370ನೇ ವಿಧಿ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ 88 ಭಯೋತ್ಪಾದಕ ಘಟನೆಗಳು; ಕೇಂದ್ರ

ಜಮ್ಮು-ಕಾಶ್ಮೀರ ಭಾಗದಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಖಾತೆ ಸಚಿವ ಜಿ. ಕೃಷ್ಣಾರೆಡ್ಡಿ ಲೋಕಸಭೆಯಲ್ಲಿ ಅಧಿಕೃತ ದಾಖಲೆ ಬಿಡುಗಡೆ ಮಾಡಿದ್ದಾರೆ.


Updated:December 3, 2019, 4:35 PM IST
370ನೇ ವಿಧಿ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ 88 ಭಯೋತ್ಪಾದಕ ಘಟನೆಗಳು; ಕೇಂದ್ರ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಡಿ.03): ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಮೊದಲಿಗಿಂತಲು ಈಗ ಕಡಿಮೆಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕಳೆದ ಆಗಸ್ಟ್​​ 5ನೇ ತಾರೀಕಿನಂದು ಕೇಂದ್ರ ಸರ್ಕಾರ ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿ ಆದೇಶಿಸಿತ್ತು. 370ನೇ ವಿಧಿ ರದ್ದುಗೊಳಿಸಿದ ನಂತರದಲ್ಲೂ 88 ಭಯೋತ್ಪಾದಕ ಕೃತ್ಯಗಳು ದಾಖಲಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಕೃತ ದತ್ತಾಂಶದಿಂದ ತಿಳಿದು ಬಂದಿದೆ. ಉಗ್ರ ಕೃತ್ಯಗಳನ್ನು ನಿಯಂತ್ರಿಸಲು ಇಷ್ಟೆಲ್ಲಾ ಕಠಿಣಕ್ರಮ ತೆಗೆದುಕೊಂಡರು, ಕೇವಲ ಶೇ.17ರಷ್ಟು ಮಾತ್ರ ಇಳಿಕೆಯಾಗಿದೆ.

ಕೇಂದ್ರ ಗೃಹ ಸಚಿವಾಲಯವೂ ಕಳೆದ 115 ದಿನಗಳಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳ ಸಂಖ್ಯೆ ಮಾತ್ರ ಉಲ್ಲೇಖ ಮಾಡಿದೆ. ಜಮ್ಮು-ಕಾಶ್ಮೀರದ ವಿಶೃಷ ಸ್ಥಾನಮಾನ ರದ್ದುಗೊಳಿಸುವ ಮುನ್ನ ಏಪ್ರಿಲ್​​​​ 12ರಿಂದ ಆಗಸ್ಟ್​​ 4ರವರೆಗೂ 106 ಭಯೋತ್ಪಾದಕ ದಾಖಲಾಗಿತ್ತು. ಆದರೀಗ ಆಗಸ್ಟ್​​ 5ರಿಂದ ನಂವೆಬರ್​​​​ 27ರವರೆಗೂ 88 ಭಯೋತ್ಪಾದಕ ಕೃತ್ಯಗಳು ನಡೆದಿವೆ. ಈ ಹಿಂದಿಗಿಂತಲೂ ಶೇ.17ರಷ್ಟು ಭಯೋತ್ಪಾದಕ ಕೃತ್ಯಗಳಲ್ಲಿ ಇಳಿಕೆಯಾಗಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಹೊಸ ಸಮಸ್ಯೆ ಸೃಷ್ಟಿಯಾಗದಂತೆ 370ನೇ ವಿಧಿ ರದ್ದು ಮಾಡಿದ್ದೇವೆ; ಜಾರ್ಖಂಡ್ ಚುನಾವಣಾ ಸಮಾವೇಶದಲ್ಲಿ ಮೋದಿ ಹೇಳಿಕೆ

ಜಮ್ಮು-ಕಾಶ್ಮೀರ ಭಾಗದಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಖಾತೆ ಸಚಿವ ಜಿ. ಕೃಷ್ಣಾರೆಡ್ಡಿ ಲೋಕಸಭೆಯಲ್ಲಿ ಅಧಿಕೃತ ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ದಾಖಲೆಯಲ್ಲಿ ಎಷ್ಟು ಕೃತ್ಯಗಳು ನಡೆದಿವೆ ಎಂಬ ಮಾಹಿತಿ ಇದೆ ಹೊರತು, ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವುರ ಕುರಿತು ಉಲ್ಲೇಖಿಸಿಲ್ಲ. ಜತೆಗೆ ಭಾರತ ಸೇನೆಯೂ 2019ನೇ ವರ್ಷದಲ್ಲಿ ಸುಮಾರು 157 ಮಂದಿ ಭಯೋತ್ಪಾದಕರನ್ನು ಸೆದೆ ಬಡಿದಿದೆ ಎಂದು ತಿಳಿಸಿದೆ.
First published: December 3, 2019, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading