HOME » NEWS » National-international » 90 PERCENTAGE PRIVATE TEACHERS IN HYDERABAD SOLD GOLD FOR SURVIVAL STG MAK

ಲಾಕ್‌ಡೌನ್‌ ಎಫೆಕ್ಟ್: ಜೀವನ ನಿರ್ವಹಣೆಗೆ ಚಿನ್ನವನ್ನೇ ಮಾರಾಟ ಮಾಡಿದ ಖಾಸಗಿ ಶಾಲೆ ಶಿಕ್ಷಕರು!

ಅನೇಕ ಶಿಕ್ಷಕರು ತಮ್ಮ ವಾಹನಗಳು, ಚಿನ್ನ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಮನೆಯ ಖರ್ಚು-ವೆಚ್ಚಗಳನ್ನು ನಿರ್ವಹಿಸಲು ಸಾಲ ತೆಗೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಇತ್ತು ಎಂದು ಹೇಳಿಕೊಂಡಿದ್ದಾರೆ. 

news18india
Updated:February 16, 2021, 3:08 PM IST
ಲಾಕ್‌ಡೌನ್‌ ಎಫೆಕ್ಟ್: ಜೀವನ ನಿರ್ವಹಣೆಗೆ ಚಿನ್ನವನ್ನೇ ಮಾರಾಟ ಮಾಡಿದ ಖಾಸಗಿ ಶಾಲೆ ಶಿಕ್ಷಕರು!
ಪ್ರಾತಿನಿಧಿಕ ಚಿತ್ರ.
  • Share this:
ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಸಕಾಲದಲ್ಲಿ ಗೌರವಧನ ಬಿಡುಗಡೆಯಾಗದೇ ಕರ್ನಾಟಕ ಸೇರಿ ಅನೇಕರ ರಾಜ್ಯಗಳ ಲಕ್ಷಾಂತರ ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಕಂಗಾಲಾಗಿದ್ದಾರೆ. ಜೀವನ ನಿರ್ವಹಣೆಗಾಗಿ ಅವರು ಬೇರೆ ಬೇರೆ ಕೆಲಸಗಳತ್ತ ವಾಲುತ್ತಿದ್ದಾರೆ. ಹಲವು ಉಪನ್ಯಾಸಕರು ತರಕಾರಿ ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವರು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸಂಬಳ, ಗೌರವಧನ ಸಿಗದೇ ಕುಟುಂಬ ನಿರ್ವಹಣೆ ಮಾಡಲಾಗದೆ ಪರದಾಡುತ್ತಿದ್ದಾರೆ. ಹೈದರಾಬಾದ್ ನಲ್ಲಿ ಖಾಸಗಿ ಶಾಲೆಯ ಮಹಿಳಾ ಶಿಕ್ಷಕಿಯರು ಜೀವನ ನಿರ್ವಹಣೆಗಾಗಿ ತಮ್ಮ ಚಿನ್ನದ ಆಭರಣಗಳನ್ನೇ ಮಾರಾಟ ಮಾಡಿದ್ದಾರೆಂಬ ಸಂಗತಿ ಹೊರಬಿದ್ದಿದೆ.

ಹೌದು, ಕೊರೋನಾ ಸಾಂಕ್ರಾಮಿಕದಿಂದ ದೇಶದಲ್ಲಿ ಲಾಕ್‌ಡೌನ್‌ ಹೇರಿದ ಬಳಿಕ ಜೀವನ ನಿರ್ವಹಣೆಗಾಗಿ ಪರದಾಡಿದ ಹೈದರಾಬಾದ್ ನ ಶೇ.90ರಷ್ಟು ಮಹಿಳಾ ಶಿಕ್ಷಕಿಯರು ತಮ್ಮ ಚಿನ್ನದ ಆಭರಣಗಳನ್ನು ಮಾರಾಟ ಮಾಡಿದ್ದಾರಂತೆ. ಬಹುತೇಕರು ಚಿನ್ನಾಭರಣಗಳನ್ನು ಅಡಮಾನ ಇಟ್ಟಿದ್ದಾರೆ ಹಾಗೂ ಶೇ.83ರಷ್ಟು ಶಿಕ್ಷಕರು 5 ತಿಂಗಳ ಬಾಡಿಗೆಯನ್ನು ಪಾವತಿಸಬೇಕಾಗಿದೆ ಎಂಬ ವಿಚಾರವನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಯುವ ಸಂಘಟನೆಯಾಗಿರುವ ‘ಭಾರತ್ ದೇಖೋ’ ನಡೆಸಿರುವ ಈ ಸಮೀಕ್ಷೆಯಲ್ಲಿ 220 ಖಾಸಗಿ ಶಾಲಾ ಶಿಕ್ಷಕರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲಾಗಿದೆ. ಈ ಶಿಕ್ಷಕರಲ್ಲಿ ಯಾರಿಗೂ ವೈದ್ಯಕೀಯ ವಿಮೆ ಇಲ್ಲ ಮತ್ತು ಅದರ ಪ್ರಯೋಜನಗಳ ಬಗ್ಗೆಯೂ ಅವರಿಗೆ ತಿಳಿದಿಲ್ಲ ಎಂಬ ವಿಚಾರ ಗೊತ್ತಾಗಿದೆ.

ಲಾಕ್‌ಡೌನ್‌ನಿಂದ ಖಾಸಗಿ ಶಾಲಾ ಶಿಕ್ಷಕರ ಮೇಲಾಗಿರುವ ಮಾನಸಿಕ, ದೈಹಿಕ ಮತ್ತು ಆರ್ಥಿಕ ಪರಿಣಾಮ ಹಾಗೂ ಅವರ ಸಾಮಾಜಿಕ ಸ್ಥಿತಿಯ ಮೇಲೆ ನಿರುದ್ಯೋಗ ಪರಿಣಾಮವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಈ ಸಮೀಕ್ಷೆ ನಡೆಸಲಾಗಿದೆ ಎಂದು ‘ಭಾರತ್ ದೇಖೋ’ ಸಹ-ಸಂಸ್ಥಾಪಕಿ ರೋಮಿಲಾ ಗಿಲ್ಲೆಲ್ಲಾ ಹೇಳಿದ್ದಾರೆ. ಲಾಕ್‌ಡೌನ್‌ನಿಂದ ಜೀವನ ನಿರ್ವಹಣೆಗೆ ತಮ್ಮ ಬೆಲೆಬಾಳುವ ಅಮೂಲ್ಯ ವಸ್ತುಗಳನ್ನು ಮಾರಾಟ ಮಾಡುವುದರ ಜೊತೆಗೆ ಯಾವುದೇ ರೀತಿಯ ಬಿಲ್‌ಗಳನ್ನು ಪಾವತಿಸಲು ಖಾಸಗಿ ಶಿಕ್ಷಕರಿಗೆ ಸಾಧ್ಯವಾಗಿಲ್ಲ. ಅದರಲ್ಲೂ ಶೇ.90ರಷ್ಟು ಮಂದಿ ತಮ್ಮೆಲ್ಲಾ ಉಳಿತಾಯದ ಹಣವನ್ನು ಖರ್ಚು ಮಾಡಿದ್ದು, ಲಾಕ್‌ಡೌನ್ ಸಮಯದಲ್ಲಿ ಸಂಬಂಧಿಕರಿಂದ 30 ಸಾವಿರ ರೂ. ಸಾಲವನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಅನೇಕ ಶಿಕ್ಷಕರು ತಮ್ಮ ವಾಹನಗಳು, ಚಿನ್ನ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಮನೆಯ ಖರ್ಚು-ವೆಚ್ಚಗಳನ್ನು ನಿರ್ವಹಿಸಲು ಸಾಲ ತೆಗೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಇತ್ತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಕಾಲುವೆಗೆ ಉರುಳಿದ 2 ಬಸ್ಸುಗಳು; 37ಕ್ಕೂ ಹೆಚ್ಚು ಮಂದಿ ಸಾವು

‘ಲಾಕ್‌ಡೌನ್‌ ಸಮಯದಲ್ಲಿ ಕುಟುಂಬ ನಿರ್ವಹಿಸಲು ನಾನು ನನ್ನ ಪತ್ನಿಯ ಚಿನ್ನದ ಸರವನ್ನು ಅಡವಿಟ್ಟು 40 ಸಾವಿರ ರೂ. ಸಾಲ ಮಾಡಬೇಕಾಯಿತು’ ಎಂದು ಕಳೆದ 20 ವರ್ಷಗಳಿಂದ ಪ್ರೌಢಶಾಲೆಯಲ್ಲಿ ತೆಲುಗು ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಜಿ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ. 2020ರ ಏಪ್ರಿಲ್ ತಿಂಗಳಿನಿಂದ ನಮ್ಮ ಶಾಲೆಯ ಆಡಳಿತ ಮಂಡಳಿ ನಮಗೆ ಸಂಬಳವನ್ನೇ ನೀಡಿಲ್ಲವೆಂದು ಅವರು ಹೇಳಿದ್ದಾರೆ.

ಇನ್ನೊಬ್ಬ ಶಿಕ್ಷಕ ಆರ್.ರಾಮು ನಾಯಕ್ ಅವರು ಲಾಕ್‌ಡೌನ್‌ನಲ್ಲಿ ತಮ್ಮ ದೈನಂದಿನ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಬೈಕ್ ಅನ್ನೇ ಮಾರಾಟ ಮಾಡಿದ್ದಾರೆ. ‘ಹಣಕಾಸಿನ ಸಮಸ್ಯೆಯಿಂದ ನಾನು ನನ್ನ ಬೈಕ್ ಅನ್ನು ಮಾರಾಟ ಮಾಡಿ ನನ್ನ ಹಳ್ಳಿಗೆ ಹೋಗಬೇಕಾಯಿತು. ನನ್ನ ಮನೆಯ ಬಾಡಿಗೆಯನ್ನು ಕೂಡ ಪಾವತಿಸಲು ನನ್ನಿಂದ ಸಾಧ್ಯವಾಗಲಿಲ್ಲ’ವೆಂದು ಗಣಿತ ಶಿಕ್ಷಕರಾಗಿರುವ ರಾಮು ನಾಯಕ್ ಬೇಸರ ವ್ಯಕ್ತಪಡಿಸಿದ್ದಾರೆ.
Published by: MAshok Kumar
First published: February 16, 2021, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories