ಮಹಾರಾಷ್ಟ್ರ: ಭೀಕರ ಘಟನೆಯಿಂದ (terrible incident) ಇಡೀ ಮಹಾರಾಷ್ಟ್ರ (Maharashtra) ಬೆಚ್ಚಿ ಬಿದ್ದಿದೆ. ಮಹಾರಾಷ್ಟ್ರದ ಸಾಂಗ್ಲಿ (Sangli) ಜಿಲ್ಲೆಯಲ್ಲಿ ಇಂದು ಒಂದೇ ಕುಟುಂಬದ (Family) ಒಂಬತ್ತು ಸದಸ್ಯರು ತಮ್ಮ ಮನೆಯಲ್ಲಿ ಶವವಾಗಿ (Dead Body) ಪತ್ತೆಯಾಗಿದ್ದಾರೆ. ಮುಂಬೈನಿಂದ (Mumbai) 350 ಕಿಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮಹೈಸಾಲ್ ಎಂಬಲ್ಲಿನ ಮನೆಯೊಂದರಲ್ಲಿ 9 ಮೃತ ದೇಹಗಳು ಪತ್ತೆಯಾಗಿವೆ. "ನಾವು ಒಂದೇ ಮನೆ ಒಳಗೆ ಒಂಬತ್ತು ಶವಗಳನ್ನು ಕಂಡು ದಿಗ್ಭ್ರಮನೆಗೆ ಒಳಗಾದೆವು. ಮೂರು ಶವಗಳು ಒಂದೇ ಸ್ಥಳದಲ್ಲಿ ಕಂಡುಬಂದರೆ, ಆರು ಶವಗಳು ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದೆ" ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ (SP) ದೀಕ್ಷಿತ್ ಗೆಡಮ್ ಹೇಳಿದ್ದಾರೆ. ಇದು ಸಾಮೂಹಿಕ ಆತ್ಮಹತ್ಯೆಯೋ (Mass Suicide) ಅಥವಾ ಕೊಲೆಯೋ (Murder) ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ಈ ವಿಚಾರ ಕೇಳಿ ಅಕ್ಕಪಕ್ಕದ ಜನರು ಭಯಭೀತಿ ಗೊಂಡಿದ್ದಾರೆ.
ಒಂದೇ ಮನೆಯಲ್ಲಿ 9 ಮಂದಿ ಶವ ಪತ್ತೆ
ಒಂದೇ ಮನೆಯಲ್ಲಿ 9 ಮಂದಿ ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ವೃತ್ತಿಯಲ್ಲಿ ಪಶುವೈದ್ಯರಾಗಿದ್ದ ಪೋಪಟ್ ಯಲ್ಲಪ್ಪ ವ್ಯಾನ್ಮೋರೆ (52), ಸಂಗೀತಾ ಪೋಪಟ್ ವ್ಯಾನ್ಮೋರೆ (48), ಅರ್ಚನಾ ಪೋಪಟ್ ವ್ಯಾನ್ಮೋರೆ (30), ಶುಭಂ ಪೋಪಟ್ ವಾನ್ಮೋರೆ (28), ಮಾಣಿಕ್ ಯಲ್ಲಪ್ಪ ವ್ಯಾನ್ಮೋರೆ (49), ರೇಖಾ ಮಾಣಿಕ್ ವ್ಯಾನ್ಮೋರೆ (49) ಮತ್ತು ಆದಿತ್ಯ ಮಾಣಿಕ್ ವ್ಯಾನ್ (15), ಅನಿತಾ ಮಾಣಿಕ್ ವ್ಯಾನ್ಮೋರ್ (28) ಮತ್ತು ಅಕ್ಕತೈ ವ್ಯಾನ್ಮೋರ್ (72) ಎಂದು ಗುರುತಿಸಲಾಗಿದೆ.
ಸತ್ತವರೆಲ್ಲ ಒಂದೇ ಫ್ಯಾಮಿಲಿಯವರು
ಮೃತ ಮಾಣಿಕ್ ಮತ್ತು ಪೋಪಟ್ ಯಲ್ಲಪಾ ವಾನ್ಮೋರೆ ಇಬ್ಬರು ಸಹೋದರರು ಎಂದು ತಿಳಿದು ಬಂದಿದೆ. ಮಾಣಿಕ್ ಮನೆಯಲ್ಲಿ ಆತನ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಮಾಣಿಕ್ ಅಣ್ಣ, ಪೋಪಟ್ ಯಲ್ಲಪಾ ಪಶುವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಪೋಪಟ್ ಮನೆಯಲ್ಲಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ.
ಇದನ್ನೂ ಓದಿ: Agnipath: ರೈಲಿಗೆ 'ಅಗ್ನಿ' ಸ್ಪರ್ಶ, ಇಲಾಖೆಗೆ 700 ಕೋಟಿ ನಷ್ಟ! ಇನ್ನೂ ನಿಂತಿಲ್ಲ ವಿರೋಧಿಗಳ ಹೋರಾಟ
ವಿಷ ಸೇವಿಸಿ ಸತ್ತರಾ ಮನೆಯ 9 ಮಂದಿ?
ಮನೆಯಲ್ಲಿ ಒಂದು ವಿಷದ ಬಾಟಲಿ ಪತ್ತೆಯಾಗಿದೆ ಎನ್ನಲಾಗಿದೆ, ಆದರೆ ಅವರು ವಿಷ ಸೇವಿಸಿ ಸತ್ತರಾ ಅಥವಾ ಬೇರೆ ರೀತಿಯಲ್ಲಿ ಪ್ರಾಣ ಕಳೆದುಕೊಂಡರಾ ಎನ್ನುವುದು ತಿಳಿದು ಬಂದಿಲ್ಲ.
ಇದು ಕೊಲೆಯೋ ಅಥವಾ ಸಾಮೂಹಿಕ ಆತ್ಮಹತ್ಯೆಯೋ?
ಮೇಲ್ನೋಟಕ್ಕೆ ಇದೊಂದು ಸಾಮೂಹಿಕ ಆತ್ಮಹತ್ಯೆ ಅಂತ ಪೊಲೀಸರು ಶಂಕಿಸಿದ್ದಾರೆ. ಆದರೆ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತ ಯಾವುದೇ ಬಲವಾದ ಕಾರಣಗಳು ಇರಲಿಲ್ಲ ಅಂತ ಸಂಬಂಧಿಕರು ಹೇಳಿದ್ದಾರೆ. ಹೀಗಾಗಿ ಇದು ಸಾಮೂಹಿಕ ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವುದು ನಿಗೂಢವಾಗಿದೆ.
ಮರಣೋತ್ತರ ಬಳಿಕ ನಿಗೂಢ ಸಾವಿಗೆ ಉತ್ತರ
ಇನ್ನು 9 ಮೃತ ದೇಹಗಳನ್ನೂ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅಂತ ತಿಳಿದು ಬರಲಿದೆ.
ಇದನ್ನೂ ಓದಿ: Marriage Age: ಬಾಲ್ಯ ವಿವಾಹ ಎತ್ತಿ ಹಿಡಿದ ಕೋರ್ಟ್! ಮುಸ್ಲಿಂ ಯುವತಿಗೆ 16 ವರ್ಷಕ್ಕೆ ಮದುವೆಗೆ ಅನುಮತಿ
ಭಯಗೊಂಡ ಸ್ಥಳೀಯರು
ಇನ್ನು ಈ ವಿಚಾರ ಕೇಳಿ ಅಕ್ಕಪಕ್ಕದ ಜನರು ಭಯಭೀತಿ ಗೊಂಡಿದ್ದಾರೆ. ಅವರು ಎಲ್ಲರೊಂದಿಗೂ ಚೆನ್ನಾಗಿಯೇ ಇದ್ದರು, ಇವರಿಗೆ ಶತ್ರುಗಳು ಯಾರಿಲ್ಲ ಅಂತ ಹೇಳಿದ್ದಾರೆ. ಇನ್ನು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವಂತ ಯಾವುದೇ ಕಾರಣ ಇರಲಿಲ್ಲ ಅಂತ ಅಕ್ಕಪಕ್ಕದವರು ಹೇಳಿದ್ದಾರೆ. ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆ ಬಳಿಕ ನಿಗೂಢ ಸಾವಿನ ಕಾರಣ ಹೊರ ಬೀಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ