• Home
  • »
  • News
  • »
  • national-international
  • »
  • ಓದಿದ್ದು 8ನೇ ಕ್ಲಾಸ್, ಆದ್ರೂ IPS ಎಂದು ನಂಬಿಸಿ ಮಹಿಳೆಯರಿಗೆ ಲಕ್ಷ ಲಕ್ಷ ಮೋಸ

ಓದಿದ್ದು 8ನೇ ಕ್ಲಾಸ್, ಆದ್ರೂ IPS ಎಂದು ನಂಬಿಸಿ ಮಹಿಳೆಯರಿಗೆ ಲಕ್ಷ ಲಕ್ಷ ಮೋಸ

ಬಂಧಿತ ಆರೋಪಿ

ಬಂಧಿತ ಆರೋಪಿ

ಆರೋಪಿ ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಮಹಿಳೆ ಬಳಿ ಆನ್‌ಲೈನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದ್ದಾನೆ. ನಿರಂತರವಾಗಿ ಆಕೆಯ ಬಳಿ ಚಾಟ್ ಮಾಡಿ ನಂಬಿಕೆ ಗಳಿಸಿದ್ದಾನೆ.

  • Share this:

ದೆಹಲಿ: 8ನೇ ಕ್ಲಾಸ್ ಓದಿದ ವ್ಯಕ್ತಿಯೊಬ್ಬ ಐಪಿಎಸ್ ಅಧಿಕಾರಿ (IPS Officer) ಎಂದು ಹೇಳಿಕೊಂದು ಹನ್ನೆರಡು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚನೆ (Fraud Case) ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ವಿಕಾಸ್ ಗೌತಮ್, ವಿಕಾಸ್ ಯಾದವ್ ಹೆಸರಿನಲ್ಲಿ ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್‌ಗಳನ್ನು (Fake Profile) ರಚಿಸಿಕೊಂಡು ಮಹಿಳೆಯರಿಗೆ ಮೋಸ ಎಸಗಿದ್ದಾನೆ ಎಂದು ದೆಹಲಿ ಪೊಲೀಸರು (Delhi Police) ತಿಳಿಸಿದ್ದಾರೆ. ಸದ್ಯ ಈ ಖತರ್ನಾಕ್ ಆರೋಪಿ ಕಂಬಿ ಹಿಂದೆ ಸೇರಿದ್ದಾನೆ.


ಆರೋಪಿ ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಮಹಿಳೆ ಬಳಿ ಆನ್‌ಲೈನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದ್ದಾನೆ. ನಿರಂತರವಾಗಿ ಆಕೆಯ ಬಳಿ ಚಾಟ್ ಮಾಡಿ ನಂಬಿಕೆ ಗಳಿಸಿದ್ದಾನೆ. ವೈದ್ಯೆಯ ಬಳಿ ಆಕೆಯ ಬ್ಯಾಂಕ್ ಖಾತೆಯ ವಿವರ ಪಡೆದುಕೊಂಡು 25 ಸಾವಿರ ಹಣವನ್ನು ಲಪಟಾಯಿಸಿದ್ದಾನೆ.


ಪೊಲೀಸ್ ಕಂಪ್ಲೇಂಟ್ ಕೊಟ್ರೆ ಹುಷಾರ್!
ಕೆಲವು ದಿನಗಳ ನಂತರ ವೈದ್ಯೆಗೆ ಈತ ವಂಚಕ ಎಂದು ತಿಳಿದುಬಂದಿದೆ. ತನಗೆ ವಂಚನೆ ಮಾಡಿರುವ ಕುರಿತು ಪೊಲೀಸ್ ಕಂಪ್ಲೇಂಟ್ ಕೊಡಲು ಮುಂದಾದಾಗ ತಾನು ಐಪಿಎಸ್ ಅಧಿಕಾರಿ, ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ ಎಂದು ಬೆದರಿಕೆ ಕಂಪ್ಲೇಂಟ್ ಕೊಡದಂತೆ ತಡೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Dalai Lama: ಭಾರತವೇ ನನ್ನ ಶಾಶ್ವತ ಮನೆ, ಚೀನಾಕ್ಕೆ ಮರಳುವುದಿಲ್ಲ! ಬೌದ್ಧ ಧರ್ಮಗುರು ದಲೈಲಾಮಾ ಸ್ಪಷ್ಟನುಡಿ


ಬಂಧನದ ಒಳಗೇ ಹತ್ತಾರು ಮಹಿಳೆಯರಿಗೆ ವಂಚನೆ
ಕೊನೆಗೂ ವೈದ್ಯೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಅಷ್ಟರಲ್ಲೇ ಆರೋಪಿ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಹತ್ತಾರು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ವೆಲ್ಡಿಂಗ್ ಕೋರ್ಸ್ ಓದಿದ್ದ ಆರೋಪಿ IPS ಅಧಿಕಾರಿ ಆದ!
ಆರೋಪಿ ವಿಕಾಸ್ ಗೌತಮ್ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಎಂದು ದೆಹಲಿ ಪೊಲೀಸ್ ಅಧಿಕಾರಿ ಹರಿಂದರ್ ಸಿಂಗ್ ಹೇಳಿದ್ದಾರೆ. ಆರೋಪಿ 8 ನೇ ತರಗತಿ ಉತ್ತೀರ್ಣರಾದ ನಂತರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೆಲವು ವೆಲ್ಡಿಂಗ್ ಕೋರ್ಸ್ ಮಾಡಿದ್ದ. ಆದರೆ ಐಪಿಎಸ್ ಅಧಿಕಾರಿ ಎಂದು ಬಿಂಬಿಸಿಕೊಂಡು ಹಲವು ಮಹಿಳೆಯರಿಗೆ ಮೋಸ ಮಾಡಿದ ಆರೋಪದಡಿ ಕಂಬಿ ಸೇರಿದ್ದಾನೆ.


ಇದನ್ನೂ ಓದಿ: Narendra Modi: ಮಹಾವಿಪತ್ತು ತಪ್ಪಿಸಿದ್ದೇ ನರೇಂದ್ರ ಮೋದಿ! ಪ್ರಧಾನಿ ಬಗ್ಗೆ ಅಮೆರಿಕಾ ಮೆಚ್ಚುಗೆ ಮಾತು!


ಶ್ರದ್ಧಾ ವಾಕರ್ ಹತ್ಯಾಕಾಂಡದ ಎಫೆಕ್ಟ್; ಬ್ಯಾಚುಲರ್​ಗಳಿಗೆ ಸಿಕ್ತಿಲ್ಲ ಮನೆ
ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಕೊಲೆ ಪ್ರಕರಣದಿಂದ ಬ್ಯಾಚುಲರ್​ಗಳು ಸಮಸ್ಯೆ ಎದುರಿಸುವಂತಾಗಿದೆ. ಇನ್ನೂ ದಾಂಪತ್ಯ ಜೀವನಕ್ಕೆ ಕಾಲಿಡದ ತರುಣ ತರುಣಿಯರು ದೆಹಲಿಯಲ್ಲಿ ಬಾಡಿಗೆ ಮನೆ ಹುಡುಕಲು ಹೆಣಗಾಡುತ್ತಿದ್ದಾರೆ. ಶ್ರದ್ಧಾ ವಾಕರ್ ಹತ್ಯಾಕಾಂಡದಿಂದ ಬೆಚ್ಚಿಬಿದ್ದಿರುವ ಮನೆ ಮಾಲೀಕರು ಅವಿವಾಹಿತರಿಗೆ ಮನೆ ಬಾಡಿಗೆಗೆ ಕೊಡಲು ಹಿಂಜರಿಯುತ್ತಿದ್ದಾರೆ. ಮತ್ತೆ ಶ್ರದ್ಧಾ ವಾಕರ್ ಕೊಲೆಯಂತಹ ಪ್ರಕರಣ ನಡೆಯುವ ಅಪಾಯ ಅವಿವಾಹಿತರಿಗೆ ಮನೆ ಬಾಡಿಗೆಗೆ ಕೊಡಲು ಹಿಂದೇಟು ಹಾಕುವಂತೆ ಮಾಡುತ್ತಿದೆ. ಇದರಿಂದ ನೋಯ್ಡಾದಲ್ಲಿ ಹೌಸಿಂಗ್ ಸೊಸೈಟಿಗಳಿಂದ ಬ್ಯಾಚುಲರ್‌ಗಳನ್ನು ದೂರವಿಡಲಾಗುತ್ತಿದೆ.

ನೋಯ್ಡಾದ (Noida) ಅಂತರಿಕ್ಷ್ ಸೊಸೈಟಿಯ ಪ್ರವೇಶ ದ್ವಾರದಲ್ಲೇ ಬ್ಯಾಚುಲರ್‌ಗಳನ್ನು ದೂರವಿಡುವ ಕುರಿತು ಪೋಸ್ಟರ್ ಅಂಟಿಸಲಾಗಿದೆ. ನೋಯ್ಡಾದ ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್‌ನ ನಿವಾಸಿಗಳ ಕಲ್ಯಾಣ ಸಂಘವು ತಮ್ಮ ಫ್ಲಾಟ್‌ಗಳನ್ನು ಬ್ಯಾಚುಲರ್‌ಗಳಿಗೆ ಬಾಡಿಗೆಗೆ ನೀಡದಂತೆ ಮನೆ ಮಾಲೀಕರಿಗೆ ನೋಟಿಸ್ ನೀಡಿದೆ.

Published by:ಗುರುಗಣೇಶ ಡಬ್ಗುಳಿ
First published: