ಸಂತ್ರಸ್ತರ ನೆರವಿಗೆ ಮಿಡಿದ 9 ವರ್ಷದ ಬಾಲಕಿಗೆ ಕಾದಿತ್ತು ಆಶ್ಚರ್ಯ

news18
Updated:August 21, 2018, 4:46 PM IST
ಸಂತ್ರಸ್ತರ ನೆರವಿಗೆ ಮಿಡಿದ 9 ವರ್ಷದ ಬಾಲಕಿಗೆ ಕಾದಿತ್ತು ಆಶ್ಚರ್ಯ
news18
Updated: August 21, 2018, 4:46 PM IST
ನ್ಯೂಸ್​ 18 

ಚೆನ್ನೈ (ಆ.21): ಆ ಮಗುವಿಗಿದ್ದ ಒಂದು ಕನಸು ಎಂದರೆ ಒಂದು ಸೈಕಲ್​ ಕೊಂಡು ಅದನ್ನು ಓಡಿಸುವುದು. ಅದಕ್ಕಾಗಿ ಕಳೆದ ನಾಲ್ಕು ವರ್ಷದಿಂದ ದುಡ್ಡು ಕೂಡಿಟ್ಟು ಬಂದಿದ್ದ ಆ ಬಾಲಕಿ ಕೇರಳ ಸಂತ್ರಸ್ತರ ನೋಡಿದಾಕ್ಷಣ ಮರುಗಿದ್ದಾಳೆ.

ಮಳೆ ಪ್ರವಾಹದಲ್ಲಿ ತಮ್ಮ ಬದುಕನ್ನೇ ಕಳೆದುಕೊಂಡವರಿಗಿಂತ ತನ್ನ ಕನಸು ದೊಡ್ಡದಲ್ಲ ಎಂದು ಬಾಲಕಿ ತಾನು ಕೂಡಿಟ್ಟ ಹಣವನ್ನು ದಾನವಾಗಿ ನೀಡಿ ಇತರರಿಗೆ ಮಾದರಿಯಾಗಿದ್ದಾಳೆ.

ತಮಿಳುನಾಡಿನ ವಿಲ್ಲುಪುರಂನ 9 ವರ್ಷದ ಪೋರಿ ಅನುಪ್ರಿಯ ಕೇರಳ ಜನರಿಗೆಮಿಡಿದ ಬಾಲಕಿ. ಅನುಪ್ರಿಯ ಕಳೆದ ನಾಲ್ಕು ವರ್ಷಗಳಿಂದ ಸೈಕಲ್​ ಕೊಳ್ಳಲು ಅಪ್ಪ ಕೊಟ್ಟ ಚಿಲ್ಲರೆ ಕಾಸನ್ನು ಪ್ರತಿನಿತ್ಯ ಕೂಡಿಡುತ್ತಾ ಬಂದಿದ್ದಾಳೆ.


Loading...ಕೇರಳ ಪ್ರವಾಹದಿಂದ ತೊಂದರೆಗೆ ಸಿಲುಕಿದ್ದ ಜನರು ಅವರ ಕಷ್ಟವನ್ನು ಟಿವಿಯಲ್ಲಿ ನೋಡಿದೆ, ಆಗಲೇ ನಾನು ಉಳಿತಾಯ ಮಾಡಿದ ಹಣ ನೀಡಲು ಮುಂದಾದೆ ಎಂದು ಪಿಟಿಐಗೆ ಅನುಪ್ರಿಯ ತಿಳಿಸಿದ್ದಾಳೆ.

ಅನುಪ್ರಿಯ ಎಂಬ ತಮಿಳುನಾಡು ಮೂಲದ ಬಾಲಕಿ ಸೈಕಲ್​ಕೊಳ್ಳಲು ಕೂಡಿಟ್ಟಿದ್ದ 9 ಸಾವಿರ ಹಣವನ್ನು ಕೇರಳ ನೆರೆ ಸಂತ್ರಸ್ತರಿಗೆ ನೀಡಿದ್ದಾಳೆ ಎಂದು ಎಥಿರಾಜನ್​ ಎಂಬುವವರು ತಮ್ಮ ಖಾತೆಯಿಂದ ಟ್ವೀಟ್​ ಮಾಡಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ಈ ಟ್ವೀಟ್​ 2 ದಿನದಲ್ಲಿ 2 ಸಾವಿರ ಶೇರ್​ ಆಗಿದ್ದು, ಎಲ್ಲರ ಮೆಚ್ಚುಗೆ ಪಡೆದಿದೆ,

ಅಷ್ಟೇ ಅಲ್ಲದೇ ಈ ಪುಟ್ಟ ಹುಡುಗಿಯ ಸೇವಾ ಮನೋಭಾವನೆ ಕಂಡು ಹೀರೋ ಸೈಕಲ್​ ಉತ್ಪಾದಕರ ಗಮನಸೆಳೆದಿದೆ. ತಕ್ಷಣಕ್ಕೆ ಅವರು ಮಾನವೀಯತೆಗೆ ಮಿಡಿದ ಯುವತಿಗೆ ನಾವು ಹೊಸ ಸೈಕಲ್​ ನೀಡುವ ಭರವಸೆ ನೀಡಿದರು. ಅಲ್ಲದೇ ಪ್ರತಿ ವರ್ಷ ಒಂದು ಬೈಕ್​ ಕೂಡ ನೀಡುವ ಭರವಸೆ ನೀಡಿ ಆಕೆಯ ವಿಳಾಸ ನೀಡುವಂತೆ ಟ್ವೀಟ್​ ಮಾಡಿದ್ದರುಅಲ್ಲದೇ ಬಾಲಕಿ ಕೇರಳ ಪ್ರವಾಹ ಪೀಡಿತರಿಗೆ ನೀಡಿದ್ದ 9 ಸಾವಿರ ರೂವನ್ನು ಕೂಡ ಮರಳಿಸಲು ಹಿರೋ ಮೋಟರ್ಸ್​ ಕಂಪನಿ ಅಧ್ಯಕ್ಷರಾದ ಪಂಕಜ್​ ಎಂ ಮುಂಜಲ್​ ಮುಂದಾದರೂ ಆದರೆ ಈ ಹಣವನ್ನು ಬಾಲಕಿ ತಂದೆ ನಿರಾಕರಿಸಿದ್ದಾರೆ.ಕೇರಳಕ್ಕೆ ಮಿಡಿದ ಈ ಪುಟ್ಟ ಹುಡುಗಿಯ ಈ ಸೇವೆ ಬೆಳಕಿಗೆ ಬರಲು ಎಥಿರಾಜ್​ ಅವರ ಟ್ವೀಟ್​ ಕೂಡ ಸಹಾಯಕವಾಗಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ