ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಮೊಬೈಲ್ (Mobile) ಯುವ ಪೀಳಿಗೆಯ ದೇಹದ ಒಂದು ಭಾಗದಂತಾಗಿಬಿಟ್ಟಿದೆ. ಊಟ, ನಿದ್ದೆ ಬಿಟ್ಟರೂ ಮೊಬೈಲ್ ಮಾತ್ರ ಬಿಡಲ್ಲ. ಚಾರ್ಜ್ಗೆ ಹಾಕಿದ್ದರೂ ಕೂಡ ಮೊಬೈಲ್ ಉಪಯೋಗಿಸುತ್ತಿರುತ್ತಾರೆ. ಆದರೆ ಚಾರ್ಜ್ ಹಾಕಿ ಮೊಬೈಲ್ ಬಳಕೆ ಅಪಾಯ (Dangerous) ಎಂಬುದು ಗೊತ್ತಿದ್ದರೂ ಸಹ ಅದೊಂದು ಚಟವಾಗಿ ಬಳಸುವವರನ್ನ ನಾವು ನೋಡಿರುತ್ತೇವೆ. ಹೀಗೆ ಚಾರ್ಜ್ಗೆ ಹಾಕಿ ಮೊಬೈಲ್ನಲ್ಲಿ ವಿಡಿಯೋ ವೀಕ್ಷಿಸುತ್ತಿದ್ದ 8 ವರ್ಷದ ಬಾಲಕಿಯೊಬ್ಬಳು (Girl) ಮೊಬೈಲ್ ಸ್ಫೋಟಗೊಂಡು (Explode ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕೇರಳದಲ್ಲಿ (Kerala) ಸೋಮವಾರ ನಡೆದಿದೆ.
ಕೇರಳದ ತಿರುವಿಲ್ವಾಮಲದ ನಿವಾಸಿಯಾಗಿರುವ 3ನೇ ತರಗತಿ ಓದುತ್ತಿದ್ದ ಬಾಲಕಿ ಆದಿತ್ಯಶ್ರೀ ಎಂಬ ಬಾಲಕಿ ಮೊಬೈಲ್ ಬಳಸುವ ಸಂದರ್ಭದಲ್ಲಿ ಉಂಟಾದ ಸ್ಫೋಟದಿಂದ ಸಾವನ್ನಪ್ಪಿದ್ದಾಳೆ. ಆಕೆ ಸೋಮವಾರ ರಾತ್ರಿ ಸುಮಾರು 10:30ರ ವೇಳೆಗೆ ಚಾರ್ಜ್ಗೆ ಹಾಕಿದ್ದ ಮೊಬೈಲ್ ಫೋನ್ ಬಳಸುತ್ತಿದ್ದ ಸಂದರ್ಭದಲ್ಲಿ ಮೊಬೈಲ್ ಸ್ಫೋಟಗೊಂಡಿದೆ.
ಮುಖಕ್ಕೆ ಗಂಭೀರ ಗಾಯ
ಸೋಮವಾರ ರಾತ್ರಿ ಬಾಲಕಿ ಮೊಬೈಲ್ನಲ್ಲಿ ವೀಡಿಯೋ ವೀಕ್ಷಿಸುತ್ತಿದ್ದಳು ಎನ್ನಲಾಗಿದೆ. ಮೊಬೈಲ್ ಆಕೆಯ ಕೈಯಲ್ಲಿದ್ದಾಗಲೇ ಸ್ಫೋಟಗೊಂಡಿದ್ದರಿಂದ ಆಕೆಯ ಮುಖದ ಭಾಗಗಳಿಗೆ ಗಂಭೀರವಾದ ಗಾಯಗಳಾಗಿವೆ. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾದೆ. ಆದರೆ ಚಿಕಿತ್ಸೆ ಫಲಕಾರಿಯಾದ ವೇಳೆ ಆಕೆ ಕೊನೆಯುಸಿರೆಳೆದಿದ್ದಾಳೆ.
ದಂಪತಿಯ ಏಕೈಕ ಪುತ್ರಿ
ಆದಿತ್ಯಶ್ರಿ ಸ್ಥಳೀಯ ಶಾಲೆಯಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಪಸಯನೂರು ಪೊಲೀಸರು ಸ್ಥಳಕ್ಕಾಗಮಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಆದಿತ್ಯಶ್ರೀ ಅಶೋಕ ಹಾಗೂ ಸೌಮ್ಯ ದಂಪತಿಯ ಏಕೈಕ ಪುತ್ರಿಯಾಗಿದ್ದು, ಈ ಘಟನೆ ಕುಟುಂಬಸ್ತರನ್ನು ದುಃಖದಲ್ಲಿ ಮುಳುಗಿಸಿದೆ.
ಉಜ್ಜಯನಿಯಲ್ಲಿ ಮೊಬೈಲ್ ಸ್ಫೋಟವಾಗಿ ವ್ಯಕ್ತಿ ಸಾವು
ಫೆಬ್ರವರಿಯಲ್ಲಿ, ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡು ಸಾವನ್ನಪ್ಪಿದ್ದರು. 68 ವರ್ಷದ ವ್ಯಕ್ತಿ ತಮ್ಮ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದು, ಅವರ ಮುಖ ಮತ್ತು ದೇಹದ ಇತರ ಭಾಗಗಳು ತೀವ್ರವಾಗಿ ಹಾನಿಗೊಳಗಾಗಿವೆ.
ಬರೋದ್ ತನ್ನ ಸ್ನೇಹಿತನೊಂದಿಗೆ ಹೊರ ಹೋಗಲು ಸಿದ್ಧರಾಗಿದ್ದರು. ಆದರೆ ಸ್ನೇಹಿತ ಹಲವು ಬಾರಿ ಫೋನ್ ಕರೆಗೆ ಪ್ರಯತ್ನ ಪಟ್ಟರೂ, ಕನೆಕ್ಟ್ ಆಗಿಲ್ಲ. ಹಾಗಾಗಿ ಸ್ವತಃ ಆತ ಮನೆಗೆ ಬಂದಾಗ ಸಾವಿನ ವಿಚಾರ ತಿಳಿದುಬಂದಿದೆ. ಈ ವೇಳೆ ಆತ ದೇಹದ ಮೇಲ್ಭಾಗದ ಭಾಗಗಳು ತೀವ್ರವಾಗಿ ಗಾಯಗಳಾಗಿ ಸತ್ತಿರುವುದು ಬಳಕಿಗೆ ಬಂದಿತ್ತು. ಮೃತದೇಹದ ಬಳಿ ಮೊಬೈಲ್ ಫೋನ್ ತುಣುಕುಗಳೂ ಪತ್ತೆಯಾಗಿವೆ. ಮನೆಯಲ್ಲಿ ಬೇರೆ ಯಾವುದೇ ಸ್ಫೋಟಕ ವಸ್ತುಗಳು ಸಿಕ್ಕದ ಕಾರಣ ಮೊಬೈಲ್ ಸ್ಫೋಟಗೊಂಡೇ ಸಾವನ್ನಪ್ಪಿದ್ದಾರೆ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ: Madhya Pradesh: ದುಬಾರಿ ಕಾಲೇಜಿಗೆ ಸೇರಿಸಲಿಲ್ಲ ಎಂದು ಪಟಾಕಿ ಸಿಡಿಸಿಕೊಂಡು ಯುವಕ ಆತ್ಮಹತ್ಯೆ
ಮೊಬೈಲ್ನಲ್ಲಿ ಮಾತನಾಡುವಾಗ ಬ್ಲಾಸ್ಟ್
ತನಿಖೆ ವೇಳೆ ಸಾವನ್ನಪ್ಪಿದ್ದ ವ್ಯಕ್ತಿ ಮೊಬೈಲ್ ಬ್ಲಾಸ್ಟ್ ಆದ ಸಂದರ್ಭದಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದರೂ ಎನ್ನಲಾಗುತ್ತಿದ್ದು, ಈ ವೇಳೆ ಮೊಬೈಲ್ ಅನ್ನ ಚಾರ್ಜಿಂಗ್ಗೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಚಾರ್ಜಿಂಗ್ ಮಾಡುವಾಗ ಫೋನ್ ಬಳಕೆ ಅಪಾಯ
ಚಾರ್ಜಿಂಗ್ ಮಾಡುವಾಗ ಮೊಬೈಲ್ ಬಳಸುವುದು ಅಪಾಯ. ಮೊಬೈಲ್ ಚಾರ್ಜಿಂಗ್ ಮಾಡುವಾಗ ಯಾವುದೇ ಕಾರಣಕ್ಕೂ ಫೋನ್ ಬಳಕೆ ಮಾಡಬೇಡಿ. ಫೋನ್ ಬಳಕೆ ಮಾಡುತ್ತ ಚಾರ್ಜ್ ಮಾಡುವುದರಿಂದ ಫೋನ್ ಬಿಸಿ ಆಗಬಹುದು ಹಾಗೂ ಅತೀ ಬಿಸಿಯಾಗಿ ಅಪಾಯಕರ ಹಾನಿಗೆ ಕಾರಣವಾಗಲೂಬಹುದು. ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವ ಅಭ್ಯಾಸ ಇದ್ದರೇ ಬಿಟ್ಟುಬಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ