ಗರ್ಭ ಧರಿಸಿದ್ದ ಮೇಕೆಯನ್ನೂ ಬಿಡಲಿಲ್ಲ ಕಾಮುಕರು!: ಹರಿಯಾಣದಲ್ಲೊಂದು ಹೀನಕೃತ್ಯ

news18
Updated:July 29, 2018, 1:26 PM IST
ಗರ್ಭ ಧರಿಸಿದ್ದ ಮೇಕೆಯನ್ನೂ ಬಿಡಲಿಲ್ಲ ಕಾಮುಕರು!: ಹರಿಯಾಣದಲ್ಲೊಂದು ಹೀನಕೃತ್ಯ
ಸಾಂದರ್ಭಿಕ ಚಿತ್ರ
  • Share this:
ನ್ಯೂಸ್​ 18 ಕನ್ನಡ

ಹರಿಯಾಣ (ಜುಲೈ 29): ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಲೇ ಇವೆ. ಆದರೆ, ಹರಿಯಾಣದಲ್ಲಿ ಪುರುಷರ ಪೈಶಾಚಿಕ ಕೃತ್ಯಕ್ಕೆ ಮೇಕೆಯೊಂದು ಬಲಿಯಾಗಿದೆ!

ಹೌದು, ಮಹಿಳೆ, ಹೆಣ್ಣುಮಕ್ಕಳನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಪುರುಷರು ಪ್ರಾಣಿಯನ್ನೂ ಬಳಸಿಕೊಂಡಿರುವ ಘಟನೆ ಹರಿಯಾಣದಲ್ಲಿ ವರದಿಯಾಗಿದೆ. ಗರ್ಭ ಧರಿಸಿದ್ದ ಮೇಕೆಯೊಂದರ ಮೇಲೆ 8 ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ ಕಾರಣ ಆ ಮೇಕೆ ಸಾವನ್ನಪ್ಪಿದ ಘಟನೆ ಹರಿಯಾಣದ ಮೇವತ್​​ ಜಿಲ್ಲೆಯಲ್ಲಿ ನಡೆದಿದೆ.

ತಮ್ಮ ಮೇಕೆ ಕಾಣೆಯಾಗಿದೆ ಎಂದು ಮೇಕೆಯ ಮಾಲೀಕ ಪೊಲೀಸ್​ ಠಾಣೆಯಲ್ಲಿ ಕಳೆದ ವಾರ ದೂರು ನೀಡಿದ್ದರು. ಅದನ್ನು ಹುಡುಕಲು ಹೊರಟಾಗ ಪೊಲೀಸರಿಗೆ ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಎಲ್ಲ 8 ಜನರೂ ಕಣ್ಮರೆಯಾಗಿದ್ದು, ಸತ್ತಿರುವ ಮೇಕೆಯ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ವರದಿ ಕೈಗೆ ಬರಬೇಕಾಗಿದೆ ಎಂದು ನಾಗಿನ ಪೊಲೀಸ್​ ಠಾಣೆಯ ಎಸ್​ಐ ರಾಜಬೀರ್ ಸಿಂಗ್​ ಹೇಳಿದ್ದಾರೆ.

ಜುಲೈ 25ರ ರಾತ್ರಿ ಮೇಕೆಯನ್ನು ಕದ್ದುಕೊಂಡು ಹೋಗಿದ್ದ ಸಾವ್ಕಾರ್​, ಹರೂನ್​, ಜಾಫರ್​ ಮತ್ತು ಉಳಿದ ಐವರು ಆ ಮೇಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಇವರೆಲ್ಲರೂ ಡ್ರಗ್​ ಅಡಿಕ್ಟ್​ ಆಗಿದ್ದರು. ಇವರ ವಿರುದ್ಧ ಸೆಕ್ಷನ್​ 34, 377 ಮತ್ತು 429 ಹಾಗೂ 1960ರ ಪ್ರಿವೆನ್ಷನ್​ ಆಫ್​ ಕ್ರೂಯೆಲ್ಟಿ ಟು ಅನಿಮಲ್​ ಆ್ಯಕ್ಟ್​ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ.

 
First published:July 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ