾತದ ಸಾವಿನ ಪ್ರಮಾಣ 31.5%

    ಇನ್ನು ತೆಲಂಗಾಣದ ಅಪಘಾತದ ಸಾವಿನ ಪ್ರಮಾಣವು ಶೇಕಡಾ 31.5 ರಷ್ಟಿದೆ, ಇದು ರಾಷ್ಟ್ರೀಯ ಸರಾಸರಿ 27.7 ಶೇಕಡಾಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ತೆಲಂಗಾಣದಲ್ಲಿ ವರದಿಯಾದ ಒಟ್ಟು ಅಪಘಾತ ಸಾವುಗಳ ಸಂಖ್ಯೆ 11,822, ಅದರಲ್ಲಿ 9,868 ಪುರುಷರು ಮತ್ತು 1,954 ಮಹಿಳೆಯರು ಅಪಘಾತಕ್ಕೆ ಹೀಡಾಗಿದ್ದಾರೆ.

    ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ಜನರ ಮೇಲೆ ಹರಿದ Audi ಕಾರು: ಓರ್ವ ಸಾವು, 9 ಮಂದಿಗೆ ಗಾಯ

    ತೆಲಂಗಾಣದಲ್ಲಿ 262 ಮಂದಿ ಹೃದಯಾಘಾತಕ್ಕೆ ಬಲಿ ಇದಲ್ಲದೆ, ರಾಜ್ಯದಲ್ಲಿ 262 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, 24 ಜನರು ಪ್ರಾಣಿಗಳಿಂದ ಸಾವನ್ನಪ್ಪಿದ್ದಾರೆ ಮತ್ತು 12 ಜನರು ಆಹಾರ ವಿಷದಿಂದ ಸಾವನ್ನಪ್ಪಿದ್ದಾರೆ. ಹಾವು ಕಡಿತದಿಂದ ಒಟ್ಟು 168 ಮಂದಿ ಸಾವನ್ನಪ್ಪಿದ್ದಾರೆ. ವಾಣಿಜ್ಯ ಕಟ್ಟಡಗಳಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಆರು ಜನರು ಮತ್ತು ವಸತಿ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡು 79 ಜನರು ಸಾವನ್ನಪ್ಪಿದ್ದಾರೆ. ಸರ್ಕಾರಿ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡು 9 ಸಾವುಗಳು ವರದಿಯಾಗಿವೆ.
    Published by:ranjumbkgowda1 ranjumbkgowda1
    First published: