ಉತ್ತರ ಪ್ರದೇಶದ ಮೇಣದ ಬತ್ತಿ ಕಾರ್ಖಾನೆಯಲ್ಲಿ ಸ್ಪೋಟ; 8 ಮಂದಿ ಸಾವು, ಹಲವರಿಗೆ ಗಾಯ

ಫ್ಯಾಕ್ಟರಿಯಲ್ಲಿ ಬರ್ತ್​ಡೇ ಕ್ಯಾಂಡಲ್​ಗಳನ್ನು ತಯಾರಿಸಲಾಗುತ್ತಿತ್ತು. ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಸ್ಪೋಟಗೊಂಡ ಕಾರ್ಖಾನೆಯ ದೃಶ್ಯ

ಸ್ಪೋಟಗೊಂಡ ಕಾರ್ಖಾನೆಯ ದೃಶ್ಯ

 • Share this:
  ಉತ್ತರ ಪ್ರದೇಶ(ಜು.06): ಉತ್ತರಪ್ರದೇಶದ ಮೋದಿನಗರದ ಮೇಣದ ಬತ್ತಿ ತಯಾರಿಕಾ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 8 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

  ಭಾನುವಾರ ಈ ಘಟನೆ ನಡೆದಿರುವುದು ವರದಿಯಾಗಿದೆ. ಈ ದುರಂತದಲ್ಲಿ 8 ಮಂದಿ ಸಾವನ್ನಪ್ಪಿದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ 16 ವರ್ಷದ ಬಾಲಕನೂ ಸಹ ಸಾವನ್ನಪ್ಪಿರುವುದು ದುರಂತ.

  ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಘಟನೆಯಲ್ಲಿ ಮೃತಪಟ್ಟವರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

  ಕೊರೋನಾಗೆ ಕೊಡಗಿನಲ್ಲಿ ಮೊದಲ ಬಲಿ; ಶನಿವಾರ ಮೃತಪಟ್ಟಿದ್ದ 58 ವರ್ಷದ ವ್ಯಕ್ತಿಗೆ ತಗುಲಿದ್ದ ಸೋಂಕು

  ಫ್ಯಾಕ್ಟರಿಯಲ್ಲಿ ಬರ್ತ್​ಡೇ ಕ್ಯಾಂಡಲ್​ಗಳನ್ನು ತಯಾರಿಸಲಾಗುತ್ತಿತ್ತು. ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

  ಇನ್ನು, ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಸರ್ಕಾರವು ತಲಾ 4 ಲಕ್ಷ ಪರಿಹಾರ ಘೋಷಿಸಿದೆ. ಜೊತೆಗೆ ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದೆ.
  Published by:Latha CG
  First published: