ಪ್ರಾಣವನ್ನೇ ಒತ್ತೆಯಿಟ್ಟು ಬೆಂಕಿ ಬಿದ್ದ ಮನೆಯಿಂದ 4 ಮಕ್ಕಳ ರಕ್ಷಿಸಿದ ತುಂಬು ಗರ್ಭಿಣಿ..!

ಗುರುವಾರ ಮಧ್ಯಾಹ್ನ ಸುಮಾರು 12.30 ರ ಸಮಯದಲ್ಲಿ ಬೇಕರಿಯಲ್ಲಿ ಸಿಲಿಂಡರ್​ ಸ್ಫೋಟಗೊಂಡಿದೆ. ಬೇಕರಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಬಳಿಕ ಮನೆಗೂ ಸಹ ಬೆಂಕಿ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latha CG | news18
Updated:February 1, 2019, 4:05 PM IST
ಪ್ರಾಣವನ್ನೇ ಒತ್ತೆಯಿಟ್ಟು ಬೆಂಕಿ ಬಿದ್ದ ಮನೆಯಿಂದ  4 ಮಕ್ಕಳ ರಕ್ಷಿಸಿದ ತುಂಬು ಗರ್ಭಿಣಿ..!
ಬೆಂಕಿಗಾಹುತಿಯಾಗಿರುವ ಮನೆ
Latha CG | news18
Updated: February 1, 2019, 4:05 PM IST
ಆ ಮನೆಗೆ ಬೆಂಕಿ ಬಿದ್ದು, ಹೊತ್ತಿ ಉರಿಯುತ್ತಿತ್ತು. ಕೆಲವೇ ಕ್ಷಣಗಳಲ್ಲಿ ಮನೆ ಕುಸಿದು ಬೀಳುವುದರಲ್ಲಿತ್ತು. ಆ ಪುಟ್ಟ ಮನೆಯಲ್ಲಿ 8 ತಿಂಗಳ ತುಂಬು ಗರ್ಭಿಣಿ  ಜೊತೆ ಆಕೆಯ 4 ಮಕ್ಕಳು ಸಹ ಇದ್ದವು. ಬೆಂಕಿ ಹೊತ್ತಿಕೊಂಡಿದೆ ಎಂದು ಗೊತ್ತಾದ ತಕ್ಷಣ ಆ ಮಹಿಳೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ತನ್ನ 4 ಮಕ್ಕಳನ್ನು ಕಾಪಾಡಿದ್ದಾಳೆ. ಇಂತಹ ಮನಕಲುಕುವ ಘಟನೆ ನಡೆದಿರುವುದು ಗುರುವಾರ ಘಾಜಿಯಾಬಾದ್​ನಲ್ಲಿ.

8 ತಿಂಗಳ ಗರ್ಭಿಣಿ ಫಾತಿಮಾ(27) ತನ್ನ ಮಕ್ಕಳನ್ನು ರಕ್ಷಿಸುವ ಸಲುವಾಗಿ ಬಾಲ್ಕನಿಯಿಂದ ರಸ್ತೆಗೆ ಎಸೆದಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಂತರ ಆಕೆಯೂ ಸಹ ಮನೆಯಿಂದ ಹೊರಬಂದಿದ್ದಾಳೆ, ಬಳಿಕ ಮನೆ ಸಂಪೂರ್ಣ ಕುಸಿದು ಬಿದ್ದಿದೆ ಎನ್ನಲಾಗಿದೆ.

ಬೆಂಕಿ ಬಿದ್ದಿದ್ದು ಹೇಗೆ.?

ಫಾತಿಮಾಳ ಗಂಡ ತನ್ನ ಮನೆಯ ನೆಲಮಹಡಿಯಲ್ಲಿ ಬೇಕರಿ ಇಟ್ಟುಕೊಂಡಿದ್ದ. ಗುರುವಾರ ಮಧ್ಯಾಹ್ನ ಸುಮಾರು 12.30 ರ ಸಮಯದಲ್ಲಿ ಬೇಕರಿಯಲ್ಲಿ ಸಿಲಿಂಡರ್​ ಸ್ಫೋಟಗೊಂಡಿದೆ. ಬೇಕರಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಬಳಿಕ ಮನೆಗೂ ಸಹ ಬೆಂಕಿ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಊಟದ ನೆಪ ಹೇಳಿ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ವೈದ್ಯ, ಬಯಲಲ್ಲೇ ಮಹಿಳೆಗೆ ಹೆರಿಗೆ; ಅಮಾನವೀಯ ಘಟನೆ​

ಫಾತಿಮಾಳ ಗಂಡ ಮತ್ತು ಆತನ ಸಹೋದರರು ಬೇಕರಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದರು. ಆಗ ಫಾತಿಮಾ ಮೊದಲನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದರು. ಹೆರಿಗೆಗೆ ಇನ್ನೂ ಕೆಲವೇ ದಿನಗಳು ಇದ್ದುದ್ದರಿಂದ ಫಾತಿಮಾ ವೇಗವಾಗಿ ನಡೆಯಲು ಆಗುತ್ತಿರಲಿಲ್ಲ.

ಮಕ್ಕಳು ಸಹ ಫಾತಿಮಾ ಜೊತೆಯಲ್ಲಿಯೇ ಇದ್ದವು. ಮಕ್ಕಳನ್ನು ಮನೆಯಿಂದ ಹೊರಗೆ ರಸ್ತೆಗೆ ಎಸೆಯಿರಿ ನಾವು ಹಿಡಿದುಕೊಳ್ಳುತ್ತೇವೆ ಎಂದು ನೆರೆಹೊರೆಯವರು ಹೇಳಿದರು. ತಕ್ಷಣ ಫಾತಿಮಾ ಒಬ್ಬೊಬ್ಬರನ್ನೇ ಬಾಲ್ಕನಿಯಿಂದ ರಸ್ತೆಗೆ ಎಸೆದರು. ಅಲ್ಲಿ ಕೈ ಹಿಡಿದು ರಕ್ಷಿಸಲು ನಿಂತಿದ್ದ ಪಕ್ಕದ ಮನೆಯವರು ಮಕ್ಕಳನ್ನು ಕಾಪಾಡಿದರು. ಮಕ್ಕಳಿಗೆ ಮತ್ತು ಫಾತಿಮಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Loading...

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ