ನವದೆಹಲಿ(ಫೆ.21): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯಗಳಿಸಿದೆ. 70 ಕ್ಷೇತ್ರಗಳ ಪೈಕಿ 62 ಸ್ಥಾನಗಳಲ್ಲಿ ಆಪ್ ಗೆಲುವಿನ ನಗೆ ಬೀರಿದೆ. ಆ ಮೂಲಕ ಸಿಎಂ ಅರವಿಂದ್ ಕೇಜ್ರಿವಾಲ್ ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಿದ್ದಾರೆ.
ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ 24 ಮಹಿಳಾ ಅಭ್ಯರ್ಥಿಗಳು ಈ ಬಾರಿಯ
ದೆಹಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆಮ್ ಆದ್ಮಿ ಪಕ್ಷದಿಂದ 9 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಈ 9 ಅಭ್ಯರ್ಥಿಗಳ ಪೈಕಿ 8 ಮಹಿಳಾ ಅಭ್ಯರ್ಥಿಗಳು ತಾವು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಒಟ್ಟು 79 ಅಭ್ಯರ್ಥಿಗಳು ಚುನಾವಣೆಗೆ ನಿಂತಿದ್ದರು.
ಎಎಪಿಯಿಂದ ಸ್ಪರ್ಧಿಸಿ ಗೆದ್ದ ಮಹಿಳಾ ಅಭ್ಯರ್ಥಿಗಳು ಇವರೇ ಆಗಿದ್ದಾರೆ.
- ಅತಿಶಿ
- ರಾಖಿ ಬಿರ್ಲಾ
- ಭವ್ನಾ ಗೌರ್
- ಪರ್ಮಿಳಾ ಟೋಕಸ್
- ಧನ್ವತಿ ಚಾಂದೆಲಾ
- ಬಂದನಾ ಕುಮಾರಿ
- ಪ್ರೀತಿ ಟೋಮರ್
- ರಾಜ್ ಕುಮಾರಿ ಧಿಲೋನ್
ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದ
ಆಪ್ ಅಭ್ಯರ್ಥಿ ಅತಿಶಿ ಒಟ್ಟು 11,393 ಮತಗಳಿಂದ ಗೆಲ್ಲುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಶಿವಾನಿ ಚೋಪ್ರಾ ಮತ್ತು ಬಿಜೆಪಿ ಪಕ್ಷದ ಧರ್ಮಂಬಿರ್ ಸಿಂಗ್ ಅವರನ್ನು ಸೋಲಿಸಿದ್ದಾರೆ.
ಕೊರೊನಾ ವೈರಸ್: ಚಿಂತೆಗೊಂಡ ಭಾರತದ ಸ್ಮಾರ್ಟ್ಫೋನ್ ಉದ್ಯಮ; ಅತಂತ್ರಗೊಂಡ ಹಡಗುಗಳು
ಆಪ್ ಅಭ್ಯರ್ಥಿ ಪ್ರಮಿಳಾ ಟೋಕಾಸ್ ಆರ್ಕೆ ಪುರಂ ಕ್ಷೇತ್ರದಿಂದ ಸ್ಪರ್ಧಿಸಿ 10 ಸಾವಿರ ಮತಗಳಿಂದ ಗೆದ್ದು, ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಶರ್ಮಾ ಅವರನ್ನು ಪರಾಜಿತಗೊಳಿಸಿದ್ದಾರೆ.
ಮಂಗೋಲಿ ಪುರಿ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ರಾಖಿ ಬಿರ್ಲಾ ಬಿಜೆಪಿಯ ಕರಂ ಸಿಂಗ್ ಶರ್ಮಾ ವಿರುದ್ದ ಸೆಣಸಾಡಿ, 30,116 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಆಪ್ ಅಭ್ಯರ್ಥಿ ಭವ್ನಾ ಗೌರ್ ಪಲಾಂ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ವಿಜಯ್ ಪಂಡಿತ್ ವಿರುದ್ಧ 32,765 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.
ರಾಜೌರಿ ಗಾರ್ಡೆನ್ ಕ್ಷೇತ್ರದಿಂದ ಸ್ಪರ್ಧಿಸಿದ ಆಪ್ ಮಹಿಳಾ ಅಭ್ಯರ್ಥಿ ಧನ್ವತಿ ಚಾಂದೇಲಾ 22,972 ಮತಗಳನ್ನು ಪಡೆದು ಗೆಲ್ಲುವ ಮೂಲಕ, ಬಿಜೆಪಿಯ ರಮೇಶ್ ಖನ್ನಾ ಅವರನ್ನು ಸೋಲಿಸಿದ್ದಾರೆ.
ಬೆಂಟ್ಲಿ ಕಾರು ಅಪಘಾತ ಪ್ರಕರಣ: ನಲಪಾಡ್ ಪುಂಡಾಟ ಬಯಲಾಗಿದ್ದು ಹೇಗೆ ಗೊತ್ತಾ?; ಇಲ್ಲಿದೆ ರೋಚಕ ಕತೆ
ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿ ಆಮ್ ಆದ್ಮಿಯ ಬಂದನಾ ಕುಮಾರಿ 3000 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ ವಿರುದ್ಧ ಗೆದ್ದಿದ್ದಾರೆ.
ತ್ರಿನಗರದಲ್ಲಿ ಎಎಪಿಯ ಪ್ರೀತಿ ಟೋಮರ್ ಬಿಜೆಪಿಯ ತಿಲಕ್ ರಾಮ್ ಗುಪ್ತಾ ವಿರುದ್ಧ 10,710 ಮತಗಳನ್ನು ಪಡೆದು ಗೆದ್ದಿದ್ದಾರೆ.
ಹರಿನಗರ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ರಾಜ್ ಕುಮಾರಿ ಧಿಲೋನ್ ಬಿಜೆಪಿ ಅಭ್ಯರ್ಥಿ ತಜಿಂದರ್ ಪಾಲ್ ಸಿಂಗ್ ವಿರುದ್ಧ 20 ಸಾವಿರ ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ