Deadly Accident: ಮದುವೆಗೆ ಹೊರಟಿದ್ದವರು ಸೇರಿದ್ದು ಮಸಣ! ನದಿಗೆ ಕಾರು ಬಿದ್ದು 8 ಮಂದಿ ದುರ್ಮರಣ

ಮದುವೆಗೆ ಅಂತ ಹೊರಟವರು ಮಧ್ಯ ದಾರಿಯಲ್ಲೇ ಮಸಣ ಸೇರಿದರು. ಹೊಸ ಬಾಳಿನ ಕನಸು ಕಾಣುತ್ತಿದ್ದ ವರ (Groom), ಬದುಕನ್ನೇ ಮುಗಿಸಿ ಹೊರಟಿದ್ದ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ, ಆ ಗ್ರಾಮದಲ್ಲಿ ಆಗಿದ್ದಾದರೂ ಏನು ಅಂತ ತಿಳಿಯೋದಕ್ಕೆ ಮುಂದೆ ಓದಿ…

ನದಿಗೆ ಬಿದ್ದಿರುವ ಕಾರು

ನದಿಗೆ ಬಿದ್ದಿರುವ ಕಾರು

  • Share this:
ರಾಜಸ್ಥಾನ: ಆ ಮನೆಯಲ್ಲಿ ಇಂದು ಸಂಭ್ರಮ ಮನೆ ಮಾಡಿತ್ತು. ಮಗನ (Son) ಮದುವೆ (Marriage) ಅಂತ ಮನೆಯವರೆಲ್ಲ ಸಂತಸದಿಂದಿದ್ದರು. ಆಪ್ತರು, ಸ್ನೇಹಿತರು, ಸಂಬಂಧಿಕರು ಎಲ್ಲಾ ಅಲ್ಲಿ ನೆರೆದಿದ್ದರು. ಸಂತೋಷದಿಂದಲೇ ಕಾರು (Car) ಹತ್ತಿ ವಧುವಿನ (Bride) ಮನೆಯತ್ತ ಹೊರಟಿದ್ದರು. ಆದರೆ ಅದೇ ಅವರೆಲ್ಲರಿಗೆ ಕೊನೆಯ ಪ್ರಯಾಣ (Last Journey) ಆಗಿರುತ್ತದೆ ಅಂತ ಒಬ್ಬರಿಗೂ ಗೊತ್ತಾಗಲಿಲ್ಲ. ಗೊತ್ತಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಮದುವೆಗೆ ಅಂತ ಹೊರಟವರು ಮಧ್ಯ ದಾರಿಯಲ್ಲೇ ಮಸಣ ಸೇರಿದರು. ಹೊಸ ಬಾಳಿನ ಕನಸು ಕಾಣುತ್ತಿದ್ದ ವರ (Groom), ಬದುಕನ್ನೇ ಮುಗಿಸಿ ಹೊರಟಿದ್ದ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ, ಆ ಗ್ರಾಮದಲ್ಲಿ ಆಗಿದ್ದಾದರೂ ಏನು ಅಂತ ತಿಳಿಯೋದಕ್ಕೆ ಮುಂದೆ ಓದಿ…

ಮದುವೆಗೆ ಹೊರಟವರು ಮಸಣ ಸೇರಿದರು!

ರಾಜಸ್ತಾನದ ಕೋಟಾ ಎಂಬಲ್ಲಿ ಇಂಥದ್ದೊಂದು ಭೀಕರ ಅಪಘಾತ ನಡೆದಿದೆ. ಇಲ್ಲಿನ ಚಂಬಲ್ ನದಿಗೆ ಕಾರು ಬಿದ್ದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ 8 ಮಂದಿ ಮೃತಪಟ್ಟಿದ್ದಾಗಿ ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು

ವರನ ಕಡೆಯವರು ಕುಳಿತಿದ್ದ ಕಾರು ಛೋಟಿ ಪುಲಿಯದಿಂದ ನದಿಗೆ ಬಿದ್ದ ಪರಿಣಾಮ ಈ ಘಟನೆ ನಡೆದಿದೆ. “ಮದುವೆ ಮೆರವಣಿಗೆ ಉಜ್ಜಯಿನಿಗೆ ಹೋಗುತ್ತಿತ್ತು, ಬಸ್ ಮುಂದೆ ಹೋಗಿತ್ತು ಮತ್ತು ಕಾರು ದಾರಿ ತಪ್ಪಿತು.

ಛೋಟಿ ಪುಲಿಯ ಮೇಲೆ ಬಂದ ಅದು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಕಾರಿನಿಂದ 6 ಮೃತದೇಹಗಳನ್ನು ಮತ್ತು ಎರಡನ್ನು ನದಿಯಿಂದ ಹೊರತೆಗೆಯಲಾಗಿದೆ ಎಂದು ಕೋಟಾದ ಎಸ್ಪಿ ಸಿಟಿ ಕೇಸರ್ ಸಿಂಗ್ ಶೇಖಾವತ್ ಹೇಳಿದ್ದಾರೆ.

ಇದನ್ನೂ ಓದಿ: Murder: ಆಂಟಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಕೊಂದು ಶವವನ್ನು ಬಚ್ಚಿಟ್ಟು, ಆಕೆಯ ಗಂಡನೊಂದಿಗೆ ಠಾಣೆಗೆ ತೆರಳಿ ದೂರು ಕೊಟ್ಟ!

ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ

ಅಪಘಾತ ನಡೆಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಸ್ಖಳೀಯರ ಸಹಾಯದಿಂದ ಕ್ರೇನ್ ಮೂಲಕ ಕಾರನ್ನು ನದಿಯಿಂದ ಹೊರಕ್ಕೆ ತೆಗೆಯಲಾಗಿದೆ. ಸದ್ಯ ಮೃತ ದೇಹಗಳನ್ನು ಎಂಬಿಎಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಚಾಲಕನ ಮೇಲೆ ಅನುಮಾನ

ಘಟನೆಗೆ ನೈಜ ಕಾರಣ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ಕಾರಿನ ಚಾಲಕ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವ ಶಂಕೆಯೂ ಇದೆ. ಕಾರು ನದಿಗೆ ಬೀಳುತ್ತಿದ್ದಂತೆ ಕಾರಿನಲ್ಲಿದ್ದವರು ಗಾಜನ್ನು ತೆರೆಯಲು ಪ್ರಯತ್ನಿಸಿದ್ದಾರೆ.

ಆದರೆ ಒಂದು ಗ್ಲಾಸ್ ಮಾತ್ರ ತೆರೆಯಲು ಸಾಧ್ಯವಾಯಿತು, ಇದರಿಂದಾಗಿ ಹೊರಬರಲು ಸಾಧ್ಯವಾಗದೇ ಕಾರಿನಲ್ಲಿ 6 ಜನರು ಸಾವನ್ನಪ್ಪಿದರು, ಉಳಿದ 2 ಜನರ ದೇಹಗಳು ನದಿಯಲ್ಲಿ ತೇಲಿ ಹೋಗಿವೆ ಎನ್ನಲಾಗಿದೆ.

ಲೋಕಸಭಾ ಸ್ಪೀಕರ್ ಸಂತಾಪ

 ಘಟನೆಗೆ ಲೋಕಸಭಾ ಸ್ಪೀಕರ್ ಹಾಗೂ ಸ್ಥಳೀಯ ಸಂಸದರೂ ಆಗಿರುವ ಓಂ ಬಿರ್ಲಾ ಅವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ಅವರು ಸಾಂತ್ವನ ಹೇಳಿದ್ದಾರೆ. ಜೊತೆಗೆ ತಮ್ಮ ಕೈಯಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ಭರವಸೆ ನೀಡಿದ್ದಾರೆ. ಅದೇ ವೇಳೆ ಅವರು ಎಲ್ಲಾ ನೆರವು ನೀಡಲು ಆಡಳಿತಕ್ಕೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Big Breaking: ಭಾರತದಲ್ಲಿ ರಕ್ತದೋಕುಳಿ ಹರಿಸಲು ಭೂಗತ ಪಾತಕಿ ಸಂಚು, ದಾವೂದ್‌ಗೆ 'ಇವರೇ' ಟಾರ್ಗೆಟ್!

ಭಾರತದಲ್ಲೇ ಅಧಿಕವಂತೆ ಅಪಘಾತದ ಪ್ರಮಾಣ

ಜಾಗತಿಕವಾಗಿ ಪ್ರತಿ ವರ್ಷ 4.5 ಲಕ್ಷಕ್ಕಿಂತ ಹೆಚ್ಚಿನ ಅಪಘಾತಗಳು ನಡೆಯುತ್ತವಂತೆ. ಅದರಲ್ಲೂ ಹೆಚ್ಚಾಗಿ ಭಾರತದಲ್ಲೇ ಅಪಘಾತಗಳ ಸಂಖ್ಯೆ ಜಾಸ್ತಿಯಂತೆ. ಇದಿರಿಂದಾಗಿ 4.5 ಲಕ್ಷಕ್ಕೂ ಹೆಚ್ಚು ಜನರು ಅಂಗವಿಕಲರಾಗುತ್ತಿದ್ದಾರೆ ಮತ್ತು GDPಯ 3.14 ಪ್ರತಿಶತದಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ವಿಶ್ವ ಬ್ಯಾಂಕ್ ಕಳೆದ ವರದಿಯಲ್ಲಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Published by:Annappa Achari
First published: