Accident: ವಾಹನ ಕೆರೆಗೆ ಉರುಳಿಬಿದ್ದು 8 ಜನ ಸಾವು, ಇಬ್ಬರು ಪಾರು

ಕೆರೆಯಿಂದ ಹೊರ ತೆಗೆದ ವಾಹನ

ಕೆರೆಯಿಂದ ಹೊರ ತೆಗೆದ ವಾಹನ

ವಾಹನವೊಂದು (Vehicle) ಹೊಂಡಕ್ಕೆ (Pond) ಬಿದ್ದು ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಪುರ್ನಿಯಾ ಜಿಲ್ಲೆಯ ಕಾಂಜಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ

  • Share this:

ಪಾಟ್ನಾ(ಜೂ.11): ಬಿಹಾರದಲ್ಲಿ (Bihar) ಶುಕ್ರವಾರ ತಡರಾತ್ರಿ ವಾಹನವೊಂದು (Vehicle) ಹೊಂಡಕ್ಕೆ (Pond) ಬಿದ್ದು ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಪುರ್ನಿಯಾ ಜಿಲ್ಲೆಯ ಕಾಂಜಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಎಎನ್‌ಐ ವರದಿ ಮಾಡಿದೆ. 8 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ನಡೆದಾಗ ಅವರು ತಾರಾಬಾಡಿಯಿಂದ ಕಿಶನ್‌ಗಂಜ್‌ಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.


ಕಾರಿನಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದು, ಇಬ್ಬರನ್ನು ಕೆರೆಯಿಂದ ರಕ್ಷಿಸಲಾಗಿದ್ದು, ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.


ಮದುವೆಯಿಂದ ಹಿಂದಿರುಗುತ್ತಿದ್ದ ಜನ


ವರದಿಗಳ ಪ್ರಕಾರ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರೆಲ್ಲರೂ ಕಿಶನ್‌ಗಂಜ್ ನಿವಾಸಿಗಳಾಗಿದ್ದು, ತಾರಾಬಾಡಿಯಿಂದ ಹಿಂತಿರುಗುತ್ತಿದ್ದರು. ಮದುವೆ ಕಾರ್ಯಕ್ರಮಕ್ಕೆಂದು ಅಲ್ಲಿಗೆ ಹೋಗಿ ಸ್ಕಾರ್ಪಿಯೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.


ಕಾರು ಕೆರೆಗೆ ಬಿದ್ದಿದ್ದರಿಂದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಮೃತರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಮುಖ್ಯವಾಗಿ ರಾತ್ರಿ ಹಾಗೂ ಮುಂಜಾವಗಳಲ್ಲಿ ಅವಘಡಗಳ ಸಂಖ್ಯೆ ಹೆಚ್ಚುತ್ತಿದೆ.


ಕರ್ನಾಟಕದಲ್ಲಿಯೂ ಕಾರು ನಾಲೆಗೆ ಬಿದ್ದು ನಡೆದಿತ್ತು ಅಪಘಾತ


ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ಬೆಳಗ್ಗಿನ ಜಾವ ಅಪಘಾತ ನಡೆದಿತ್ತು. ಗಂಡ ಹೆಂಡತಿ ಪ್ರಯಾಣಿಸುತ್ತಿದ್ದ ಕಾರೊಂದು ತುಂಗಾ ನಾಲೆಗೆ ಬಿದ್ದಿತ್ತು. ಪರಿಣಾಮ ಹೆಂಡತಿ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಳು. ಅಪಘಾತದಲ್ಲಿ ಗಂಡ ಗಾಯಗೊಂಡು, ಆಸ್ಪತ್ರೆ ಸೇರಿದ್ದ. ಮೃತರನ್ನು 28 ವರ್ಷದ ಸುಷ್ಮಾ ಎಂದು ಗುರುತಿಸಲಾಗಿದೆ. ಇವರ ಪತಿ ಚೇತನ್ ಎಂಬುವವರು ಆಸ್ಪತ್ರೆಗೆ ಸೇರಿದ್ದಾರೆ.


ಶಿವಮೊಗ್ಗದಿಂದ ತುಮಕೂರಿಗೆ ಹೊರಟಿದ್ದ ದಂಪತಿ


ಚೇತನ್ ಹಾಗೂ ಸುಷ್ಮಾ ದಂಪತಿ ತುಮಕೂರು ನಿವಾಸಿಗಳು. ಮೂಲತಃ ತುಮಕೂರಿನ ನಿವಾಸಿ ಚೇತನ್, ಗಾಜನೂರಿನ ನವೋದಯ ಶಾಲೆಯಲ್ಲಿ ಗೇಟ್ ಕೀಪರ್ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ತುಮಕೂರಿನಲ್ಲಿರುವ ಚೇತನ್ ತಾಯಿ ಅನಾರೋಗ್ಯವಾಗಿತ್ತು. ಹೀಗಾಗಿ  ರಾತ್ರಿಯೇ ಪತ್ನಿ ಸಮೇತ KA 06 C 5275 ಕಾರಿನಲ್ಲಿ ತುಮಕೂರು ಕಡೆ ಹೊರಟಿದ್ದಾಗ ಗಾಜನೂರು ನಾಲೆ ಬಳಿ ಅಪಘಾತವಾಗಿತ್ತು.


ಗಂಡ ಹೆಂಡತಿ ಇಬ್ಬರೂ ಕಾರಿನಲ್ಲಿ ಬರುತ್ತಿರುವಾಗ ದಾರಿ ಮಧ್ಯೆ ಹಾವೊಂದು ಎದುರಾಗಿದೆ. ಇನ್ನೇನು ಹಾವಿನ ಮೇಲೆ ಕಾರು ಹತ್ತಿಸಬೇಕು, ಅಷ್ಟರಲ್ಲಿ ಚೇತನ್ ವಿಚಲಿತರಾಗಿದ್ದಾರೆ. ಹಾವನ್ನು ತಪ್ಪಿಸಿ, ಕಾರನ್ನು ಸೈಡಿಗೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ನಿಯಂತ್ರಣ ತಪ್ಪಿ ಕಾರು ತುಂಗಾ ನಾಲೆಗೆ ಬಿದ್ದು ಬಿಟ್ಟಿತ್ತು.


ನೀರಿನಲ್ಲಿ ಉಸಿರುಗಟ್ಟಿ ಪತ್ನಿ ದುರ್ಮರಣ


ನಾಲೆಗೆ ಬೀಳುತ್ತಿದ್ದಂತೆ ಇಡೀ ಕಾರು ಮುಳುಗಿ ಹೋಗಿದೆ. ಚೇತನ್ ಹೇಗೋ ಕಾರಿನಿಂದ ಹೊರಕ್ಕೆ ಬಿದ್ದಿದ್ದಾರೆ. ಆದರೆ ಪತ್ನಿ ಸುಷ್ಮಾ ಕಾರಿನಲ್ಲೇ ಸಿಲುಕಿ ಕೊಂಡಿದ್ದರು. ಕಾರು ನೀರಿನಲ್ಲಿ ಮುಳುಗುತ್ತಿದ್ದಂತೆ ಸುಷ್ಮಾ ಸಹ ನೀರಿನಲ್ಲಿ ಮುಳುಗಿದ್ದಾರೆ. ಅದೆಷ್ಟೇ ಪ್ರಯತ್ನಿಸಿದರೂ ಹೊರಕ್ಕೆ ಬರಲಾಗದೇ ಉಸಿರು ಕಟ್ಟಿ ಸಾವನ್ನಪ್ಪಿದ್ದರು.

Published by:Divya D
First published: