ಅಸ್ಸಾಂನ ನಾಗಂವ್ ಜಿಲ್ಲೆಯ (Assam Nagaon District) ಎರಡು ಜೈಲುಗಳಲ್ಲಿ ಕಳೆದ ಒಂದು ತಿಂಗಳಲ್ಲಿ 85 ಎಚ್ಐಟಿ ಪಾಸಿಟಿವ್ ಪ್ರಕರಣಗಳು (HIV Positive Cases) ಪತ್ತೆಯಾಗಿವೆ. ಸೆಂಟ್ರಲ್ ಜೈಲು (Central Jail) ಮತ್ತು ಸ್ಪೆಷಲ್ ಜೈಲಿನಲ್ಲಿ (Special Jail) ಈ ಪ್ರಕರಣಗಳು ವರದಿಯಾಗಿವೆ. ಈ ಎರಡು ಜೈಲುಗಳು ನಾಗಂವ್ ಜಿಲ್ಲೆಯಲ್ಲಿದ್ದು, ಪೂರ್ವ ಗುವಾಹಟಿಯಿಂದ 125 ಕಿ.ಮೀ. ದೂರದಲ್ಲಿದೆ. ಜಿಲ್ಲಾ ಆರೋಗ್ಯ ಸೇವೆ ಜಂಟಿ ನಿರ್ದೇಶಕ ಅತುಲ್ ಪತೋರ್ ಅವರು ಮಾತನಾಡಿ, ಹೆಚ್ಚಿನ ಜನರು ಜೈಲಿಗೆ ಹಾಕುವ ಮುನ್ನವೇ ಎಚ್ಐಟಿಗೆ ತುತ್ತಾಗಿದ್ದಾರೆ. ಕೆಲವು ದಿನಗಳ ಹಿಂದೆ ಅವರಿಗೆ ಕಾಯಿಲೆ ಇರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಏಡ್ಸ್ಗೆ ತುತ್ತಾಗಿರುವ ಹೆಚ್ಚಿನ ರೋಗಿಗಳನ್ನು ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್, 1985 ರ ಅಡಿಯಲ್ಲಿ ಇಂಟ್ರಾವೆನಸ್ ಡ್ರಗ್ ಬಳಕೆದಾರರಾಗಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
40 ಎಚ್ಐಟಿ ಪಾಸಿಟಿವ್ ಪ್ರಕರಣಗಳು ಸೆಂಟ್ರಲ್ ಜೈಲಿನಲ್ಲಿ ಪತ್ತೆಯಾಗಿವೆ ಎಂದು ಜೈಲರ್ ಪ್ರಬಿನ್ ಹಜಾರಿಕಾ ಅವರು ಹೇಳಿದ್ದಾರೆ. ಬೇರೆಯವರಿಂದ ಅವರಿಗೆ ಜೈಲಿನಲ್ಲಿ ಎಚ್ಐವಿ ಹರಡಿರುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ. ಸೋಂಕಿತ ಕೈದಿಗಳಿಗೆ ಡ್ರಗ್ಸ್ ಸಿಗುತ್ತಿತ್ತು ಎಂಬ ಆರೋಪವನ್ನು ಜೈಲರ್ ನಿರಾಕರಿಸಿದ್ದಾರೆ.
ಸ್ಪೆಷಲ್ ಜೈಲಿನಲ್ಲಿ 45 ಎಚ್ಐವಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಸೋಂಕಿತರ ಕುಟುಂಬ ಸದಸ್ಯರಿಗೆ ಅವರ ಆರೋಗ್ಯ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ನಾಗಂವ್ ಎಸ್ಪಿ ಆನಂದ್ ಮಿಶ್ರಾ ಮಾತನಾಡಿ, ಡ್ರಗ್ಸ್ ಬಳಕೆ ಮತ್ತು ಲೈಂಗಿಕ ಸಂಪರ್ಕದಿಂದ ಹೆಚ್ಚು ಪ್ರಮಾಣದ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜೈಲಿನಲ್ಲಿ ಕೈದಿಗಳಿಗೆ ಡ್ರಗ್ಸ್ ಸಿಗುವ ಬಗ್ಗೆ ಜೈಲು ಅಧಿಕಾರಿಗಳು ನಿಗಾ ವಹಿಸಬೇಕು. ಇತ್ತೀಚೆಗೆ ಪೊಲೀಸರು ಕೈದಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪಾರ್ಮಾಸಿಸ್ಟ್ ಒಬ್ಬನನ್ನು ಬಂಧಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಬಿಜೆಪಿ ಸರ್ಕಾರ ಕೆಲವು ತಿಂಗಳ ಹಿಂದೆ ಡ್ರಗ್ಸ್ ವಿರುದ್ಧದ ಹಲವು ಕಾರ್ಯಯೋಜನೆಗಳಿಗೆ ಚಾಲನೆ ನೀಡಿತ್ತು. ಆ ನಂತರದ ದಿನಗಳಲ್ಲಿ ರಾಜ್ಯಾದ್ಯಂತ 200 ಕೋಟಿ ರೂಪಾಯಿಗೂ ಅಧಿಕ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದ್ದು, ಹಲವು ಸ್ಮಗ್ಲರ್, ಪೆಡ್ಲರ್ ಹಾಗೂ ಡ್ರಗ್ಸ್ ಬಳಕೆದಾರರನ್ನು ಬಂಧಿಸಲಾಗಿದೆ.
ಇದನ್ನು ಓದಿ: Plane Crashes In Russia: ರಷ್ಯಾದಲ್ಲಿ ವಿಮಾನ ಪತನಗೊಂಡು 16 ಮಂದಿ ದುರ್ಮರಣ; ಅವಘಡಕ್ಕೆ ಅದೇ ಕಾರಣ!
ಚಲಿಸುತ್ತಿದ್ದ ರೈಲಿನಲ್ಲಿ ಯುವತಿ ಅತ್ಯಾಚಾರ
ಚಲಿಸುತ್ತಿರುವ ರೈಲಿನಲ್ಲಿ ದರೋಡೆ ಹಾಗೂ 20 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ(Gang Rape) ನಡೆದಿರುವ ಘಟನೆ ಮಹಾರಾಷ್ಟ್ರ(Maharashtra)ದಲ್ಲಿ ನಡೆದಿದೆ. ಪುಷ್ಪಕ್ ಎಕ್ಸ್ಪ್ರೆಸ್ನಲ್ಲಿ ಶುಕ್ರವಾರ ರಾತ್ರಿ 8 ಗಂಟೆಗೆ ಈ ದುರ್ಘಟನೆ ನಡೆದಿದೆ. ಇಗತ್ಪುರಿ - ಕಾಸ್ರಾ ನಿಲ್ದಾಣದ ನಡುವೆ 8 ದರೋಡೆಕೋರರು ರೈಲಿನ ಪ್ರಯಾಣಿಕರನ್ನ ಲೂಟಿ ಮಾಡಿದ್ದಾರೆ. ಇದೇ ವೇಳೆ ಅಲ್ಲೇ ಇದ್ದ 20 ವರ್ಷದ ಯುವತಿ ಮೇಲೆ ಕಿರಾತಕರು ಎರಗಿ ಬಿದ್ದಿದ್ದಾರೆ. ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಘಟನೆ ಸಂಬಂಧ ಈವರೆಗೂ 4 ದುಷ್ಕರ್ಮಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ನಾಲ್ವರು ಕಾಮ ಪಿಶಾಚಿಗಳ ಬೇಟೆಗೆ ಬಲೆ ಬೀಸಿದ್ದಾರೆ. ಈ ರೈಲು ಇಗತ್ಪುರಿ ನಿಲ್ದಾಣದಿಂದ ಮುಂಬೈ ಕಡೆಗೆ ಹೋಗುವಾಗ, ಸುರಂಗವೊಂದು ಸಿಗುತ್ತೆ. ಈ ವೇಳೆ ರೈಲಿನ ವೇಗ ಕಡಿಮೆಯಾಗುತ್ತೆ. ಇದೇ ಟೈಮ್ನಲ್ಲಿ ದರೋಡೆಕೋರರು ರೈಲು ಹತ್ತಿದ್ದಾರೆ ಅಂತ ಹೇಳಲಾಗುತ್ತಿದೆ.
ಇನ್ನೂ ರೈಲು ಹತ್ತಿದ ಬೋಗಿಯಿಂದಲೇ ಪ್ರಯಾಣಿಕರನ್ನ ಥಳಿಸಲು ಶುರುಮಾಡಿದ್ದರಂತೆ. ಇದಾದ ಬಳಿಕ ಪ್ರಯಾಣಿಕರಿಂದ ಹಣ, ಮೊಬೈಲ್ , ವಡವೆಗಳನ್ನ ದೋಚಿದ್ದಾರೆ. ನಂತರ ದರೋಡೆಕೋರರು ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಲು ಶುರುಮಾಡಿದ್ದರಂತೆ. ಇದೆ ವೇಳೆ 20 ವರ್ಷದ ಯುವತಿಯನ್ನ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಸಮಯದಲ್ಲಿ ಕೆಲ ಪ್ರಯಾಣಿಕರು ಇಬ್ಬರು ದುಷ್ಕರ್ಮಿಗಳನ್ನ ಹಿಡಿದಿದ್ದಾರೆ. ರೈಲು ಕಲ್ಯಾಣ್ ನಿಲ್ದಾಣ ತಲುಪುತ್ತಿದ್ದಂತೆ ದುಷ್ಕರ್ಮಿಗಳನ್ನ ಪೊಲೀಸರಿಗೆ ಒಪ್ಪಿಸಿ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಅಲರ್ಟ್ ಆದ ಪೊಲೀಸರು, ರೈಲಿನಲ್ಲಿ ಅಡಗಿಕೊಂಡಿದ್ದ ಮತ್ತಿಬ್ಬರನ್ನ ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ