HOME » NEWS » National-international » 8 KILLED AS ROCKETS SLAM INTO KABUL TALIBAN DENIES HAND AHEAD OF QATAR TALKS WITH POMPEO MAK

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರಿಂದ ರಾಕೆಟ್​ ದಾಳಿ; 8 ಸಾವು, 31 ಜನರಿಗೆ ಗಾಯ

ಅಫ್ಘಾನಿಸ್ತಾನದಲ್ಲಿ ವಿವಿಧ ದೇಶಗಳ ರಾಯಭಾರ ಕಚೇರಿಗಳು ಹಾಗೂ ಅಂತಾರಾಷ್ಟ್ರೀಯ ಕಂಪೆನಿಗಳು ಅಧಿಕ ಸಂಖ್ಯೆಯಲ್ಲಿರುವ ಸಾಲ್ವೋ ಮತ್ತು ಉತ್ತರ ಕಾಬೂಲ್‌ನ ವಿವಿಧ ಭಾಗಗಳನ್ನು ಗುರಿಯಾಗಿಸಿ ರಾಕೆಟ್ ದಾಳಿಯನ್ನು ನಡೆಸಲಾಗಿದೆ.

news18-kannada
Updated:November 21, 2020, 3:09 PM IST
ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರಿಂದ ರಾಕೆಟ್​ ದಾಳಿ; 8 ಸಾವು, 31 ಜನರಿಗೆ ಗಾಯ
ಗಾಯಾಳುಗಳನ್ನು ಸಾಗಿಸುತ್ತಿರುವುದು.
  • Share this:
ಕಾಬೂಲ್ (ನವೆಂಬರ್​ 21); ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಉಗ್ರಗಾಮಿಗಳು ಶನಿವಾರ ಮುಂಜಾನೆ ನಡೆಸಿರುವ ರಾಕೆಟ್​ ದಾಳಿಯಲ್ಲಿ 8 ಜನ ಮೃತಪಟ್ಟಿದ್ದರೆ, ಸುಮಾರು 31ಕ್ಕೂ ಅಧಿಕ ಜನ ಗಾಯಾಳುಗಳಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಬೂಲ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಉಗ್ರಗಾಮಿಗಳು ರಾಕೆಟ್​ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಭಯೋತ್ಪಾದಕರು ಕಾಬೂಲ್ ನಗರದ ಮೇಲೆ ಇಂದು ಒಂದೇ ದಿನ 23 ರಾಕೆಟ್​ಗಳನ್ನು ಹಾರಿಸುವ ಮೂಲಕ ಕ್ರೌರ್ಯ ಮೆರೆದಿದ್ದಾರೆ ಎಂದು ಅಫ್ಘಾನಿಸ್ತಾನ್ ಸರ್ಕಾರದ ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಅರಿಯನ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ವಿವಿಧ ದೇಶಗಳ ರಾಯಭಾರ ಕಚೇರಿಗಳು ಹಾಗೂ ಅಂತಾರಾಷ್ಟ್ರೀಯ ಕಂಪೆನಿಗಳು ಅಧಿಕ ಸಂಖ್ಯೆಯಲ್ಲಿರುವ ಸಾಲ್ವೋ ಮತ್ತು ಉತ್ತರ ಕಾಬೂಲ್‌ನ ವಿವಿಧ ಭಾಗಗಳನ್ನು ಗುರಿಯಾಗಿಸಿ ರಾಕೆಟ್ ದಾಳಿಯನ್ನು ನಡೆಸಲಾಗಿದೆ.

ಇದನ್ನೂ ಓದಿ : ಮಲ್ಲಿಕಾರ್ಜುನ ಖರ್ಗೆ ಗಬ್ಬರ್ ಸಿಂಗ್, ಶರಣಪ್ರಕಾಶ ಸಾಂಬಾ; ಮಾಲೀಕಯ್ಯ ಗುತ್ತೇದಾರ್​ ಲೇವಡಿ

ರಾಕೆಟ್​ ದಾಳಿಗೆಗೆ ದೊಡ್ಡ ಕಟ್ಟಡಗಳು ವೈದ್ಯಕೀಯ ಸಂಕೀರ್ಣದ ಗೋಡೆ-ಕಿಟಕಿಗಳು ಹಾನಿಗೊಳಗಾಗಿವೆ. ಇದಲ್ಲದೆ ಭಯೋತ್ಪಾದಕ ಕೃತ್ಯಕ್ಕೆ ಭಾರೀ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗಳು ನಷ್ಟವಾಗಿವೆ. ಆದರೆ, ಈ ದಾಳಿಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಭಯೋತ್ಪಾದಕ ಗುಂಪು ಹೊಣೆ ಹೊತ್ತುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಅಫ್ಘಾನಿಸ್ತಾನದ ಶಿಕ್ಷಣ ಸಂಸ್ಥೆಗಳ ಮೇಲೆ ಭಯೋತ್ಪಾದಕರು ನಡೆಸಿದ್ದ ದಾಳಿಯಲ್ಲಿ ಕನಿಷ್ಟ 50 ಜನ ಮೃತಪಟ್ಟಿದ್ದರು. ಈ ಘಟನೆಯ ನಂತರ ಅಫ್ಘಾನಿಸ್ತಾನದಲ್ಲಿ ನಡೆದ ಅತಿದೊಡ್ಡ ಮಟ್ಟದ ದಾಳಿ ಇದಾಗಿದೆ. ಅಫ್ಘಾನಿಸ್ತಾನದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮತ್ತು ಪ್ರಸ್ತುತ ದಾಳಿಯ ಹಿಂದೆ ತಾಲಿಬಾನ್ ಉಗ್ರ ಸಂಘಟನೆಯ ಕೈವಾಡ ಇದೆ ಎಂದು ಅಫ್ಘಾನಿಸ್ತಾನದ ಸರ್ಕಾರ ಆರೋಪಿಸುತ್ತಿದೆಯಾದರೂ ತಾಲಿಬಾನ್ ಇದನ್ನು ನಿರಾಕರಿಸುತ್ತಲೇ ಇದೆ.
Published by: MAshok Kumar
First published: November 21, 2020, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories