Burning Man Show: 8 ಗಂಟೆ ಟ್ರಾಫಿಕ್ ಜಾಮ್! ಇದಕ್ಕೆ ಕಾರಣ ಇಷ್ಟು ಚಿಕ್ಕ ವಿಷಯ

ಬರ್ನಿಂಗ್ ಮ್ಯಾನ್ ಶೋ ಮೂರು ವರ್ಷಗಳ ಕೋವಿಡ್ ನಂತರ ಇದೇ ಮೊದಲ ಬಾರಿಗೆ ನಡೆದ ಉತ್ಸವವಾಗಿದ್ದು ಮೋಜು-ಮಸ್ತಿಯ ನಂತರ ಸಂಭವಿಸಿದ ಟ್ರಾಫಿಕ್ ಜಾಮ್‌ನ ಚಿತ್ರಗಳು ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿವೆ. ಟ್ರಾಫಿಕ್ ಕುರಿತು ಸ್ವತಃ ಪೋಸ್ಟ್ ಮಾಡಿದ್ದ ಬರ್ನಿಂಗ್ ಮ್ಯಾನ್ ಅಧಿಕೃತ ಟ್ವಿಟ್ಟರ್ ಖಾತೆಯು ಸಾಮೂಹಿಕ ನಿರ್ಗಮನದ ಕಾಯುವಿಕೆಯು ಪ್ರಸ್ತುತ ಸುಮಾರು ಎಂಟುಗಂಟೆಗಳಾಗಿದೆ ಎಂದು ಟ್ವೀಟ್ ಮಾಡಿದೆ.

ಟ್ರಾಫಿಕ್ ಜಾಮ್

ಟ್ರಾಫಿಕ್ ಜಾಮ್

  • Share this:
ಅಮೆರಿಕಾದ (America) ನೆವಾಡಾದಲ್ಲಿ ಒಂಭತ್ತು ದಿನಗಳ ಕಾಲ ನಡೆಯುವ ಸಂಗೀತ ಮತ್ತು ಸಂಸ್ಕೃತಿ ಉತ್ಸವ 'ಬರ್ನಿಂಗ್ ಮ್ಯಾನ್ ಶೋ' (Burning Man Show) ಮುಕ್ತಾಯಗೊಂಡಿದೆ. ಆದರೆ ಸಮಾರಂಭ ಮುಗಿಸಿಕೊಂಡು ಬ್ಲಾಕ್ ರಾಕ್ ಮರುಭೂಮಿಯಿಂದ (Black Rock Desert) ಹೊರಟವರು ಎಂಟು ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ (Traffic Jam) ಸಿಲುಕಿಕೊಂಡರು ಎಂದು ಸುದ್ದಿವಾಹಿನಿಯ ಪೋಸ್ಟ್ ತಿಳಿಸಿದೆ. ಮೂರು ವರ್ಷಗಳ ಕೋವಿಡ್ ನಂತರ ಇದೇ ಮೊದಲ ಬಾರಿಗೆ ನಡೆದ ಉತ್ಸವವಾಗಿದ್ದು ಮೋಜು-ಮಸ್ತಿಯ ನಂತರ ಸಂಭವಿಸಿದ ಟ್ರಾಫಿಕ್ ಜಾಮ್‌ನ ಚಿತ್ರಗಳು ಇದೀಗ ಆನ್‌ಲೈನ್‌ನಲ್ಲಿ (Online) ವೈರಲ್ ಆಗುತ್ತಿವೆ. ಟ್ರಾಫಿಕ್ ಕುರಿತು ಸ್ವತಃ ಪೋಸ್ಟ್ ಮಾಡಿದ್ದ ಬರ್ನಿಂಗ್ ಮ್ಯಾನ್ ಅಧಿಕೃತ ಟ್ವಿಟ್ಟರ್ ಖಾತೆಯು ಸಾಮೂಹಿಕ ನಿರ್ಗಮನದ ಕಾಯುವಿಕೆಯು ಪ್ರಸ್ತುತ ಸುಮಾರು ಎಂಟುಗಂಟೆಗಳಾಗಿದೆ ಎಂದು ಟ್ವೀಟ್ ಮಾಡಿದೆ.

ಒಂಭತ್ತು ದಿನಗಳ ಉತ್ಸವ
ಪರಿಸ್ಥಿತಿಗಳು ಸುಧಾರಿಸುವವರೆಗೆ ನಿಮ್ಮ ನಿರ್ಗಮನ ವಿಳಂಬಗೊಳ್ಳುವುದನ್ನು ಪರಿಗಣಿಸಿ ಎಂದು ಹೇಳಿದೆ. ನೀವು ಈಗಲೇ ಹೊರಡಬೇಕು ಎಂದಾದಲ್ಲಿ, ದಟ್ಟಣೆಯನ್ನು ತಪ್ಪಿಸಿಕೊಳ್ಳಲು ಎಲ್ ಸ್ಟ್ರೀಟ್‌ನಲ್ಲಿ ಪ್ರಯಾಣಿಸಿ. ನಿಧಾನವಾಗಿ ವಾಹನ ಚಲಾಯಿಸಿ, ರಸ್ತೆಯ ಅವಶೇಷಗಳನ್ನು ವೀಕ್ಷಿಸಿ, ಗೇಟ್ ಸಿಬ್ಬಂದಿಯ ನಿರ್ದೇಶನಗಳನ್ನು ಅನುಸರಿಸಿ ಹಾಗೂ BMIR 94.5FM ಆಲಿಸಿ ಎಂದು ತಿಳಿಸಿದೆ. ಗಮನಾರ್ಹವಾಗಿ, 'ಗ್ರಾಹಕ ವಿರೋಧಿ ಮತ್ತು ಸ್ವಯಂ-ಅಭಿವ್ಯಕ್ತಿ'ಯ ಬಹು-ದಿನದ ಆಚರಣೆಯಾದ, ಬರ್ನಿಂಗ್ ಮ್ಯಾನ್, ಕಪ್ಪು ರಾಕ್ ಮರುಭೂಮಿಯಲ್ಲಿ ನಡೆಯುತ್ತದೆ.ಒಂಭತ್ತು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಕನಿಷ್ಠ 80,000 ಜನ ಪಾಲ್ಗೊಂಡಿದ್ದರು. ಫೋಟೋಗಳು ಪ್ರಸ್ತುತ ವೈರಲ್ ಆಗುತ್ತಿದ್ದು ಮೈಲುಗಟ್ಟಲೆ 15 ಸಾಲುಗಳ ಟ್ರಾಫಿಕ್ ಸರತಿ ಕಂಡುಬಂದಿದೆ.

ಮ್ಯಾಡ್ ಮ್ಯಾಕ್ಸ್‌ನಂತೆಯೇ ಬರ್ನಿಂಗ್ ಮ್ಯಾನ್
ಬರ್ನಿಂಗ್‌ಮ್ಯಾನ್ ಕುರಿತು ಸಾಮಾಜಿಕ ತಾಣದಲ್ಲಿ ಬಹಳಷ್ಟು ಕಾಮೆಂಟ್‌ಗಳು ಬಂದಿದ್ದು ಕೆಲವರು ಇದನ್ನು ಮ್ಯಾಡ್ ಮ್ಯಾಕ್ಸ್‌ಗೆ ಹೋಲಿಸಿದ್ದಾರೆ. ಕ್ಯಾಂಪ್‌ನಿಂದ ನಿರ್ಗಮಿಸುವುದು ನಾನು ವಾರಪೂರ್ತಿ ಅನುಭವಿಸಿದ ಮ್ಯಾಡ್ ಮ್ಯಾಕ್ಸ್..ಒಟ್ಟು 5 ಗಂಟೆಗಳಲ್ಲಿ ಒಂದೊಂದು ಗೇಟ್ ತಲುಪಲು ಎರಡೆರಡು ಗಂಟೆ ಬೇಕಾಗಿದೆ ಎಂಬುದಾಗಿ ಟ್ವಿಟ್ಟರ್‌ನಲ್ಲಿ ಒಬ್ಬಾತ ಕಾಮೆಂಟ್ ಮಾಡಿದ್ದಾರೆ.ಇದನ್ನೂ ಓದಿ:  Dream Job: ಜನರೊಂದಿಗೆ ಒಡನಾಟ ಮಾಡೋದೇ ಇವರ ಕೆಲಸ ಅಂತೆ! ಅದರಲ್ಲೇ ನಡೆಯತ್ತೆ ಸಂಪಾದನೆ

ಬರ್ನಿಂಗ್ ಮ್ಯಾನ್ ಶೋವನ್ನು ಮ್ಯಾಡ್ ಮ್ಯಾಕ್ಸ್ ಚಲನಚಿತ್ರಕ್ಕೆ ಹೋಲಿಸಿ ಈತ ಮಾತನಾಡಿದ್ದು, ಮ್ಯಾಡ್ ಮ್ಯಾಕ್ಸ್ ಡಿಸ್ಟೋಪಿಯನ್ ಮರುಭೂಮಿಯಿಂದ ತಪ್ಪಿಸಿಕೊಳ್ಳುವ ಕಥಾ ಹಂದರವನ್ನು ಹೊಂದಿದೆ.ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ವ್ಯಕ್ತಿ ನಿರಾಶೆಗೊಳಗಾಗಿದ್ದು ರಾತ್ರಿ 8:30 ಕ್ಕೆ ಹೊರಟಾಗ ಅಂದಾಜು 6 ಗಂಟೆಗಳಷ್ಟು ಸಮಯವಾಗಿತ್ತು ಆದರೆ ನಮ್ಮ ಗುಂಪಿನಲ್ಲಿದ್ದ ಅರ್ಧದಷ್ಟು ಜನರಿಗೆ 10 ಗಂಟೆಗಳು ಬೇಕಾಯಿತು, ಇನ್ನು ಕೆಲವರಿಗೆ 12 ಗಂಟೆ ಬೇಕಾಯಿತು ಎಂದು ತಿಳಿಸಿದ ಮಾಹಿತಿಯನ್ನು ಸುದ್ದಿ ಪತ್ರಿಕೆ ವರದಿ ಮಾಡಿದೆ.

ಪ್ರಯಾಣಿಕರಿಗೆ ಮತ್ತಷ್ಟು ಸಂಕಷ್ಟವನ್ನುಂಟು ಮಾಡಿದ ಮರಳು ಬಿರುಗಾಳಿ
ಇನ್ನು ಕಾರ್ಯಕ್ರಮದಿಂದ ನಿರ್ಗಮಿಸಲು ಮತ್ತೆ ಕೆಲವರು ಇನ್ನಷ್ಟು ಸಮಯವನ್ನು ತೆಗೆದುಕೊಂಡರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಸಾಮೂಹಿಕ ನಿರ್ಗಮನದ ಸಮಯದಲ್ಲಿ ಉಂಟಾದ ದಟ್ಟಣೆಯಿಂದಾಗಿ, ಉತ್ಸವದಿಂದ ಮರಳುವುದನ್ನು ಬರ್ನರ್ಸ್ ಎಂದು ಕರೆಯಲಾಗಿದೆ. ಈ ಸಮಯದಲ್ಲಿ ಮರಳು ಬಿರುಗಾಳಿ ಕೂಡ ಪ್ರಯಾಣಿಕರಿಗೆ ಸಂಕಷ್ಟವನ್ನುಂಟು ಮಾಡಿದೆ.ಇದನ್ನೂ ಓದಿ: Snake in Ear Video: ಯುವತಿಯ ಕಿವಿಯಲ್ಲಿ ಹೊಕ್ಕಿದ ಹಾವು! ಅಯ್ಯೋ, ಮುಂದೇನಾಯ್ತು?

ತಾಪಮಾನವು 105 ಡಿಗ್ರಿ ಫ್ಯಾರೆನ್ ಹೀಟ್ ಗೆ ಏರಿಕೆಯಾಗಿದ್ದು ಧೂಳಿನ ಕಾರಣದಿಂದ ಪ್ರವೇಶ ದ್ವಾರ ಹಾಗೂ ನಿರ್ಗಮನ ಹಾದಿಗಳನ್ನು ಮುಚ್ಚುವ ಪರಿಸ್ಥಿತಿ ಬಂದೊದಗಿದೆ. ಈ ಬಾರಿಯ ದಟ್ಟಣೆ ಅತ್ಯಂತ ಭೀಕರವಾಗಿದ್ದು ಶಾಖದ ಅಲೆ ಮತ್ತು ಅನಿಲ ಬಿಕ್ಕಟ್ಟು ಅವ್ಯವಸ್ಥೆಯನ್ನು ಹೆಚ್ಚಿಸಿದವು.

ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಭಾಗಿ
ಕಾರ್ಮಿಕ ದಿನಾಚರಣೆಯ ಮುನ್ನ ನಡೆದ ಬರ್ನಿಂಗ್ ಮ್ಯಾನ್ ಉತ್ಸವಕ್ಕೆ, ಪ್ರಪಂಚದಾದ್ಯಂತ ಸಾವಿರಾರು ಜನರು ಬೃಹತ್ ಸಂಖ್ಯೆಯಲ್ಲಿ ಪ್ರಯಾಣಿಸಿದ್ದರು. ಪಾರ್ಟಿ ಮಾಡಲು ವಿಲಕ್ಷಣವಾದ ಬಟ್ಟೆಗಳನ್ನು ಧರಿಸಿದ್ದರು. ಈ ಉತ್ಸವದಲ್ಲಿ ಕೊನೆಯ ದಿನ ಬರ್ನಿಂಗ್ ಮ್ಯಾನ್ ಎಂದು ಕರೆಯಲಾದ ಪ್ರತಿಕೃತಿಯನ್ನು ದಹಿಸಲಾಗುತ್ತದೆ. ಹೀಗೆ ಉತ್ಸವಕ್ಕೆ ಅಂತ್ಯ ಹಾಡಲಾಗುತ್ತದೆ. 1989 ರಿಂದ ಉತ್ಸವ ಆರಂಭವಾದಾಗಿನಿಂದ ಉತ್ಸವವನ್ನು ಕೊನೆಗೊಳಿಸುವ ಸಾಂಪ್ರದಾಯಿಕ ವಿಧಾನ ಇದಾಗಿದೆ.
Published by:Ashwini Prabhu
First published: