ಪ್ರೀತಿಯಿಂದ ಸಾಕಿದ ಬೆಕ್ಕು ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಜೀವವನ್ನೇ ತೆಗೆಯಿತು!

ಆಗಷ್ಟೇ ಮಗು ಹಾಲು ಕುಡಿದು ಮಲಗಿದ್ದರಿಂದ ಆ ಹಾಲಿನ ವಾಸನೆಗೆ ಮೇಲೆ ಹತ್ತಿದ ಬೆಕ್ಕಿನ ಮರಿ ಮಗುವಿನ ಬಾಯನ್ನು ನೆಕ್ಕಿ ಅಲ್ಲೇ ಮಲಗಿಬಿಟ್ಟಿತ್ತು. ಇದರಿಂದಾಗಿ ಮಗುವಿನ ಉಸಿರು ಕಟ್ಟಿ ಸಾವನ್ನಪ್ಪಿತ್ತು.

news18-kannada
Updated:December 4, 2019, 2:03 PM IST
ಪ್ರೀತಿಯಿಂದ ಸಾಕಿದ ಬೆಕ್ಕು ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಜೀವವನ್ನೇ ತೆಗೆಯಿತು!
ಸಾಂದರ್ಭಿಕ ಚಿತ್ರ
  • Share this:
ಮಗುವಿಗೆ ಹಾಲು ಕುಡಿಸಿ ಗಾಲಿಗಳಿರುವ ತೊಟ್ಟಿಲಲ್ಲಿ ಮಲಗಿಸಿ ಒಳಗೆ ಹೋಗಿದ್ದ ಅಮ್ಮ ಮಗು ನಿದ್ರೆ ಮಾಡಿದೆಯಾ? ಎಂಬ ಕುತೂಹಲದಿಂದ ಸ್ವಲ್ಪ ಹೊತ್ತು ಬಿಟ್ಟು ಬಂದು ನೋಡಿದಾಗ ಭಾರೀ ಆಘಾತ ಕಾದಿತ್ತು. ಸೊಂಪಾಗಿ ನಿದ್ರೆ ಮಾಡಲೆಂದು ಮಲಗಿಸಿ ಹೋಗಿದ್ದ ಮಗು ತೊಟ್ಟಿಲಲ್ಲೇ ಪ್ರಾಣ ಬಿಟ್ಟಿತ್ತು!

9 ತಿಂಗಳ ಹೆಣ್ಣುಮಗುವನ್ನು ಕರೆದುಕೊಂಡು ನೆಂಟರ ಮನೆಗೆ ಹೊರಟಿದ್ದ ತಾಯಿ ಮಗುವನ್ನು ರೆಡಿ ಮಾಡಿ ಮಲಗಿಸಿ ತನ್ನ ಮನೆಗೆಲಸ ಮುಗಿಸಿಕೊಳ್ಳಲು ಅಡುಗೆ ಮನೆಗೆ ಹೋಗಿದ್ದಳು. ಮಗು ಎಚ್ಚರವಾಗಿದ್ದರೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹಾಲು ಕುಡಿಸಿ ತೊಟ್ಟಿಲಲ್ಲಿ ಮಗುವನ್ನು ಮಲಗಿಸಿ ತನ್ನ ಕೆಲಸದಲ್ಲಿ ನಿರತಳಾಗಿದ್ದಳು. ಆದರೆ, ಸಂಬಂಧಿಕರ ಮನೆಗೆ ಹೋಗಲು ರೆಡಿಯಾಗಿದ್ದ ಮಗು ಜಗತ್ತನ್ನೇ ಬಿಟ್ಟು ಹೋಗಿತ್ತು.

ಪ್ರತಿದಿನ ಮಗುವಿನೊಂದಿಗೆ ಆಟವಾಡುತ್ತಿದ್ದ ಆ ಮನೆಯ ಮುದ್ದಿನ ಬೆಕ್ಕು ಆ ದಿನ ಮಗುವಿನ ಪ್ರಾಣವನ್ನೇ ತೆಗೆದಿತ್ತು. ತೊಟ್ಟಿಲಲ್ಲಿ ಮಲಗಿದ್ದ 9 ತಿಂಗಳ ಮಗುವಿನ ಮೈ ಮೇಲೆ ಹತ್ತಿ ಕುಳಿತ ಬೆಕ್ಕಿನ ಮರಿ ಅಲ್ಲೇ ನಿದ್ರೆ ಮಾಡಿತ್ತು. ಆಗಷ್ಟೇ ಮಗು ಹಾಲು ಕುಡಿದು ಮಲಗಿದ್ದರಿಂದ ಆ ಹಾಲಿನ ವಾಸನೆಗೆ ಮೇಲೆ ಹತ್ತಿದ ಬೆಕ್ಕಿನ ಮರಿ ಮಗುವಿನ ಬಾಯನ್ನು ನೆಕ್ಕಿ ಅಲ್ಲೇ ಮಲಗಿಬಿಟ್ಟಿತ್ತು. ಇದರಿಂದಾಗಿ ಮಗುವಿನ ಉಸಿರು ಕಟ್ಟಿ ಸಾವನ್ನಪ್ಪಿತ್ತು.

ಕರ್ಚೀಫ್​ ಕಳ್ಳನನ್ನು ಹುಡುಕದಿದ್ದರೆ ಸ್ಟೇಷನ್ ಬಿಟ್ಟು ಕದಲಲ್ಲ; ಪೊಲೀಸರಿಗೆ ತಲೆನೋವು ತಂದ ವಿಚಿತ್ರ ಪ್ರಕರಣ

ಉಕ್ರೇನ್​ ದೇಶದಲ್ಲಿ ಈ ದುರಂತ ಘಟನೆ ನಡೆದಿದೆ. ಈ ಬಗ್ಗೆ ಡೈಲಿ ಮೇಲ್ ವರದಿ ಮಾಡಿದ್ದು, ಮಲಗಿದ್ದ ಮಗುವಿನ ಮುಖದ ಮೇಲೆ ಬೆಕ್ಕಿನ ಮರಿ ಹತ್ತಿ ಕುಳಿತಿದ್ದರಿಂದ ಮಗುವಿಗೆ ಉಸಿರಾಡಲು ಸಾಧ್ಯವಾಗದೆ ಅದು ಸಾವನ್ನಪ್ಪಿದೆ. ಅಡುಗೆ ಕೆಲಸ ಮುಗಿಸಿ ತಾಯಿ ಬಂದು ನೋಡಿದಾಗ ಮಗುವಿನ ಮೇಲೆ ಬೆಕ್ಕಿನ ಮರಿ ಮಲಗಿರುವುದು ಗೊತ್ತಾಗಿದೆ. ಆ ಬೆಕ್ಕನ್ನು ಓಡಿಸಿ ಮಗುವನ್ನು ಎತ್ತಿಕೊಂಡಾಗ ದೇಹ ತಣ್ಣಗಾಗಿದ್ದನ್ನು ನೋಡಿ ಗಾಬರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಮಗು ಉಸಿರುಗಟ್ಟಿ ಸತ್ತಿರುವ ವಿಷಯ ಗೊತ್ತಾಗಿದೆ.

 
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ