ಶಸ್ತ್ರಚಿಕಿತ್ಸೆಗೊಳಗಾದವನ ಹೊಟ್ಟೆಯಲ್ಲಿತ್ತು ಬೀಗದ ಕೀ, ನಾಣ್ಯ, ಸರ ಸೇರಿ 80 ವಸ್ತುಗಳು!; ವೈದ್ಯ ಲೋಕಕ್ಕೆ ಸವಾಲಾಯಿತು ಪ್ರಕರಣ

ಎಕ್ಸ್​ ರೇ ಮಾಡಿದ ಬಳಿಕ ತಡ ಮಾಡದೇ ವೈದ್ಯರು ಆಪರೇಷನ್​ ಮಾಡಿದ್ದಾರೆ. ಆತನ ಹೊಟ್ಟೆಯಲ್ಲಿದ್ದ ಸರ, ಬೀಗದ ಕೀ, ನಾಣ್ಯ ಇತ್ಯಾದಿ... ಎಲ್ಲಾ ವಸ್ತುಗಳನ್ನು ತೆಗೆದಿದ್ದಾರೆ.

Latha CG | news18
Updated:June 18, 2019, 1:22 PM IST
ಶಸ್ತ್ರಚಿಕಿತ್ಸೆಗೊಳಗಾದವನ ಹೊಟ್ಟೆಯಲ್ಲಿತ್ತು ಬೀಗದ ಕೀ, ನಾಣ್ಯ, ಸರ ಸೇರಿ 80 ವಸ್ತುಗಳು!;  ವೈದ್ಯ ಲೋಕಕ್ಕೆ ಸವಾಲಾಯಿತು ಪ್ರಕರಣ
ವ್ಯಕ್ತಿಯ ಹೊಟ್ಟೆ ಎಕ್ಸ್​​ರೇ
  • News18
  • Last Updated: June 18, 2019, 1:22 PM IST
  • Share this:
ಉದಯ್​ಪುರ (ಜೂ.18): ರಾಜಸ್ಥಾನದ ಉದಯ್​ಪುರದಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಮಾನಸಿಕ ಅಸ್ವಸ್ಥನೊಬ್ಬನ ಹೊಟ್ಟೆಯಲ್ಲಿ ಬೀಗದ ಕೀ, ಸರ, ನಾಣ್ಯಗಳು ಸೇರಿದಂತೆ ಒಟ್ಟು 80 ವಸ್ತುಗಳು ಪತ್ತೆಯಾಗಿವೆ. ಇದನ್ನು ನೋಡಿ ವೈದ್ಯರು ಶಾಕ್​ ಆಗಿದ್ದಾರೆ. ಬಳಿಕ ಆಪರೇಷನ್ ಮಾಡಿ ಆ ಎಲ್ಲಾ ವಸ್ತುಗಳನ್ನು ಹೊರತೆಗೆದಿದ್ದಾರೆ.

4 ವೈದ್ಯರ ತಂಡ 90 ನಿಮಿಷಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ವ್ಯಕ್ತಿಯ ಹೊಟ್ಟೆಯಲ್ಲಿದ್ದ ಎಲ್ಲ  ವಸ್ತುಗಳನ್ನು ತೆಗೆದಿದ್ದಾರೆ. ನಾವು ಇದನ್ನು ವಿಚಿತ್ರ ಹಾಗೂ ಅಪರೂಪದ ಪ್ರಕರಣವೆಂದು ಪರಿಗಣಿಸುತ್ತೇವೆ ಎಂದು ವೈದ್ಯರು ಹೇಳಿದ್ದಾರೆ.

"ಇದು ಒಂದು ವಿಚಿತ್ರ ಪ್ರಕರಣವಾಗಿದೆ. ಆ ವ್ಯಕ್ತಿಯು ವ್ಯಸನಿ ಹಾಗೂ ಮಾನಸಿಕ ಅಸ್ವಸ್ಥನಾಗಿದ್ದು, ಕೆಲವು ದಿನಗಳ ಹಿಂದೆ ತುಂಬಾ ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದಿದ್ದ. ಬಳಿಕ ನಾವು ಎಕ್ಸ್-ರೇ ಮಾಡಬೇಕೆಂದು ಹೇಳಿದ್ದೆವು. ಎಕ್ಸ್​-ರೇಯಲ್ಲಿ ನಮಗೆ ಸಣ್ಣ ಹಾಗೂ ದಪ್ಪ ಲೋಹದ​ ವಸ್ತುಗಳು, ಉಗುರುಗಳು ಕಾಣಿಸಿಕೊಂಡಿದ್ದವು. ಇದನ್ನು ನೋಡಿ ನಾವು ದಿಗ್ಭ್ರಮೆಗೊಂಡಿದ್ದೆವು" ಎಂದು ಡಾ.ಡಿ.ಕೆ.ಶರ್ಮಾ ಎಎನ್​ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಬಿಹಾರದಲ್ಲಿ ಉಲ್ಬಣಿಸಿದ ಮೆದುಳು ಜ್ವರ; ಮಕ್ಕಳ ಸಾವಿನ ಸಂಖ್ಯೆ 100 ಕ್ಕೆ ಏರಿಕೆ

ಎಕ್ಸ್​ ರೇ ಮಾಡಿದ ಬಳಿಕ ತಡ ಮಾಡದೇ ವೈದ್ಯರು ಆಪರೇಷನ್​ ಮಾಡಿದ್ದಾರೆ. ಆತನ ಹೊಟ್ಟೆಯಲ್ಲಿದ್ದ ಸರ, ಬೀಗದ ಕೀ, ನಾಣ್ಯ ಇತ್ಯಾದಿ... ಎಲ್ಲಾ ವಸ್ತುಗಳನ್ನು ತೆಗೆದಿದ್ದಾರೆ. ಒಟ್ಟು 800 ಗ್ರಾಂ ತೂಕದ ವಸ್ತುಗಳಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ವ್ಯಕ್ತಿಯು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಜೀವಕ್ಕೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ.ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿರುವುದರಿಂದ ಸಿಕ್ಕ-ಸಿಕ್ಕ ವಸ್ತುಗಳನ್ನೆಲ್ಲಾ ನುಂಗಿದ್ದಾನೆ. ಬಳಿಕ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತನನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ.

ಕಳೆದ ತಿಂಗಳು ಇಂತಹದ್ದೇ ಒಂದು ಪ್ರಕರಣದಲ್ಲಿ ವೈದ್ಯರು 40 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 116 ಉಗುರುಗಳು, ಉದ್ದನೆಯ ತಂತಿ, ಕಬ್ಬಿಣದ ತುಂಡುಗಳನ್ನು ಹೊರತೆಗೆದಿದ್ದರು.
First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ