Goa Politics: ಗೋವಾದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್: 8 ಕೈ ಶಾಸಕರು ಬಿಜೆಪಿ ತೆಕ್ಕೆಗೆ ಎಂದ ರಾಜ್ಯಾಧ್ಯಕ್ಷ!

Goa Congress: 'ಭಾರತ್ ಜೋಡೋ ಯಾತ್ರೆ'ಯಲ್ಲಿ ತೊಡಗಿರುವ ಕಾಂಗ್ರೆಸ್‌ಗೆ ಗೋವಾದಲ್ಲಿ ಭಾರೀ ಹಿನ್ನಡೆಯಾಗಲಿದೆ. ಗೋವಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಾಡೆ ಅವರು ಎಂಟು ಕಾಂಗ್ರೆಸ್ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಿದ್ದಾರೆ.

ಗೋವಾದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್: 8 ಕೈ ಶಾಸಕರು ಬಿಜೆಪಿ ತೆಕ್ಕೆಗೆ

ಗೋವಾದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್: 8 ಕೈ ಶಾಸಕರು ಬಿಜೆಪಿ ತೆಕ್ಕೆಗೆ

  • Share this:
ಪಣಜಿ(ಸೆ.14): 'ಭಾರತ್ ಜೋಡೋ ಯಾತ್ರೆ'ಯಲ್ಲಿ (Bharat Jodo Yatra) ತೊಡಗಿರುವ ಕಾಂಗ್ರೆಸ್‌ಗೆ ಗೋವಾದಲ್ಲಿ ಭಾರೀ ಹಿನ್ನಡೆಯಾಗಲಿದೆ. ಗೋವಾದಲ್ಲಿ ಬಿಜೆಪಿ (Goa BJP) ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಾಡೆ (BJP chief Sadanand Shet Tanavade) ಅವರು ಎಂಟು ಕಾಂಗ್ರೆಸ್ ಶಾಸಕರು ಶೀಘ್ರದಲ್ಲೇ ಭಾರತೀಯ ಜನತಾ ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಿದ್ದಾರೆ. ವಾಸ್ತವವಾಗಿ, ಪಕ್ಷದ 'ಭಾರತ್ ಜೋಡೋ ಯಾತ್ರೆ' ಅಂಗವಾಗಿ ರಾಹುಲ್ ಗಾಂಧಿ ಬುಧವಾರ ಕೇರಳ ಪ್ರವಾಸದಲ್ಲಿರುವಾಗಲೇ ಗೋವಾದಿಂದ ಕಾಂಗ್ರೆಸ್‌ಗೆ ಈ ಕೆಟ್ಟ ಸುದ್ದಿ ಬಂದಿದೆ.

11 ಶಾಸಕರಲ್ಲಿ ಎಂಟು ಮಂದಿ ಹಿರಿಯು ನಾಯಕರಾದ ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ನೇತೃತ್ವದಲ್ಲಿ ಇಂದು ನಂತರ ಆಡಳಿತಾರೂಢ ಬಿಜೆಪಿಗೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಅವರು ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Chief Minister Pramod Sawant) ಜೊತೆಗೆ ವಿಧಾನಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿದರು.

ಇದನ್ನೂ ಓದಿ: Rahul Gandhi: ರೈತರ ಸಾಲ ಮನ್ನಾ, ಉಚಿತ ವಿದ್ಯುತ್, 500 ರೂಪಾಯಿಗೆ ಗ್ಯಾಸ್! ಮತದಾರರಿಗೆ ರಾಹುಲ್ ಗಾಂಧಿ ಭರವಸೆ

ಅನರ್ಹತೆ ಭೀತಿ ಇಲ್ಲ

ಎಂಟು ಶಾಸಕರು ಗುಂಪಾಗಿ ಪಕ್ಷ ಬಿಟ್ಟರೆ, ಪಕ್ಷದ ಬಲದ ಮೂರನೇ ಎರಡರಷ್ಟು- ಆಗುತ್ತಾರೆ. ಅಂದರೆ ಈ ಮೂಲಕ ಅವರು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹಗೊಳ್ಳುವುದು ತಪ್ಪುತ್ತದೆ.

ವಿಧಾನಸಭೆ ಕಲಾಪ ನಡೆಯದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶಾಸಕರು ಸಭಾಧ್ಯಕ್ಷರನ್ನು ಭೇಟಿಯಾಗಿರುವುದು ಊಹಾಪೋಹಗಳಿಗೆ ತೆರೆ ಎಳೆದಿದೆ. ನಂತರ ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಡೆ ಕೂಡಾ ಕಾಂಗ್ರೆಸ್​ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: Rahul Gandhi: ಅವಧಿಗೂ ಮುನ್ನವೇ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ?

ಗೋವಾ ಅಂಕಿ ಅಂಶಗಳೇನು?

ಇನ್ನು ಗೋವಾ ವಿಧಾನಸಭೆಯ ಸದಸ್ಯರ ಸಂಖ್ಯೆ 40 ಮತ್ತು ಪ್ರಸ್ತುತ ಕಾಂಗ್ರೆಸ್ 11 ಮತ್ತು ಬಿಜೆಪಿ 20 ಶಾಸಕರನ್ನು ಹೊಂದಿದೆ. ಜುಲೈ 2019 ರಲ್ಲಿ, 10 ಕಾಂಗ್ರೆಸ್ ಶಾಸಕರು ಒಟ್ಟಾಗಿ ಬಿಜೆಪಿಗೆ ಸೇರಿದ್ದರು ಎಂಬುವುದು ಉಲ್ಲೇಖನೀಯ.

ಕಾಂಗ್ರೆಸ್​ನಲ್ಲಿ ಭಾರತ್​ ಜೋಡೋ ಯಾತ್ರೆ

ರಾಹುಲ್ ಗಾಂಧಿ 150 ದಿನಗಳ ಭಾರತ ಜೋಡೋ ಯಾತ್ರೆಯಲ್ಲಿ ತಲ್ಲೀನರಾಗಿರುವ ಸಮಯದಲ್ಲಿ ಗೋವಾದಲ್ಲಿ ಕಾಂಗ್ರೆಸ್ ಹಿನ್ನಡೆಯಾಗಲಿದೆ ಎಂಬುವುದು ಉಲ್ಲೇಖನೀಯ.  ಇಂದು ಭಾರತ ಜೋಡೋ ಯಾತ್ರೆಯ ಎಂಟನೇ ದಿನವಾಗಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈ ಪ್ರಯಾಣ ನಡೆಯಲಿದೆ
Published by:Precilla Olivia Dias
First published: