ನವದೆಹಲಿ(ಆ.03): ದಿನೇ ದಿನೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ಅಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಮನುಕುಲವನ್ನೇ ಅವಮಾನಿಸುವಂತಿದೆ. ದುಷ್ಕರ್ಮಿಗಳು 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ ಮಾಡಿ, ಬಳಿಕ ಬಲವಂತವಾಗಿ ಸುಟ್ಟು ಹಾಕಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಜೊತೆಗೆ ಆಕೆ ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ್ದಾಳೆ ಎಂದು ಆರೋಪಿಗಳು ಬಾಲಕಿಯ ಪೋಷಕರಿಗೆ ಹೇಳಿದ್ದಾರೆ. ಇಷ್ಟೇ ಅಲ್ಲದೇ, ಪೊಲೀಸರಿಗೆ ಈ ವಿಷಯ ತಿಳಿಸದಂತೆಯೂ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಈ ಪೈಶಾಚಿಕ ಕೃತ್ಯ ದೆಹಲಿ ಕಂಟೋನ್ಮೆಂಟ್ ಏರಿಯಾದ ನಂಗಲ್ ಗ್ರಾಮದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಬಾಲಕಿ ಭಾನುವಾರ ಸಂಜೆ 5.30 ಕ್ಕೆ ಮನೆಯಿಂದ ಹೊರ ಬಂದಿದ್ದಳು. ಸ್ಮಶಾನದಲ್ಲಿರುವ ವಾಟರ್ ಕೂಲರ್ನಿಂದ ಕೋಲ್ಡ್ ವಾಟರ್ ತರಲು ಹೋಗಿದ್ದ ಬಾಲಕಿ ಮನೆಗೆ ವಾಪಸ್ ಬರಲಿಲ್ಲ.
ಸುಮಾರು 6 ಗಂಟೆ ಸಮಯದಲ್ಲಿ ಸ್ಮಶಾನದ ಅರ್ಚಕ ರಾಧೆ ಶ್ಯಾಮ್ ಹಾಗೂ ಮತ್ತಿಬ್ಬರು ವ್ಯಕ್ತಿಗಳು ಬಾಲಕಿಯ ತಾಯಿಯನ್ನು ಕರೆದು ರುದ್ರಭೂಮಿಯಲ್ಲಿ ಬಿದ್ದಿದ್ದ ಅಪ್ರಾಪ್ತೆಯ ಶವವನ್ನು ತೋರಿಸಿದರು. ಜೊತೆಗೆ ವಾಟರ್ ಕೂಲರ್ನಿಂದ ಕುಡಿಯುವ ನೀರನ್ನು ತೆಗೆದುಕೊಳ್ಳುವಾಗ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ಹೇಳಿದರು.
ಇದನ್ನೂ ಓದಿ:Karnataka Weather Today: ಉತ್ತರ ಕನ್ನಡ ಜಿಲ್ಲೆಯ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಿದ್ದರಾಮಯ್ಯ
ಆದರೆ ಬಾಲಕಿಯ ತಾಯಿ ಅನುಮಾನದಿಂದ ಬೇರೆ ರೀತಿಯಾಗಿ ಹೇಳಿದ್ದಾರೆ. ನನ್ನ ಮಗಳ ದೇಹದ ಮೇಲೆ ಗಾಯದ ಕಲೆಗಳಿದ್ದವು. ಆಕೆಯ ಮೊಣಕೈ, ಮಣಿಕಟ್ಟಿನ ಮೇಲೆ ಗಾಯಗಳಾಗಿದ್ದವು. ಜೊತೆಗೆ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
ಅರ್ಚಕ ಹಾಗೂ ಅಲ್ಲೇ ಇದ್ದ ಇನ್ನಿಬ್ಬರು ವ್ಯಕ್ತಿಗಳು ಪೊಲೀಸರಿಗೆ ಕರೆ ಮಾಡದಂತೆ ಬಾಲಕಿಯ ತಾಯಿಗೆ ಹೇಳಿದ್ದಾರೆ. ಒಂದು ವೇಳೆ ನೀವೇನಾದರೂ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರೆ, ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಆಗ ಬಾಲಕಿಯ ಅಂಗಾಂಗಗಳನ್ನು ಕದಿಯುತ್ತಾರೆ ಎಂದು ತಾಯಿಗೆ ಹೆದರಿಸಿದ್ದಾರೆ.
ಕೊನೆಗೆ ತಾಯಿಯ ಒಪ್ಪಿಗೆ ಇಲ್ಲದೇ, ಬಾಲಕಿಯ ದೇಹವನ್ನು ಸುಟ್ಟು ಹಾಕಿದ್ದಾರೆ. ಇದರಿಂದ ಕೋಪಗೊಂಡ ತಾಯಿ ತನ್ನ ಗಂಡನಿಗೆ ವಿಷಯ ತಿಳಿಸಿದ್ದಾಳೆ. ಜೊತೆಗ ಸುಮಾರು 200 ಮಂದಿ ಗ್ರಾಮಸ್ಥರು ಸ್ಮಶಾನಕ್ಕೆ ಬಂದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:Gold Price Today: ಆಭರಣ ಪ್ರಿಯರಿಗೆ ಸಿಹಿಸುದ್ದಿ; ಇಂದೂ ಸಹ ಚಿನ್ನದ ಬೆಲೆ ಏರಿಕೆಯಾಗಿಲ್ಲ...!
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು,ಅರ್ಚಕನನ್ನು ಬಂಧಿಸಿದ್ದಾರೆ. ಎಫ್ಎಸ್ಎಲ್ ಮತ್ತು ಕ್ರೈಂ ಬ್ರಾಂಚ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ