Gang Rape: ಗಣಿಯಲ್ಲಿ ಸಾಂಗ್ ಶೂಟಿಂಗ್ ವೇಳೆ 8 ಮಾಡೆಲ್​​ಗಳ ಮೇಲೆ 80 ಪುರುಷರಿಂದ ಗ್ಯಾಂಗ್​ರೇಪ್​

ಆರೋಪಿಗಳು ಎಲ್ಲರಿಗೂ ಮಲಗಲು ಆದೇಶಿಸಿದರು. ನಂತರ ಸರದಿಯಂತೆ ಎಂಟು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಕೃತ್ಯವೆಸಗಿದ ಬಳಿಕ ಅವರ ಬಳಿಯಿಂದ ಎಲ್ಲಾ ವಸ್ತುಗಳನ್ನು ಆರೋಪಿಗಳ ಗ್ಯಾಂಗ್​ ದೋಚಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯರಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೋಹಾನ್ಸ್‌ಬರ್ಗ್‌: 8 ಮಂದಿ ಮಾಡೆಲ್​​ಗಳ (Models) ಮೇಲೆ 80 ಮಂದಿ ಪುರುಷರು ಸಾಮೂಹಿಕ ಅತ್ಯಾಚಾರ (Gang Rape) ನಡೆಸಿರುವ ಶಾಕಿಂಗ್​ ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ ಆಫ್ರಿಕಾದ ಪಟ್ಟಣವಾದ ಕ್ರುಗರ್ಸ್‌ಡಾರ್ಪ್‌ನಲ್ಲಿ (South African town of Krugersdorp) ಶೂಟಿಂಗ್​ಗೆ (Song Shooting) ತೆರಳಿದ್ದಾರೆ. ಆಗ ಎಂಟು ಮಹಿಳೆಯರ ಸಾಮೂಹಿಕ ಅತ್ಯಾಚಾರ ನಡೆದಿದೆ. ಇನ್ನು ಮಾಡೆಲ್​ಗಳ ಜೊತೆ ಇದ್ದ ವೀಡಿಯೊ ನಿರ್ಮಾಣ ಸಿಬ್ಬಂದಿಯ ಸಶಸ್ತ್ರಗಳನ್ನೂ ದರೋಡೆ ಮಾಡಲಾಗಿದೆ. ಅತ್ಯಾಚಾರ ಮತ್ತು ದರೋಡೆ ನಡೆದ ಸ್ಥಳದಲ್ಲೇ ಸಮೀಪವಿರುವ ಗಣಿಗಾರಿಕೆ ಸ್ಥಳದಲ್ಲಿ 80 ಮಂದಿಯನ್ನು ಬಂಧಿಸಲಾಗಿದೆ. 80 ಕ್ಕೂ ಹೆಚ್ಚು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದರು.

ಜಮಾ-ಜಮಾಸ್ ಕ್ರೂರತೆ

ಆರೋಪಿಗಳು ಜೋಹಾನ್ಸ್‌ಬರ್ಗ್ ಪ್ರದೇಶದ ಅನೇಕ ಮುಚ್ಚಿದ ಗಣಿ ಶಾಫ್ಟ್‌ಗಳಲ್ಲಿ ಚಿನ್ನವನ್ನು ಅಗೆಯುವ ಜಮಾ-ಜಮಾಸ್ ಎಂದು ಕರೆಯಲ್ಪಡುವ ಅಕ್ರಮ ಗಣಿಗಾರರಾಗಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ ಅಕ್ರಮ ಗಣಿಗಾರರಲ್ಲಿ ಹೆಚ್ಚಿನವರು ವಿದೇಶಿಯರಾಗಿದ್ದಾರೆ. ಸ್ಥಳೀಯ ನಿವಾಸಿಗಳ ಪ್ರಕಾರ, ಅಕ್ರಮ ಗಣಿಗಾರರ ಜಮಾ-ಜಮಾ ಗ್ಯಾಂಗ್‌ಗಳು ಈ ಪ್ರದೇಶದಲ್ಲಿ ವ್ಯಾಪಕ ಅಪರಾಧಗಳನ್ನು ಎಸಗುತ್ತಿವೆಯಂತೆ.

ಇದನ್ನೂ ಓದಿ: Mangaluru: ಪ್ರಿಯಕರನ ಜೊತೆ ಬೀಚ್​ಗೆ​ ಬಂದಿದ್ದ ಯುವತಿ ಮೇಲೆ ಅತ್ಯಾಚಾರ

ಸಾಂಗ್ ಶೂಟ್​ ಮಾಡುತ್ತಿದ್ದಾಗ ಅಟ್ಯಾಕ್​

ಕಳೆದ ವಾರ ಸ್ಥಗಿತಗೊಂಡಿರುವ ಗಣಿಗಳಲ್ಲಿ ಮ್ಯೂಸಿಕ್​​ ವೀಡಿಯೊವನ್ನು ಚಿತ್ರೀಕರಿಸುತ್ತಿದ್ದಾಗ ಆರೋಪಿಗಳ ಗ್ಯಾಂಗ್​ ದಾಳಿ ನಡೆಸಿದೆ. ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ಮಾಡಿ ಪುರುಷ ಸಿಬ್ಬಂದಿಯನ್ನು ಸೆರೆಯಲ್ಲಿಟ್ಟಿದ್ದಾರೆ. ಸಾಂಗ್​ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಮಾಡೆಲ್​​ಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 22 ಜನರ ಸಿಬ್ಬಂದಿಯಲ್ಲಿ 12 ಮಹಿಳೆಯರು ಮತ್ತು 10 ಪುರುಷರು ಮ್ಯೂಸಿಕ್ ವಿಡಿಯೋ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಆಗ ಶಸ್ತ್ರಸಜ್ಜಿತ ಪುರುಷರ ಗುಂಪು ದಾಳಿ ಮಾಡಿದ್ದಾರೆ ಎಂದು ಗೌಟೆಂಗ್ ಪ್ರಾಂತ್ಯದ ಪೊಲೀಸ್ ಕಮಿಷನರ್ ಲೆಫ್ಟಿನೆಂಟ್ ಜನರಲ್ ಎಲಿಯಾಸ್ ಮಾವೆಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಲಾಗಿ ಮಲಗಿಸಿ ಕೃತ್ಯ

ಆರೋಪಿಗಳು ಎಲ್ಲರಿಗೂ ಮಲಗಲು ಆದೇಶಿಸಿದರು. ನಂತರ ಸರದಿಯಂತೆ ಎಂಟು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಕೃತ್ಯವೆಸಗಿದ ಬಳಿಕ ಅವರ ಬಳಿಯಿಂದ ಎಲ್ಲಾ ವಸ್ತುಗಳನ್ನು ಆರೋಪಿಗಳ ಗ್ಯಾಂಗ್​ ದೋಚಿದೆ. ಸಿಬ್ಬಂದಿಯ ಎಲ್ಲಾ ವೀಡಿಯೊ ಉಪಕರಣಗಳನ್ನು ದೋಚಲಾಯಿತು. ಪೊಲೀಸರು 32 ಅತ್ಯಾಚಾರ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಹಿಳೆಯರಿಂದ ಡಿಎನ್‌ಎ ಸಂಗ್ರಹ

ಅತ್ಯಾಚಾರಕ್ಕೊಳಗಾದ ಮಹಿಳೆಯರಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಸಲಾಗಿದೆ. ಇದನ್ನು ಅಪರಾಧಿಗಳನ್ನು ಗುರುತಿಸಲು ಬಳಸಲಾಗುವುದು ಎಂದು ರಾಷ್ಟ್ರೀಯ ಪೊಲೀಸ್ ಸಚಿವ ಭೆಕಿ ಸೆಲೆ ಹೇಳಿದ್ದಾರೆ. ಬಂಧಿತರಾಗಿರುವ ಇತರರು ಅಕ್ರಮ ವಲಸೆ ಮತ್ತು ಅಕ್ರಮ ಗಣಿಗಾರಿಕೆಯ ಹೆಚ್ಚುವರಿ ಆರೋಪಗಳನ್ನು ಎದುರಿಸಬೇಕಾಗುತ್ತದೆ.

ಕೃತ್ಯ ಖಂಡಿಸಿ ಪ್ರತಿಭಟನೆ

ಅತ್ಯಾಚಾರದ ಬಗ್ಗೆ ಸಮುದಾಯದ ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಪಡಿಸಿದ 300 ಕ್ಕೂ ಹೆಚ್ಚು ಜನರು ಕ್ರುಗರ್ಸ್‌ಡಾರ್ಪ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಿದರು. ಸಾಮೂಹಿಕ ಅತ್ಯಾಚಾರ ಮತ್ತು ದರೋಡೆಯ ಸುದ್ದಿಯು ಪ್ರದೇಶದ ಸಮುದಾಯ ಮತ್ತು ಮಹಿಳಾ ಸಂಘಟನೆಗಳನ್ನು ಕೆರಳಿಸಿದೆ. ಅವರು ಕ್ರುಗರ್ಸ್‌ಡಾರ್ಪ್‌ನ ಸುತ್ತಲೂ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ ಎಂದು ದೂರಿದ್ದಾರೆ.

ಜಮಾ-ಜಮಾಗಳು ಮಾಡಿದ ಅನೇಕ ಅಪರಾಧಗಳನ್ನು ಪೊಲೀಸ್ ಠಾಣೆಯನ್ನು ಆಡಳಿತಕ್ಕೆ ಒಳಪಡಿಸಬೇಕೆಂದು ನಾವು ಒತ್ತಾಯಿಸಲಿದ್ದೇವೆ. ಆದರೆ ಏನನ್ನೂ ಮಾಡಲಾಗಿಲ್ ಎಂದು ಪ್ರತಿಭಟನೆ ನಡೆಸಿದ ಸಂಘಟನೆಯಾದ ಆಪರೇಷನ್ ಡುಡುಲಾದ ಪ್ರಧಾನ ಕಾರ್ಯದರ್ಶಿ ಝಂಡಿಲ್ ಡಾಬುಲಾ ಹೇಳಿದರು. ದಕ್ಷಿಣ ಆಫ್ರಿಕಾದಲ್ಲಿ ಅಕ್ರಮ ವಲಸಿಗರ ವಿರುದ್ಧ ಸಂಘಟನೆಯು ಕ್ರುಗರ್ಸ್‌ಡಾರ್ಪ್ ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಿತ್ತು.
Published by:Kavya V
First published: